maguvaada-mele-nimma-patiyu-nimage-helabayasuva-5-vishayagaluu-1

ನಿಮ್ಮ ಪತಿಗೆ ಬೇಕಾಗಿರುವುದು ನೀವು, ಅಂದರೆ ಅವರ ಪತ್ನಿ ಈ ವಿಷಯಗಳನ್ನು ತಿಳಿದಿರಬೇಕೆಂದು ; ಆದರೆ ಎಲ್ಲಾ ಬಾರಿಯೂ ಅವರಿಗೆ ಅವುಗಳನ್ನು ನಿಮಗೆ ಹೇಗೆ ತಿಳಿಸುವುದು ಎಂಬುದು ಗೊತ್ತಾಗುವುದಿಲ್ಲ. ಬಹುಶಃ ಅವರು ಅವುಗಳನ್ನ ಸರಿಯಾದ ರೀತಿಯಲ್ಲಿ ತಿಳಿಸಿ ಹೇಳಲಿಕ್ಕೆ ಕಷ್ಟ ಪಡುತ್ತಿರಬಹುದು ಅಥವಾ ಎಲ್ಲಿ ನೀವು ಅಪಾರ್ಥ ಮಾಡಿಕೊಂಡು ಬಿಡುವಿರೋ ಎಂದು ಹೆದರಿರಬಹುದು ಅಥವಾ ಎಲ್ಲದಕ್ಕಿಂತ ಹೆಚ್ಚಾಗಿ ಎಲ್ಲಿ ನಿಮ್ಮ ಮನಸ್ಸಿಗೆ ನೋವು ಮಾಡುವೆನೋ ಎಂಬ ದೊಡ್ಡ ಭಯ ಇರಬಹುದು.

ಮಗುವಾದ ನಂತರ ನಿಮ್ಮ ಪತಿಯು ನಿಮ್ಮಲ್ಲಿ ಹೇಳಬಯಸುವ ೫ ವಿಷಯಗಳು ಇಲ್ಲಿವೆ :

೧. ನಿಮ್ಮ ದೇಹ

ಗರ್ಭಧಾರಣೆ ನಂತರ ತೂಕ ಹೆಚ್ಚಳ ಆಗುವುದು ಯಾರ ಕೈಯ್ಯಿಂದಲೂ ತಪ್ಪಿಸಲು ಸಾಧ್ಯವಿಲ್ಲ ಆದರೆ ಸ್ಟ್ರೆಚ್ ಮಾರ್ಕ್ ಗಳು? ನಮ್ಮ ಮಗು ಎನ್ನುವ ಒಂದು ಜೀವವನ್ನು ನೀನು ನಿನ್ನ ಹೊಟ್ಟೆಯಲ್ಲಿ ಇಟ್ಟುಕೊಂಡು ಸಾಕಿದ್ದಕ್ಕೆ ಆ ಮಾರ್ಕ್ ಗಳು ನಿನಗೆ ಸಿಕ್ಕ ಬಳುವಳಿ. ಹಾಗಾಗಿ ನೀನು ಅದರ ಬಗ್ಗೆ ನಾಚಿಕೆ ಪಟ್ಟುಕೊಳ್ಳುವಂತದ್ದು ಏನು ಇಲ್ಲ. ಈ ಸಮಯದಲ್ಲಿ ನಮ್ಮ ಸಂಬಂಧ ಎಲ್ಲಾ ದೈಹಿಕ ಅಂಶಗಳನ್ನ ಮೀರಿದ್ದು. ಅಲ್ಲದೆ, ನಿನ್ನ ಸ್ತನಗಳು ಜೋತು ಬಿದ್ದಿಲ್ಲ, ಅವುಗಳು ಇವಾಗ ಇನ್ನೊಂದು ಮಹತ್ವದ ಕಾರ್ಯ ಮಾಡುತ್ತಿವೆ.

೨. ಪ್ರಶಂಸೆ

ನಿಜ, ನಿಮ್ಮ ಹೊಟ್ಟೆಯಲ್ಲಿ ಮಗುವಿದ್ದಾಗ ನಿಮಗೆ ಏನು ಬೇಕೋ ಅದನ್ನು ತಂದುಕೊಡುವುದು, ನಿಮ್ಮ ಕಾಳಜಿ ವಹಿಸುವುದು ಪತಿಯಾಗಿ ಅವರು ನಿಭಾಯಿಸಬೇಕಾದ ಜವಾಬ್ದಾರಿ. ನೀವು ಅವರ ಸಹಾಯವನ್ನು ಎಷ್ಟು ಗೌರವಿಸುತ್ತೀರ ಎಂಬುದು ಕೂಡ ಅವರಿಗೆ ಗೊತ್ತು. ಆದರೆ ಅದನ್ನು ಬಾಯಿ ಬಿಟ್ಟು ಅವರಿಗೆ ಹೇಳಿದರೆ, ಅದರ ಪರಿಣಾಮವೇ ಬೇರೇ ಆಗಿರುತ್ತದೆ. ಅವರ ಕೆನ್ನೆ ತಟ್ಟಿ ಒಮ್ಮೆ ಥ್ಯಾಂಕ್ಸ್ ಎಂದು ಹೇಳಿದರೆ ಬಹಳಷ್ಟು ತಿಳಿಸುತ್ತದೆ. ಅಲ್ಲದೆ, ಇವಾಗ ನೀವು ಸ್ವಲ್ಪ ಮುಂಚಿನ ಸ್ತಿಥಿಗೆ ಬಂದಿರುವ ಕಾರಣ ಮನೆಗೆಲಸಗಳನ್ನ ಹಂಚಿಕೊಳ್ಳಬಹುದು.

೩. ಏಕಾಂತದ ಸಮಯ

ನಿಮ್ಮ ಪತಿಯು ನಿಮ್ಮ ಹಾಗು ನಿಮ್ಮ ಮಗುವಿನ ಜೊತೆಗಿನ ಸಮಯವನ್ನು ಎಷ್ಟು ಆನಂದದಿಂದ ಕಳೆಯುತ್ತಾರೋ, ಅವರ ಮನಸ್ಸು ನಿರಾಳ ಮಾಡಿಕೊಳ್ಳಲು ಅಷ್ಟೇ ಸಮಯ ಏಕಾಂತದಲ್ಲಿ ಕಳೆಯಲು ಬಯಸುವರು. ಏಕೆಂದರೆ, ಗಂಡಸರು ಸ್ವಾಭಾವಿಕವಾಗಿ ಏಕಾಂತ ಬಯಸುವ ಜೀವಿಗಳು. ಹಾಗಾಗಿ ಇನ್ನೊಮ್ಮೆ ನೀವು ನಿಮ್ಮ ಪತಿಯು ಒಬ್ಬರೆ ಸೋಫಾ ಮೇಲೆ ಕುಳಿತು ಟಿವಿ ನೋಡುತ್ತಿದ್ದರೆ, ದಿನಪತ್ರಿಕೆ ಓದುತ್ತಿದ್ದರೆ, ಅವರನ್ನು ಮಾತಿಗೆ ಎಳೆಯಲು ಹೋಗಬೇಡಿ. ಬದಲಿಗೆ ಅವರ ಪಾಡಿಗೆ ಅವರನ್ನು ಬಿಡಿ. ಇದು ಖಂಡಿತವಾಗಿಯು ಸಾಮಾನ್ಯೀಕರಿಸಿದ ಹೇಳಿಕೆಯಾಗಿದ್ದು, ಎಲ್ಲರೂ ಹೀಗೆ ಇರಬೇಕೆಂಬುದು ಏನು ಇಲ್ಲ.

೪. ಹಣ

ತಿಂಗಳ ಸಂಬಳಕ್ಕೆ ದುಡಿಯುವ ಅನೇಕಾನೇಕ ದಂಪತಿಗಳಿಗೆ ಹಣದ ಸಮಸ್ಯೆಗಳು ಅವಾಗವಾಗ ಭುಗಿಲೇಳುತ್ತಿರುತ್ತವೆ. ನಿಮ್ಮ ಪತಿಗೆ ನೀವು ಆರೋಗ್ಯಕರವಾಗಿ ಹಾಗು ಚೆನ್ನಾಗಿ ಇರಬೇಕೆಂಬ ಆಸೆ ಆದರೆ ಮನೆ ಬಾಡಿಗೆ, ಮಗುವಿನ ಕಾಳಜಿ, ಮನೆಗೆಲಸದವರು ಹಾಗು ವೈದ್ಯಕೀಯ ಖರ್ಚುಗಳು, ಇವೆಲ್ಲವೂ ಒಂದೇ ವ್ಯಕ್ತಿಯ ಸಂಬಳದ ಮೇಲೆ ಅವಲಂಬಿತಾವಗಿರುವ ಕಾರಣ ಒತ್ತಡ ಬೀಳಬಹುದು. ನೀವು ಸ್ವಲ್ಪ ಮುಂಚಿನ ಸ್ತಿಥಿಗೆ ಬರುತ್ತಿದ್ದೀರಾ ಹಾಗು ದೈಹಿಕವಾಗಿ ಇವಾಗ ಸ್ವಲ್ಪ ಶಕ್ತರಾಗಿದ್ದೀರಿ ಎಂದೊಡನೆ ಪುನಃ ನಿಮ್ಮ ಕೆಲಸಕ್ಕೆ ಹೋಗಲು ಶುರು ಮಾಡಿ, ನಿಮ್ಮ ಪತಿಯ ಹೆಗಲ ಮೇಲಿನ ಭಾರ ಸ್ವಲ್ಪ ಕಮ್ಮಿ ಮಾಡಿ.

೫. ಲೈಂಗಿಕ ಕ್ರಿಯೆ

ತಿಂಗಳುಗಳ ಕಾಲ ನಿಮ್ಮಿಂದ ದೂರ ಇದ್ದ ಕಾರಣ, ಅವರಲ್ಲಿನ ಕಾತುರ, ಆತುರ ಕಮ್ಮಿ ಇರಲು ಸಾಧ್ಯವೇ ಇಲ್ಲ. ನಿಮ್ಮಲ್ಲಿ ಲೈಂಗಿಕ ಆಸಕ್ತಿ ಕಮ್ಮಿ ಆಗಿರುವುದು ಅರ್ಥ ಮಾಡಿಕೊಳ್ಳುವಂತದ್ದು. ಏಕೆಂದರೆ, ಆಯಾಸ ಲೈಂಗಿಕ ಆಸಕ್ತಿಯನ್ನು ಕುಗ್ಗಿಸಿಬಿಡುತ್ತದೆ. ನೀವು ಇನ್ನು ಮೂಡ್ ಗೆ ಬಂದಿಲ್ಲ; ಮೊದಲ ಹೆಜ್ಜೆ ಮೂಡ್ ಅನ್ನು ನೀವು ಬರಿಸಿಕೊಳ್ಳಿ. ಅವರು ಕೇಳುವ ಮುನ್ನ ನೀವೇ ಅರಿತು ಹೆಜ್ಜೆ ಮುಂದಿಟ್ಟರೆ ಇನ್ನೂ ಒಳ್ಳೆಯದೇ. ಇದನ್ನು ಮಾಡಲು ಒಳ್ಳೆಯ ಉಪಾಯ ಎಂದರೆ, ಇದನ್ನು ಮುಂಚೆಯೇ ಯೋಜಿಸಿರಿ, ನಿಮ್ಮ ಪತಿಯೊಂದಿಗೆ ಒಂದು ಸಂಜೆ ಹೊರಗಡೆ ಸುತ್ತಾಡಿ ಬಂದು ರಾತ್ರಿ ನೀವು ಅಂದುಕೊಂಡದ್ದು ಮಾಡಬಹುದು. ಸ್ವಲ್ಪ ಕಾಲ ನಿಮ್ಮ ಅತ್ತೆ ಮಾವಂದಿರು ನಿಮ್ಮ ಮಗುವನ್ನು ನೋಡಿಕೊಳ್ಳುತ್ತಿರಲಿ.

Leave a Reply

%d bloggers like this: