maguvina-talege-pettu-biddaaga-poshakaru-enu-maduvaru

ಚಿಕ್ಕ ಮಕ್ಕಳು ಆಗಾಗ್ಗೆ ಬೀಳುತ್ತಲೇ ಇರುತ್ತಾರೆ. ಅದು ನಡೆಯುವುದನ್ನ ಕಲಿಯುವಾಗ ಇರಬಹುದು ಅಥವಾ ಇನ್ನೇನೂ ಹೊಸ ವಿಷಯಗಳನ್ನ ಪ್ರಯತ್ನಿಸಲು ಹೋದಾಗ ಇರಬಹುದು. ಮಕ್ಕಳು ಒಮ್ಮೊಮ್ಮೆ ತೊಟ್ಟಿಲಿನಿಂದ ಕೆಳಗೆ ಬಿದ್ದು ಪೆಟ್ಟು ತಿನ್ನಬಹುದು – ಕೆಲವು ಬಾರಿ ಸಣ್ಣದಾಗಿ ಇನ್ನೂ ಕೆಲವು ಬಾರಿ ಗಂಭೀರವಾಗಿ. ಆದರೆ ಇವೆಲ್ಲವು ನಿಮ್ಮ ಮಗುವಿನ ದೇಹಕ್ಕೆ ಪರೀಕ್ಷೆಗಳಾಗಿದ್ದು ನಿಮ್ಮ ಮಗುವಿನ ದೇಹದ ಸಹಿಷ್ಣುತೆ ಹೆಚ್ಚಿಸುತ್ತವೆ ಹಾಗು ನಿಮ್ಮ ಮಗುವಿನ ದೇಹದ ಮಿತಿಗಳನ್ನು ತಿಳಿಸುತ್ತವೆ. ಹಾಗಾಗಿ, ನಿಮ್ಮ ಮಗುವು ಪದೇ ಪದೇ ಮನೆಯಲ್ಲಿನ ಟೇಬಲ್ ಕುರ್ಚಿಗಳಿಗೆ ತಲೆ ಬಡಿಸಿಕೊಳ್ಳುತ್ತಿದ್ದರೆ ಅಥವಾ ಹಾಗೆ ಬೀಳುತ್ತಿದ್ದರೆ ಅಥವಾ ಯಾವಾಗಲು ಜಾರುತ್ತಿದ್ದರೆ, ಗಾಬರಿ ಆಗಬೇಡಿ. ತೊಂದರೆ ಏನಿಲ್ಲ. ಇದು ಪ್ರತಿ ತಂದೆ ತಾಯಿಯು ತನ್ನ ಮಗುವಿನಲ್ಲಿ ಕಾಣುವಂತದ್ದೆ.

ಅದೇನಿದ್ದರೂ, ಒಂದು ಮಗುವಿನ ಪೋಷಕರಾಗಿ ಆಗಿರುವ ಗಾಯವು ಮಾರಣಾಂತಿಕವೋ ಅಥವಾ ಅಲ್ಲವೋ ಎಂಬುದನ್ನು ಗುರುತಿಸಲಾದರು ಗೊತ್ತಿರಬೇಕು ಹಾಗು ಪರಿಸ್ತಿಥಿ ಕೈ ಮೀರುವ ಮುನ್ನ ಮಗುವಿಗೆ ವೈದ್ಯಕೀಯ ಸಹಾಯ ದೊರಕಿಸಬೇಕು. ನಿಮ್ಮ ಮಗು ಏನಾದರು ತಲೆಗೆ ಪೆಟ್ಟು ತಿಂದರೆ, ಕೆಳಗಿನ ವಿಷಯಗಳನ್ನು ಗಮನದಲ್ಲಿಡಿ :

೧. ಸಂಘರ್ಷಣೆ (ಕನ್ಕ್ಯುಶನ್) ಲಕ್ಷಣಗಳಿವೆಯೇ ಎಂದು ನೋಡಿ

ತಲೆಗೆ ಪೆಟ್ಟು ಬಿದ್ದೊಡನೆ ಹಾಗು ಮುಂದಿನ ಕೆಲವು ವಾರಗಳವರೆಗೆ ಕನ್ಕ್ಯುಶನ್ ನ ಲಕ್ಷಣಗಳನ್ನು ಗುರುತಿಸಲಿಕ್ಕೆ ಪ್ರಯತ್ನಿಸಿ. ತಲೆಯ ಸುಳಿಯ ಬಳಿ ಉಬ್ಬುಗಳು, ವಾಂತಿ ಮಾಡುವುದು, ಆಲಸ್ಯ, ಕೀರಲು ಧ್ವನಿಯಲ್ಲಿ ಅಳುವುದು, ಎದೆಹಾಲು ಕುಡಿಯಲು ತೊಂದರೆ ಆಗುವುದು, ದೃಷ್ಟಿ ಕುಗ್ಗುವುದು, ಗೊಂದಲಮಯ ಆಗಿರುವುದು, ವಾಂತಿ ಅಥವಾ ವಾಕರಿಕೆ, ಕಿವಿ ಗುಯ್ ಗುಟ್ಟುವುದು, ತಲೆ ಸುತ್ತಿದಂತೆ ಆಗುವುದು, ನೇರವಾಗಿ ನಿಲ್ಲಲು ಆಗದಿರುವುದು, ತಲೆನೋವು, ಬೆಳಕು ಅಥವಾ ಉಷ್ನಕ್ಕೆ ಅತಿಯಾದ ಸೂಕ್ಷ್ಮತೆ, ಇವೆಲ್ಲವೂ ನೀವು ಗಮನಿಸಬೇಕಾದ ಲಕ್ಷಣಗಳು. ನಿಮಗೆ ಇವುಗಳಲ್ಲಿ ಯಾವುದಾದರು ಲೇಖನಗಳು ಕಂಡುಬಂದಲ್ಲಿ ಕೂಡಲೇ ವೈದ್ಯರ ಜೊತೆ ಮಾತನಾಡಿ.

೨. ತಪಾಸಣೆ

ಕನ್ಕ್ಯುಶನ್ ಇದೆಯಾ ಎಂದು ತಿಳಿದುಕೊಳ್ಳಲು ವೈದ್ಯರು ನರವೈಜ್ಞಾನಿಕ ಪರೀಕ್ಷೆಗಳನ್ನ ನಡೆಸಿ ಮಗುವಿನ ಮೂಲ ಪ್ರತಿಫಲಿತ ಕಾರ್ಯಗಳು, ಶ್ರವಣ, ದೃಷ್ಟಿ ಎಲ್ಲವು ಸರಿಯಾಗಿವೆಯೇ ಎಂದು ಗಮನಿಸುತ್ತಾರೆ. ಈ ಮೊದಲ ಪರೀಕ್ಷೆಗಳಲ್ಲಿ ಏನಾದರು ಗಂಭೀರ ಪರಿಸ್ತಿಥಿ ಎದುರಾಗಿರುವಂತೆ ಕಂಡರೆ ವೈದ್ಯರು ಸಿ.ಟಿ.ಸ್ಕ್ಯಾನ್ ಮಾಡಿಸಲಿಕ್ಕೆ ಹೇಳುತ್ತಾರೆ. ಸ್ಕ್ಯಾನ್ ಇಂದ ಏನಾದರು ಆಂತರಿಕ ರಕ್ತಸ್ರಾವ ಅಥವಾ ರಕ್ತ ಹೆಪ್ಪುಗಟ್ಟಿರುವುದು ತಿಳಿದುಬಂದರೆ, ವೈದ್ಯರು ಮುಂದೆ ಏನು ಮಾಡಬೇಕೊ ಅದನ್ನು ಮಾಡುತ್ತಾರೆ. ಬಹುತೇಕ ಅವರು ಸರ್ಜರಿ ಮಾಡಿ ಆ ಅಪಘಾತವು ಅಳಿಸಲಾಗದಂತ ಹಾನಿ ಮಾಡದಂತೆ ಹಾಗು ಅದು ಮುಂದೆ ಮಾರಣಾಂತಿಕ ಪರಿಣಾಮ ಬೀರುವುದನ್ನು ನಿಲ್ಲಿಸುತ್ತಾರೆ.

೩. ದೈಹಿಕ ಹಾಗು ಮಾನಸಿಕ ಚಟುವಟಿಕೆಗಳನ್ನು ಸ್ವಲ್ಪ ಸಮಯ ನಿಲ್ಲಿಸಿಬಿಡಿ

ಕನ್ಕ್ಯುಶನ್ ಗೆ ಒಳಗಾಗಿರುವ ಮಕ್ಕಳು ಅಪಘಾತ ಆದ ಕೆಲವು ದಿನಗಳವರೆಗೆ ಯಾವುದೇ ದೈಹಿಕ ಅಥವಾ ಮಾನಸಿಕ ಚಟುವಟಿಕೆಗಳನ್ನು ಮಾಡುವಂತಿಲ್ಲ. ಇದರ ಅರ್ಥ ಅವರು ಶಾಲೆಗೆ, ಮೈದಾನಕ್ಕೆ ಹೋಗುವುದು ನಿಲ್ಲಿಸಬೇಕು ಹಾಗು ವೀಡಿಯೊ ಗೇಮ್ಸ್ ಆಡೋದು ನಿಲ್ಲಿಸಬೇಕು.

೪. ಪರಿಹಾರಕ್ಕಿಂತ ನಿವಾರಣೆ ಮುಖ್ಯ

ಯಾವುದೇ ರೀತಿಯ ಅಪಘಾತ ಆಗಲಿ ಅಥವಾ ಗಾಯಗಳನ್ನು ಆಗಲಿ ನಮ್ಮ ಕೈಯಿಂದ ತಡೆಯುವುದು ಕಷ್ಟ, ಅದರಲ್ಲಿಯೂ ಮಕ್ಕಳು ಬೀಳದಂತೆ, ಗಾಯ ಮಾಡಿಕೊಳ್ಳದಂತೆ ನೋಡಿಕೊಳ್ಳುವುದು ಅಸಾಧ್ಯ. ಹೀಗಿದ್ದಾಗ ಪೋಷಕರಾಗಿ ನೀವು ನಿಮ್ಮ ಮಗುವು ತಲೆಗೆ ಪೆಟ್ಟು ಮಾಡಿಕೊಳ್ಳದಂತೆ ಇರಲು ಏನು ಮಾಡಬೇಕೋ ಎಲ್ಲವನು ಮಾಡಿ. ನೀವು ಇಷ್ಟೆಲ್ಲಾ ಮಾಡಿದ ಮೇಲು, ಅವರು ಬಿಲ್ಲುತ್ತಾರೆ , ತೆರೆಚಿಕೊಳ್ಳುತ್ತಾರೆ, ಚರ್ಮ ಸುಲಿದುಕೊಳ್ಳುತ್ತಾರೆ ಅಥವಾ ಇನ್ನೇನಾದರು ಮಾಡಿಕೊಂಡೆ ಕೊಳ್ಳುತ್ತಾರೆ. ಆದರೆ ಇಂತಹ ಸಮಯದಲ್ಲಿ ನೀವು ಪೋಷಕರಾಗಿ ನಿಮ್ಮ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿರಬೇಕು. ಏಕೆಂದರೆ, ಮಕ್ಕಳೆಂದ ಮೇಲೆ ಇಂತಹ ಸಂದರ್ಭಗಳು ಎದುರಾಗುವುದು ಸಹಜ.

ಹೀಗಾಗಿಯೂ ನೀವು ನಿಮ್ಮ ಮಗುವು ತಲೆಗೆ ಪೆಟ್ಟು ಮಾಡಿಕೊಳ್ಳದಂತೆ ನೋಡಿಕೊಳ್ಳಲು ಮಾಡಬಹುದಾದ ಕೆಲಸಗಳೆಂದರೆ ನಿಮ್ಮ ಮಗುವಿನ ತೊಟ್ಟಿಲ ಸುತ್ತ ಮೆತ್ತನೆ ತಲೆದಿಂಬುಗಳು ಅಥವಾ ಮಡಚಿಟ್ಟ ಮೆತ್ತನೆ ಹೊದಿಕೆಗಳನ್ನು ಇಡಿ. ಆಗ ಮಗುವು ಬಿದ್ದರು ಪೆಟ್ಟಾಗುವುದಿಲ್ಲ. ಮಕ್ಕಳು ಸ್ಕೇಟಿಂಗ್ ಅಥವಾ ಸೈಕಲ್ ಓಡಿಸುವಾಗ ಯಾವಾಗಲು ಅವರು ಹೆಲ್ಮೆಟ್, ಮೊಣಕಾಲು ಹಾಗು ಮೊಣಕೈ ಪ್ಯಾಡ್ ಧರಿಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ, ನಿಮ್ಮ ಮಗುವನ್ನು ಎಲ್ಲಿಯೇ ಹೊರಗೆ ಕರೆದುಕೊಂಡು ಹೋಗಿದ್ದರು ಅದರ ಮೇಲೆ ಹದ್ದಿನ ಕಣ್ಣು ಇಟ್ಟಿರಿ.  

Leave a Reply

%d bloggers like this: