ಮಕ್ಕಳು ಒಳ್ಳೆಯ ಅಭ್ಯಾಸಗಳಿಗಿಂತ ಕೆಟ್ಟ ಅಭ್ಯಾಸಗಳನ್ನು ಬೇಗ ಕಲಿಯುವುದರ ಕಡೆ ವಾಲುತ್ತಾರೆ. ಕೆಟ್ಟ ಅಭ್ಯಾಸಗಳು ಕಾಣುವುದಕ್ಕೆ ರಂಗಾಗಿ ಇರುವ ಕಾರಣ, ನಿಮ್ಮ ಮಕ್ಕಳು ಅವುಗಳನ್ನು ಕಲಿಯುವುದಕ್ಕೆ ಕಾತುರತೆ ವ್ಯಕ್ತಪಡಿಸುವುದು ಸಹಜ. ಒಬ್ಬ ಮಗುವಿನ ಪೋಷಕರಾಗಿ ಮಗುವಿನ ಇಂತಹ ಅಭ್ಯಾಸಗಳು ಚಟಗಳು ಆಗುವ ಮುನ್ನ ಬೇರು ಸಮೇತ ಕಿತ್ತೊಗೆಯಬೇಕು. ಆದರೆ ಇದನ್ನು ನೀವು ನಾಜೂಕಾಗಿ ಬಗೆಹರಿಸದಿದ್ದರೆ ನಿಮ್ಮ ಮಗುವು ನಿಮ್ಮಿಂದ ಇನ್ನಷ್ಟು ಹಿಡಿತ ಕಳೆದುಕೊಳ್ಳಬಹುದು.
ನೀವು ಎಷ್ಟು ಬೇಗ ಅವರ ಮನಸ್ಸಿನಾಳದಲ್ಲಿ ಪ್ರಾಮಾಣಿಕತೆಯ ಪ್ರಾಮುಖ್ಯತೆಯನ್ನ ಬೇರೂರುವಂತೆ ಮಾಡುತ್ತಿರೋ, ಅಷ್ಟು ಒಳ್ಳೆಯದು. ಪ್ರಾಮಾಣಿಕತೆಯ ಬಗೆಗಿನ ಕಥೆಗಳನ್ನು ಓದಿ ಹೇಳಿ ಹಾಗು ಕಥೆಯಲ್ಲಿ ಪ್ರಾಮಾಣಿಕತೆಗೆ ದೊರಕುವ ಬಹುಮಾನದ ಬಗ್ಗೆ ಮನವರಿಕೆ ಮಾಡಿ. ಇಂತಹ ಕಥೆಗಳು ನಿಮ್ಮ ಮಗುವಿನಲ್ಲಿ ಒಳ್ಳೆಯ ಗುಣಗಳು ಅಚ್ಚಳಿಯದೆ ಉಳಿಯುವಂತೆ ಮಾಡುತ್ತವೆ.
ನಿಮ್ಮ ಮಗುವಿಗೆ ಸುಳ್ಳು ಹೇಳಬೇಕೆಂದು ಅನಿಸುವುದನ್ನೇ ನಿಲ್ಲಿಸಿದರೆ, ಮುಂದೆ ಅದೇ ಅಭ್ಯಾಸ ಆಗುವುದು ತಪ್ಪುತ್ತದೆ.
ಇದನ್ನು ಮಾಡಲು ಇರುವ ಕೆಲವು ದಾರಿಗಳು ಇಲ್ಲಿವೆ :
೧. ಪ್ರತಿಯೊಂದು ಬಾರಿ ನಿಮ್ಮ ಮಗುವು ನಿಜ ಹೇಳಿದಾಗ ಅವರಿಗೆ ಸತ್ಕರಿಸಿ. ಬಹುಮಾನ ಅಥವಾ ಪ್ರಶಂಸೆ ನೀಡುವುದು ನಿಮ್ಮ ಮಗುವಿನಲ್ಲಿ ಸದ್ಗುಣಗಳನ್ನು ಬೆಳೆಸಲು ಇರುವ ಅತ್ಯುತ್ತಮ ದಾರಿ. ನೀವು ನೀಡುವ ಬಹುಮಾನ ಮಗು ಇಷ್ಟಪಡುವಂತದ್ದು ಆಗಿರಲಿ. ಈ ರೀತಿ ನೀವು ನಿಮ್ಮ ಮಗುವು ಸುಳ್ಳು ಹೇಳುವುದನ್ನು ತಪ್ಪಿಸಲು ಪಡಬೇಕಾದ ಕಷ್ಟ ಕಮ್ಮಿ ಮಾಡಿಕೊಳ್ಳಬಹುದು.
೨. ನಿಮ್ಮ ಮಗುವನ್ನು ಪ್ರಶ್ನೆ ಮಾಡುವಾಗ ತುಂಬಾ ಸಭ್ಯವಾಗಿರಿ. ನಿಮ್ಮ ಮಗು ಸತ್ಯ ತಾನೇ ಬಾಯಿ ಬಿಡುವಂತೆ ಮಾಡಲು ಮೊದಲೇ ಉಪಾಯ ಸಿದ್ದವಿರಿಸಿಕೊಳ್ಳಿ. ಇದು ಅವರಿಗೆ ಒಂದು ಸುಳ್ಳು ಹೇಳಿದರೆ ಅದಕ್ಕೆ ಸುಳ್ಳುಗಳನ್ನ ಸೇರಿಸುತ್ತಲೇ ಹೋಗಬೇಕು, ಅದರ ಬದಲು ಸತ್ಯ ಹೇಳುವುದೇ ಲೇಸು ಎಂದು ಅನಿಸುವಂತೆ ಮಾಡಿಸುತ್ತದೆ. ಆಗ ಅವರು ಸುಳ್ಳಿಗಿಂತ ಸತ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ.
೪.ಇದನ್ನು ನೆನಪಿನಲ್ಲಿಟ್ಟುಕೊಳ್ಳಿ, ಯಾವುದೇ ಕಾರಣಕ್ಕೂ ನಿಮ್ಮ ಮಗುವನ್ನು ಹೀಯಾಳಿಸಿ, ಅಂದರೆ ಕಳ್ಳ, ಸುಳ್ಳ ನೀನು ಸುಳ್ಳು ಹೇಳುತ್ತೀಯಾ ಎಂದು ಕರೆಯದಿರಿ, ಇದು ನಿಮ್ಮ ಮಗುವಿಗೆ ಸರಿ ಮತ್ತು ತಪ್ಪು ಯಾವುದೆಂದು ತಿಳಿಸುವ ಅತ್ಯಂತ ಕೆಟ್ಟ ಮಾರ್ಗವಾಗಿದೆ. ನೀವು ನಿಮ್ಮ ಮಗುವನ್ನು ಸುಳ್ಳ, ವಂಚಕ, ಮೋಸಗಾರ ಎಂದು ಕರೆಯುವ ಕ್ಷಣ, ನೀವು ಅವರನ್ನು ಪ್ರೋತ್ಸಾಹಿಸುತ್ತಿದ್ದೀರಿ, ಖಂಡಿತವಾಗಿಯೂ ನಿಮ್ಮ ಮಗು ಅದನ್ನು ಆರಿಸಿಕೊಳ್ಳುತ್ತದೆ. ಮಗುವನ್ನು ಯಾವುದೇ ಕಾರಣಕ್ಕೂ ಆ ರೀತಿ ಕರೆಯಬೇಡಿ.
೫.ನಿಮ್ಮ ಮಗುವು ನಿಮ್ಮ ಹತ್ತಿರ ಸುಳ್ಳು ಹೇಳಿದಾಗ, ನಿಮ್ಮ ಕೋಪ ಅಥವಾ ತಾಳ್ಮೆಯನ್ನು ಕಳೆದುಕೊಳ್ಳುವುದು ಸಹಜ. ಆದರೆ ಇದನ್ನು ಮಾಡಬೇಡಿ, ಇದು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ನಿಮ್ಮ ಮಗುವಿಗೆ ಸರಿ ತಪ್ಪುಗಳ ವ್ಯತ್ಯಾಸ ತಿಳಿಸಲು ಅವರಿಗೆ ಕೈಮಾಡಲು ಮುಂದಾಗದಿರಿ, ಅದು ಸರಿಯಾದ ಮಾರ್ಗವಲ್ಲ. ಇದರ ಬದಲೂ ಅವರ ಜೋತೆ ಶಾಂತಿಯಿಂದ ಸಮಾಧಾನವಾಗಿ ಅವರ ಮನ ಪರಿವರ್ತನೆ ಮಾಡಲು ಪ್ರಯತ್ನಿಸಿ.