ಹೊಸ-ವರುಷದಲ್ಲಿ-ಹೊಸ-ಹುರುಪಿನ-ನೀವು-ಪಾಲಿಸಬೇಕಾದ-೫-ಚರ್ಮದ-ಆರೈಕೆಗಳು

ನೀವು ೨೦,೪೦,೬೦ ಅಥವಾ ಇವುಗಳೆಡೆಯಲ್ಲಿರುವ ಯಾವುದೇ ವಯಸ್ಸಿನವರಾಗಿದ್ದರೂ ಚರ್ಮಸಂರಕ್ಷಣೆಗಾಗಿ ಕೆಲವು ರಿವಾಜುಗಳನ್ನು ಧರ್ಮಾಚರಣೆಯಂತೆ ಕೈಗೊಳ್ಳಬೇಕಾಗುತ್ತದೆ. ಚೆಂದುಳ್ಳಿ ಚೆಲುವೆಯಂತಿದ್ದ ನಿಮ್ಮ ಚರ್ಮ ವಯಸ್ಸಾಗಿತ್ತಿರುವಂತೆ ದಿನೇ ದಿನೇ ಕಳೆಗುಂದುವುದನ್ನು ನೀವು ಗಮನಿಸಿರಬಹುದು ಒಣಚರ್ಮ, ಮೊಡವೆ ಅಥವಾ ಇನ್ನಿತರ ಚರ್ಮದ ತೊಂದರೆಗಳಿಂದ ಮುಕ್ತಿಪಡೆದು ಟೀನ್ ಏಜ್ ನ ಕಾಲೇಜು ಕನ್ಯೆರಂತೆ ಕಾಂತಿಯುಕ್ತ ತ್ವಚೆಯನ್ನು ಮರಳಿಪಡೆಯಲು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

ಕೆಳಗೆ ನೀಡಿದ ೫ ಚರ್ಮಸಂರಕ್ಷಣಾ ರೀತಿಗಳನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿದರೆ ಕೈಬಿಟ್ಟು ಹೋದ ನಿಮ್ಮ ಸೌಮ್ಯ, ಹೊಳಪುಳ್ಳ, ಕಾಂತಿಯುತ ತ್ವಚೆಯು ಕೆಲವೇ ವಾರಗಳಲ್ಲಿ ನಿಮ್ಮನ್ನು ಅರಸಿ ಬರುವುದು.

೧. ತ್ವಚೆಗಾಗಿ ಸ್ವಲ್ಪ ಸಮಯ ಮೀಸಲಾಗಿಟ್ಟು ದಿನವೂ ಅದಕ್ಕೆ ಬದ್ಧರಾಗಿ

“ನನಗೆ ಚರ್ಮಸೌಂದರ್ಯವನ್ನು ಗಮನಿಸಲು ಸಮಯವೇ ಸಿಗುವುದಿಲ್ಲ”, ಎಂಬ ಹಳೇ ಕತೆಯನ್ನು ಆವರ್ತಿಸುವ ೨೦೧೬ರ ಇಸವಿ ಇನ್ನಿಲ್ಲದಂತೆ ಕಳೆಯಿತು. ಹೊಸ ವರುಷದ ಈ ಸಮಯದಲ್ಲಿ ನಿಮ್ಮ ತ್ವಚೆಯ ಬಗ್ಗೆ ಸ್ವಲ್ಪ ಗಮನ ಹರಿಸಿ. ನಿಮ್ಮ ತ್ವಚೆಗೆ ಹೊಂದಿಕೊಳ್ಳುವಂತ ಸೌಂದರ್ಯವರ್ಧಕಗಳನ್ನು ಬಳಸುವುದರಿಂದ ಕಳೆಗುಂದಿದ ನಿಮ್ಮ ತ್ವಚೆಯು ಉಸಿರಾಡಲಾರಂಭಿಸುವುದು. “ಕಟ್ಟುಪಾಡುಗಳಿಗೆ ಬದ್ಧರಾಗುವುದರಿಂದ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು”ಎಂದು ದಿ ಹಫ್ಫಿಂಗ್ ಟನ್ ನಲ್ಲಿ ಉಲ್ಲೇಖಿಸಲಾಗಿದೆ. ತ್ವಚೆಯ ಪಾಲನೆಗೆ ಸ್ವಲ್ಪ ಸಮಯವನ್ನು ಮೀಸಲಾಗಿರಿಸುವುದರಿಂದ ಭವಿಷ್ಯದಲ್ಲಿ ನಿಮ್ಮ ಚರ್ಮವು ನಿಮಗೆ ಋಣಿಯಾಗಿರುವುದು.

೨. ಸನ್ ಸ್ಕ್ರೀನ್ ಹಾಗೂ ಮೊಯ್ಸ್ ಚುರೈಸರ್ ಗಳು

ನಿಮ್ಮದು ಯಾವುದೇ ರೀತಿಯ ಚರ್ಮವಾಗಿರಲಿ ಅಥವಾ ಯಾವುದೇ ಋತುವಾಗಿರಲಿ ಚರ್ಮವು ಸೂರ್ಯಾಘಾತಕ್ಕೆ ಒಳಗಾಗುವುದಂತೂ ಖಂಡಿತ. ಎಸ್ ಪಿ ಫ್ ೩೦ ನ್ನು ಒಳಗೊಂಡ ಸನ್ ಸ್ಕ್ರೀನ್ ಲೋಶನನ್ನು ದಿನವೂ ಉಪಯೋಗಿಸುವುದರಿಂದ ಚರ್ಮದ ಅರ್ಬುದವಾಗದಂತೆ ತಡೆಯಬಹುದಲ್ಲದೇ ಮುಖದ ಗೆರೆಗಳು, ಸುಕ್ಕುಗಳು,ರಂಧ್ರಗಳನ್ನೂ ಮರೆಮಾಚಬಹುದು.ತ್ವಚೆಯೂ ಕಾಂತಿಪೂರ್ಣವಾಗಿರುವುದು. ಎಸ್ ಪಿ ಎಫ್ ನ್ನು ಒಳಗೊಂಡ ಮೊಯ್ಸಚುರೈಸರನ್ನು ಕೂಡಾ ಬಳಸುವುದು ಚರ್ಮದ ತೇವಾಂಶವನ್ನು ಕಾಪಾಡಲು ಸಹಾಯಕಾರಿಯಾಗುವುದು. ಬೆಳಗ್ಗೆ ಸ್ನಾನವಾದ ಬಳಿಕ ಮತ್ತು ರಾತ್ರಿ ಮಲಗುವ ಮುನ್ನ ಮಾಯ್ಸಚುರೈಸರನ್ನು ಹಚ್ಚಿಕೊಂಡರೆ ಉತ್ತಮ ಫಲಿತಾಂಶ ದೊರೆಯುವುದು.

೩. ಮಲಗುವ ಮುನ್ನ ಮೇಕಪ್ಪನ್ನು ಅಳಿಸಲು ಮರೆಯದಿರಿ.

ಶುಚಿಯಾದ ಶರೀರದೊಂದಿಗೆ ಮಲಗಬೇಕಾದದ್ದು ಅತೀ ಅಗತ್ಯ. ನಿದ್ರಿಸುವ ಸಮಯದಲ್ಲಿ ಚರ್ಮವು ಮರಳಿ ಜೀವನವನ್ನು ಪಡೆಯುತ್ತದೆ. ಚರ್ಮರಂಧ್ರಗಳು ಉಸಿರಾಡುತ್ತಿರುತ್ತವೆ. ಮೇಕಪ್ಪನ್ನು ಅಳಿಸಿ , ಮುಖವನ್ನು ತೊಳೆದುಕೊಳ್ಳುವುದರಿಂದ ಕೊಳೆಗಳು ನಿವಾರಿಸಲ್ಪಡುವುದಲ್ಲದೇ, ಮುಖದ ರಂಧ್ರಗಳು ತೆರೆದುಕೊಳ್ಳಲ್ಪಡುತ್ತವೆ.

೪. ನಿಯಮಿತವಾಗಿ ಎಕ್ಸಫೋಲಿಯೇಟನ್ನು ಮಾಡಿಕೊಳ್ಳಿ

ಎಕ್ಸಫೋಲಿಯೇಟ್ ಎಂದರೆ, ಶರೀರದಿಂದ ಮೃತಜೀವಕೋಶಗಳನ್ನು ಒರೆಸಿ, ತೆಗೆದು ಹಾಕುವ ವಿಧಾನ. ಆ್ಯಂಟಿಏಜಿಂಗ್ ಕ್ರೀಂ ಹಾಗೂ ಮೋಯ್ಸಚುರೈಸರನ್ನು ನಿಯಮಿತವಾಗಿ ಬಳಸುವುದರಿಂದ ತ್ವಚೆಯು ಯೌವ್ವನ ಪೂರಿತವಾಗಿರುತ್ತದೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆದರೆ, ತಜ್ಞರ ಅಭಿಪ್ರಾಯದಂತೆ ಎಕ್ಸಫೋಲಿಯೇಟ್ ನಿಂದ ಆರೋಗ್ಯಪೂರ್ಣ ತ್ವಚೆಯನ್ನು ಮರಳಿ ಪಡೆಯಲು ಸಾಧ್ಯ. ಎಕ್ಸಫೋಲಿಯೇಟ್ ನಿಂದ ಮೃತ ಜೀವಕೋಶಗಳು ತೆಗೆದುಹಾಕಲ್ಪಡುತ್ತದೆ.ಸುಕ್ಕುಗಳು ನಿವಾರಿಸಲ್ಪಡುತ್ತದೆ,ಮೊಡವೆಗಳೂ ಮಾಯವಾಗುತ್ತದೆ. ಹೊಸ ಕಾಂತಿಯುಕ್ತ ಆರೋಗ್ಯಪೂರ್ಣ ತ್ವಚೆಯು ನಿಮ್ಮದಾಗುತ್ತದೆ. ಆದರೆ, ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವಂತ ಸ್ಕ್ರಬರನ್ನು ಬಳಸುವುದು ಉತ್ತಮ.ಮೊಡವೆ ಪೀಡಿತ ಅಥವಾ ಸೂಕ್ಷ್ಮ ಸ್ವಭಾವದ ಚರ್ಮವುಳ್ಳವರಾಗಿದ್ದರೆ, ಒರಟಾದ ಸ್ಕ್ರಬ್ಬರನ್ನು

ಉಪಯೋಗಿಸದಿರುವುದೊಳ್ಳೆಯದು. ಮೃದು ಮೈಕ್ರೋಬೀಡ್ಸನ್ನು ಒಳಗೊಂಡಿರುವ ಕ್ಲೆನ್ಸರನ್ನು ೨-೩ ವಾರಗಳಿಗೊಮ್ಮೆ ಸ್ಕ್ರಬ್ ಮಾಡಿಕೊಳ್ಳಬಹುದು ಅಥವಾ ಸೌಮ್ಯ ಲೋಶನ್ಗಳನ್ನು ದಿನಂಪ್ರತಿ ಬಳಸಬಹುದು.

೫. ವ್ಯಾಯಾಮ

ಕಾಂತಿಯುಕ್ತ ಚರ್ಮವನ್ನು ಪಡೆಯಲು ಮಾತ್ರವಲ್ಲ, ಶರೀರವನ್ನು ಆರೋಗ್ಯಪೂರ್ಣವಾಗಿರಿಸುವುದರಿಂದ ಕೂಡಾ ವ್ಯಾಯಾಮ ಮಾಡುವಂತೆ ಶಿಫಾರಸು ಮಾಡಲಾಗಿದೆ. ವ್ಯಾಯಾಮದಿಂದ ಶರೀರದ ಜೋತುಬಿದ್ದ ತೊಗಲುಗಳು ಮತ್ತೆ ಬಿಗಿಯಲ್ಪಡುತ್ತದೆ. ಸ್ಟ್ರೆಂತ್ ಟ್ರೈನಿಂಗ್ ಮಾತ್ತು ಕಾರ್ಡಿಯೋಗಳತಂಹ ವ್ಯಾಯಾಮಗಳು ರಕ್ತಪರಿಚಲನೆಯನ್ನು ವೇಗಗೊಳಿಸುತ್ತದೆ. ಇದರಿಂದ ಮಾಂಸಪೇಶಿಗಳು ಧೃಡವಾಗುವುದಲ್ಲದೇ ಶರೀರವು ತನ್ನ ಅಂಗಸೌಷ್ಟವವನ್ನು ಮರಳಿ ಪಡೆಯುವುದು.ವ್ಯಾಯಮವು ಒತ್ತಡವನ್ನು ಕಡಿಮೆಗೊಳಿಸುತ್ತವೆ. ಹಾಗಾಗಿ ಚರ್ಮವು ಬೇಗನೇ ಸುಕ್ಕುಗಟ್ಟುವುದಿಲ್ಲ.

ದೈನಂದಿನ ಕಸರತ್ತಿನ ಬಳಿಕ ಶುದ್ಧವಾದ ನೀರಿನಿಂದ ಶರೀರವನ್ನೂ ಮುಖವನ್ನೂ ತೊಳೆದುಕೊಳ್ಳುವುದರಿಂದ ಟಿ-ಜೋನ್

ನಲ್ಲಿ ಸೂಕ್ಷ್ಮರಂಧ್ರಗಳು ಮುಚ್ಚಿಕೊಳ್ಳುವುದನ್ನು ತಡೆಯಬಹುದು. ಟಿ ಜೋನ್ ಎಂದರೆ, ಮುಖದ ಹಣೆ, ಮೂಗು ಹಾಗೂ ಗದ್ದದ ಭಾಗಗಳು. ಸಾಮಾನ್ಯವಾಗಿ ಇವುಗಳು ಮುಖದ ಇತರ ಭಾಗಗಳಿಗಿಂತ ಎಣ್ಣೆಯುಕ್ತವಾಗಿರುತ್ತದೆ.

ನೀವು ೨೦,೪೦,೬೦ ಅಥವಾ ಇವುಗಳೆಡೆಯಲ್ಲಿರುವ ಯಾವುದೇ ವಯಸ್ಸಿನವರಾಗಿದ್ದರೂ ಚರ್ಮಸಂರಕ್ಷಣೆಗಾಗಿ ಕೆಲವು ರಿವಾಜುಗಳನ್ನು ಧರ್ಮಾಚರಣೆಯಂತೆ ಕೈಗೊಳ್ಳಬೇಕಾಗುತ್ತದೆ. ಚೆಂದುಳ್ಳಿ ಚೆಲುವೆಯಂತಿದ್ದ ನಿಮ್ಮ ಚರ್ಮ ವಯಸ್ಸಾಗಿತ್ತಿರುವಂತೆ ದಿನೇ ದಿನೇ ಕಳೆಗುಂದುವುದನ್ನು ನೀವು ಗಮನಿಸಿರಬಹುದು ಒಣಚರ್ಮ, ಮೊಡವೆ ಅಥವಾ ಇನ್ನಿತರ ಚರ್ಮದ ತೊಂದರೆಗಳಿಂದ ಮುಕ್ತಿಪಡೆದು ಟೀನ್ ಏಜ್ ನ ಕಾಲೇಜು ಕನ್ಯೆರಂತೆ ಕಾಂತಿಯುಕ್ತ ತ್ವಚೆಯನ್ನು ಮರಳಿಪಡೆಯಲು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

ಕೆಳಗೆ ನೀಡಿದ ೫ ಚರ್ಮಸಂರಕ್ಷಣಾ ರೀತಿಗಳನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿದರೆ ಕೈಬಿಟ್ಟು ಹೋದ ನಿಮ್ಮ ಸೌಮ್ಯ, ಹೊಳಪುಳ್ಳ, ಕಾಂತಿಯುತ ತ್ವಚೆಯು ಕೆಲವೇ ವಾರಗಳಲ್ಲಿ ನಿಮ್ಮನ್ನು ಅರಸಿ ಬರುವುದು.

  •  ತ್ವಚೆಗಾಗಿ ಸ್ವಲ್ಪ ಸಮಯ ಮೀಸಲಾಗಿಟ್ಟು ದಿನವೂ ಅದಕ್ಕೆ ಬದ್ಧರಾಗಿ

“ನನಗೆ ಚರ್ಮಸೌಂದರ್ಯವನ್ನು ಗಮನಿಸಲು ಸಮಯವೇ ಸಿಗುವುದಿಲ್ಲ”, ಎಂಬ ಹಳೇ ಕತೆಯನ್ನು ಆವರ್ತಿಸುವ ೨೦೧೬ರ ಇಸವಿ ಇನ್ನಿಲ್ಲದಂತೆ ಕಳೆಯಿತು. ಹೊಸ ವರುಷದ ಈ ಸಮಯದಲ್ಲಿ ನಿಮ್ಮ ತ್ವಚೆಯ ಬಗ್ಗೆ ಸ್ವಲ್ಪ ಗಮನ ಹರಿಸಿ. ನಿಮ್ಮ ತ್ವಚೆಗೆ ಹೊಂದಿಕೊಳ್ಳುವಂತ ಸೌಂದರ್ಯವರ್ಧಕಗಳನ್ನು ಬಳಸುವುದರಿಂದ ಕಳೆಗುಂದಿದ ನಿಮ್ಮ ತ್ವಚೆಯು ಉಸಿರಾಡಲಾರಂಭಿಸುವುದು. “ಕಟ್ಟುಪಾಡುಗಳಿಗೆ ಬದ್ಧರಾಗುವುದರಿಂದ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು”ಎಂದು ದಿ ಹಫ್ಫಿಂಗ್ ಟನ್ ನಲ್ಲಿ ಉಲ್ಲೇಖಿಸಲಾಗಿದೆ. ತ್ವಚೆಯ ಪಾಲನೆಗೆ ಸ್ವಲ್ಪ ಸಮಯವನ್ನು ಮೀಸಲಾಗಿರಿಸುವುದರಿಂದ ಭವಿಷ್ಯದಲ್ಲಿ ನಿಮ್ಮ ಚರ್ಮವು ನಿಮಗೆ ಋಣಿಯಾಗಿರುವುದು.

  • ಸನ್ ಸ್ಕ್ರೀನ್ ಹಾಗೂ ಮೊಯ್ಸ್ ಚುರೈಸರ್ ಗಳು

ನಿಮ್ಮದು ಯಾವುದೇ ರೀತಿಯ ಚರ್ಮವಾಗಿರಲಿ ಅಥವಾ ಯಾವುದೇ ಋತುವಾಗಿರಲಿ ಚರ್ಮವು ಸೂರ್ಯಾಘಾತಕ್ಕೆ ಒಳಗಾಗುವುದಂತೂ ಖಂಡಿತ. ಎಸ್ ಪಿ ಫ್ ೩೦ ನ್ನು ಒಳಗೊಂಡ ಸನ್ ಸ್ಕ್ರೀನ್ ಲೋಶನನ್ನು ದಿನವೂ ಉಪಯೋಗಿಸುವುದರಿಂದ ಚರ್ಮದ ಅರ್ಬುದವಾಗದಂತೆ ತಡೆಯಬಹುದಲ್ಲದೇ ಮುಖದ ಗೆರೆಗಳು, ಸುಕ್ಕುಗಳು,ರಂಧ್ರಗಳನ್ನೂ ಮರೆಮಾಚಬಹುದು.ತ್ವಚೆಯೂ ಕಾಂತಿಪೂರ್ಣವಾಗಿರುವುದು. ಎಸ್ ಪಿ ಎಫ್ ನ್ನು ಒಳಗೊಂಡ ಮೊಯ್ಸಚುರೈಸರನ್ನು ಕೂಡಾ ಬಳಸುವುದು ಚರ್ಮದ ತೇವಾಂಶವನ್ನು ಕಾಪಾಡಲು ಸಹಾಯಕಾರಿಯಾಗುವುದು. ಬೆಳಗ್ಗೆ ಸ್ನಾನವಾದ ಬಳಿಕ ಮತ್ತು ರಾತ್ರಿ ಮಲಗುವ ಮುನ್ನ ಮಾಯ್ಸಚುರೈಸರನ್ನು ಹಚ್ಚಿಕೊಂಡರೆ ಉತ್ತಮ ಫಲಿತಾಂಶ ದೊರೆಯುವುದು.

  • ಮಲಗುವ ಮುನ್ನ ಮೇಕಪ್ಪನ್ನು ಅಳಿಸಲು ಮರೆಯದಿರಿ.

ಶುಚಿಯಾದ ಶರೀರದೊಂದಿಗೆ ಮಲಗಬೇಕಾದದ್ದು ಅತೀ ಅಗತ್ಯ. ನಿದ್ರಿಸುವ ಸಮಯದಲ್ಲಿ ಚರ್ಮವು ಮರಳಿ ಜೀವನವನ್ನು ಪಡೆಯುತ್ತದೆ. ಚರ್ಮರಂಧ್ರಗಳು ಉಸಿರಾಡುತ್ತಿರುತ್ತವೆ. ಮೇಕಪ್ಪನ್ನು ಅಳಿಸಿ , ಮುಖವನ್ನು ತೊಳೆದುಕೊಳ್ಳುವುದರಿಂದ ಕೊಳೆಗಳು ನಿವಾರಿಸಲ್ಪಡುವುದಲ್ಲದೇ, ಮುಖದ ರಂಧ್ರಗಳು ತೆರೆದುಕೊಳ್ಳಲ್ಪಡುತ್ತವೆ.

  • ನಿಯಮಿತವಾಗಿ ಎಕ್ಸಫೋಲಿಯೇಟನ್ನು ಮಾಡಿಕೊಳ್ಳಿ

ಎಕ್ಸಫೋಲಿಯೇಟ್ ಎಂದರೆ, ಶರೀರದಿಂದ ಮೃತಜೀವಕೋಶಗಳನ್ನು ಒರೆಸಿ, ತೆಗೆದು ಹಾಕುವ ವಿಧಾನ. ಆ್ಯಂಟಿಏಜಿಂಗ್ ಕ್ರೀಂ ಹಾಗೂ ಮೋಯ್ಸಚುರೈಸರನ್ನು ನಿಯಮಿತವಾಗಿ ಬಳಸುವುದರಿಂದ ತ್ವಚೆಯು ಯೌವ್ವನ ಪೂರಿತವಾಗಿರುತ್ತದೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆದರೆ, ತಜ್ಞರ ಅಭಿಪ್ರಾಯದಂತೆ ಎಕ್ಸಫೋಲಿಯೇಟ್ ನಿಂದ ಆರೋಗ್ಯಪೂರ್ಣ ತ್ವಚೆಯನ್ನು ಮರಳಿ ಪಡೆಯಲು ಸಾಧ್ಯ. ಎಕ್ಸಫೋಲಿಯೇಟ್ ನಿಂದ ಮೃತ ಜೀವಕೋಶಗಳು ತೆಗೆದುಹಾಕಲ್ಪಡುತ್ತದೆ.ಸುಕ್ಕುಗಳು ನಿವಾರಿಸಲ್ಪಡುತ್ತದೆ,ಮೊಡವೆಗಳೂ ಮಾಯವಾಗುತ್ತದೆ. ಹೊಸ ಕಾಂತಿಯುಕ್ತ ಆರೋಗ್ಯಪೂರ್ಣ ತ್ವಚೆಯು ನಿಮ್ಮದಾಗುತ್ತದೆ. ಆದರೆ, ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವಂತ ಸ್ಕ್ರಬರನ್ನು ಬಳಸುವುದು ಉತ್ತಮ.ಮೊಡವೆ ಪೀಡಿತ ಅಥವಾ ಸೂಕ್ಷ್ಮ ಸ್ವಭಾವದ ಚರ್ಮವುಳ್ಳವರಾಗಿದ್ದರೆ, ಒರಟಾದ ಸ್ಕ್ರಬ್ಬರನ್ನು

ಉಪಯೋಗಿಸದಿರುವುದೊಳ್ಳೆಯದು. ಮೃದು ಮೈಕ್ರೋಬೀಡ್ಸನ್ನು ಒಳಗೊಂಡಿರುವ ಕ್ಲೆನ್ಸರನ್ನು ೨-೩ ವಾರಗಳಿಗೊಮ್ಮೆ ಸ್ಕ್ರಬ್ ಮಾಡಿಕೊಳ್ಳಬಹುದು ಅಥವಾ ಸೌಮ್ಯ ಲೋಶನ್ಗಳನ್ನು ದಿನಂಪ್ರತಿ ಬಳಸಬಹುದು.

  • ವ್ಯಾಯಾಮ

ಕಾಂತಿಯುಕ್ತ ಚರ್ಮವನ್ನು ಪಡೆಯಲು ಮಾತ್ರವಲ್ಲ, ಶರೀರವನ್ನು ಆರೋಗ್ಯಪೂರ್ಣವಾಗಿರಿಸುವುದರಿಂದ ಕೂಡಾ ವ್ಯಾಯಾಮ ಮಾಡುವಂತೆ ಶಿಫಾರಸು ಮಾಡಲಾಗಿದೆ. ವ್ಯಾಯಾಮದಿಂದ ಶರೀರದ ಜೋತುಬಿದ್ದ ತೊಗಲುಗಳು ಮತ್ತೆ ಬಿಗಿಯಲ್ಪಡುತ್ತದೆ. ಸ್ಟ್ರೆಂತ್ ಟ್ರೈನಿಂಗ್ ಮಾತ್ತು ಕಾರ್ಡಿಯೋಗಳತಂಹ ವ್ಯಾಯಾಮಗಳು ರಕ್ತಪರಿಚಲನೆಯನ್ನು ವೇಗಗೊಳಿಸುತ್ತದೆ. ಇದರಿಂದ ಮಾಂಸಪೇಶಿಗಳು ಧೃಡವಾಗುವುದಲ್ಲದೇ ಶರೀರವು ತನ್ನ ಅಂಗಸೌಷ್ಟವವನ್ನು ಮರಳಿ ಪಡೆಯುವುದು.ವ್ಯಾಯಮವು ಒತ್ತಡವನ್ನು ಕಡಿಮೆಗೊಳಿಸುತ್ತವೆ. ಹಾಗಾಗಿ ಚರ್ಮವು ಬೇಗನೇ ಸುಕ್ಕುಗಟ್ಟುವುದಿಲ್ಲ.

ದೈನಂದಿನ ಕಸರತ್ತಿನ ಬಳಿಕ ಶುದ್ಧವಾದ ನೀರಿನಿಂದ ಶರೀರವನ್ನೂ ಮುಖವನ್ನೂ ತೊಳೆದುಕೊಳ್ಳುವುದರಿಂದ ಟಿ-ಜೋನ್ ನಲ್ಲಿ ಸೂಕ್ಷ್ಮರಂಧ್ರಗಳು ಮುಚ್ಚಿಕೊಳ್ಳುವುದನ್ನು ತಡೆಯಬಹುದು. ಟಿ ಜೋನ್ ಎಂದರೆ, ಮುಖದ ಹಣೆ, ಮೂಗು ಹಾಗೂ ಗದ್ದದ ಭಾಗಗಳು. ಸಾಮಾನ್ಯವಾಗಿ ಇವುಗಳು ಮುಖದ ಇತರ ಭಾಗಗಳಿಗಿಂತ ಎಣ್ಣೆಯುಕ್ತವಾಗಿರುತ್ತದೆ.

Leave a Reply

%d bloggers like this: