bharatadalli-garbhadharaneyannu-parishilisalu-maneyalle-nadesuva-parikshegalu

ಭಾರತದಲ್ಲಿ ಗರ್ಭಧಾರಣೆಯನ್ನು ಪರೀಕ್ಷಿಸಲು ಮನೆಯಲ್ಲೇ ನಡೆಸುವ ಸಾಮಾನ್ಯ ವಿಧಾನಗಳು

ಭಾರತದಲ್ಲಿ ಸಾಮಾನ್ಯವಾಗಿರುವ  ಗರ್ಭಧಾರಣೆಯ  ಪರೀಕ್ಷೆಯ ವಿಧಾನಗಳು 

ಗರ್ಭಧಾರಣೆಯನ್ನು ಖಚಿತಪಡಿಸಿಕೊಳ್ಳಲು ಮನೆಯಲ್ಲೇ ನಡೆಸುವ ಪರೀಕ್ಷೆಗಳು

ನೀವು  ಗರ್ಭವತಿಯಾಗಿದ್ದೀರೋ  ಇಲ್ಲವೋ  ಎಂಬ  ಗೊಂದಲದಲ್ಲಿ  ಬಿದ್ದಿರುವಿರೆ ?ಇದಕ್ಕಾಗಿ ವೈದ್ಯರ ಬಳಿ ತಪಾಸಣೆಗೆ ಹೋಗಲು ಇಷ್ಟ ಇಲ್ಲವೇ ?ಸರಿ ಹಾಗಿದ್ದಲ್ಲಿ  ಮನೆಯಲ್ಲೇ ಗರ್ಭಧಾರಣೆಯ ತಪಾಸಣೆಗೆ ವಿವಿಧ ಪರೀಕ್ಷೆಗಳ ನಿಮ್ಮ ಹುಡುಕಾಟ  ಇಲ್ಲಿಗೆ  ಕೊನೆಗೊಳ್ಳಲಿದೆ  .ನೀವು ಎದುರಿಸುತ್ತಿರುವ  ಬೆಳಗಿನ ಆಲಸ್ಯವು  ಗರ್ಭಧಾರಣೆಯ ಮೊದಲ ಲಕ್ಷಣವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ .

ಈ ಕೆಳಗಿನ  ಪರೀಕ್ಷೆಗಳನ್ನು ಮಾಡಿಕೊಳ್ಳುವ  ಮುನ್ನ  ನೆನಪಿಡಿ ,ಈ ಪರೀಕ್ಷೆಗಳನ್ನು ನಡೆಸುವುದಕ್ಕೆ ನಿಮ್ಮ ಬೆಳಗಿನ ಮೂತ್ರವನ್ನು ಮಾತ್ರ ಬಳಸಬೇಕು .ಬೆಳಗ್ಗಿನ ಮೂತ್ರವೇ ಏಕೆಂದರೆ ಗರ್ಭವಾಸ್ಥೆಯ ಸಂದರ್ಭದಲ್ಲಿ  ಮಾತ್ರ ದೇಹದಲ್ಲಿ ಉತ್ಪತ್ತಿಯಾಗುವ ಹ್ಯೂಮನ್ ಕೊರಿಯೊನಿಕ್ ಗೊನೆಡೋಟ್ರೋಪಿನ್ (ಎಚ್ ಸಿ ಜಿ ) ಎಂಬ ಅಂಶವು   ಬೆಳಗ್ಗಿನ ಜಾವದ  ಮೂತ್ರದಲ್ಲಿ ಹೇರಳವಾಗಿರುತ್ತದೆ .ಇದರೊಂದಿಗೆ ಈ ಪರೀಕ್ಷೆಗಳನ್ನು ಮಾಡುವಾಗ ಮೂತ್ರವು ಬೆಚ್ಚಗಿರುವುದು ಕಡ್ಡಾಯವಾಗಿದೆ.ಮೂತ್ರವನ್ನು ಪಾರದರ್ಶಕವಾದ ಬಳಸಿ ಎಸೆಯಬಹುದಾದ ಲೋಟದಲ್ಲಿ ಮೂತ್ರವನ್ನು ಶೇಖರಿಸುವುದು ಒಳ್ಳೆಯದು ,ಇದರಿಂದ ಪ್ರಯೋಗವನ್ನು ಮಾಡುವಾಗ ಸರಿಯಾಗಿ ಗಮನಿಸಬಹುದು …..ಈಗ ಈ ಪರೀಕ್ಷೆಗಳನ್ನು ಒಂದೊಂದಾಗಿ ಕಲಿಯೋಣ .

೧.ಟೂತ್ ಪೇಸ್ಟ್ ಪರೀಕ್ಷೆ

ಬೇಕಾಗಿರುವ ಸಾಮಗ್ರಿಗಳು: ಒಂದು ದೊಡ್ಡ ಚಮಚದಲ್ಲಿ ಟೂತ್ ಪೇಸ್ಟ್ ಮತ್ತು ಒಂದು ಸಣ್ಣ ಪಾರದರ್ಶಕ ಲೋಟದಲ್ಲಿ ಮೂತ್ರ .ನಿಮಗೆ ಬಾಯಿಯ ನೈರ್ಮಲ್ಯದ ಬಗ್ಗೆ ಚಿಂತೆಯಿದ್ದರೆ ಬಿಳಿಯ  ಪ್ಲಾಸ್ಟಿಕ್ ಚಮಚವನ್ನು ಬಳಸಬಹುದು.ಈಗ ಟೂತ್ ಪೇಸ್ಟ್ ನ್ನು ಲೋಟದಲ್ಲಿನ ಮೂತ್ರಕ್ಕೆ ಬೆರೆಸಿ.ಈಗ ಕೈ ಕಾಲುಗಳನ್ನು ಜೋಡಿಸಿಕೊಂಡು ಕೆಲವು ನಿಮಿಷಗಳವರೆಗೆ ಕಾಯಿರಿ.ಟೂತ್ ಪೇಸ್ಟ್ ನೀಲಿ ಬಣ್ಣಕ್ಕೆ ತಿರುಗಿದರೆ ಇದೀಗ ಮಕ್ಕಳ ಅಂಗಡಿಯಲ್ಲಿ ಕೂತಿದ್ದ ,ನೀವು ಸದಾ  ಆಸೆಗಣ್ಣುಗಳಿಂದ  ನೋಡುತ್ತಿದ್ದ  ಮಗುವಿನ ತಳ್ಳುಗಾಡಿಯನ್ನು (ಪ್ರಾಮ್) ಖರೀದಿಸುವ ಸಮಯ ಬಂದಿದೆ .ನೀವು ಗರ್ಭವತಿಯಾಗಿದ್ದೀರಿ.

೨.ವಿನೆಗರ್ ಪರೀಕ್ಷೆ

ಬೇಕಾಗಿರುವ ಸಾಮಗ್ರಿಗಳು:ವಿನೆಗರ್ (ಸಿಗುವಂತಿದ್ದರೆ ಆಪಲ್ ಸಿಡೆರ್ ವಿನೆಗರ್ ಒಳ್ಳೆಯ ಆಯ್ಕೆ  ) ಒಂದು ಸಣ್ಣ ಪಾರದರ್ಶಕ ಲೋಟದಲ್ಲಿ ಮೂತ್ರ

ವಿನೆಗರ್ ಸಿಗುವುದು ದೊಡ್ಡ ಕಷ್ಟದ  ಕೆಲಸವೇನಲ್ಲ  ,ನಿಮ್ಮ ಅಡುಗೆಮನೆಯ ಕಪಾಟುಗಳಲ್ಲಿ  ಹುಡುಕಿ ಒಳ್ಳೆಯ ವಿನೇಗರನ್ನು ಶೇಖರಿಸಿ .ನಂತರ ಅರ್ಧ ಲೋಟದಷ್ಟು  ವಿನೇಗರನ್ನು ಅಷ್ಟೇ ಪ್ರಮಾಣದ ಮೂತ್ರದೊಂದಿಗೆ ಸೇರಿಸಿ .ಬಣ್ಣ  ಬದಲಾಗುವವರೆಗೆ ಕಾಯಿರಿ. ಬದಲಾದಲ್ಲಿ ಇನ್ನು ೯ ತಿಂಗಳಿನಲ್ಲಿ ನಿಮ್ಮ ಮನೆ ,ಮನಸ್ಸನ್ನು ಬೆಳಗಲು ಪುಟ್ಟ ಕೂಸೊಂದು ಬಂದು ನಿಮ್ಮ ಜೀವನವನ್ನು ಪ್ರಫುಲ್ಲಗೊಳಿಸಲಿದೆ .

೩.ಸಕ್ಕರೆ ಪರೀಕ್ಷೆ

ಬೇಕಾಗಿರುವ ಸಾಮಗ್ರಿಗಳು:ಒಂದು ಸಣ್ಣ ಪಾರದರ್ಶಕ ಲೋಟದಲ್ಲಿ ಮೂತ್ರ ಮತ್ತು ಸಕ್ಕರೆ .

ಸಕ್ಕರೆ ಪರೀಕ್ಷೆಯು ನಿಮ್ಮ ಜೀವನವನ್ನು ಸಿಹಿಗೊಳಿಸುವಲ್ಲಿ  ಸಫಲವಾಗಬಹುದು. ಎರಡು ಚಮಚಗಳಷ್ಟು ಸಕ್ಕರೆಯನ್ನು  ಒಂದು ಸಣ್ಣ ಪಾರದರ್ಶಕ ಲೋಟದಲ್ಲಿ ಹಾಕಿ ಇದಕ್ಕೆ ಬೆಳಗ್ಗಿನ ನಿಮ್ಮ ಮೊದಲಿನ ಮೂತ್ರವನ್ನು ಸೇರಿಸಿ.ಈಗ ಸಕ್ಕರೆಯು ಕರಗುವ ಬದಲು ಘನೀಕರಿಸಿದರೆ ನಿಮ್ಮ ಮುಖಾರವಿಂದವು  ಅರಳಲು ಕಾರಣವಿದೆ .ನೀವು ತಾಯಿಯಾಗುತ್ತಿದ್ದೀರಿ ,ಪುಟ್ಟ ಜೀವವೊಂದು ನಿಮ್ಮ ಗರ್ಭದಲ್ಲಿ  ಕುಡಿಯೊಡೆಯುತ್ತಿದೆ .ಅಭಿನಂದನೆಗಳು ….

೪.ಬ್ಲೀಚ್ ಪರೀಕ್ಷೆ

ಬೇಕಾಗಿರುವ ಸಾಮಗ್ರಿಗಳು:ಬ್ಲೀಚ್(ಬಿಳುಪುಕಾರಕ  ವಸ್ತು ) ಮತ್ತು ಒಂದು ಸಣ್ಣ ಪಾರದರ್ಶಕ ಲೋಟದಲ್ಲಿ ಮೂತ್ರ .ಇದೊಂದು ವಿಲಕ್ಷಣ ಪರೀಕ್ಷೆ ಎಂದು ನಿಮಗನಿಸಬಹುದು ಆದರೆ ಖಂಡಿತವಾಗಿಯೂ  ಪ್ರಯತ್ನಿಸಬಹುದು  .ಒಂದು ಬಾಟಲಿನ ಮುಚ್ಚಳದಲ್ಲಿ ಬ್ಲೀಚನ್ನು ತುಂಬಿಕೊಂಡು  ಪಾರದರ್ಶಕ ಲೋಟಕ್ಕೆ ಸುರಿಯಿರಿ .ನಂತರ ಇದಕ್ಕೆ  ಮೂತ್ರವನ್ನು ಸೇರಿಸಿ .ಬುರುಗು ಬರುವಿಕೆಯೊಂದಿಗೆ  ಹಿಸ್ ಎಂಬ ಶಬ್ದ ಬರಲು ಕಾಯಿರಿ .ಇದು ಬಂದಲ್ಲಿ ಇಬ್ಬರಿಗೋಸ್ಕರ ತಿನ್ನಲು ಶುರು ಮಾಡಲು ತಯಾರಾಗಿ .

೫.ಸರಳವಾದ ಮೂತ್ರ ಪರೀಕ್ಷೆ .

ಬೇಕಾಗಿರುವ ಸಾಮಗ್ರಿಗಳು:ಒಂದು ಸಣ್ಣ ಪಾರದರ್ಶಕ ಲೋಟದಲ್ಲಿ ಮೂತ್ರ.ತಾಳ್ಮೆಯಿರಲಿ . ಈ ಪರೀಕ್ಷೆಯು ನಮ್ಮ ನಡುವಿನ ತಾಳ್ಮೆಯಿಲ್ಲದವರಿಗಲ್ಲ . ಸಂಗ್ರಹಿಸಿದ ಮೂತ್ರವನ್ನು ರಾತ್ರಿಯಿಡೀ  ಇಡೀ  .ಬೆಳಗ್ಗೆ ಮೇಲೆ  ಬಿಳಿ  ಬುರುಗಿನ  ಪದರ  ಕಾಣಿಸಿಕೊಂಡರೆ  ನೀವು ಗರ್ಭವತಿಯಾಗಿದ್ದೀರಿ  ಎಂದರ್ಥ .

ನೆನಪಿಡಿ,ಗರ್ಭವಾಸ್ಥೆಯನ್ನು ಬೇಗ ಖಚಿತಪಡಿಸಿಕೊಳ್ಳಲು ಆಗುವುದಿಲ್ಲ . ಸಾಮಾನ್ಯವಾಗಿ ಹ್ಯೂಮನ್ ಕೊರಿಯೊನಿಕ್ ಗೊನೆಡೋಟ್ರೋಪಿನ್ (ಎಚ್ ಸಿ ಜಿ ) ನಿಮ್ಮ ದೇಹದಲ್ಲಿ ಸಂಗ್ರಹವಾಗಲು ನೀವು ಹೊರಗಾದ  ತಾರೀಕಿನಿಂದ  ಹಿಡಿದು  ಒಂದು ವಾರ ಬೇಕಾಗಬಹುದು. ಆದ್ದರಿಂದ ತುಂಬಾ ಬೇಗ ಈ ಪರೀಕ್ಷೆಗಳನ್ನು ಮಾಡಿದಲ್ಲಿ ಫಲಿತಾಂಶವು ರಿಣಾತ್ಮಕವಾಗಿ ಕಂಡು ಬರಬಹುದು . ಮುಂಬರುವ ದಿನಗಳಲ್ಲಿ ತಾಯಾಗಲಿರುವ ಮಹಿಳೆಯರೇ ,ಈ  ಪರೀಕ್ಷೆಗಳು ನಿಮ್ಮ ತಾಯ್ತನವನ್ನು  ದೃಢೀಕರಣಗೊಳಿಸುವ ಮಾನದಂಡವಲ್ಲ ,ಮುಂಬರುವ ದಿನಗಳಲ್ಲೂ ನೀವು ಪರೀಕ್ಷೆಗಳನ್ನು ಮಾಡಿಕೊಳ್ಳಬಹುದು .ನಿರಾಶರಾಗದಿರಿ .ಇನ್ನೂ ಖಚಿತಪಡಿಸಿಕೊಳ್ಳಲು ಗರ್ಭವಾಸ್ಥೆಯನ್ನು ದೃಢಪಡಿಸುವ ಪರಿಕರವನ್ನು (ಪ್ರೆಗ್ನನ್ಸಿ ಕಿಟ್ ) ಮನೆಗೆ ತರುವುದೊಳಿತು .ಮನೆಯಲ್ಲೇ ನಡೆಸುವ ಪರೀಕ್ಷೆಗಳಾಗಲಿ ಅಥವಾ ಅಂಗಡಿಯಿಂದ ತಂಡ ಕಿಟ್ ಆಗಲಿ ಪ್ರತಿಯೊಂದು ನಕಾರಾತ್ಮಕ ಮಾನದಂಡವನ್ನು ಹೊಂದಿರುತ್ತದೆ.ಅಂಕಿಅಂಶಗಳಿಂದ ಪರಿಶೀಲಿಸಿದರೆ ಈ ಪರೀಕ್ಷೆಗಳು ನಕಾರಾತ್ಮಕವಾಗಿ ಕಾಣಲು  ಹಲವು ತಪ್ಪು ಕಾರಣಗಳಿದ್ದು ಸಕಾರಾತ್ಮಕವಾಗಲು ಹಲವು ಅವಕಾಶಗಳಿವೆ .

ನೀವು ಗರ್ಭವತಿಯಾಗಿದ್ದಲ್ಲಿ ಜೀವನದ ಹೊಸ ಅನುಭವಕ್ಕೆ ಸಿದ್ದರಾಗಿ .ನಿದ್ರೆಯಿಲ್ಲದಿರುವಿಕೆ ,ಬೆಳಗಿನ ಆಲಸ್ಯ ,ನಿರಂತರ ಮೂತ್ರಶಂಕೆ ಇವೆಲ್ಲವುಗಳು ನಿಮ್ಮ ಮುಂದಿವೆ.ಇದರಿಂದ ನೀವು ತಪ್ಪಿಸಿಕೊಳ್ಳುವ ಹಾಗೆಯೆ ಇಲ್ಲ .ಈ ಸಿಹಿಸುದ್ದಿಯನ್ನು ಅತ್ಯಂತ ರಚನಾತ್ಮಕವಾಗಿ ನಿಮ್ಮ ಜೀವನ ಸಂಗಾತಿಗೆ ,ಕುಟುಂಬದವರಿಗೆ ,ಗೆಳೆಯರಿಗೆ ಹೇಳುವ ಬಗ್ಗೆ ಯೋಚಿಸಿ .ಪೋಷಕಾಂಶಗಳ ಬಗ್ಗೆ ,ಆರೋಗ್ಯದ ಬಗ್ಗೆ ಮತ್ತು ಗರ್ಭವಾಸ್ಥೆಯ ಬಗ್ಗೆ ಇರುವ ಪುಸ್ತಕಗಳ ಬಗ್ಗೆ ಗಮನ ಹರಿಸಿ .

ಯೋಗಕ್ಕೆ ಅವಕಾಶ ನೀಡಿ. ಫೋಲಿಕ್ ಆಸಿಡ್ ಸೇವಿಸುವ ಬಗ್ಗೆ ,ಬದಲಾದ ನಿಮ್ಮ ರುಚಿಗಳ ಬಗ್ಗೆ ,ಆಹಾರಗಳನ್ನು ತಿನ್ನುವ ಬದಲಾದ ನಿಮ್ಮ ಸಮಯದ ಬಗ್ಗೆ ಗಮನ ಹರಿಸಿ .ಕೆಲವೊಮ್ಮೆ  ಎಲ್ಲೋ ಕಳೆದುಹೋದಂತೆ ,ಕೆಲವೊಮ್ಮೆ ಸಂಪೂರ್ಣವಾಗಿ ಸ್ಪಷ್ಟತೆ ಹೊಂದಿದಂತಾಗುವ ಮನಸ್ಥಿಯು ನಿಮ್ಮದಾಗಲಿದೆ .

ತಾಯಿಯಾಗಲು ಸ್ವಲ್ಪ  ಧೈರ್ಯ ಹಾಗೂ ಸ್ವಲ್ಪ ಸಹಾಯದ ಅಗತ್ಯವಿದೆ .ಸ್ವಲ್ಪ ಸ್ವಾರ್ಥವಿರುವ ಅಮ್ಮನಾಗಿರಿ-ಬೇಕಾದ ವಸ್ತುಗಳನ್ನು ಜನರಿಂದ ಕೇಳಿ ಪಡೆಯಲು ಹಿಂಜರಿಯದಿರಿ .ನಿಮ್ಮ ದೇಹವು ಪವಿತ್ರವಾಗಿದೆ, ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ಇದು ಒಳಗೊಳ್ಳುವ ಬದಲಾವಣೆಗಳನ್ನು ತಿರಸ್ಕರಿಸಬೇಡಿ.ಸುಂದರವಾದ ನೀವು ಅದ್ಭುತ ಗರ್ಭಧಾರಣೆಯನ್ನು ಹೊಂದಿರುವಿರಿ…ಸಂತೋಷಿಸಿ ..

Leave a Reply

%d bloggers like this: