edehaalu-dabbi-allittiruva-chitravu-janrannu-hucchebisuttiruvudu-yaake

ನಿಜ ಹೇಳಬೇಕೆಂದರೆ ನೀವು ನಿಮ್ಮ ಮಗುವಿಗೆ ಹೇಗೆ ಆಹಾರ ಒದಗಿಸುತ್ತೀರ ಎಂಬುದು ವಿಷಯವಾಗುವುದಿಲ್ಲ. ಆರೋಗ್ಯಕರ ಪದಾರ್ಥಗಳು ಹಾಗು ಒಳ್ಳೆಯ ವೈದ್ಯಕೀಯ ಸಂಪನ್ಮೂಲಗಳು ಈಗ ದೊರಕುತ್ತಿರುವುದರಿಂದ, ಮಗುವು ಎದೆಹಾಲು ಕುಡಿಯಲಿ ಅಥವಾ ಪುಡಿಹಾಲು ಕುಡಿಯಲಿ ಆರೋಗ್ಯವಂತನಾಗಿ ಇರಬಹುದು. ಅಲ್ಲದೆ, ಯಾವುದೇ ತಾಯಿ ಆಗಲಿ ಎದೆಹಾಲು ಕೊಡಲಿಕ್ಕೆ ಆಗುತ್ತಿಲ್ಲವೆಂದು ನಾಚಿಕೆ ಪಟ್ಟುಕೊಳ್ಳುಬಾರದು.

ಅದೇನೇ ಇರಲಿ, ಎದೆಹಾಲಿಗೆ ಇರುವ ಕೆಲವು ಗುಣಗಳು ಪುಡಿಹಾಲಿನಲ್ಲಿ ಎಂದಿಗೂ ಸಿಗಲು ಸಾಧ್ಯವಿಲ್ಲ. ಎದೆಹಾಲು ಮಾನವನ ಉತ್ಪನ್ನ ಆಗಿದ್ದು ಮಾನವ ತಾಯಿಯಿಂದ ಬರುವಂತದ್ದು. ಇದು ಮಗುವಿಗೆಂದೇ ತಾಯಿ ಉತ್ಪತ್ತಿ ಮಾಡುವಂತದ್ದು. ಬೇಕಾಗಿರುವ ಎಲ್ಲಾ ಪೋಷಕಾಂಶಗಳನ್ನು ಎದೆಹಾಲು ಒಳಗೊಂಡಿರುವುದಲ್ಲದೆ ಇದು ರೋಗ ನಿರೋಧಕ ಗುಣಗಳನ್ನು ಕೂಡ ತುಂಬಿಕೊಂಡಿರುತ್ತದೆ.

ಉದಾಹರಣೆಗೆ, ಮಗುವಿಗೆ ವೈರಸ್ ಸೋಂಕು ತಾಗಿ ಅದು ತಾಯಿಗೆ ಮುಕ್ತವಾದೊಡನೆ, ತಾಯಿಯು ಪ್ರತಿಕಾಯಗಳನ್ನು ಉತ್ಪನ್ನ ಮಾಡಿ ಅವುಗಳನ್ನು ಎದೆಹಾಲಿನ ಮೂಲಕ ಮಗುವಿಗೆ ನೀಡುತ್ತಾಳೆ. ಅಲ್ಲದೆ ಎದೆಹಾಲು ಕುಡಿಯುವ ಮಕ್ಕಳಿಗೆ ವೈರಸ್ ಸೋಂಕು ತಾಗುವುದು ತುಂಬಾ ಕಡಿಮೆ. ಒಂದು ಪಕ್ಷ ತಾಗಿದರೂ, ಎದೆಹಾಲಿನಲ್ಲಿರುವ ಔಷಧಿ ಗುಣಗಳು ಅದರೊಂದಿಗೆ ಹೋರಾಡಿ ಅದನ್ನು ನಾಶ ಮಾಡುತ್ತದೆ.

ಇಂತಹ ಚಮತ್ಕಾರಿ ಸಂಗತಿಗಳ ಕಾರಣಕ್ಕೆ ಒಂದು ಜೈವಿಕವಿಜ್ಞಾನದ ವಿದ್ಯಾರ್ಥಿನಿಯು ಆಕೆಯ ಪ್ರಯೋಗಶಾಲೆಯಲ್ಲಿ ತಾಯಿಯ ಎದೆಹಾಲು ತನ್ನ ಅದ್ಭುತ ಮಾಂತ್ರಿಕ ಶಕ್ತಿ ಪ್ರದರ್ಶಿಸುತ್ತಿರುವ ದೃಶ್ಯವನ್ನು ಕ್ಲಿಕ್ಕಿಸಿದ ಒಂದು ಫೋಟೋ ಜನರನ್ನ ನಿಬ್ಬೆರಗು ಮಾಡುತ್ತಿದೆ.

 

ಇಂಗ್ಲೆಂಡಿನ ವಿಕ್ಕಿ ಗ್ರೀನ್ ಎಂಬ ವಿದ್ಯಾರ್ಥನಿಯು ಫೇಸ್ಬುಕ್ ಅಲ್ಲಿ ಹಾಕಿದ ಈ ಫೋಟೋದಲ್ಲಿ M.Luteus ಬ್ಯಾಕ್ಟೀರಿಯಾಗಳನ್ನ ಒಳಗೊಂಡ ೯ ಡಬ್ಬಿಗಳಿವೆ. ಗ್ರೀನ್ ಈ ಎಲ್ಲಾ ಡಬ್ಬಿಗಳಿಗೆ ಎದೆಹಾಲನ್ನು ಹಾಕಿದ್ದಾಳೆ. ಕೆಲವು ಡಬ್ಬಿಗಳಿಗೆ 15 ತಿಂಗಳ ಮಗುವಿನ ತಾಯಿಯ ಎದೆಹಾಲು ಹಾಕಿದ್ದರೆ, ಇನ್ನು ಕೆಲವು ಡಬ್ಬಿಗಳಿಗೆ 3 ವರ್ಷದ ಮಗುವಿನ ತಾಯಿಯ ಎದೆಹಾಳನ್ನ ಹಾಕಿದ್ದಾಳೆ.

ಇದರ ಫಲಿತಾಂಶ ಮಾತ್ರ ಎಲ್ಲರನ್ನು ನಿಬ್ಬೆರಗು ಮಾಡಿಸುವಂತದ್ದು. ನೀವೇ ಕಾಣುವಂತೆ ಡಬ್ಬಿಯ ಪರಿಧಿಯಲ್ಲಿ ಬ್ಯಾಕ್ಟೀರಿಯಾಗಳು ಹಾಗೆ ಇವೆ, ಆದರೆ ಮಧ್ಯದಲ್ಲಿ, ಅಂದರೆ ಎದೆಹಾಲು ಇರುವ ಜಾಗದಲ್ಲಿ ಬ್ಯಾಕ್ಟೀರಿಯಾಗಳು ಇಲ್ಲವೇ ಇಲ್ಲ ! ಎದೆಹಾಲು ಅವುಗಳನ್ನೆಲ್ಲ ಕೊಂದುಬಿಬಿಟ್ಟಿದೆ!

ಗ್ರೀನ್ ಹೇಳುವ ಹಾಗೆ “ಮಧ್ಯದಲ್ಲಿ ಕಾಣುವ ಬಿಳಿಯ ಬಿಲ್ಲೆಯೇ ಎದೆಹಾಲು. ಅದರ ಸುತ್ತಲು ನೀವು ಕಾಣುತ್ತಿರುವ ನಿಚ್ಚಳವಾದ ಜಾಗವೇ ಎದೆಹಾಲಿನಲ್ಲಿರುವ ಪ್ರೋಟೀನ್ ಗಳು ಬ್ಯಾಕ್ಟೀರಿಯಾಗಳು ಮಾರಣಹೋಮ ಮಾಡಿರುವ ಜಾಗ”. ಈ ಫೋಟೋ ಫೇಸ್ಬುಕ್ ಗೆ ಪೋಸ್ಟ್ ಮಾಡಿದಾಗಿನಿಂದ ಇಲ್ಲಿಯವರೆಗೆ 30,000 ಮಂದಿ ಲೈಕ್ ಮಾಡಿದ್ದಾರೆ ಹಾಗು 28,000 ಬಾರಿ ಶೇರ್ ಮಾಡಲಾಗಿದೆ.

ಇಲ್ಲಿ ನಮಗೆ ಅಚ್ಚರಿ ಮೂಡಿಸುವಂತಹ ಇನ್ನೊಂದು ಅಂಶವೆಂದರೆ ಗ್ರೀನ್ ಎದೆಹಾಲಿನ ಸ್ಯಾಂಪಲ್ ಪಡೆದುಕೊಂಡಿದ್ದು ಚಿಕ್ಕ ಶಿಶುವಿನ ತಾಯಿಯದ್ದಲ್ಲ. ಬದಲಿಗೆ, 15 ತಿಂಗಳ ಮಗುವಿನ ತಾಯಿ ಹಾಗು 3 ವರ್ಷ ಮಗುವಿನ ತಾಯಿಯದ್ದು. ಎದೆಹಾಲು ಕೇವಲ ಶಿಶುತ್ವದ ಸಮಯದಲ್ಲಿ ಮಾತ್ರ ಉಪಯೋಗಕ್ಕೆ ಬರುವುದು ಹಾಗು ಸ್ವಲ್ಪ ದೊಡ್ದವರಾದೊಡನೆ ಏನು ಉಪಯೋಗವಿಲ್ಲ ಎಂದು ಬಹಳಷ್ಟು ಜನರು ಹಾಗು ಕೆಲವು ವೈದ್ಯರು ಹೇಳುವ ಮಾತನ್ನು ಸುಳ್ಳು ಮಾಡಿದೆ.

ಈ ಪ್ರಯೋಗವನ್ನು ಹಂಚಿಕೊಂಡ ಗ್ರೀನ್ ತುಂಬಾನೇ ಒಳ್ಳೆಯ ಕೆಲಸ ಮಾಡಿದ್ದಾರೆ. ಇದು ಎದೆಹಾಲಿನಲ್ಲಿರುವ ಮಾಂತ್ರಿಕ ಶಕ್ತಿಗೆ ಹಿಡಿದಿರುವ ಕೈಗನ್ನಡಿ ಆಗಿದೆ!  

Leave a Reply

%d bloggers like this: