garbhiniyaru-sonkigolagagadante-tadeyuva-9-kramagalu

ಗರ್ಭಿಣಿಯರಾಗಿರುವಾಗ ಯಾವುದೇ ರೀತಿಯ ಸೋಂಕಿಗೊಳಗಾಗದಂತೆ ನೋಡಿಕೊಳ್ಳಬೇಕಾದದ್ದು ಅತೀ ಅಗತ್ಯ. ಗರ್ಭಿಣಿಯರು ಅನುಭವಿಸುವ ಸೋಂಕು ಉದರದಲ್ಲಿರುವ ಮಗುವಿನ ಮೇಲೂ ಪರಿಣಾಮ ಬೀರಬಹುದು. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ರೋಗಬಾರದಂತೆ ತಡೆಯುವುದು ಕಷ್ಟಸಾಧ್ಯವೇ ಸರಿ. ಗಾಳಿಯಿಂದಲೋ,ನಿಮ್ಮ ಪ್ರೀತಿ ಪಾತ್ರರಿಂದಲೋ ರೋಗಾಣುಗಳು ನಿಮ್ಮ ಶರೀರವನ್ನು ಪ್ರವೇಶಿಸಬಹುದು.

ಗರ್ಭಿಣಿಯರ ಶರೀರ ಹಾಗೂ ರೋಗಪ್ರತಿರೋಧಕ ಶಕ್ತಿಗಳೆರಡೂ ದುರ್ಬಲವಾಗಿರುವುದರಿಂದ ಅವರು ಬೇಗನೇ ಸೋಂಕಿಗೊಳಗಾಗುವ ಸಾಧ್ಯತೆಗಳಿವೆ.ನನ್ನ ಶರೀರದಿಂದ ಮಗುವಿನ ಆವಶ್ಯಕತೆಗಳನ್ನು ಪೂರೈಸಲ್ಪಡುವುವುದರಿಂದ ಶರೀರವು ಶಕ್ತಿಹೀನವಾಗಿದೆಯೆಂದು ಸಂತೋಷಪಡಬಹುದಾದರೂ, ಶರೀರವು ತುಂಬಾ ತೊಂದರೆಗಳನ್ನು ಎದುರಿಸಬೇಕಾದಂತಹ ಪರಿಸ್ಥಿತಿಯನ್ನೂ ಎದುರಿಸಬೇಕಾಗಬಹುದು.

ರೋಗಾಣುಗಳು ಶರೀರವನ್ನು ಪ್ರವೇಶಿಸುವುದನ್ನು ತಡೆಯಲು ಸಾಧ್ಯವಿಲ್ಲವೆಂದ ಮಾತ್ರಕ್ಕೇ, ರೋಗಗಳು ಬಾರದಂತೆ ಮುಂಜಾಗರೂಕತಾ ಕ್ರಮಗಳನ್ನು ಪಾಲಿಸದಿರಬಹುದು ಎಂದೇನೂ ಅರ್ಥವಿಲ್ಲ.

೧. ನೈರ್ಮಲ್ಯ

ಪ್ರತಿಬಾರಿಯೂ ಹೊರಹೋಗಿ ಬಂದರೆ, ಶರೀರವನ್ನು ಸ್ವಚ್ಛಗೊಳಿಸಲು ಮರೆಯಬಾರದು.ಯಾಕೆಂದರೆ ನಿಮ್ಮ ಮನೆಯ ಬಾಗಿಲುಗಳು, ಕರೆನ್ಸಿ ನೋಟುಗಳು ಅಥವಾ ನಿಮ್ಮ ಅಚ್ಚುಮೆಚ್ಚಿನ ಮೊಬೈಲ್ ಫೋನ್ಗಳೇ ರೋಗಾಣುಗಳ ಆವಾಸ ಕೇಂದ್ರವಾಗಿರಬಹುದು.ಚೆನ್ನಗಿ ಕೈಕಾಲುಗಳನ್ನು ತೊಳೆದುಕೊಂಡ ಬಳಿಕವಷ್ಟೇ ಆಹಾರ ಪದಾರ್ಥಗಳನ್ನು ಭಕ್ಷಿಸಬೇಕು.

೨. ಸಮತೋಲನದ ಆಹಾರ

ಆರೋಗ್ಯವಂತ ಶರೀರವು ಫಕ್ಕನೇ ರೋಗಾವಸ್ಥೆಯಿಂದ ಚೇತರಿಸಿಕೊಳ್ಳುವುದಲ್ಲದೇ, ಬೇಗನೆ ರೋಗಾಣುಗಳೆದುರಿಗೆ ಸೋಲುವುದೂ ಇಲ್ಲ. ಆರೋಗ್ಯವಂತ ಶರೀರವನ್ನು ಪಡೆಯಲು ಪೋಷಕ ಪೂರಕವಾದ ಆಗಾರವನ್ನು ಸೇವಿಸಬೇಕಲ್ಲವೇ..? ಅಗತ್ಯವೆನಿಸಿದಾಗಲೆಲ್ಲಾ ವಿಶ್ರಾಂತಿಯನ್ನು ಪಡೆದುಕೊಳ್ಳಿ. ಮಧ್ಯಾಹ್ನದ ವೇಳೆಯಲ್ಲಿ ಸಣ್ಣ ನಿದ್ರೆ ಮಾಡುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.

೩. ಫಿಟ್‌ನೆಸ್

ರೋಗಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಶರೀರದ ಆಂತರಿಕಾರೋಗ್ಯಗಳನ್ನು ವ್ಯವಸ್ಥಿತವಾಗಿರಿಸಲು ವ್ಯಾಯಾಮ ಮಾಡುವುದು ಅತ್ಯಗತ್ಯ.ಗರ್ಭಿಣಿಯರು ಮಾಡಬೇಕಾದ ಸರಳ ವ್ಯಾಯಾಮಗಳು ಶರೀರವನ್ನು ಆರೋಗ್ಯಯುತವಾಗಿಡುವುದು. ಅಗತ್ಯಕ್ಕೆ ತಕ್ಕಂತೆ ವಿಶ್ರಾಂತಿ ಪಡೆಯಲೂ ಮರೆಯಬಾರದು.

೪. ಮುಂಜಾಗರೂಕತೆ

ತುಂಬಾ ಬಳಲಿಕೆ,ಆಯಾಸ,ಒಣಕೆಮ್ಮು, ಸೋರುವ ಮೂಗು ಅಥವಾ ಆಗಾಗ್ಗಿನ ಆಕ್ಷಿಯಾಗುವಿಕೆ…ನಿಮಗೆ ನೆಗಡಿಯಾಗಿದೆಯೆಂದು ಸೂಚಿಸುತ್ತದೆ. ನೆಗಡಿಯೆನ್ನುವುದು ಗರ್ಭಿಣಿಯರ ಸರ್ವೇಸಾಮಾನ್ಯವಾದ ಸಮಸ್ಯೆ. ಆದರೆ, ರೋಗ ಬಂದಮೇಲೆ ಗುಣ ಪಡಿಸುವುದಕ್ಕಿಂತ, ರೋಗಬಾರದಂತೆ ತಡೆಯುವುದೇ ಮೇಲಲ್ಲವೇ..!! ನೆಗಡಿಯಾಗಿರಬಹುದೆಂಬ ಅನುಮಾನ ಬಂದೊಡನೆಯೇ ವೈದ್ಯರನ್ನು ಭೇಟಿಮಾಡಿ, ಪರಿಹಾರ ಕಂಡುಕೊಳ್ಳಿ.

೫. ಹೈಡ್ರೇಷನ್(ಜಲಸಂಚಯನ)

ಗರ್ಭಿಣಿಯರೇ ಧಾರಾಳ ನೀರನ್ನು ಕುಡಿಯಲು ಹಾಗೂ ಶರೀರಕ್ಕೆ ಸಾಕಷ್ಟು ವಿಶ್ರಾಂತಿ ನೀಡಲು ಖಂಡಿತಾ ಮರೆಯದಿರಿ. ಯಾಕೆಂದರೆ, ಇವೆರಡರ ಅಭಾವದಿಂದ ಶರೀರವು ಫಕ್ಕನೇ ಸೋಂಕಿಗೊಳಗಾಗುವುದು.

೬. ಸ್ವವೈದ್ಯ ಸಲ್ಲದು

ವೈದ್ಯರ ಶಿಫಾರಿಸಿಲ್ಲದೇ ಯಾವುದೇ ಮಾತ್ರೆಗಳನ್ನೂ ತೆಗೆದುಕೊಳ್ಳಬೇಡಿ. ನಿಮ್ಮ ತೊಂದರೆಗೇನೋ ತಾತ್ಕಾಲಿಕ ಶಮನ ದೊರೆಯಬಹುದು.ಆದರೆ, ಭ್ರೂಣದ ಮೇಲೆ ಕೆಟ್ಟ ಪರಿಣಾಮವನ್ನುಂಟುಮಾಡುವುದು. ಅದು ಕೆಲವೊಮ್ಮೆ ನಿಮ್ಮ ಊಹೆಗೂ ನಿಲುಕದಂತದ್ದು.

೭. ಅಲರ್ಜಿ

ನೀವು ಅಲರ್ಜಿಯುಳ್ಳವರಾಗಿದ್ದರೆ, ನಿಮಗೆ ಅಲರ್ಜಿಯನ್ನುಂಟು ಮಾಡುವ ಯಾವುದೇ ಪದಾರ್ಥಗಳಿಂದ ದೂರವಿರಿ. ನಿಮ್ಮ ಮನೆಯಲ್ಲಿನ ಕೀಟನಾಶಕ, ಧೂಮಪಾನ, ಹೂಗಳ ಪರಾಗ ಇನ್ನಿತರ ಯಾವುದೇ ವಸ್ತುಗಳಿಂದಲಾದರೂ ನಿಮಗೆ ಅಲರ್ಜಿಯಿದೆಯೆಂದಾದರೆ ಅವುಗಳನ್ನು ಬಳಸದಿರಿ.

೮. ವಿಟಾಮಿನ್ ಗಳು

ಗರ್ಭಿಣಿಯರು ವಿಟಮಿನ್ ಸಿ ಹೇರಳವಾಗಿರುವ ಆಹಾರಗಳನ್ನು ಯಥೇಚ್ಛವಾಗಿ ಬಳಸಿಕೊಳ್ಳಬೇಕು. ನಿಮ್ಮನ್ನು ಹಾಗೂ ನಿಮ್ಮ ಮಗುವನ್ನು ಆರೋಗ್ಯವಾಗಿರಿಸುವಂತ ಆಹಾರಗಳಿಗೆ ಒತ್ತುನೀಡಬೇಕು.

೯. ಸೋಂಕುಗಳು

ಗರ್ಭಿಣಿಯರು ಬೇಗನೇ ಉರಿಮೂತ್ರ ರೋಗಕ್ಕೆ ತುತ್ತಾಗುತ್ತಾರೆ. ಮೂತ್ರವಿಸರ್ಜಿಸುವಾಗ ಯೋನೀ ಪ್ರದೇಶಗಳಲ್ಲಿ ಉರಿಯುಂಟಾಗಿತ್ತದ್ದರೆ ಅಥವಾ ಕೆಟ್ಟವಾಸನೆ ಬರುತ್ತಿದ್ದರೆ, ಖಂಡಿತವಾಗಿಯೂ ಮೂತ್ರನಾಳಗಳಿಗೆ ಸೋಂಕು ತಗುಲಿದೆಯೆಂದರ್ಥ. ಹತ್ತಿಯ ಒಳಉಡುಪುಗಳನ್ನು ಬಳಸಿಕೊಳ್ಳಿ ಹಾಗೂ ಯಥೇಚ್ಛವಾಗಿ ನೀರು ಕುಡಿಯಿರಿ.

೨-೩ ವಾರಗಳ ಕಾಲವೂ ಯಾವುದೇ ಬದಲಾವಣೆ ಕಂಡುಬರದಿದ್ದರೆ, ತಡಮಾಡದೇ ವೈದ್ಯರನ್ನು ಭೇಟಿಮಾಡುವುದೊಳ್ಳೆಯದು. ಗರ್ಭಧಾರಣೆಯ ಸಮಯದಲ್ಲಿ ಜ್ವರ ಪೀಡಿತರಾಗುವುದು ಅಥವಾ ಇನ್ನಿತರ ರೋಗಗಳಿಗೆ ತುತ್ತಾಗುವುದು ಸರ್ವೇಸಾಮಾನ್ಯ. ಆರೋಗ್ಯಕರವಾದ ಸಮತೋಲನದ ಆಹಾರ ಸೇವನೆಯೊಂದಿಗೆ ರಾಜಿಮಾಡಿಕೊಳ್ಳುವಂತಿಲ್ಲ. ಸರಿಯಾದ ಆಹಾರ ಕ್ರಮವಲ್ಲದೇ ಧಾರಾಳ ನೀರು, ಸರಿಯಾದ ವಿಶ್ರಾಂತಿ ಹಾಗೂ ವ್ಯಾಯಾಮಗಳನ್ನು ಮಾಡುವುದರಿಂದ ಶರೀರವು ಆರೋಗ್ಯವಾಗಿದ್ದು ಫಕ್ಕನೇ ಸೋಂಕಿಗೊಳಗಾಗುವುದಿಲ್ಲ.

Leave a Reply

%d bloggers like this: