post-partum-belly-belt-2

ಮಗುವಿನ ಪುಟ್ಟಕಾಲು ಕಾಲು ಕಾಣಲು ಹಪಹಪಿಸುತ್ತಿರುವ ತಾಯಂದಿರಿಗೆ ಗರ್ಭಾವಸ್ಥೆಯು ಒಂದು ಸುಂದರ ಅನುಭವವೇ ಹೌದು. ಆ ಸಂತೋಷದೊಂದಿಗೇ ಮನಸ್ಸಿಗೆ ಕಸಿವಿಸಿಯಾಗುವ ಕೆಲವು ಸನ್ನಿವೇಶಗಳನ್ನೂ ಎದುರಿಸಲು ಮಾನಸಿಕ ತಯಾರಿ ನಡೆಸಬೇಕಾಗುತ್ತದೆ. ಪ್ರಸವಾನಂತರ ಶರೀರವು ಸ್ಥೂಲಕಾಯವಾಗುವುದರಿಂದ ತನ್ನ ಸ್ವಾಭಾವಿಕ ತಳುಕು ಬಳುಕುಗಳನ್ನು ಕಳೆದುಕೊಳ್ಳುತ್ತದೆ. ಜಾರಿದ ಕಿಬ್ಬೊಟ್ಟೆ, ಸ್ಟ್ರೆಚ್ ಮಾರ್ಕ್ ಹಾಗೂ ಗೂನು ಬೆನ್ನಿನ ನಿಲುವುಗಳಂತ ಶರೀರ ಸೌಂದರ್ಯಕ್ಕೇ ಸವಾಲಾಗುವ ಮೂರು ತೊಂದರೆಗಳನ್ನು ಶರೀರವು ಆಹ್ವಾನಿಸುತ್ತದೆ. ಆದರೆ ಜೀವನದ ಕೊನೆಯ ಅವಧಿಯವರೆಗೂ ಇದೇ ಸವಾಲನ್ನು ಎದುರಿಸಬೇಕಾದುದಿಲ್ಲ ಎಂಬ ಸತ್ಯವನ್ನೂ ತಾಯಂದಿರು ಅರಿತುಕೊಳ್ಳಬೇಕು. ಇಂತಹ ಕ್ಷುಲ್ಲಕ ವಿಷಯಗಳಿಗೆ ತಲೆಬಾಗದೇ ಮಗುವಿಗೆ ಜನ್ಮ ನೀಡಿದ ಆ ಕ್ಷಣದಿಂದಲೇ ಇವುಗಳಿಗೆದುರಾಗಿ ಹೋರಾಡಲು ಕಟಿಬದ್ಧರಾಗಬೇಕು. ಇಂತಹ ಅವಸ್ಥೆಯಲ್ಲಿ ಯಾವುದೇ

ಅಪನ್ಬಿಕೆಯಿಲ್ಲದೇ ಬಳಸಬಹುದಾದ ಸೌಂದರ್ಯ ಸಹಾಯಿಯೇ ಪೋಸ್ಟ್‌ ಪಾಟ್ರಂ ಬೆಲ್ಲಿ ಬೆಲ್ಟ್ ಅಥವಾ ಹೊಟ್ಟೆಯ ಸುತ್ತಲೂ ಬೆಲ್ಟ್ ಕಟ್ಟುವಿಕೆ. ಇದರಿಂದೇನು ಪ್ರಯೋಜನಗಳೆಂದು ತಿಳಿಯೋಣ ಬನ್ನಿ.

೧. ಶರೀರ ಸೌಂದರ್ಯವನ್ನು ಉಳಿಸಿಕೊಳ್ಳಲು

ಮಗುವಿನ ಜನನದ ಬಳಿಕ ಮತ್ತೇ ತನ್ನ ಹಳೇ ರೂಪವನ್ನು ಮರಳಿ ಪಡೆದು ಶರೀರ ಸೌಂದರ್ಯವನ್ನು ಉಳಿಸಿಕೊಳ್ಳುವಲ್ಲಿ ಈ ಬೆಲ್ಟ್ ಸಹಕಾರಿಯೆಂದು ಬಳಸಿದವರು ಅಭಿಪ್ರಾಯ ಪಟ್ಟಿದ್ದಾರೆ. ಈ ಬೆಲ್ಟನ್ನು ಬಳಸುವುದರಿಂದ ಬಹಳ ಶೀಘ್ರವಾಗಿ ಅದರ ಫಲಿತಾಂಶವನ್ನು ಆನಂದಿಸಬಹುದೆಂದು ಅನುಭವಿಗಳೂ ತಿಳಿಸಿದ್ದಾರೆ. ಸೆಲೆಬ್ರಿಟಿ ಜೆಸಿಕಾ ಅಲ್ಬ ಕೂಡಾ ಸತತ ೩ ತಿಂಗಳುಗಳ ಕಾಲ ಈ ಬೆಲ್ಟನ್ನು ಬಳಸಿಕೊಂಡಿದ್ದರೆಂಬ ಸತ್ಯವನ್ನೂ ಹಂಚಿಕೊಂಡಿದ್ದಾರೆ. ಸೋಜಿಗವೆನ್ನಿಸುತ್ತಿದೆಯಲ್ಲವೇ….?

 ೨. ಉತ್ತಮ ನಿಲುವು ಪಡೆಯಲು

ಹೊಟ್ಟೆಯ ಸುತ್ತಲೂ ಬಟ್ಟೆಕಟ್ಟುವ ಪದ್ಧತಿಯನ್ನು ಹಲವಾರು ಶತಮಾನಗಳಿಂದಲೇ ಕಾಯ್ದುಕೊಂಡು ಬರಲಾಗಿದೆ. ಪೊಸ್ಟ್ ಪಾರ್ಟಂ ಎನ್ನುವುದು ಇದರ ಆಧುನಿಕ ರೂಪ ಅಷ್ಟೇ..! ಈ ಬೆಲ್ಟಿನ ಬಳಕೆಯಿಂದ ನೆಟ್ಟಗಿನ ನಿಲುವೂ ನಿಮ್ಮದಾಗುವುದು. ಮಗುವನ್ನು ಎತ್ತಿಕೊಳ್ಳುವಾಗ ಶರೀರದ ನಿಲುವೂ ಬದಲಾಗುವುದು. ಶರೀರವು ನೇರವಾಗಿ ಲಟ್ಟವಾಗಿಲ್ಲದೇ ಬಾಹಿಕೊಂಡಿದ್ದರೆ ಮುಂದೆ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಬಿಗಿಯಾದ ಒಳಉಡುಪಿನಂತೆ ನಿಮಗೆ ಸಹಾಯ ಮಾಡುವ ಈ ಬೆಲ್ಟಗಳು ನಿಮ್ಮ ಸುಂದರವಾದ ನಿಲುವು ಮರಳಿ ದೊರಕಿಸುವುದು.

 ೩. ಸೊಂಟ ನೋವಿನಿಂದ ಬಿಡುಗಡೆ

ಇಂದಿನ ಎಲ್ಲಾ ಮಹಿಳೆಯರೂ ಪ್ರಸವಾನಂತರ ಬೆನ್ನು ನೋವು ಅನುಭವಿಸುವುದು ಸಾಮನ್ಯ ಸಂಗತಿಯಾಗಿ ಬಿಟ್ಟಿದೆ. ಇದಕ್ಕೆ ಕಾರಣಗಳೇನೇ ಇರಬಹುದಾದರೂ ಶರೀರದ ಅಸಮತೋಲನವೂ ಒಂದು ಕಾರಣವಾಗಿರಬಹುದು. ಈ ಬಾಂಡಿನ ಬಳಕೆ ನಿಮ್ಮ ನೇರ ನಿಲುವಿಗೆ ಸಹಕಾರಿಯಾಗಿರುವುದರಿಂದ ತನ್ಮೂಲಕ ಅನುಭವಿಸುವ ಬೆನ್ನು ಅಥವಾ ಸೊಂಟನೋವಿಗೂ ಪರಿಹಾರವಾಗಬಲ್ಲುದು. ಬೆನ್ನುಹುರಿಯ ಅಸಾಮಾನ್ಯವಾದ ಪಕ್ಕಕ್ಕೆ ಸರಿಕೆ, ಸ್ಕೋಲಿಯೋಸಿಸ್‌ ಅಥವಾ ರಾಡಿಕಲ್ಟೀಸ್ ಎನ್ನುವ ರೋಗ ಲಕ್ಷಣಗಳಿಂದಲೂ ಶರೀರಕ್ಕೆ ಮುಕ್ತಿ ನೀಡುವುದು.

೪. ಸಿಸೇರಿಯನ್ ಕಲೆಗಳಿಗೂ ಪರಿಹಾರ

ಪೋಸ್ಟಪಾಟ್ರಂ ಬೆಲ್ಟನ್ನು ಸಿಸೇರಿಯನ್ನಿಂದುಂಟಾಗುವ ನೋವಿನ ಶಮನಕ್ಕಾಗಿ ವೈದ್ಯರು ಶಿಫಾರಸು ಮಾಡುತ್ತಾರೆ. ಮಗುವನ್ನು ಸಂಭಾಳಿಸುವುದೇ ದೊಡ್ಡ ತಲೆನೋವಾಗಿರುವಾಗ ಈ ಕಲೆಗಳ ನಿವಾರಣೆಗಾಗಿ ಪುರುಸೊತ್ತೆಲ್ಲಿಂದ ? ಈ ಬೆಲ್ಟಿನ ಧಾರಣೆಯಿಂದ ಉದರದೊಳಗಿನ ಕೋಶಗಳೆಲ್ಲವೂ ಸ್ಥಾನಪಲ್ಲಟವಾಗದಿರುವಂತೆ ಹಿಡಿದಿಟ್ಟುಕೊಳ್ಳುವುದರಿಂದ ಸೋಂಕುಗಳೂ ಉಂಟಾಗುವುದಿಲ್ಲವೆಂದು ಮಾತ್ರವಲ್ಲ ಬೆನ್ನಿಗೆ ಆಸರೆ ನೀಡಿ ಸೊಂಟನೋವಿನಿಂದಲೂ ರಕ್ಷಿಸುತ್ತದೆ. ಸರಿಯಾಗಿ ಬಳಸದಿದ್ದರೆ ಸೋಂಕಿಗೊಳಗಾಗುವ ಸಾಧ್ಯತೆಯೂ ಇದೆ.

ಮೇಲೆ ನೀಡಿದ ಕಾರಣಗಳಲ್ಲದೇ, ಈ ಬೆಲ್ಟನ್ನು ಧರಿಸುವುದೂ ಅತೀ ಸರಳವೆನ್ನುವುದೇ ಇದರ ಜನಪ್ರಿಯತೆಗೆ ಕಾರಣ.ಶುಚಿಗೊಳಿಸಲೂ ಸುಲಭವೆಂದಲ್ಲದೇ, ಕೈಗೆಟುಕುವ ದರಗಳಲ್ಲಿ, ಗ್ರಾಹಕರ ಆಯ್ಕೆಗಳಿಗನುಸಾರವಾಗಿ ದೊರಕುವುದರಿಂದ ಬೇಡಿಕೆಗೂ ಬರವಿಲ್ಲ.

ಆದರೆ, ಈ ಬೆಲ್ಟಗಳನ್ನು ಬಳಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅತೀ ಅಗತ್ಯ. ಎಷ್ಟು ತಿಂಗಳುಗಳ ಕಾಲ ಈ ಬೆಲ್ಟನ್ನು ಧರಿಸಬೇಕೆನ್ನುವುದರ ಬಗೆಗಿನ ಮಾಹಿತಿಯೂ ತಿಳಿದಿರಬೇಕಷ್ಟೇ..? ಎಲ್ಲದಕ್ಕಿಂತ ಮುಖ್ಯವಾಗಿ ಬೆಲ್ಟ್ ತಯಾರಿಸಿದ ವಸ್ತುವು ನಿಮಗೆ ಅಲರ್ಜಿಯುಂಟುಮಾಡುವುದಿಲ್ಲವೆಂದೂ ಖಾತ್ರಿ ಪಡಿಸಿಕೊಳ್ಳಬೇಕು.

Leave a Reply

%d bloggers like this: