sukha-prasava-nimmadaagalu-kelavu-salahegalu

ಕೆಲವೊಂದು ಸನ್ನಿವೇಶಗಳು ತಾಯಿ ಮಗುವಿನ ಆರೋಗ್ಯಕರ ಬದುಕಿಗಾಗಿ ಸಿಸೇರಿಯನ್ ಮಾಡಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುತ್ತವೆ. ಆದರೆ ಯಾವುದೇ ವೈದ್ಯಕೀಯ ತೊಂದರೆಗಳಿಲ್ಲವೆಂದಾದರೂ, ಗರ್ಭಿಣಿಯರು ಸುಖ ಪ್ರಸವದ ಸಂತೋಷವನ್ನು ಅನುಭವಿಸಬಹುದೇ ಸಿಸೇರಿಯನ್ ಗಳಿಗೆ ಶರಣಾಗುವುದು ಏತಕ್ಕೆಂದು ಗಮನಹರಿಸೋಣ.

೧. ಹೆರಿಗೆ ನೋವೆಂಬ ಭಯಾನಕ ರಾಕ್ಷಸನ ಕತೆಗಳನ್ನು ಕೇಳಿ ಹೆದರಿಕೊಳ್ಳುವ ಸ್ತ್ರೀಯರು , ಹೆರಿಗೆ ನೋವಿನ ಸಂಕಟದಿಂದಪ ಪಾರಾಗಲು ಸಿಸೇರಿಯನ್ ನ ಮೊರೆಹೋಗುತ್ತಾರೆ. ಸುಖ ಪ್ರಸವವಾದ ತಾಯಂದಿರು ತಾನು ಅನುಭವಿಸಿದ ದಯನೀಯ ಯಾತನೆಯ ಕತೆಗಳನ್ನು ಬಣ್ಣಹಚ್ಚಿ ಹೇಳುವಾಗ ಹೆದರಿಕೊಂಡ ಗರ್ಭಿಣಿಯರು ಸುಖಪ್ರಸವದ ಸಾಹಜರ್ಯವಾದರೂ ಸಿಸೇರಿಯನ್ನೇ ಬೇಕೆಂದು ಹಠಹಿಡಿಯುತ್ತಾರೆ.

೨. ತಮ್ಮ ಸೌಕರ್ಯಾರ್ಥ ಮಗುವು ತಾನಾಗೇ ಹೊರಬರುವ ದಿನಗಳವರೆಗೂ ಕಾಯದೇ ಸಿಸೇರಿಯನ್ಗಳನ್ನು ಆಯ್ಕೆಮಾಡುತ್ತಾರೆ.

೩. ಶ್ರೋಣಿ ಕುಹರ ಸ್ನಾಯುಗಳ ಸಂರಕ್ಷಣೆಗಾಗಿ.

೪. ಯೋನೀದ್ವಾರದಲ್ಲಿನ ಕತ್ತರಿ ಪ್ರಯೋಗ, ಅಸಂಯಮನ ಹಾಗೂ ಸಿಸೇರಿಯನಿಂದ ಹೆರಿಗೆ ನೋವಿನಂತ ಭೀಕರ ನೋವನ್ನು ಅನುಭವಿಸಬೇಕಾಗಿಲ್ಲವೆಂಬ ಕಲ್ಪನೆ ಅವರನ್ನು ಸಿಸೇರಿಯನ್ ಅನ್ನು ಪ್ರೇಮಿಸುವಂತೆ ಪ್ರೇರೆಪಿಸುತ್ತದೆ.

೫. ಹೆರಿಗೆ ನೋವನ್ನು ತಾಳಿಕೊಳ್ಳಲಾರೆನೆಂಬ ಭಯ.

ಸುಖ ಪ್ರಸವದ ನಂತರದ ಅನುಭವಗಳೇ ಬೇರೆ. ಸುಖ ಪ್ರಸವದ ಅನಂತರದ ದಿನಗಳ ಸಂತೋಷವೇನೆಂದು ಅದು ಅನುಭವಿಸಿದವರೇ ಬಲ್ಲರು. ಪ್ರಕೃತಿಯು ಸ್ತ್ರೀ ಶರೀರವನ್ನು ಯೋನೀ ಪ್ರಸವಕ್ಕೆ ಅನುಕೂಲವಾಗುವಂತೆಯೇ ಸೃಷ್ಟಿಸಿದೆ.ಸಿಸೇರಿಯನ್ ಎಂಬ ಭೂತದ ಬೆನ್ನುಹತ್ತಿದ ಇಂದಿನ ತಲೆಮಾರಿನ ಸ್ತ್ರೀಯರು ಸ್ವಾಭಾವಿಕ ಹೆರಿಗೆಯಿಂದುಂಟಾಗುವ ನೋವು ಹಾಗೂ ತನ್ಮೂಲಕವುಂಟಾದ ಅಸ್ವಸ್ಥತೆಗಳನ್ನು ಬಹಳ ಬೇಗನೆ ಗುಣಮುಖರಾಗಬಹುದೆಂಬುದನ್ನು ಮರೆಯುತ್ತಾರೆ.ಸ್ವಾಭಾವಿಕ ಹೆರಿಗೆಯಿಂದ ತಾಯಿಗೂ ಅನುಕೂಲ. ಮಗುವಿಗೆ ಜನ್ಮನೀಡುವ ಆ ಸುಂದರ ನಿಮಿಷದ ಅನುಭವ ಕೆವಲ

ನೈಸರ್ಗಿಕ ಪ್ರಸವವೇ ನೀಡುವುದು. ಯೋನೀ ಪ್ರಸವದ ನಂತರ ತಾಯಿ ಮಕ್ಕಳಿಬ್ಬರೂ ಸಂಪೂರ್ಣ ಆರೊಗ್ಯವಂತರಾಗಿರುವುದರಿಂದ, ಪ್ರಸವದ ಕೆಲವೇ ಕ್ಷಣಗಳಲ್ಲಿ ಮಗುವಿಗೆ ಎದೆಹಾಲೆಂಬ ಅಮೃತವನ್ನು ಉಣಿಸಬಹುದು. ಆದರೆ, ಸಿಸೇರಿಯನ್ ನಡೆಸಲು ನಿಮಗೆ ನೀಡಿದ ಅರಿವಳಿಕೆಯ ಪ್ರಭಾವವು ಮಗುವಿನ ಮೇಲೂ ಬೀರುವುದರಿಂದ ಮಗುವು ಎದೆಹಾಲನ್ನು ಕುಡಿಯಲು ನಿರಾಸಕ್ತಿ ತೋರುವುದು. ಎಲ್ಲಕ್ಕಿಂತಲೂ ಮಿಗಿಲಾಗಿ, ಸುಖಪ್ರಸವವೆನ್ನುವುದು ತಾಯಿಗೆ ಮಾತ್ರವಲ್ಲ ಮಗುವಿನ ಆರೋಗ್ಯಕ್ಕೂ ಒಳ್ಳೆಯದು.

ಕೆಳಗೆ ನೀಡಿದ ಸಲಹೆಗಳನ್ನು ಪಾಲಿಸುವುದರಿಂದ ಸುಖ ಪ್ರಸವವು ನಿಮ್ಮದಾಗುವುದು.

  •  ಪ್ರಸವದ ಬಗ್ಗೆ ಪೂರ್ವ ಜ್ಞಾನ.

ಹೆರಿಗೆ ಮತ್ತು ಹೆರಿಗೆ ನೋವಿನ ಬಗ್ಗೆ ಸಂಪೂರ್ಣ ಮಾಹಿತಿ ಗಳಿಸಿಕೊಳ್ಳಿ. ಹೆರಿಗೆ ನೋವು ಹಾಗೂ ಅದನ್ನು ಹೇಗೆ ತಹಂಬದಿಗೆ ತರಬಹುದೆಂಬ ಬಗೆಗಿನ ತಿಳುವಳಿಕೆಯು ನಿಮ್ಮ ಮನೋಬಲವನ್ನು ವರ್ಧಿಸುತ್ತದೆ. ನಿಮಗೆ ಯಾವುದೇ ಸಂದೇಹಗಳಿದ್ದರೂ ಅದನ್ನು ನಿಮ್ಮ ವೈದ್ಯರಿಂದ ನಿವಾರಿಸಿಕೊಳ್ಳಿ. ಪ್ರಸವ ಪೂರ್ವ ತಿಳುವಳಿಕೆಗಳನ್ನು ನೀಡುವಂತಹ ತರಗತಿಗಳಿಗೆ ಸೇರಿಕೊಂಡು ಗರ್ಭಧಾರಣೆಯಿಂದ

ಹಿಡಿದು ಹೆರಿಗೆಯಾಗುವ ತನಕ ಶರೀರದಲ್ಲಾಗುವ ಎಲ್ಲಾ ಬದಲಾವಣೆಗಳ ಬಗೆಗಿನ ಸಂಪೂರ್ಣ ಮಾಹಿತಿ ನಿಮಗೆ ಯಾವುದೇ ಸಂದರ್ಭಗಳಲ್ಲೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳದಂತೆ ಬೆಂಬಲ ನೀಡುತ್ತದೆ. ಸಾಮಾಜಿಕ ಜಾಲಗಳಿಂದ ಅಥವಾ ಉತ್ತಮ ಪುಸ್ತಕಗಳಿಂದ ನಿಮ್ಮ ಎಲ್ಲಾ ಆತಂಕಗಳನ್ನು ನೀಗಿಸುವಂತ ಮಾಹಿತಿಗಳನ್ನು ಕಲೆಹಾಕಿರಿ. ಹೀಗೆ ನಿಮಗೆ ಸಾಧ್ಯವಾದ ರೀತಿಯಲ್ಲಿ ನಿಮ್ಮ ಎಲ್ಲಾ ಆತಂಕಗಳನ್ನು ನೀಗಿಸಿ ನಿರ್ಮಲವಾದ ಮನಸ್ಸಿನಿಂದ ನಿಮ್ಮ ಪ್ರಸವದಿನಕ್ಕಾಗಿ ಸಂತೋಷದಿಂದ ಕಾಯುತ್ತಿರಿ.

  • ಪೋಷಕಾಂಶಯುಕ್ತ ಆಹಾರ

ನೀವು ಸೇವಿಸುವ ಆಹಾರವು ನಿಮ್ಮ ಪ್ರಸವ ಸಿಸೇರಿಯನ್ ಆಗಿರಬೇಕೇ ಅಥವಾ ಸ್ವಾಭಾವಿಕ ರೀತಿಯಲ್ಲಿ ನಡೆಯಬೇಕೇ ಎಂದು ತೀರ್ಮಾನಿಸುತ್ತದೆ.ಆರೋಗ್ಯಪೂರ್ಣವಾದ ತಾಯಿಯು ನಿರಾತಂಕವಾಗಿ ಯಾವುದೇ ಅಡೆಚಣೆಗಳಿಲ್ಲದೇ ಸುಖಪ್ರಸವವನ್ನು ಅನುಭವಿಸುವರು.ಮಗುವಿನ ಸಂಪೂರ್ಣ ಮಾನಸಿಕ ಹಾಗೂ ಶಾರೀರಿಕ ವಿಕಸನಕ್ಕಾಗಿ ಸಮತೋಲನಾಹಾರದ ಸೇವನೆ ಅತ್ಯಗತ್ಯ. ಗರ್ಭಿಣಿಯರು ಧಾರಾಳವಾಗಿ ನೀರು ಕುಡಿಯುವುದರಿಂದಲೂ ತಾಯಿ ಮಕ್ಕಳಿಬ್ಬರೂ

ನಿರ್ಜಲೀಕರಣಕ್ಕೊಳಗಾಗದಂತೆ ತಡೆಯಬಹುದು. ಮಗುವಿಗೆ ಅತ್ಯಗತ್ಯವಾದ ಪೋಷಣೆಯನ್ನು ನೀಡುವಲ್ಲಿ ಮಹತ್ತರ ಪಾತ್ರ ವಹಿಸುವ ತರಕಾರಿ ಹಾಗೂ ಹಸುರೆಲೆಗಳು ಗರ್ಭಿಣಿಯರ ಆಹಾರಕ್ರಮದ ಭಾಗವಾಗಿರಲೇ ಬೇಕು. ಇದರೆಡೆಯಲ್ಲಿ ನಿಮ್ಮ ಶರೀರ ತೂಕದತ್ತ ಗಮನ ಹರಿಸಲೂ ಮರೆಯಬಾರದು. ಯಾಕೆಂದರೆ, ಹೆಚ್ಚಾದ ಶರೀರ ತೂಕವು ಸುಖ ಪ್ರಸವಕ್ಕೆ ತಡೆಯನ್ನೊಡ್ಡಬಹುದು.

  • ನಿಯಮಿತ ವ್ಯಾಯಾಮ

ಸರಿಯಾದ ವ್ಯಾಯಾಮವು ಗರ್ಭಿಣಿಯರ ಶ್ರೋಣಿ ಕುಹರದ ಸ್ನಾಯು ಹಾಗೂ ಇತರ ಸ್ನಾಯುಗಳನ್ನು ಬಲಪಡಿಸುವುದಲ್ಲದೇ ಗರ್ಭಿಣಿಯರನ್ನು ಸದಾ ಚಟುವಟಿಕೆಯಲ್ಲಿರುವಂತೆಯೂ ಮಾಡುತ್ತದೆ. ನಿಮ್ಮ ತೊಡೆ ಹಾಗೂ ಗರ್ಭಾಶಯದ ಸ್ನಾಯುಗಳನ್ನು ಬಲಪಡಿಸಿ ಹೆರಿಗೆ ನೋವನ್ನು ಸಹಿಸಿಕೊಳ್ಳುವಂತ ಶಾರೀರಿಕ ಬಲವನ್ನು ನಿಮಗೆ ನೀಡುತ್ತದೆ. ಶರೀರವು ಧೃಡವಾಗಿರುವುದರಿಂದ ನೋವನ್ನು ಸಹಿಸಿಕೊಳ್ಳುವ ತ್ರಾಣವೂ ನಿಮಗೆ ಲಭ್ಯವಾಗುವುದು. ಗರ್ಭಿಣಿಯು ವ್ಯಾಯಾಮ ಮಾಡಲಿಚ್ಛಿಸುವಿರಾದರೆ, ಖಂಡಿತವಾಗಿಯೂ ತಜ್ಞರ ಮಾರ್ಗದರ್ಶನದಲ್ಲೇ ಆಗಿರಬೇಕು. ಯಾಕೆಂದರೆ ಹೆಚ್ಚಿನ ವ್ಯಾಯಾಮವು ಕೆಲವೊಮ್ಮೆ ವಿಪರೀತ ಫಲಗಳನ್ನು ನೀಡಬಹುದು.

  • ನಿರಾತಂಕ

ಮನಸ್ಸನ್ನೆಂದೂ ಪ್ರಶಾಂತವಾಗಿಟ್ಟುಕೊಳ್ಳಿ. ಆತಂಕ, ಗಾಬರಿ ಹಾಗೂ ಒತ್ತಡದಿಂದ ದೂರವಾಗಿರಿ. ಗರ್ಭಾವಸ್ತೆಯು ನೆಮ್ಮದಿಯನ್ನು ಬಯಸುತ್ತದೆ. ಆದರೆ, ಗರ್ಭಕಾಲದ ಸಮಯದಲ್ಲಿ ಅನಗತ್ಯ ದುಗುಡಗಳು ಮನಸ್ಸನ್ನು ತಳಮಳಗೊಳಿಸುತ್ತವೆ. ಎಷ್ಟೇ ಸಂದಿಗ್ಧ ಪರಿಸ್ಥಿತಿಯಾಗಿದ್ದರೂ ಮನಸ್ಸನ್ನು ನಿರ್ಮಲ ಹಾಗೂ ಶಾಂತವಾಗಿಟ್ಟುಕೊಳ್ಳುವುದನ್ನು ಕರಗತಮಾಡಿಕೊಳ್ಳಬೇಕು. ಸಜ್ಜನರ ಸಂಗ,ನಿಮ್ಮ ಆಪ್ತರ ಸಾನಿಧ್ಯ ಹಾಗೂ ಉತ್ತಮ ಪುಸ್ತಕಗಳು ನಿಮ್ಮನ್ನು ಆ ನಿಟ್ಟಿನಲ್ಲಿ ಸಹಾಯಮಾಡಬಲ್ಲುದು. ನಿಮಗೆ ಉದ್ವೇಗವನ್ನು ಉಂಟುಮಾಡುವ ಜನ ಅಥವಾ ಸನ್ನಿವೇಶಗಳಿಂದ ಆದಷ್ಟೂ ದೂರವಾಗಿರಿ. ಯಾಕೆಂದರೆ, ಈ ಸಮಯಗಳಲ್ಲಿ ಅನುಭವಿಸುವ ದು:ಖ, ದುಮ್ಮಾನ, ಆತಂಕ, ಗಾಬರಿಗಳು ಮಗುವಿನ ಮೇಲೆ ಅಡ್ಡ ಪರಿಣಾಮ ಬೀರಬಲ್ಲುದು.

  • ಉಸಿರಾಟದ ವ್ಯಾಯಾಮ

ಪ್ರಸವದ ಸಮಯದಲ್ಲಿ ಉಸಿರಾಟದ ಮೇಲಿನ ನಿಮ್ಮ ನಿಯಂತ್ರಣವು ನಿಮಗೆ ಬೆಂಬಲವಾಗಬಹುದು.ಆಗಾಗ ನೀವು ನಿಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳುವುದರಿಂದ ಯಥೇಚ್ಛವಾಗಿ ಆಮ್ಲಜನಕವು ದೊರೆತು ನಿಮ್ಮ ಮಗುವಿನ ಬೆಳವಣಿಗೆಗೆ ಪೂರಕವಾಗಿ ಕಾರ್ಯ ನಿರ್ವಹಿಸುವುದು. ಉಸಿರಾಟ ವ್ಯಾಯಾಮವು ನಿಮ್ಮ ಆತಂಕ ನಿವಾರಣೆಗೆ ಮಾತ್ರವಲ್ಲದೇ ಶರೀರವನ್ನು ಚಟುವಟಿಕೆಯಿಂದಿಡಲೂ ಸಹಕರಿಸುತ್ತದೆ.ಆದಕಾರಣ ಗರ್ಭಿಣಿಯರು ಯೋಗವನ್ನು ಪರಿಶೀಲಿಸುವುದೊಳ್ಳೆಯದು.

  •  ನಂಬಿಕಾರ್ಹ ವೈದ್ಯರಿಂದಲೇ ತಪಾಸಣೆ.

ನಿಯಮಿತವಾಗಿ ನಿಮ್ಮ ಪ್ರಸೂತಿ ತಜ್ಞರನ್ನು ಭೇಟಿಯಾಗಿ ಅವರ ಉಪದೇಶದಂತೆ ನಡೆದುಕೊಳ್ಳಿ. ಯೋನೀ ಪ್ರಸವಕ್ಕೇ ಆದ್ಯತೆ ನೀಡುವಂತ ನುರಿತ ವೈದ್ಯರನ್ನೇ ಆಯ್ಕೆಮಾಡಿಕೊಳ್ಳಿ. ನಿಮ್ಮ ಪರಿಚಯದ ಡಾಕ್ಟರ್ ನಿಮ್ಮ ನಂಬಿಕೆಗಳಿಗಿಂತ ವಿಪರೀತವಾದ ಅಭಿಪ್ರಾಯ ನೀಡುವವರಾದರೆ, ಯಾವುದೇ ಮುಲಾಜಿಲ್ಲದೇ ಬೇರೆ ಡಾಕ್ಟರನ್ನು ಭೇಟಿಯಾಗಿ. ಒಬ್ಬ ಒಳ್ಳೆಯ ವೈದ್ಯನು ನಿಮ್ಮ ನೈತಿಕ ಮೌಲ್ಯಗಳಿಗೆ ಬೆಲೆ ನೀಡಿ, ನಿಮ್ಮ ಹೆದರಿಕೆಗಳನ್ನು ಹಿಮ್ಮೆಟ್ಟಲು ಬೆಂಬಲವಾಗಿ ನಿಲ್ಲುತ್ತಾರೆಂದು ಮರೆಯದಿರಿ.

  • ಉತ್ತಮ ನಿದ್ರೆ

ಗರ್ಭಿಣಿಯರು ೮-೧೦ ಗಂಟೆಗಳ ಕಾಲ ಗಢದ್ದು ನಿದ್ದೆಯ ಸವಿಯನ್ನು ಅನುಭವಿಸಲೇ ಬೇಕು. ಸುಖಕರ ನಿದ್ರೆಯೇ ಹಲವು ರೋಗಗಳಿಗೂ ಸಿದ್ಧೌಷಧಿ. ಗರ್ಭಿಣಿಯ ಗಾಢನಿದ್ರೆಯು ತಾಯಿ ಮಕ್ಕಳಿಬ್ಬರ ಆರೋಗ್ಯಕ್ಕೆ ಅತೀ ಅಗತ್ಯ. ನಿದ್ರೆಯು ಆಯಾಸ ಮತ್ತು ಕ್ಷೀಣಗಳೆರಡಕ್ಕೂ ಪರಿಹಾರಿ. ಕಾಫಿ ಅಥವಾ ಕೆಫೆನ್ಗಳನ್ನೊಳಗೊಂಡ ಪಾನೀಯಗಳನ್ನು ಆದಷ್ಟೂ ವರ್ಜಿಸುವುದು ಉತ್ತಮ ನಿದ್ರೆಗೆ ಸಹಕಾರಿ.

 

(೯) ಭೀಕರ ಕತೆಗಳನ್ನಾಲಿಸದಿರಿ

ಬೇರೆಯವರು ಕತೆಕಟ್ಟಿ ಹೇಳುವ, ಅವರ ಪ್ರಸವದ ಭೀಕರ ನರಕಯಾತನೆಯನ್ನು ಕೇಳುವ ಗರ್ಭಿಣಿಯರು ತಮಗೂ ಅದೇ ಅನುಭವವಾಗುವುದೆಂಬ ಭಯದಿಂದ ಸಿಸೇರಿಯನ್ ಆಯ್ಕೆ ಮಾಡಿಕೊಳ್ಳುತ್ತಾರೆ. ಆದಕಾರಣ ಬೇರೆಯವರ ಅನುಭವಗಳ ಬಗ್ಗೆ ಕಿವಿಗೊಡದೇ ನಿಮ್ಮ ಪಾಡಿಗೆ ಹಾಯಾಗಿದ್ದುಬಿಡಿ.

Leave a Reply

%d bloggers like this: