ಗರ್ಭಕಾಲದ-ಸಂಭೋಗ-ನೀವು-ತಿಳಿದಿರಬೇಕಾದ-೫-ಸತ್ಯಗಳು

ಗರ್ಭಿಣಿಯರು ಲೈಂಗಿಕಕಿೃಯೆ ನಡೆಸಿದರೆ, ಭ್ರೂಣಕ್ಕೆ ತೊಂದರೆಯುಂಟಾಗಬಹುದೆಂಬ ಆತಂಕದಿಂದ ಅನೇಕ ಗರ್ಭಿಣಿಯರು ತಮ್ಮ ಗಂಡನನ್ನು ದೂರವಿರಿಸುತ್ತಾರೆ.ಹೆಂಗಳೆಯರೇ, ನಿಮ್ಮ ಭಯವನ್ನು ದೂರವಿರಿಸಿ;ಗರ್ಭಕಾಲದಲ್ಲೂ ಲೈಂಗಿಕತೆಯನ್ನು ಸಂಪೂರ್ಣವಾಗಿ ಆನಂದಿಸಿ. ಇದರಿಂದ ಗರ್ಭದೊಳಗಿರುವ ಮಗುವಿಗೆ ಯಾವುದೇ ಹಾನಿಯುಂಟಾಗುವುದಿಲ್ಲ. ಜೀವನದ ಯಾವುದೇ ಹಂತದಲ್ಲೂ ಸಂಭೋಗಸುಖವನ್ನು ಆನಂದಿಸಬಹುದು. ಆದರೆ, ನಿಮ್ಮ ಎಚ್ಚರಿಕೆಯಲ್ಲಿ ನೀವಿರಬೇಕು.

ಗರ್ಭಿಣಿಯರು ತಿಳಿದುಕೊಳ್ಳಬೇಕಾದ ೫ ಸಂಗತಿಗಳನ್ನು ಕೆಳಗೆ ತಿಳಿಸಲಾಗಿದೆ.

೧.ಗರ್ಭಧಾರಣೆಯ ಸಮಯದ ಸಂಭೋಗವು ಸಂಪೂರ್ಣ ಸುರಕ್ಷಿತ.

ಗರ್ಭಕಾಲದಲ್ಲೂ ಲೈಂಗಿಕತೆಯನ್ನು ಆನಂದಿಸಬಹುದು. ಗರ್ಭಿಣಿಯರ ಶರೀರವು ಹಲವಾರು ಮಾರ್ಪಾಡುಗಳಿಗೊಳಗಾಗುವುದರಿಂದ ಸಂವೇದನಾ ಶೀಲವು ಅಧಿಕವಾಗಿರುವುದು.ಸ್ಪರ್ಶಕ್ಕೆ ಫಕ್ಕನೇ ಸ್ಪಂದಿಸುವುದರಿಂದ ಲೈಂಗಿಕೊದ್ರೇಕತೆಗೆ ಒಳಗಾಗುತ್ತಾರೆ.

೨.ಸಂಭೋಗದಿಂದ ಮಗುವಿಗೆ ಹಾನಿಯುಂಟಾಗುವುದಿಲ್ಲ

ಗರ್ಭಧಾರಣೆಯ ಸಮಯದಲ್ಲಿನ ಲೈಂಗಿಕಬಂಧದಿಂದ ಭ್ರೂಣಕ್ಕೆ ತೊಂದರೆಯುಂಟಾಗುವುದೆಂಬ ತಪ್ಪು ತಿಳುವಳಿಕೆಯಿಂದ ಅನೇಕ ಗರ್ಭಿಣಿಯರು ತಮ್ಮ ಪಕ್ಕಕ್ಕೇ ಸುಳಿಯಗೊಡದಿರುವುದುಂಟು. ಭ್ರೂಣವು ಹಲವಾರು ಪದರದೊಳಗಡೆ ಸುರಕ್ಷಿತವಾಗಿರುವುದರಿಂದ ಅದಕ್ಕೆ ನಿಮ್ಮ ಶಾರೀರಿಕ ಸಂಪರ್ಕದಿಂದ ಯಾವುದೇ ತೊಂದರೆಯುಂಟಾಗುವುದಿಲ್ಲ. ಆದುದರಿಂದ ನಿರಾತಂಕವಾಗಿ ಆ ರಸಭರಿತ ಕ್ಷಣಗಳನ್ನು ಆಸ್ವಾದಿಸಿ.

೩. ಮಲಗುವ ನಿಲುವನ್ನು ಗಮನಿಸಿ

ಯಾವಾಗಲೂ ನಿಮ್ಮ ಭಂಗಿಯ ಬಗ್ಗೆ ಜಾಗರೂಕರಾಗಿರಬೇಕು. ಗರ್ಭಿಣಿಯರ ಹೊಟ್ಟೆಯ ಮೇಲೆ ಅಧಿಕ ಒತ್ತಡ ಹೇರದಂತೆ ಗಮನಸಬೇಕಾದದ್ದು ಅಗತ್ಯ. ಆದರೆ,೧೬-೨೦ ವಾರಗಳ ಬಳಿಕ ಸಂಭೋಗ ನಡೆಸದಿರುವುದೇ ಒಳ್ಳೆಯದು. ಗರ್ಭಕಾಲದಲ್ಲೂ ಶಾರೀರಿಕ ಸುಖವನ್ನು ಹಂಚಿಕೊಳ್ಳಲಿರುವ ಬೇರೆ ಬೇರೆ ವಿಧಾನಗಳಿಂದ ನಿಮ್ಮ ದಾಂಪತ್ಯ ಬಂಧವನ್ನು ಸುದೃಢಗೊಳಿಸಬಹುದು.

೪. ನಿಮ್ಮ ಸುರಕ್ಷತೆಗೆ ಆದ್ಯತೆ ನೀಡಿರಿ

ಶಾರೀರಿಕ ಬಂಧದಿಂದ ಹರಡುವ ರೋಗಗಳನ್ನು ತಡೆಯುವ ಸುರಕ್ಷಾಮಾರ್ಗಗಳನ್ನು ಅನುಸರಿಸಬೇಕು. ಹರ್ಪ್ಲೆಕ್ಸ್ ಸಿಂಪ್ಲೆಕ್ಸ್ ಎಂಬ ಭ್ರೂಣಕ್ಕೆ ಹಾನಿಯನ್ನುಂಟು ಮಾಡುವ ವೈರಸ್ಸನ್ನು ಗುಧ,ಯೋನಿ ಅಥವಾ ಬಾಯಿಯ ಮೂಲಕ ಹರಡದಂತೆ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸುವುದರಿಂದ ಮುಂದಿನ ಅನಾಹುತಗಳನ್ನು ತಪ್ಪಿಸಬಹುದು.

೫. ಸಂಭೋಗದ ನಂತರದ ರಕ್ತಸ್ರಾವ

ಸಂಭೋಗದ ಸಮಯದಲ್ಲಿ ಕಾಲುಗಳ ಪೇಶೀಸೆಳೆತ ತೀರಾ ಸಾಮಾನ್ಯವಾದದ್ದು. ಆದರೆ, ದೀರ್ಘಕಾಲದವರೆಗೆ ಆ ನೋವು ನೆಲೆನಿಂತರೆ ಅಥವಾ ಸಂಭೋಗದ ನಂತರ ರಕ್ತಸ್ರಾವವಾದರೆ ತಡಮಾಡದೇ ನಿಪುಣ ವೈದ್ಯರನ್ನು ಭೇಟಿಮಾಡಬೇಕು. ಗರ್ಭಿಣಿಯರಲ್ಲಿ ವಿಷಯಾಸಕ್ತಿ ಕಡಿಮೆಯಾಗುವುದು ತೀರಾ ಸಾಮಾನ್ಯ. ಅದಕ್ಕೆ ಆತಂಕ ಪಡಬೇಕಾದದ್ದಿಲ್ಲ.ಪ್ರಸವಾನಂತರ ಮನಸೋ ಇಚ್ಛೆ ಸಂಗಮಸುಖವನ್ನನುಭವಿಸಬಹುದು.

ಸರಸಮಯವಾದ ದಾಂಪತ್ಯ ಜೀವನ ಸುಗಮವಾಗಲು ಆರೋಗ್ಯಕರ ಲೈಂಗಿಕ ಬಂಧವೂ ಅತ್ಯಗತ್ಯ. ಕೆಲವು ತಪ್ಪುಧಾರಣೆಗಳಿಂದ ಜೀವನದ ಆನಂದವನ್ನೂ ಭಧ್ರತೆಯನ್ನೂ ಕಳೆದುಕೊಳ್ಳದಿರಿ. ಆದರೆ, ವೈದ್ಯರ ಉಪದೇಶವಿಲ್ಲದ ಕೊನೆಯ ವಾರಗಳ ಲೈಂಗಿಕ ಬಂಧವನ್ನು ತಡೆಯುವುದೊಳ್ಳೆಯದು. ಬೇರೆ ಮಾರ್ಗಗಳನ್ನು ಅನುಸರಿಸಿ ಸಂಗಾತಿಯನ್ನು ಸಂತೋಷಪಡಿಸಬಹುದು.

ಗರ್ಭಿಣಿಯರೇ ನಿಮ್ಮ ದಾಂಪತ್ಯ ಜೀವನ ಸದಾ ಹಸಿರಾಗಿರಲಿ. ಶುಭವಾಗಲಿ.

Leave a Reply

%d bloggers like this: