herigeya-nantara-arogyakara-mattu-prajvalisuva-tvachegagi-8-aharagalu

ನಾವು ಚಿಂತಿಸಿದಂತೆ ಗರ್ಭಧಾರಣೆಯು ಯಾವಾಗಲು ಹೂವಿನ ಹಾಸಿಗೆಯಲ್ಲ. ಹಾರ್ಮೋನುಗಳ ಬದಲಾವಣೆ, ಒತ್ತಡ, ಆತಂಕ, ಖಿನ್ನತೆ, ಏರುಪೇರು ಮನಸ್ಥಿತಿ, ನಿದ್ರಾಹೀನತೆ, ಮತ್ತು ಬೆಳಗಿನ ಕಾಯಿಲೆ ಇವುಗಳು ಮಹಿಳೆಯು ಈ ಹಂತದಲ್ಲಿ ಅನುಭವಿಸುವ ತಮಾಷೆಯ ವಿಷಯಗಳಲ್ಲ. ವಿಶೇಷವಾಗಿ, ತ್ವಚೆ ಮತ್ತು ಕೂದಲು ಸಮಸ್ಯೆ, ಪ್ರಸವದ ನಂತರ ತುಂಬಾ ಸಾಮಾನ್ಯ. ಅದು ಮೊಡವೆಯಿಂದ ಕಪ್ಪು ಕಲೆಗಳು, ಗರ್ಭಾವಸ್ಥೆಯಲ್ಲಿ ಮತ್ತು ನಂತರ ತ್ವಚೆಯು ಹೊಳಪು ಕಳೆದುಕೊಳ್ಳುವುದು, ಕೆಲವು ಮಹಿಳೆಯರು ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ, ಮತ್ತು ಇದರಿಂದ ಖಿನ್ನತೆಗೂ ಒಳಗಾಗುತ್ತಾರೆ.

ನೀವು ವೈದ್ಯರನ್ನು ಸಮಾಲೋಚಿಸಿದಾಗ ಕೆಲವು ಪರಿಹಾರಗಳು ಸಿಗಬಹುದು, ಈ ಕೆಳಗಿನ ಆಹಾರಗಳು ನಿಮ್ಮ ಚರ್ಮದ ನೈಸರ್ಗಿಕ ಹೊಳಪನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

೧.ಸಂತೋಷದ ಉದರ(/ಹೊಟ್ಟೆ) ಮತ್ತು ಆರೋಗ್ಯಕರ ತ್ವಚೆಗಾಗಿ ಡಾರ್ಕ್ ಚಾಕೊಲೇಟ್ಗಳು

ಹಸಿವಿನ ಯಾತನೆಯಿಂದ ಇಡಿದು ಮನಸ್ಥಿತಿ ಏರುಪೇರು ವರೆಗೆ, ಡಾರ್ಕ್ ಚಾಕೊಲೇಟ್ಗಳು ನಿಮ್ಮ ಸ್ಮರಣಾತೀತ ಸಂರಕ್ಷಕಗಳಾಗಿವೆ. ಈ ಚಾಕೊಲೇಟುಗಳು ಅರೋಗ್ಯ ಪ್ರಯೋಜನಗಳಿಂದ ತುಂಬಿವೆ. ಇದು ಉತ್ತಮ ಮನಸ್ಥಿತಿ ವರ್ಧಕ ಜೊತೆಗೆ, ತ್ವಚೆಗೂ ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತದೆ. ಉತ್ಕರ್ಷಣ ನಿರೋಧಕಗಳು, ಡಾರ್ಕ್ ಚಾಕೊಲೇಟುಗಳಲ್ಲಿ ಹೆಚ್ಚಾಗಿರುತ್ತವೆ,ಇವುಗಳು ತ್ವಚೆಯ ರಚನೆಯನ್ನು, ಹೊಳಪನ್ನು ಪುನಃ ನೈಸರ್ಗಿಕವಾಗಿ ಮರು ಪಡೆಯಲು ಸಹಾಯ ಮಾಡುತ್ತವೆ.

೨.ಚಿಕ್ಕ ಹಣ್ಣುಗಳು(Berries)

ಡಾರ್ಕ್ ಚಾಕೊಲೇಟುಗಳಂತೆ, ಇವುಗಳು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದ್ದು ಅವುಗಳೆಂದರೆ ಕ್ವೆರ್ಸೆಟಿನ್ ಮತ್ತು ಆಂಥೋಸಯಾನಿನ್ಸ್. ಹೆರಿಗೆಯ ನಂತರ ತ್ವಚೆಯ ಸಮಸ್ಯೆಯಿಂದ ಯಾರು ಕಷ್ಟಪಡುತ್ತಿರುತ್ತಾರೋ ಅವರಿಗೆ ಇದು ಒಂದು ಆಶೀರ್ವಾದದಂತೆ ಬಂದಿದೆ. ಸ್ಟ್ರಾಬೆರಿ, ಕ್ರಾನ್ ಬೆರ್ರಿ, ರಾಸ್ಪ್ ಬೆರ್ರಿ, ಬ್ಲೂ ಬೆರ್ರಿ ಮತ್ತು ಬ್ಲಾಕ್ ಬೆರ್ರಿ- ಇವುಗಳನ್ನು ನಿಯಮಿತವಾಗಿ ಸೇವಿಸುವುದು ತ್ವಚೆಯ ಅರೋಗ್ಯ ಮತ್ತು ಹೊಳಪನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ. ಇದಲ್ಲದೆ, ಇವುಗಳು ವಿಟಮಿನ್ ಸಿ ಯನ್ನು ಹೇರಳವಾಗಿ ಹೊಂದಿವೆ, ಇವು ಚರ್ಮದ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಹಾಯಕ.

೩.ಪರಿಪೂರ್ಣ ತ್ವಚೆಗೆ ಬಾದಾಮಿಯ ಜಾದು

ಇದು ತೂಕ ನಷ್ಟ ಅಥವಾ ಚರ್ಮದ ಸಮಸ್ಯೆಗಳಾಗಿರಲಿ, ಬಾದಾಮಿ ತನ್ನ ಆರೋಗ್ಯದ ಅನುಕೂಲಗಳೊಂದಿಗೆ ನಿಮ್ಮನ್ನು ವಿಸ್ಮಯಗೊಳಿಸುವಲ್ಲಿ ಎಂದು ವಿಫಲವಾಗುವುದಿಲ್ಲ. ಇದನ್ನು ಪ್ರತಿ ತಾಯಿಯು ಬಯಸುವುದು. ಬಾದಾಮಿಯು ವಿಟಮಿನ್ ಈ(E) ಮತ್ತು ಒಮೇಗಾ-೩ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ. ನಮ್ಮ ತ್ವಚೆಗೆ ಹಾನಿಕಾರಕವಾದ ತಟಸ್ಥ ಅಣುವಿನಿಂದ ಬಾದಾಮಿಯು ನಮ್ಮ ಚರ್ಮವನ್ನು ರಕ್ಷಿಸುತ್ತದೆ. ಸೂರ್ಯನ ಕಿರಣಗಳಿಂದ ಹಾಗುವ ತೊಂದರೆಗಳಿಂದ ತಪ್ಪಿಸಲು ನಮ್ಮ ತ್ವಚೆಯ ತೇವಾಂಶವನ್ನು ಹೆಚ್ಚಿಸುತ್ತದೆ.

೪.ಸುಕ್ಕು(/ನೆರಿಗೆ) ರಹಿತ ಚರ್ಮಕ್ಕಾಗಿ ಗ್ರೀನ್ ಟೀ

ಹೆರಿಗೆ ನಂತರ ದೋಷ ರಹಿತ ಮತ್ತು ಅರೋಗ್ಯ ತ್ವಚೆಗಾಗಿ ಇನ್ನು ಕನಸು ಕಾಣಬೇಕಿಲ್ಲ, ಗ್ರೀನ್ ಟೀ ಇದನ್ನು ನನಸು ಮಾಡುತ್ತದೆ. ಉತ್ಕರ್ಷಣ ನಿರೋಧಕಗಳ ಒಂದು ಅದ್ಬುತ ಮೂಲ, ಗ್ರೀನ್ ಟೀ ರಕ್ಷಫಲಕವಾಗಿ ಕಾರ್ಯ ನಿರ್ವಹಿಸುತ್ತದೆ, ಹಾನಿಕಾರಕ ತಟಸ್ಥ ಅಣುಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಚರ್ಮದ ಕಿರಿಕಿರಿ ಮತ್ತು ಕಲೆಗಳನ್ನು ಹೊಂದಿರುವ ಮಹಿಳೆಯರು ಹಸಿರು ಚಹಾದಿಂದ ಅಪಾರವಾಗಿ ಪ್ರಯೋಜನ ಪಡೆಯಬಹುದು. ವಯಸ್ಸಾಗುವ ಪ್ರಕ್ರಿಯೆಯನ್ನು ಹಿಂದಿರುಗಿಸಲು ಇದು ಸಹಾಯ ಮಾಡುತ್ತದೆ. ಒತ್ತಡ ಮತ್ತು ಆತಂಕವೂ ತ್ವಚೆಯ ಮೇಲೆ ಪರಿಣಾಮ ಬೀರಬಹುದು. ಗ್ರೀನ್ ಟೀ ಇದರಿಂದ ದೂರವಿಡಲು ಸಹಾಯ ಮಾಡುತ್ತದೆ.

೫.ವೈಲ್ಡ್ ಸಾಲ್ಮನ್ ತ್ವಚೆ ಕಾಪಾಡಲು

ಒಣ ಚರ್ಮ, ಮೊಡವೆಗಳು ಅಥವಾ ಸೋರಿಯಾಸಿಸ್ ನಿಮ್ಮ ತ್ವಚೆಗೆ ತೊಂದರೆ ನೀಡುತ್ತಿದೆಯೇ? ನಿಮ್ಮನ್ನು ವಯಸ್ಸಾದವರಂತೆ ಕಾಣಿಸುತ್ತಿದೆಯೇ? ಚಿಂತಿಸಬೇಡಿ! ವೈಲ್ಡ್ ಸಾಲ್ಮನ್ ಇದಕ್ಕೆ ಪರಿಹಾರ. ಇದು ಒಮೇಗಾ-೩ ಕೊಬ್ಬಿನಾಮ್ಲದಿಂದ ಸಮೃದ್ಧವಾಗಿದೆ, ಇದು ಉರಿಯೂತ ವಿರೋಧಿಯಾಗಿ ಕಾರ್ಯ ನಿರ್ವಹಿಸುತ್ತದೆ. ಚರ್ಮದ ತೇವಾಂಶವನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಸೂರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಿಸುತ್ತದೆ ಮತ್ತು ಇತರೆ ಚರ್ಮ ಕಾಯಿಲೆಯಿಂದ ರಕ್ಷಣೆ ನೀಡುತ್ತದೆ.

೬.ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಜನರಿಗೆ, ವಿಶೇಷವಾಗಿ ಹೊಸ ತಾಯಿಯಂದಿರಿಗೆ ಹೆಚ್ಚು ಬಾಯಿಚಪ್ಪರಿಸುವಂತೆ ಮಾಡುವ ಹಣ್ಣು. ಈ ಹಣ್ಣುಗಳು ಫೈಟೊಕೆಮಿಕಲ್, ಲಿಕೊಪೀನ್ ನ ಸಮೃದ್ಧ ಮೂಲವಾಗಿದೆ, ಇದು ತಟಸ್ಥ ಅಣುಗಳ ವಿರುದ್ಧ ಉತ್ತಮ ರಕ್ಷಣೆಯನ್ನು ಒದಗಿಸುತ್ತದೆ. ಇದು ಸೂರ್ಯನ ಹಾನಿಕಾರಕ ಕಿರಣಗಳ ವಿರುದ್ಧ ಹೊರಡುವ, ಕ್ಯಾರೊಟಿನಾಯ್ಡ್ ಎಂಬ ವರ್ಣ ದ್ರವ್ಯವನ್ನು ಹೊಂದಿದೆ.

೭.ಅಗಸೆ ಬೀಜಗಳು

ಹೆರಿಗೆ ನಂತರ ಚರ್ಮ ಕೆಂಪು, ಚರ್ಮ ಕಿರಿಕಿರಿ, ಮತ್ತು ಒಣ ಚರ್ಮದ ಬಗ್ಗೆ ಹಲವು ಮಹಿಳೆಯರು ದೂರನ್ನು ಹೇಳುತ್ತಾರೆ. ಅಗಸೆ ಬೀಜ ಇದಕ್ಕೆಲ್ಲಾ ಪರಿಹಾರವನ್ನು ನೀಡುತ್ತದೆ. ಇದು ಒಮೇಗಾ-೩ ಕೊಬ್ಬಿನಾಮ್ಲವನ್ನು ಸಮೃದ್ಧವಾಗಿ ಒಂದಿರುವುದರಿಂದ ತ್ವಚೆಯ ತೇವಾಂಶವನ್ನು ಕಾಪಾಡುವಲ್ಲಿ ಯಶಸ್ವಿಯಾಗುತ್ತದೆ. ಇದು ಚರ್ಮ ಕಿರಿಕಿರಿ ಮತ್ತು ಮುಂತಾದ ಚರ್ಮ ಕಾಯಿಲೆಗಳಿಂದ ಅಗಾಧವಾದ ಪರಿಹಾರವನ್ನು ನೀಡುತ್ತದೆ.

೮.ಪಾಲಕ್ ಸೊಪ್ಪು

ಪಾಲಕ್ ಸೊಪ್ಪು ಒಂದು ಸವ್ಯಸಾಚಿ, ಇದು ನಿಮ್ಮನ್ನು ಗಟ್ಟಿಮುಟ್ಟಾಗಿ ಇಡಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಒಮೇಗಾ-೩ ಕೊಬ್ಬಿನಾಮ್ಲ, ಖನಿಜಗಳು(ಕ್ಯಾಲ್ಸಿಯಂ, ಮೆಗ್ನಿಶಿಯಂ, ಪೊಟ್ಯಾಸಿಯಂ ಮತ್ತು ಕಬ್ಬಿಣ) ಮತ್ತು ವಿಟಮಿನ್ (B,  C ಮತ್ತು E) ಇವೆಲ್ಲವೂ ಇದರಲ್ಲಿ ಇವೆ. ಆದ್ದರಿಂದ,ಪಾಲಕ್ ಸೊಪ್ಪನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ, ಹೆರಿಗೆಯ ನಂತರ ಚರ್ಮ ತೊಂದರೆಗಳನ್ನು ನಿವಾರಿಸುವಲ್ಲಿ ತುಂಬಾ ಉಪಯುಕ್ತವಾಗಿವೆ.

Leave a Reply

%d bloggers like this: