banjetanakke-madhumeha-kaaranave-1

ಬಂಜೆತನಕ್ಕೆ ಹಲವಾರು ಕಾರಣಗಳಿವೆ, ಮತ್ತು ಇದಕ್ಕೆ ಮಧುಮೇಹವು ಒಂದು ಕಾರಣವಾಗಿರಬಹುದು. ನಿಮ್ಮ ಬಂಜೆತನ ಸಮಸ್ಯೆಗೆ ಗ್ಲುಕೋಸ್ ಮಟ್ಟ ಕಾರಣ ಎಂದು ತಿಳಿದುಕೊಳ್ಳಲು ರಕ್ತ ಪರೀಕ್ಷೆಯು ಸಹಾಯಮಾಡುತ್ತದೆ. ಅಥವಾ ರಕ್ತ ಪರೀಕ್ಷೆಯಿಂದ ನಿಮ್ಮ ಬಂಜೆತನಕ್ಕೆ ಕಾರಣ ಮಧುಮೇಹವೊ ಅಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳಬಹುದು.

ನಿಮ್ಮ ಗರ್ಭಧರಿಸುವ ಆಸೆಯನ್ನು ವಿಧ(type-2) ೨ ಮಧುಮೇಹ ಕನಸಾಗಿಯೇ ಉಳಿಸಬಹುದು. ಮತ್ತು ಇದು ಪುರುಷರ ಫಲವತ್ತತೆಗೂ ಹಾನಿ ಮಾಡಬಹುದು.

ವಿಧ(type 1) ೧ ಮಧುಮೇಹದಿಂದ ನಿಮಗೆ ಮತ್ತು ಭ್ರೂಣಕ್ಕೆ(ಶಿಶುಗೆ) ಇಬ್ಬರಿಗೂ ಕೆಲವು ಸಮಸ್ಯೆಗಳು ಉಂಟಾಗಬಹುದು. ಒಂದು ವೇಳೆ ವಿಧ(type-2) ೨ ಮಧುಮೇಹವಾದರೆ, ನಿಮ್ಮ ಗರ್ಭವಾಸ್ಥೆಯನ್ನು ಸುರಕ್ಷಿತವಾಗಿಸಲು ನೀವು ಕೆಲವು ಮುನ್ನಚ್ಚೆರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು. ನೀವು ತಿಳಿದುಕೊಳ್ಳಬೇಕಾದ ಮತ್ತಷ್ಟು ಸತ್ಯ ಸಂಗತಿಗಳು ಇಲ್ಲಿವೆ.

೧.ಗರ್ಭಪಾತವಾಗುವ ಅಪಾಯ

ಹೆಚ್ಚು ಗ್ಲುಕೋಸ್ ಮಟ್ಟವನ್ನು ಹೊಂದಿರುವ ಮಹಿಳೆಯು ಅಷ್ಟು ಸುಲಭವಾಗಿ ಗರ್ಭಧಾರಣೆಯನ್ನು ಪಡೆಯಲು ಸಾಧ್ಯವಿಲ್ಲ. ಗರ್ಭಾಶಯದಲ್ಲಿ ಭ್ರೂಣ ಬೆಳೆಯುದನ್ನು ಮಧುಮೇಹವು ತಡೆಯಬಹುದು ಅಥವಾ ಗರ್ಭಾಶಯದಲ್ಲಿ ಅದು ಸೇರದಂತೆ ತಡೆದು ಬಂಜರಾಗಿ ಮಾಡಬಹುದು. ಮತ್ತು ಗರ್ಭಪಾತವಾಗುವ ಅಪಾಯ ತುಂಬಾ ಹೆಚ್ಚಿರುತ್ತದೆ.

೨.ಅಪಾಯದ ಶೇಕಡವಾರು

ಮಹಿಳೆಯು ಗರ್ಭಧರಿಸಿದರೂ, ತನ್ನ ಗರ್ಭಾವಸ್ಥೆಯಲ್ಲಿ ಮಧುಮೇಹವು ತನ್ನ ಪರಿಣಾಮವನ್ನು ಬೀರಬಹುದು. ಗರ್ಭಪಾತವಾಗುವ ಅಪಾಯವು ಸಾಮಾನ್ಯ ಮಹಿಳೆಯರಿಗಿಂತ  ಶೇಕಡಾ ೩೦ ರಿಂದ ೬೦ರಷ್ಟು ಮಧುಮೇಹದಿಂದ ಬಳಲುತ್ತಿರುವ ಮಹಿಳೆಯರಲ್ಲಿ ಹೆಚ್ಚಿರುತ್ತದೆ.

೩.ಜನ್ಮ ದೋಷಗಳು(ನ್ಯೂನತೆಗಳು)

ಕೆಲವು ಸಂದರ್ಭಗಳಲ್ಲಿ, ಮಧುಮೇಹವು ಮಗುವಿನಲ್ಲಿ ಜನ್ಮ ನ್ಯೂನತೆಗಳನ್ನು ಹೆಚ್ಚಿಸಬಹುದು. ಅಧಿಕ ಮಧುಮೇಹ ಮಟ್ಟ ಭ್ರೂಣದ ಕೋಶಗಳಿಗೆ ಹಾನಿಮಾಡಬಹುದು.

೪.ಹಾರ್ಮೋನುಗಳ ಸಮಸ್ಯೆ

ಗರ್ಭಾವಸ್ಥೆಯು ಪ್ರೊಜೆಸ್ಟರಾನ್, ಟೆಸ್ಟೋಸ್ಟೆರಾನ್ ಮತ್ತು ಈಸ್ಟ್ರೊಜೆನ್ ನಂತಹ ಕೆಲವು ಹಾರ್ಮೋನುಗಳ ಕ್ರಿಯೆಯನ್ನು ಒಳಗೊಳ್ಳುತ್ತದೆ. ಅಧಿಕ ಗ್ಲುಕೋಸ್ ಮಟ್ಟ ಇದಕ್ಕೆ ಹಾನಿ ಮಾಡಬಹುದು, ಮತ್ತು ಇದರಿಂದ ಫಲವತ್ತತೆಯ ಸಮಸ್ಯೆಗೆ ಕಾರಣವಾಗಬಹುದು. ಇಂತಹ ಸಂದರ್ಭಗಳಲ್ಲಿ, ಮಧುಮೇಹ ಮಟ್ಟವನ್ನು ಕಡಿಮೆಮಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಮತ್ತು ಆಗಾಗ್ಗೆ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳುವುದು ಉತ್ತಮ.

೫.ಗಂಡು ಫಲವತ್ತತೆ

ಮಧುಮೇಹವು ಗಂಡು ಫಲವತ್ತತೆ ಮೇಲು ಹಾನಿ ಮಾಡಬಹುದು. ಇದು ಹಿಮ್ಮುಖನಡೆಗೆ ಕಾರಣವಾಗಬಹುದು. ಹಿಮ್ಮುಖನಡೆ ಎಂದರೆ ಹಿಂದಕ್ಕೆ ಚಲಿಸು ಎಂದರ್ಥ. ಏಜಾಕುಲಶನ್ ಆಗುವ ಸಮಯದಲ್ಲಿ ವೀರ್ಯ ಹೊರ ಬರಬೇಕು, ಆದರೆ ಅದು ಮೂತ್ರಕೋಶಕ್ಕೆ ತಿರುಗಿ ಬರುವುದು ನಿಮ್ಮ ಗರ್ಭಧರಿಸುವ ಆಸೆಗೆ ನೋವುಂಟು ಮಾಡಬಹುದು.

೬.ನಿಮಿರುವಿಕೆ ಸಮಸ್ಯೆ

ಕೆಲವು ಪುರುಷರು ನಿಮಿರುವಿಕೆ ಸಮಸ್ಯೆಯನ್ನು ಎದುರಿಸುತ್ತಾರೆ, ಇದಕ್ಕೆ ಕಾರಣ ಮಧುಮೇಹ. ವೀರ್ಯದಲ್ಲಿರುವ ಡಿಎನ್ಎ(DNA) ಅನ್ನು ಮಧುಮೇಹವು ಹಾನಿ ಮಾಡುತ್ತದೆ. ಇದು ಕೆಲವು ಭ್ರೂಣ ಸಮಸ್ಯೆಗೆ ಕಾರಣವಾಗುತ್ತದೆ.

೭.ವೀರ್ಯದ ಪರಿಮಾಣ

ಮಧುಮೇಹದಿಂದ ಬಳಲುತ್ತಿರುವ ಗಂಡು ಕಡಿಮೆ ಪ್ರಮಾಣದ ವೀರ್ಯವನ್ನು ಮಾತ್ರ ಉತ್ಪತ್ತಿ ಮಾಡುತ್ತಾನೆ. ಮತ್ತು ಮಧುಮೇಹ ಇರುವ ಗಂಡಿನ ವೀರ್ಯವು ಸಾಮಾನ್ಯ ಗಂಡಿನ ವೀರ್ಯಕ್ಕಿಂತ ಹೆಚ್ಚು ವಿಭಿನ್ನವಾಗಿರುತ್ತದೆ. ಗಂಡಿನಲ್ಲಿ ಮಧುಮೇಹವಿದ್ದರೆ ಅದು ಸಹ ಗರ್ಭಧರಿಸಲು ಸಮಸ್ಯೆಯಾಗಬಹುದು.

೮.ಮಕ್ಕಳಲ್ಲೂ ಮಧುಮೇಹ ಬರಬಹುದೇ?

ಬರುವ ಸಾಧ್ಯತೆ ಹೆಚ್ಚಿದ್ದರೂ, ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಅದರ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ನಿಮ್ಮಲ್ಲಿ ಅಥವಾ ನಿಮ್ಮ ತಂದೆ-ತಾಯಿಯಲ್ಲಿ ಮಧುಮೇಹ ಇದ್ದರೆ ಖಂಡಿತವಾಗಿ ವೈದ್ಯರನ್ನು ಭೇಟಿ ಮಾಡಿ. ಸರಿಯಾದ ಆಹಾರ ಕ್ರಮ, ವ್ಯಾಯಾಮ ಮತ್ತು ಗ್ಲುಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾ ಸಹಾಯವಾಗುತ್ತದೆ.

Leave a Reply

%d bloggers like this: