garbhavastheyalli-hechhu-sakkare-sevane-maguvinalli-asthama-rogakke-dariyagabahudu

ಗರ್ಭಾವಸ್ಥೆಯಲ್ಲಿ ಯಾವ ಮಹಿಳೆ ವಿಪರೀತ ಸಕ್ಕರೆಯನ್ನು ತನ್ನ ಆಹಾರ ಕ್ರಮದಲ್ಲಿ ಸೇರಿಸಿಕೊಂಡು ಸೇವನೆ ಮಾಡುತ್ತಾರೋ ಅವರ ಮಗುವಿನಲ್ಲಿ ಅಲರ್ಜಿ ಮತ್ತು ಅಸ್ತಮಾ ಬರುವ ಅವಕಾಶಗಳು ತುಂಬಾ ಹೆಚ್ಚಿರುತ್ತವೆ, ಎಂದು ಇತ್ತೀಚಿನ ಕೆಲವು ಅಧ್ಯಯನಗಳು ತಿಳಿಸಿವೆ.

ಗರ್ಭಾವಸ್ಥೆಯಲ್ಲಿ ಅತಿಯಾಗಿ ಸಕ್ಕರೆಯನ್ನು ಆಹಾರದ ಮೂಲಕ ಅಥವಾ ಪಾನೀಯ ಮೂಲಕ ಅಥವಾ ಸಕ್ಕರೆ ಸಿಹಿ ಹೊಂದಿರುವ ಹಣ್ಣಿನ ರಸವನ್ನು ಸೇವಿಸುವುದರಿಂದ, ಶೇಕಡಾ ೩೮ರಷ್ಟು ಮಕ್ಕಳಲ್ಲಿ ಅಲರ್ಜಿಯ ಅಪಾಯ ಮತ್ತು ಶೇಕಡಾ ೯೦ರಷ್ಟು ಮಕ್ಕಳಲ್ಲಿ ಅಲರ್ಜಿ ಅಸ್ತಮಾದ ಅಪಾಯವನ್ನು ಎದುರಿಸಬೇಕಾದೀತು. ಇದು ಏಕೆಂದರೆ ಹೆಚ್ಚಿನ ಫ್ರಕ್ಟೊಸ್ ಅನ್ನು ತಾಯಿಯು ಸೇವಿಸುವುದರಿಂದ, ನಿರಂತರವಾಗಿ ಜನನೋತ್ತರ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಅಲರ್ಜಿಯಾಗುವಂತೆ ಮಾಡುತ್ತದೆ, ಇದು ಬೆಳೆಯುತ್ತಿರುವ ಶ್ವಾಸಕೋಶದಲ್ಲಿ ಉರಿಯನ್ನು ಉಂಟುಮಾಡುತ್ತದೆ ಎಂದು ಅಧ್ಯಯನವು ತಿಳಿಸಿದೆ.

ಮುಖ್ಯವಾಗಿ, ಅತಿಯಾಗಿ ಸಕ್ಕರೆಯನ್ನು ಸೇವಿಸುವುದರಿಂದ ಉದರದಲ್ಲಿರುವ ಮಗುವಿಗೆ ಅಲರ್ಜಿ ಮತ್ತು ಅಸ್ತಮಾದಂತಹ ತೊಂದರೆಗಳಿಗೆ ನೀವೇ ದಾರಿ ಮಾಡಿಕೊಟ್ಟಂತೆ.

ಸುಮಾರು ೯೦೦೦ ತಾಯಿ ಮಕ್ಕಳು ಅಧ್ಯಯನದಲ್ಲಿ ಒಳಗಾಗಿದ್ದಾರೆ, ಅವರಲ್ಲಿ ಉಬ್ಬಸ, ಅತಿ ಜ್ವರ, ಅಸ್ತಮಾ, ಶ್ವಾಸಕೋಶ ತೊಂದರೆ, ಅಟೊಪಿ ಕಾಯಿಲೆಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ, ಮತ್ತು ಇದರಲ್ಲಿ ಅಟೊಪಿ ಅಸ್ತಮಾ ಧನಾತ್ಮಕ ಫಲಿತಾಂಶವನ್ನು ನೀಡಿದೆ. ಇದಕ್ಕೆ ಜಿನುಗಳು ಕಾರಣವಾಗಬಹುದು. ಆಹಾರದಲ್ಲಿ ಬದಲಾವಣೆಗಳು, ಮತ್ತು ನಿರ್ದಿಷ್ಟವಾಗಿ ಸಕ್ಕರೆಯ ಮೇಲೆ ಅವಲಂಬನೆಯು ಇದಕ್ಕೆ ಪ್ರಮುಖ ಕಾರಣವೆಂದು ಶಂಕಿಸಲಾಗಿದೆ, ಆದಾಗ್ಯೂ, ಎಸ್ಜಿಮಾ ಅಥವಾ ಅತಿ ಜ್ವರಕ್ಕೆ ಯಾವುದೇ ಸಂಬಂಧವಿಲ್ಲ.

ಗರ್ಭಿಣಿಯರು ಈ ಸಮಯದಲ್ಲಿ, ಪ್ರಸಕ್ತ ಮಾರ್ಗಸೂಚಿಗಳನ್ನು ಅನುಸರಿಸಿ ಮತ್ತು ಅತಿಯಾದ ಸಕ್ಕರೆಯ ಸೇವನೆಯನ್ನು ಮಾಡಬಾರದೆಂದು ನಾವು ಶಿಫಾರಸು ಮಾಡುತ್ತೇವೆ. ಅತಿ ಹೆಚ್ಚು ಸಕ್ಕರೆ ಸೇವಿಸದೆ ಆರೋಗ್ಯಕರ ಮತ್ತು ನೈಸರ್ಗಿಕ ಆಹಾರ ಪದಾರ್ಥಗಳನ್ನು(ತರಕಾರಿ, ಸೊಪ್ಪು, ಹಣ್ಣುಗಳು) ಸೇವಿಸುವುದು ಮತ್ತು ಕುರುಕಲು ಮತ್ತು ರಸ್ತೆ ಬದಿಯ ತಿಂಡಿಗಳನ್ನು ಸೇವಿಸದೆ ಇರುವುದು ಒಳ್ಳೆಯದು.

ಈ ಅಧ್ಯಯನವನ್ನು ಯುರೋಪಿಯನ್ ರೆಸ್ಪಿರೇಟರಿ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.

Leave a Reply

%d bloggers like this: