ee-appanashtu-bega-yaava-taayiyu-magala-juttanna-kattalaguvudilla

ಮಕ್ಕಳನ್ನ ರೆಡಿ ಮಾಡಲು ಯಾರು ಅಪ್ಪನನ್ನ ನಂಬುವುದಿಲ್ಲ. ಅಮ್ಮನಿಗೆ ಹುಷಾರಿಲ್ಲದಂತೆ ಆದಾಗ, ಅಮ್ಮ ಊರಿನಲ್ಲಿ ಇಲ್ಲದಿದ್ದಾಗ ಅನಿವಾರ್ಯವಾಗಿ ಅಪ್ಪನ ಹೆಗಲ ಮೇಲೆ ಈ ಜವಾಬ್ದಾರಿ ಬೀಳುತ್ತದೆ. ಅಪ್ಪಂದಿರು ಆ ಕೆಲಸವನ್ನು ತಮ್ಮ ಕೈಲಾಗುವಷ್ಟು ಚೆನ್ನಾಗಿ ಮಾಡಲು ಕಷ್ಟ ಪಡುತ್ತಾರೆ. ಆದರೆ, ನಿಜ ಒಪ್ಪಿಕೊಳ್ಳೋಣ ಅವರು ಏನೇ ಮಾಡಿದರು ಅಮ್ಮ ಸಿದ್ದ ಮಾಡಿಸಿದಂತೆ ಆಗುವುದಿಲ್ಲ.

ಆದರೆ ತಮ್ಮಿಂದ ಉಪಕಾರ ಆಗಲು ಅಪ್ಪಂದಿರು ಮಾಡುವ ಈ ಮುದ್ದು ಮುದ್ದು ಪ್ರಯತ್ನಗಳ ನಡುವೆ ಏನೋ ಮಾಡಲು ಹೋಗಿ ಮತ್ತೇನೋ ಮಾಡಿ, ಅವರು ಒಮ್ಮೊಮ್ಮೆ  ಅದ್ಭುತಗಳನ್ನ ಹುಟ್ಟು ಹಾಕಿಬಿಡುತ್ತಾರೆ!

ಒಬ್ಬ ಜ್ಞಾನಿ ಒಮ್ಮೆ ಹೇಳಿದನಂತೆ “ಕಷ್ಟದ ಕೆಲಸಗಳನ್ನ ಸೋಂಬೇರಿ ವ್ಯಕ್ತಿಗೆ ವಹಿಸು, ಏಕೆಂದರೆ ಅದನ್ನು ಮಾಡಲು ಅವನು ಅತ್ಯಂತ ಸುಲಭ ದಾರಿಯನ್ನ ಹುಡುಕುತ್ತಾನೆ” ಎಂದು. ಅದಕ್ಕೆ ಸರಿಯಾದ ಪುರಾವೆಯಂತೆ ಇಲ್ಲಿ ಒಬ್ಬ ತಂದೆ ಇದ್ದಾನೆ.

ಇದು ಯುಟ್ಯೂಬ್ ಅಲ್ಲಿ ಅಪ್ಲೋಡ್ ಆಗಿರುವ ವೀಡಿಯೊ ಆಗಿದ್ದು, ಇದರಲ್ಲಿ ನೀವು ಒಂದು ತಂದೆ ತನ್ನ ಮಗಳ ಕೂದಲನ್ನು ಕಟ್ಟುತ್ತಿರುವುದನ್ನು ನೀವು ಕಾಣಬಹುದು.

ಅದನ್ನ ಆಟ ಹೇಗೆ ಮಾಡುತ್ತಾನೆ? ವ್ಯಾಕ್ಯುಂ ಕ್ಲೀನರ್ ಹಿಡಿದು! ಹೌದ್ರಿ, ವ್ಯಾಕ್ಯುಂ ಕ್ಲೀನರ್ ಹಿಡಿದು!

ನಮಗೆ ಗೊತ್ತು ನೀವು ಇಷ್ಟೊತ್ತಿಗೆ ಆಗಲೇ ಈ ಉಪಾಯ ನನಗೆ ಏಕೆ ಬರಲಿಲ್ಲ ಎಂದು ಯೋಚಿಸುತ್ತಿರುತ್ತೀರಾ ಎಂದು. ನಿಜ ತಾನೇ?!

ಈ ಉಪಾಯನ ನೀವು ಉಪಯೋಗಿಸುತ್ತೀರೋ ಇಲ್ಲವೋ ಗೊತ್ತಿಲ್ಲ, ಆದರೆ ಈ ತಂದೆ ನೀಡಿದ ಉಪಾಯಕ್ಕೆ ಜಗತ್ತಿನ ಎಲ್ಲಾ ಅಪ್ಪಂದಿರು ಋಣಿಗಳಾಗಿರುತ್ತಾರೆ!

Leave a Reply

%d bloggers like this: