garbhadhaaraneya-9-soochanegalu

ನೀವು ಗರ್ಭವತಿ ಆಗಿದ್ದೀರಿ ಎಂಬ ಅನುಮಾನವೇ ನಿಮಗೆ? ನೀವು ನಿಮ್ಮ ಋತುಚಕ್ರದ ಲೆಕ್ಕ ಸರಿಯಾಗಿ ಇಟ್ಟಿಲ್ಲ ಎಂದರೆ ನಿಮ್ಮ ಮುಂದಿನ ಋತುಸ್ರಾವ ಯಾವಾಗೆಂದು ತಿಳಿದಿರುವುದಿಲ್ಲ. ಅಕಸ್ಮಾತ್ ನಿಮ್ಮ ಋತುಸ್ರಾವ ಶುರು ಆಗಬೇಕಿದ್ದ ದಿನ ಕಳೆದು ಬಹಳ ದಿನಗಳಾಗಿದ್ದರೂ ಋತುಸ್ರಾವ ಆಗಿಲ್ಲವೆಂದರೆ, ನೀವು ಗರ್ಭಿಣಿ ಆಗಿರುವ ಸಾಧ್ಯತೆಗಳು ಹೆಚ್ಚಿವೆ. ಹೆಣ್ಣು ಮಕ್ಕಳು ಗರ್ಭ ಧರಿಸಿ 6-8 ವಾರಗಳ ನಂತರ ಗರ್ಭಧಾರಣೆಯ ಲಕ್ಷಣಗಳು ಗೋಚರಿಸುತ್ತವೆ. ಗರ್ಭಧಾರಣೆಯ ಒಂಬತ್ತು ಲಕ್ಷಣಗಳು ಇಲ್ಲಿವೆ :

೧. ಚಿತ್ತ ಏರುಪೇರು

ಗರ್ಭಧಾರಣೆಯ ಶುರುವಿನಲ್ಲಿ ಆಗುವ ಹಾರ್ಮೋನ್ ಬದಲಾವಣೆಯ ನೀವು ಭಾವೋದ್ವೇಗಕ್ಕೆ ಒಳಗಾಗುವಂತೆ ಮಾಡುತ್ತದೆ. ಈ ಭಾವನೆಗಳು ಒಳ್ಳೆಯದ್ದು ಇರಬಹುದು ಅಥವಾ ಕೆಟ್ಟದ್ದು ಇರಬಹುದು. ಇವುಗಳನ್ನು ಹೇಗೋ ಸಂಭಾಲಿಸಿಕೊಂಡು ಮುಂದೆ ಹೋಗಿ. ನಿಮಗೆ ಇದಕ್ಕೆ ಒಗ್ಗಿಕೊಳ್ಳಲು ತುಂಬಾ ಕಷ್ಟವೆನಿಸಿದರೆ ನಿಮ್ಮ ವೈದ್ಯರನ್ನ ಭೇಟಿ ಮಾಡಿ.

೨. ಆಹಾರ ಬಯಕೆ ಹಾಗು ವಾಕರಿಕೆ

ಗರ್ಭಧಾರಣೆ ವೇಳೆ ನಿಮ್ಮ ದೇಹದಲ್ಲಿ ಮದಜನಕ(estrogen) ಉತ್ಪನ್ನವು ಹೆಚ್ಚಾಗುತ್ತದೆ. ಇದು ನಿಮಗೆ ಕೆಲವು ತಿನಿಸುಗಳ ಮೇಲೆ ಬಯಕೆ ಉಂಟು ಮಾಡಿದರೆ, ಇನ್ನು ಕೆಲವು ತಿನಿಸುಗಳು ಕಂಡರೆ ವಾಕರಿಕೆ ಬರುವಂತೆ ಮಾಡುತ್ತದೆ. ನೀವು ಮುಂಚೆ ಇಷ್ಟಪಟ್ಟು ತಿನ್ನುತ್ತಿದ್ದ ತಿನಿಸುಗಳು ಈಗ ನಿಮಗೆ ವಾಕರಿಕೆ ತರಿಸಬಹುದು. ನೀವು ಮುಂಚೆ ಇಷ್ಟಪಡದ ತಿನಿಸುಗಳ ಮೇಲೆ ನಿಮಗೆ ಈಗ ಬಯಕೆ ಉಂಟಾಗಬಹುದು.

೩. ಪದೇ ಪದೇ ಮೂತ್ರ ವಿಸರ್ಜನೆ

ನಿಮ್ಮ ದೇಹದಲ್ಲಿ ಆಗುವ ಹಾರ್ಮೋನ್ ಬದಲಾವಣೆ ನಿಮ್ಮ ಮೂತ್ರಪಿಂಡ ಅಂದರೆ ಕಿಡ್ನಿಯ ಕಾರ್ಯದ ಮೇಲು ಪರಿಣಾಮ ಬೀರುತ್ತದೆ. ಗರ್ಭಧಾರಣೆಯು ನಿಮ್ಮ ಮೂತ್ರಪಿಂಡಕ್ಕೆ ರಕ್ತದ ಹರಿವನ್ನು ಹೆಚ್ಚು ಮಾಡುತ್ತದೆ. ಇದು ನಿಮ್ಮ ಮೂತ್ರಕೋಶ(ಬ್ಲಾಡೆರ್)ವನ್ನ ಬೇಗನೆ ತುಂಬುವಂತೆ ಮಾಡಿ ನೀವು ಪದೇ ಪದೇ ಮೂತ್ರವಿಸರ್ಜನೆ ಮಾಡುವಂತೆ ಮಾಡುತ್ತದೆ. ಮಗುವು 5-6 ತಿಂಗಳು ಇರುವಾಗ ನಿಮ್ಮ ಮೂತ್ರಕೋಶದ ಮೇಲೆ ಬಹಳ ಒತ್ತಡ ಹೇರುತ್ತದೆ.

೪. ಹೊಟ್ಟೆ ಉಬ್ಬುವುದು

ಏರಿದ ಮದಜನಕ ಗತಿಯ ಕಾರಣ ಗರ್ಭಧಾರಣೆ ವೇಳೆ ನಿಮ್ಮ ಹೊಟ್ಟೆಯು ಉಬ್ಬಿದಂತೆ ಭಾಸವಾಗಬಹುದು, ಅದರಲ್ಲೂ ಊಟ ಮಾಡಿದ ತಕ್ಷಣ. ಇದು ಋತುಸ್ರಾವದ ವೇಳೆ ಹೊಟ್ಟೆ ಊದಿದ ಹಾಗೆ ಆಗುವ ರೀತಿಯಲ್ಲೇ ಅನಿಸುತ್ತದೆ. ಇದರಲ್ಲಿ ಚಿಂತೆ ಮಾಡುವಂತದ್ದು ಏನಿಲ್ಲ. ಕಾಲಕ್ರಮೇಣ ಇದು ಕಮ್ಮಿ ಆಗುತ್ತದೆ.

೫. ಆಯಾಸ

ನಿಮಗೆ ದಿನವೆಲ್ಲಾ ಆಯಾಸವೆನಿಸಿದರೆ ನೀವು ಗರ್ಭಿಣಿ ಆಗಿರುವ ಸಾಧ್ಯತೆ ಇದೆ. ಪ್ರೊಜೆಸ್ಟರಾನ್ ಹಾರ್ಮೋನ್ ಉತ್ಪತ್ತಿಯಲ್ಲಿ ಆಗುವ ಏರಿಕೆಯೇ ಇದಕ್ಕೆ ಕಾರಣವಿರಬಹುದು. ಮೂತ್ರವಿಸರ್ಜನೆಗೆಂದು ಮಧ್ಯರಾತ್ರಿ ಎಚ್ಚರಗೊಳ್ಳುವುದು, ವಾಕರಿಕೆ ಬರುವಂತೆ ಆಗುವುದು ಗರ್ಭಧಾರಣೆಯ ಮುಖ್ಯ ಲಕ್ಷಣಗಳಲ್ಲಿ ಒಂದು.

೬. ಬೆಳಗಿನ ಬೇನೆ ಹಾಗು ವಾಕರಿಕೆ

ಗರ್ಭಧಾರಣೆಯ ಒಂದು ಮುಖ್ಯ ಲಕ್ಷಣ ಎಂದರೆ ಅದು ಬೆಳಗಿನ ಬೇನೆ ಅಥವ ಮಾರ್ನಿಂಗ್ ಸಿಕ್ಕ್ನೆಸ್ಸ್ (morning sickness).  ಇದು ಸಹಜವಾಗಿ ಬೆಳಗ್ಗೆ ಸಮಯದಲ್ಲಿ ಕಾಡಿದರೆ, ವಾಕರಿಕೆಯು ನಿಮಗೆ ದಿನದ ಯಾವ ಸಮಯದಲ್ಲಾದರೂ ಕಾಡಬಹುದು. ವಾಕರಿಕೆಯು ನಿಮ್ಮ ಮೊದಲ ತ್ರೈಮಾಸಿಕ ನಂತರ ಕ್ಷೀಣಿಸುವುದನ್ನು ನೀವು ಕಾಣಬಹುದು. ಬೆಳಗಿನ ಬೇನೆಯು ಎಲ್ಲರಲ್ಲೂ ಕಾಣಿಸಿಕೊಳ್ಳಲೇ ಬೇಕೆಂದೇನಿಲ್ಲ. ಕೆಲವು ಅದೃಷ್ಟವಂತ ಭಾವೀ ತಾಯಂದಿರು ಇದನ್ನು ಅನುಭವಿಸುವುದೇ ಇಲ್ಲ.

೭. ಸೂಕ್ಷ ಹಾಗು ನೋವಾದ ಸ್ತನಗಳು

ಗರ್ಭಧಾರಣೆಯ ಸಾಮಾನ್ಯ ಲಕ್ಷಣಗಳಲ್ಲಿ ಇದು ಕೂಡ ಒಂದು. ಅಲ್ಲದೆ ನಿಮ್ಮ ಋತುಸ್ರಾವದ ವೇಳೆ ನಿಮ್ಮ ಸ್ತನಗಳು ಎಷ್ಟು ಸೂಕ್ಷ್ಮವಾಗಿರುತ್ತವೆಯೋ ಅಷ್ಟೇ ಸೂಕ್ಷ್ಮ ಆಗಿರುತ್ತವೆ. ಇದು ನಿಮ್ಮ ಹಾರ್ಮೋನ್ ಗತಿಯಲ್ಲಿನ ಏರಿಕೆ ಇಂದ ಆಗುವಂತದ್ದು. ಇದು ನಿಮ್ಮ ಮೊದಲ ತ್ರೈಮಾಸಿಕ ಮುಗಿಯುವ ವೇಳೆಯಷ್ಟರಲ್ಲಿ ಕ್ಷೀಣಿಸುತ್ತದೆ.

೮. ಹೆಚ್ಚಿದ ದೇಹದ ತಾಪಮಾನ

ತಾಯಿ ಆಗಬೇಕಂದಿರುವ ಹೆಣ್ಣು ಮಕ್ಕಳು ತಮ್ಮ ದೇಹದ ತಾಪಮಾನದ ಲೆಕ್ಕ ಇಟ್ಟಿರುತ್ತಾರೆ. ನಿಮ್ಮ ದೇಹದ ತಾಪಮಾನ ಏರಿಕೆಯಾಗಿದ್ದು, ನಿಮ್ಮ ವಿಸರ್ಜನ ಕಾರ್ಯದಲ್ಲಿ ಉರಿ ಉಂಟಾಗುತ್ತಿದ್ದರೆ ನೀವು ಗರ್ಭಿಣಿ ಆಗಿರಬಹುದು.

೯. ನಿಮ್ಮ ಋತುಸ್ರಾವ ತಪ್ಪಿದೆ

ಎಲ್ಲಾ ಲಕ್ಷಣಗಳಲ್ಲಿ ನೀವು ಗಮನಿಸಲೇ ಬೇಕಾದ ಒಂದು ಲಕ್ಷಣ ಅಂದರೆ ಮುಟ್ಟಾಗದೆ ಇರುವುದು. ನಿಮ್ಮ ಋತುಸ್ರಾವವು ಸರಿಯಾದ ಸಮಯಕ್ಕೆ ಆಗದೆ ಇದ್ದರೆ, ನೀವು ನಿಮ್ಮ ಋತುಸ್ರಾವದ ಸಮಯ ತಪ್ಪಿದೆ ಎಂದು ಗೊತ್ತಾಗುವಷ್ಟರಲ್ಲಿ ನೀವು ನಿಮ್ಮ ಸ್ತನಗಳು ಹೆಚ್ಚು ಸೂಕ್ಷ್ಮವಾಗಿರುವುದು ಅಥವಾ ಹೆಚ್ಚಿದ ಮೂತ್ರವಿಸರ್ಜನೆಯನ್ನು ಅನುಭವಿಸುತ್ತಾರೆ.

Leave a Reply

%d bloggers like this: