garbhini-mahileyaralli-kudalu-uduruva-samasyege-5-sarala-parihaaragalu

ಗರ್ಭಾವಸ್ಥೆಯಲ್ಲಿ ಮಹಿಳೆಯರು ದೈಹಿಕ ಹಾಗೂ ಮಾನಸಿಕವಾಗಿ ಹಲವಾರು ರೀತಿಯ ಬದಲಾವಣೆಗಳಿಗೆ ಒಳಗಾಗುವ ಕಾರಣದಿಂದ ಕೆಲವೊಂದು ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಇಂತಹ ಸಮಸ್ಯೆಗಳಲ್ಲಿ ಕೂದಲು ಉದುರುವುದು ಸಾಮಾನ್ಯವಾಗಿ ಎಲ್ಲಾ ಮಹಿಳೆಯರಲ್ಲೂ ಕಾಣಸಿಗುತ್ತದೆ. ದೇಹದಲ್ಲಿ ಆಗುವ ಹಾರ್ಮೋನು ಬದಲಾವಣೆಯಿಂದ ಕೂದಲು ಉದುರುವುದು ಹೆಚ್ಚಾಗಬಹುದು. ಕೂದಲು ಉದುರುವ ಸಮಸ್ಯೆಗೆ ಹಲವಾರು ರೀತಿಯ ಶಾಂಪೂ ಹಾಗೂ ಸಾಬೂನುಗಳನ್ನು ಬಳಸುತ್ತೀರಿ. ಆದರೆ ಇಂತಹ ರಾಸಾಯನಿಕಯುಕ್ತ ವಸ್ತುಗಳಿಂದ ತಾಯಿ ಹಾಗೂ ಗರ್ಭದಲ್ಲಿರುವ ಮಗುವಿಗೆ ತೊಂದರೆಯಾಗಬಹುದು.

ಕೆಲವರಿಗೆ ಗರ್ಭಾವಸ್ಥೆಯಲ್ಲೂ ಕೂದಲು ಉದುರುವ ಸಮಸ್ಯೆ ಕಾಡಬಹುದು, ಆದರೆ ಅನೇಕ ಮಹಿಳೆಯರಿಗೆ ಹೆರಿಗೆಯ ನಂತರ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಆದರೆ ಇದು ಶಾಶ್ವತ ಅಲ್ಲ, ಕೆಲ ದಿನಗಳು ಕಳೆದಂತೆ ಮೊದಲಿನಂತೆ ಸರಿ ಆಗುತ್ತದೆ, ಆದರೆ ಸರಿಯಾದ ಪೋಷಣೆ ಮಾಡದಿದ್ದಲ್ಲಿ ಕೂದಲನ್ನು ಕಳೆದುಕೊಳ್ಳುವ ಸಂದರ್ಭ ಬರಬಹುದು. ಪ್ರತಿಯೊಬ್ಬರಿಗೂ ಇದು ಸಮಾನವಾಗಿರುವುದಿಲ್ಲ, ಒಬ್ಬರಿಂದ ಮತ್ತೊಬ್ಬರಿಗೆ ಈ ಸಮಸ್ಯೆಯು ಭಿನ್ನವಾಗಿರುತ್ತದೆ. ಗರ್ಭಧಾರಣೆ ವೇಳೆ ಸರಿಯಾದ ಪೋಷಕಾಂಶಗಳು ಕೂದಲಿಗೆ ಸಿಗದ ಹಿನ್ನೆಲೆಯಲ್ಲಿ ಕೂದಲು ಉದುರಬಹುದು.

ಕಬ್ಬಿಣಾಂಶದ ಮಾತ್ರೆಗಳನ್ನು ಅತಿಯಾಗಿ ಸೇವಿಸುವ ಕಾರಣದಿಂದಲೂ ಕೂದಲು ಉದುರಬಹುದು. ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿಯೊಂದಲು ಕೆಲವು ಸಲಹೆಗಳು.

೧.ಕೇಶ ವಿನ್ಯಾಸ(ಶೈಲಿ) ಬೇಡ

ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ಸಮಯದಲ್ಲಿ ಕೂದಲಿಗೆ ಅತಿಯಾಗಿ ವಿನ್ಯಾಸ ಮಾಡುವುದನ್ನು ಕೆಲ ದಿನಗಳ ವರೆಗೆ ನಿಲ್ಲಿಸಿ. ಬ್ಲೋ ಡ್ರೈಯಿಂಗ್, ಸ್ಟ್ರೇಟ್ನಿಂಗ್ ಮತ್ತು ಕೂದಲಿಗೆ ಬಣ್ಣತರಿಸುವಂತಹ ಇತರ ಉತ್ಪನ್ನಗಳನ್ನು ಬಳಸಿಕೊಳ್ಳುವುದು ಕೂದಲಿನ ಬೇರಿನಲ್ಲಿರುವ ಕೋಶಗಳಿಗೆ ಹಾನಿಯನ್ನು ಮಾಡುತ್ತವೆ. ಈ ಸಮಯದಲ್ಲಿ ಹೇರ್ ಸೇರಮ್ ಮತ್ತು ಇತರ ಕೆಲವೊಂದು ಕಾಂತಿವರ್ಧಕ(/ಕಾಸ್ಮೆಟಿಕ್) ಬಳಸುವುದು ಕೂಡ ಕೂದಲು(/ತಲೆ) ಒಟ್ಟು ಅಥವಾ ಕೂದಲಿಗೆ ಹಾನಿ ಮಾಡಬಹುದು.

೨.ಎಣ್ಣೆಯ ಉಪಯೋಗ ಪಡೆಯಿರಿ

ಗರ್ಭಾವಸ್ಥೆಯಲ್ಲಿ ಕೂದಲಿಗೆ ಸರಿಯಾಗಿ ಎಣ್ಣೆ ನೀಡುವುದು ಅತೀ ಮುಖ್ಯವಾಗಿದೆ(ಈ ಸಂದರ್ಭದಲ್ಲಿ ಕೂದಲಿಗೆ ಅದರ ಅಗತ್ಯ ಹೆಚ್ಚಿರುತ್ತದೆ), ಗರ್ಭಾವಸ್ಥೆಯಲ್ಲಿ ಮಾತ್ರವಲ್ಲ ಯಾವುದೇ ಸಮಯದಲ್ಲಿ ಕೂದಲಿಗೆ ಎಣ್ಣೆ ಹಾಕುವುದು, ಕೂದಲು ಮೃದುವಾಗಿ, ಹೊಳಪನ್ನು ಪಡೆಯಲು ಸಹಾಯ ಮಾಡುತ್ತದೆ. ದೇಹದಂತೆ ಕೂದಲಿಗೆ ಕೂಡ ಸರಿಯಾದ ಆರೈಕೆ ಮತ್ತು ಪೋಷಕಾಂಶ ಬೇಕು. ವಾರದಲ್ಲಿ ಎರಡು ಸಲ ಕೂದಲಿಗೆ ಎಣ್ಣೆ ಹಚ್ಚಿರಿ, ಇದು ಕೂದಲಿಗೆ ಬೇಕಾಗಿರುವ ಪೋಷಣೆಯನ್ನು ನೀಡುತ್ತದೆ. ರಾಸಾಯನಿಕ ಎಣ್ಣೆ ಬಳಸುವ ಬದಲು, ನೈಸರ್ಗಿಕವಾದ ಎಣ್ಣೆ ಬಳಸುವುದು ಒಳ್ಳೆಯದು.

೩.ರಾಸಾಯನಿಕಯುಕ್ತ ಕಾಂತಿವರ್ಧಕ(/ಕಾಸ್ಮೆಟಿಕ್)ಗಳಿಂದ ದೂರವಿರಿ

ಮಹಿಳೆಯರು, ಸುಂದರವಾಗಿ ಕಾಣಲು ಹೆಚ್ಚಾಗಿ ಕಾಂತಿವರ್ಧಕಗಳನ್ನು ಬಳಸುವುದು ಸಾಮಾನ್ಯ. ಆದರೆ ಗರ್ಭಧಾರಣೆ ಸಮಯದಲ್ಲಿ ಇಂತಹ ಕಾಂತಿವರ್ಧಕಗಳನ್ನು ಬಳಸುವುದು ತುಂಬಾ ಅಪಾಯ. ಇದರಲ್ಲಿ ಇರುವಂತಹ ರಾಸಾಯನಿಕಗಳು ಗರ್ಭಧಾರಣೆ ಸಮಯದಲ್ಲಿ ಮಹಿಳೆಯರಿಗೆ ಹಾನಿ ಉಂಟು ಮಾಡಬಹುದು. ಕೆಲವು ಉತ್ಪನ್ನಗಳು ನಿಮ್ಮ ಆರೋಗ್ಯದ ಮೇಲು ಅಥವಾ ಚರ್ಮ ರೋಗಕ್ಕೂ ದಾರಿ ಮಾಡಿ ಕೊಡಬಹುದು. ಆದಷ್ಟು ನೈಸರ್ಗಿಕ ವಸ್ತುಗಳನ್ನು ಪ್ರಯತ್ನಿಸಿ ಸುಂದರವಾಗಿ ಕಾಣಿರಿ.

೪.ಆರೋಗ್ಯಕರ ಆಹಾರ ಸೇವನೆ

ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ತಮಗಿಷ್ಟವಾದ ಕೆಲವು ಆಹಾರಗಳನ್ನು ಸೇವಿಸಬೇಕೆಂಬ ಬಯಕೆ ಇರುವುದು ಸಾಮಾನ್ಯ ಮತ್ತು ಅದು ತಪ್ಪಲ್ಲ. ಆರೋಗ್ಯಕರ ಆಹಾರ ಸೇವನೆಯಿಂದ ನಿಮ್ಮ ದೇಹದ ಅರೋಗ್ಯ ಕಾಪಾಡುವುದರ ಜೊತೆಗೆ ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿ ಸುಂದರವಾಗಿ ಕಾಣುವಂತೆ ಮಾಡಿಕೊಳ್ಳಬಹುದು. ಕುರಕಲು ತಿಂಡಿಗಳು ಅಥವಾ ರಸ್ತೆ ಬದಿಯ ತಿಂಡಿಗಳನ್ನು ಸೇವಿಸುವುದರ ಬದಲು, ಮನೆಯಲ್ಲಿ ಮಾಡಿದ, ಪೋಷಕಾಂಶಗಳು ಹೆಚ್ಚು ಇರುವಂತಹ ಆಹಾರವನ್ನು ಸೇವಿಸುವುದು ಒಳ್ಳೆಯದು. ಇದು ತಾಯಿ ಹಾಗೂ ಮಗುವಿನ ಬೆಳವಣಿಗೆಗೆ ಒಳ್ಳೆಯದು. ಸೇವಿಸುವಂತಹ ಆಹಾರದಲ್ಲಿ ಪ್ರಮುಖ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇದ್ದರೆ ಅದರಿಂದ ತಾಯಿಯ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುವುದು ಮಾತ್ರವಲ್ಲದೆ ಮಗುವಿನ ಬೆಳವಣಿಗೆಗೆ ನೆರವಾಗುವುದು.

೫.ಧ್ಯಾನ

ಗರ್ಭಾವಸ್ಥೆಯಲ್ಲಿ ಮಹಿಳೆಯರು ಮಾನಸಿಕ ಒತ್ತಡಕ್ಕೆ ಒಳಗಾಗುವುದು ಸಾಮಾನ್ಯ. ಕೂದಲು ಉದುರಲು ಮಾನಸಿಕ ಒತ್ತಡ, ಆಧುನಿಕ ಜೀವನ ಶೈಲಿ, ಮಾಲಿನ್ಯ ಮತ್ತು ಸರಿಯಾದ ಪೋಷಣೆ ಇಲ್ಲದಿರುವುದು ಪ್ರಮುಖ ಕಾರಣ. ಆದ್ದರಿಂದ, ಒತ್ತಡವನ್ನು ಕಡಿಮೆಮಾಡಿಕೊಳ್ಳಲ್ಲು ಧ್ಯಾನ ಮಾಡುವುದು ಒಳ್ಳೆಯದು, ಮತ್ತು ಇದರಿಂದ ಮನಸ್ಸು ಹಾಗು ದೇಹ ನಮ್ಮ ನಿಯಂತ್ರಣದಲ್ಲಿರುತ್ತದೆ. ಒತ್ತಡಮುಕ್ತ ಜೀವನ ಸಾಗಿಸುವಲ್ಲಿ ಧ್ಯಾನವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಭಾವನೆಗಳಲ್ಲಿ ಬದಲಾವಣೆಗಳು ಆಗುವುದು ಕೂಡ ಒತ್ತಡದ ಮಟ್ಟ ಹೆಚ್ಚಾಗಲು ಕಾರಣವಾಗಿದೆ. ಗರ್ಭಾವಸ್ಥೆಯಲ್ಲಿ ಶಾಂತಿ ಮತ್ತು ನೆಮ್ಮದಿಯಿಂದ ಇರುವುದು ನಿಮ್ಮ ಮತ್ತು ಮಗುವಿನ, ಇಬ್ಬರ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

Leave a Reply

%d bloggers like this: