ಮದುವೆಯಾಗಿ ಪ್ರಣಯಗೀತೆ ಹಾಡುತ್ತಾ ಸದಾಕಾಲ ಒಬ್ಬರನ್ನೊಬ್ಬರು ಬಿಟ್ಟಿರದೆ ಇರುತ್ತಿದ್ದ ನೀವು ಮಗುವಾದ ಮೇಲೆ ದೈಹಿಕವಾಗಿ ದೂರ ಉಳಿಯುವಂತೆ ಆಗಿರುತ್ತದೆ. ಒಬ್ಬರೊನ್ನೊಬ್ಬರು ಅಪ್ಪಿಕೊಂಡು ದಿನ ಬೆಳಗ್ಗೆ ಏಳುತ್ತಿದ್ದ ನೀವು, ಈಗ ನಿಮ್ಮ ಮುಖದ ಮೇಲಿನಿಂದ ನಿಮ್ಮ ಮಗು ರಾತ್ರಿ ಧರಿಸಿದ್ದ ಡಯಾಪರ್ ತೆಗೆಯುತ್ತಾ ಏಳಬೇಕು. ಮನೆಯಲ್ಲಿ ಒಂದು ಮಗುವಿದ್ದಾಗ ನೆಮ್ಮದಿಯಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಎಷ್ಟು ಕಷ್ಟವೆಂದು ಅನುಭವಿಸಿದವರಿಗೆ ಮಾತ್ರ ಗೊತ್ತು. ಅದಲ್ಲದೆ ತಮ್ಮ ಮಕ್ಕಳಿಂದ ಈ ಸಂಗತಿಯನ್ನು ಮುಚ್ಚಿಡುವುದು ಎಷ್ಟು ಕಷ್ಟ ಎಂದು ಅವರಿಗೆ ತಿಳಿದಿರುತ್ತದೆ. ಹೀಗೆ ಹೊಸದಾಗಿ ಮಗುವಾದ ಮೇಲೆ ದಂಪತಿಗಳು ಪುನಃ ಹೇಗೆ ಸೇರಿದರು ಎಂಬುದನ್ನು ೫ ದಂಪತಿಗಳು ಹಂಚಿಕೊಂಡಿದ್ದಾರೆ, ಓದಿ :
೧. “ಚಿಲಕ ಹಾಕಿ”
ಬಾಗಿಲು ಮುಚ್ಚಿದರು ನನ್ನ ಮಕ್ಕಳು ತಲೆ ಕೆಡಿಸಿಕೊಳ್ಳುವುದಿಲ್ಲ. ಅಕಸ್ಮಾತ್ ನಾನೇನಾದರೂ ಬಾತ್ರೂಮ್ ಗೆ ಚಿಲಕ ಹಾಕದೆ ಹೋದರೆ, ಅವರು ಅಲ್ಲಿಗೆ ಬೇಕಾದರೂ ಬಂದುಬಿಡುವರು. ನಮ್ಮ ಆ ಕಾರ್ಯಕ್ಕೆ ನಮ್ಮ ಮಕ್ಕಳು ಸಾಕ್ಷಿ ಆಗಬಾರದೆಂದು ನಾವು ನಮ್ಮ ಬಾಗಿಲುಗಳ ಚಿಲಕ ಹಾಕುವುದನ್ನು ಎಂದೂ ಮರೆಯುವುದಿಲ್ಲ. ಹೀದೆ ಒಂದು ದಿನ ನಾವು ಆ ಕಾರ್ಯದಲ್ಲಿ ತೊಡಗಿಕೊಂಡಾಗ ಬಾಗಿಲ ಬಳಿ ಏನೋ ಶಬ್ದ ಆದಂತೆ ಆಯ್ತು. ನನ್ನ ಗಮನ ಆ ಕಡೆ ತಿರುಗಿದಾಗ, ನಾನು ಬಾಗಿಲ ಚಿಲಕ ತೆರೆದಿದ್ದನ್ನು ಕಂಡೆ. ನನ್ನ ಮಕ್ಕಳ ಕಾಲಿನ ನೆರಳು ಬಾಗಿಲ ಕೆಳಗೆ ನೆಲದ ಮೇಲೆ ಕಾಣುತಿತ್ತು. ನಾನು ಥಟ್ಟನೆ ಎದ್ದು ಲೈಟ್ ಆಫ್ ಮಾಡಿದೆ ಹಾಗು ಅಲ್ಲಿಂದಲೇ ಜೋರಾಗಿ “ಅಲ್ಲೇ ಇರಿ ನಾನೇ ಬರ್ತಿದೀನಿ” ಎಂದು ಕೂಗಿದೆ. ಇನ್ನೇನು ಒಂದು ಕ್ಷಣ ನಾನು ಮೈಮರೆತಿದ್ದರು ನಮ್ಮಿಬ್ಬರಿಗೆ ಎಂತಾ ನಾಚಿಕೆ ಆಗುವಂತ ಸಂದರ್ಭ ಎದುರಾಗುತಿತ್ತು. ಅದಕ್ಕೆ ಎಲ್ಲರಿಗು ಹೇಳುತ್ತೇನೆ, ನೀವು ಸೇರುವ ಬಾಗಿಲ ಚಿಲಕ ಹಾಕಿದ್ದೀರ ಎಂದು ಖಚಿತಪಡಿಸಿಕೊಳ್ಳಿ!
೨. “ನಿನ್ನ ರೂಮಿಗೆ ನಡಿ”
ನಮ್ಮ ಮಗುವಿಗೆ ಅವನ ರೂಮಿನಲ್ಲೇ ಮಲಗುವುದನ್ನು ಹೇಳಿಕೊಟ್ಟಿದ್ದೇವು. ಆದರೆ ಒಂದು ದಿನ ಅವನಿಗೆ ಹುಷಾರು ತಪ್ಪಿದ್ದ ಕಾರಣ ಅವನ ಮೇಲೆ ಗಮನ ಇಡಲೆಂದೇ ನಮ್ಮ ರೂಮಿನಲ್ಲೇ ಮಲಗಿಸಿಕೊಂಡೆವು. ಆದರೆ ಇದನ್ನು ಅರಿತ ಅವನು ಅದನ್ನೇ ಪರ್ಮನೆಂಟ್ ಜಾಗ ಮಾಡಿಕೊಳ್ಳಲಿಕ್ಕೆ ಉಪಾಯ ಮಾಡಿಕೊಂಡ. ಮಾರನೆ ದಿನ ನಾವೆಲ್ಲಾ ರಾತ್ರಿ ಊಟಕ್ಕೆ ಕೂತಾಗ, “ಅಮ್ಮ ನನಗೆ ಹೊಟ್ಟೆ ನೋವು” ಅಂದ. ನಾನು ನಿಜ ಇರಬೇಕೆಂದು ಭಾವಿಸಿದೆ. ಆದರೆ ಅವನು ಯಾವಾಗ ನಾನು ಏನಾದರು ಹೇಳುವ ಮುನ್ನವೇ “ಇವತ್ತು ಅಪ್ಪನ ಜೊತೆ ಮಲ್ಕೊಳ್ತಿನಿ” ಅಂದೊಡನೆ ಅವನ ಆಟ ಗೊತ್ತಾಯ್ತು. ಆವಾಗಿನಿಂದ ನಾವು ಮತ್ತು ಅವನು ಒಂದು ಅಲಿಖಿತ ಡೀಲ್ ಮಾಡಿಕೊಂಡೆವು. ಅದೇನೆಂದರೆ ಅವನು ಮೊದಲು ನಮ್ಮ ರೂಮಿಗೆ ಬಂದು ಮಲಗಿಕೊಳ್ಳುವನು. ನಂತರ ಅವನು ನಿದ್ದೆಗೆ ಜಾರಿದೊಡನೆ ಅವನ ಅಪ್ಪ ಅವನನ್ನು ಎತ್ತಿಕೊಂಡು ಅವನ ರೂಮಿನಲ್ಲಿ ಮಲಗಿಸಿ ಬರುತ್ತಾರೆ. ಹೇಗೋ ಚೌಕಾಸಿ ಮಾಡಿ ಅವನನ್ನ ಸಮಾಧಾನಪಡಿಸಿ ನಾವು ನಮಗೆಂದು ಸಮಯ ಮಾಡಿಕೊಂಡೆವು. ಆದಷ್ಟು ಬೇಗ ಅವನು ತಾನಾಗಿಯೇ ಒಬ್ಬನೇ ಮಲಗುವುದು ಅಭ್ಯಾಸ ಮಾಡಿಕೊಳ್ಳಲಿ ಅಂಡು ಆಶಿಸುತ್ತೇನೆ.
೩. “ಅಜ್ಜಿ ಮನೆಗೆ ಹೋಗ್ತಿಯ?”
ಮಗುವಾದ ಮೇಲೆ ನಾನು ಹಾಗು ನನ್ನ ಪತಿ ದೈಹಿಕವಾಗಿ ದೂರ ದೂರಾನೇ ಉಳಿದಿದ್ದೆವು. ಬೆಳಗ್ಗೆ ಇಂದ ಮಗುವಿನ ಪೋಷಣೆಯಲ್ಲಿ ತೊಡಗಿಕೊಳ್ಳುತ್ತಿದ್ದ ನಾವು, ರಾತ್ರಿ ಕೂಡ ಎಲ್ಲಿ ಮಗು ಎಚ್ಚರಗೊಳ್ಳುತ್ತದೆ ಎಂಬ ಭಯಕೆ ಆ ಕಾರ್ಯದಲ್ಲಿ ತೊಡಗಿಕೊಂಡಿರಲಿಲ್ಲ. ಆ ಒಂದು ದಿನ ನಾವಿಬ್ಬರು ಸೇರಲೇ ಬೇಕು ಎಂದುಕೊಂಡು ಎಲ್ಲವನ್ನೂ ತಯಾರು ಮಾಡಿಕೊಂಡು ನಮ್ಮ ಮಗನನ್ನ ಅವನ ಅಜ್ಜಿ ಮನೆಯಲ್ಲಿ ಬಿಟ್ಟು ಬರಬೇಕೆಂದು ಅಂದುಕೊಂಡೆವು. ಸಂಜೆ ಅವನನ್ನ ಅಜ್ಜಿ ಮನೆಗೆ ಬಿಟ್ಟು, ನಾವು ಹೊರಗಡೆ ಸುತ್ತಾಡಲಿಕ್ಕೆ ಹೋದೆವು. ಎಲ್ಲಾ ಸುತ್ತಾಡಿ ಮುಗಿಸಿಕೊಂಡು ಮನೆಗೆ ಬಂದು ಇನ್ನೇನು ನಾವು ನಮ್ಮ ರಸಮಯ ಕ್ಷಣಗಳನ್ನ ಅನುಭವಿಸಲು ಶುರು ಮಾಡಬೇಕು, ಅಷ್ಟರಲ್ಲಿ ಒಂದು ಫೋನ್ ಕಾಲ್ ಬಂತು. ಫೋನಿನ ಆ ಬದಿಯಿಂದ ನನ್ನ ಪತಿಯ ಅಮ್ಮ ಕರೆ ಮಾಡಿದ್ದರು. ನನ್ನ ಮಗನಿಗೆ ಜ್ವರ ಬಂದಿದೆ ಎಂದು ಹೇಳಲು. ಅಲ್ಲಿಗೆ ನಮ್ಮಿಬ್ಬಿರ ಏಕಾಂತದ ಸಮಯಕ್ಕೆ ತೆರೆ ಬಿತ್ತು !
೪. “ಅಮ್ಮನಿಗೆ ಯಾಕೆ ನೋವು ಮಾಡ್ತಿಯ ನೀನು?”
ಹೀಗೆ ಒಂದು ರಾತ್ರಿ ನಾನು ನನ್ನ ಪತಿ ಹಾಗು ಮಗು ಒಂದೇ ಬೆಡ್ ಮೇಲೆ ಮಲಗಿದ್ದೆವು. ನನ್ನ ಮಗನಿಗೆ ೫ ವರ್ಷ ವಯಸ್ಸು. ಅವನು ಒಬ್ಬನೇ ಮಲಗಲು ಹೆದರುತ್ತಿದ್ದರಿಂದ ಅವನನ್ನ ನಮ್ಮ ಜೊತೆಯಲ್ಲೇ ಮಲಗಿಸಿಕೊಳ್ಳುತ್ತಿದ್ದೆವು. ಅವನು ಜೊತೆಯಿದ್ದಾಗ ನಾವು ದೈಹಿಕವಾಗಿ ಕೂಡುತ್ತಿರಲಿಲ್ಲ. ಆ ಒಂದು ರಾತ್ರಿ ಅವನು ನಿದ್ದೆ ಹೋಗಿದ್ದ. ಏಕೋ ನನಗೆ ತಡರಾತ್ರಿ ಎಚ್ಚರವಾಯಿತು. ನಾನು ಮಂಚದಿಂದ ಏಳುವಾಗ ನನ್ನ ಪತಿಗೂ ಎಚ್ಚರವಾಯಿತು. ನಾನು ಬಾತ್ರೂಮ್ ಗೆ ಹೋಗಿ ಬಂದು ಮತ್ತೆ ಮಲಗಿದೆ. ನನ್ನ ಕಾಲು ನನ್ನ ಪತಿಯ ಕಾಲುಗಳನ್ನ ಸವರಿತು. ಅವರು ಅವರ ಒಂದು ಕೈಯ್ಯನು ನನ್ನ ಸೊಂಟದ ಮೇಲೆ ಇಟ್ಟರು. ಅಷ್ಟೇ! ಇಬ್ಬರಿಗೂ ತಡೆಯಲಾಗದೆ ಸದ್ದು ಮಾಡದೆ ಆ ಕಾರ್ಯದಲ್ಲಿ ತೊಡಗಿದ್ದೆವು. ಆ ಜೋಶಿನಲ್ಲಿ ಮಗನನ್ನ ಪಕ್ಕದ ರೂಮಿಗೆ ಆದರೂ ಎತ್ತಿಕೊಂಡು ಹೋಗಿ ಮಲಗಿಸುವುದು ನಮ್ಮ ತಲೆಗೆ ಬರಲಿಲ್ಲ. ಸಂಭೋಗದ ನಡುವೆ ನಾನು ಎಷ್ಟೇ ನಿಶಬ್ದತೆ ಕಾಪಾಡಿಕೊಳ್ಳಲು ಪ್ರಯತ್ನ ಪಟ್ಟರು ಒಂದು ಬಾರಿ ಕೀರಲು ಧ್ವನಿಯಲ್ಲಿ ಮೆಲ್ಲನೆ ಕಿರುಚಿದೆ. ಅಷ್ಟಕ್ಕೇ ನನ್ನ ಮಗನಿಗೆ ಎಚ್ಚರವಾಯಿತು. ಅವನು ಮರುಕ್ಷಣ ನಮ್ಮನ್ನ ಗುರಾಯಿಸುತ್ತಿದ್ದ. ನಮಗೆ ನಾಚಿಕೆ ಆದಂತೆ ಆಯಿತು. ನನ್ನ ಪತಿಯು ಮೆಲ್ಲನೆ ಎದ್ದು ಅವನನ್ನು ಮತ್ತೆ ನಿದ್ದೆಗೆ ಕಳಿಸಿದರು. ಮಾರನೆ ದಿನ ಮೂರು ಜನ ತಿಂಡಿ ತಿನ್ನುವಾಗ ನೀರವ ಮೌನ. ನನ್ನ ಮಗ ಆಗ ಕೇಳಿದ್ದು ಒಂದು ಪ್ರಶ್ನೆ “ಅಮ್ಮನಿಗೆ ಯಾಕೆ ನೋವು ಮಾಡ್ತಿದ್ದೆ ನೆನ್ನೆ ನೀನು” ಎಂದು !