ಗರ್ಭವಾಸ್ಥೆಯಲ್ಲಿ-ಸಕ್ಕರೆ-ಖಾಯಿಲೆ

ಇನ್ಸುಲಿನ್ ಸಾಕಷ್ಟು ಪ್ರಮಾಣದಲ್ಲಿ ಇರದ ಕಾರಣ ದೇಹವು ರಕ್ತದಲ್ಲಿನ ಸಕ್ಕರೆಯ  ಪ್ರಮಾಣವನ್ನು  ನಿಯಂತ್ರಿಸಲು ಅಸಫಲವಾಗುತ್ತದೆ .ಈ ಪರಿಸ್ಥಿತಿಯನ್ನು ಮಧುಮೇಹ ಎನ್ನುತ್ತೇವೆ .ಇದು ಸಾಮಾನ್ಯವಾಗಿ ನಿಮ್ಮೆಲ್ಲರಿಗೂ ತಿಳಿದಿರುವ ವಿಚಾರ .ನೀವು ಗರ್ಭಿಣಿಯಾಗಿದ್ದಾಗ, ನೀವು ಮಧುಮೇಹದ ಪ್ರಭಾವಕ್ಕೊಳಗಾಗುವ ಎರಡು ವಿಧಾನಗಳಿವೆ.ಮೊದಲನೆಯದಾಗಿ, ನೀವು ಮುಂಚಿನಿಂದಲೂ ಮಧುಮೇಹವನ್ನು ಒಳಗೊಂಡಿದ್ದಲ್ಲಿ ,ಹಾಗೂ ಎರಡನೆಯದಾಗಿ ಗರ್ಭಾವಸ್ಥೆಯ ಮಧುಮೇಹ ಅಥವಾ ಜೆಸ್ಟೇಷನಲ್ ಡಯಾಬಿಟಿಸ್ (ಜಿ ಡಿ ಎಂ ).

ಗರ್ಭಾವಸ್ಥೆಯ ಮಧುಮೇಹ ಇದು ಸಹಜವೇ ?ಈ ಪ್ರಶ್ನೆ ನಿಮ್ಮ ಮನಸ್ಸಲ್ಲಿ ಉಂಟಾಗಿದ್ದರೆ ,ನಾವು ನಮ್ಮಲ್ಲಿ ಉತ್ತರವಿದೆ ,ಕೇಳುವ ಕಿವಿಯಾಗಿ . ಗರ್ಭಾವಸ್ಥೆಯ ಮಧುಮೇಹವು ಸಾಮಾನ್ಯವಾಗಿ ಸಂಭವಿಸುತ್ತದೆ, ಪ್ರತಿ ವರ್ಷ ಸುಮಾರು 1 ಮಿಲಿಯನ್ ಭಾರತೀಯ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ.ಗರ್ಭಾವಸ್ಥೆಯಲ್ಲಿ ಸಕ್ಕರೆಯನ್ನು  ನಿಯಂತ್ರಿಸಲು ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ ಈ ಸ್ಥಿತಿಯು ಗರ್ಭಾವಸ್ಥೆಯ ಮಧುಮೇಹಕ್ಕೆ ಕಾರಣವಾಗಿದೆ. ಜಿಡಿಎಂ ನ ಕೆಲವು ಸುಲಭವಾಗಿ ಗಮನಿಸಬಹುದಾದ ಲಕ್ಷಣಗಳು ಹೀಗಿವೆ:

-ಹೆಚ್ಚುವರಿಯಾದ ವಾಡಿಕೆಯಿಲ್ಲದ  ಬಾಯಾರಿಕೆ

– ಆಯಾಸ

– ಆಗಾಗ್ಗೆ ಮೂತ್ರ ವಿಸರ್ಜನೆ

ಇವುಗಳೊಂದಿಗೆ ಮೂತ್ರದಲ್ಲಿನ ಹೆಚ್ಚಿನ ಸಕ್ಕರೆ ಅಂಶದಂತಹ ಕೆಲವು ಲಕ್ಷಣಗಳನ್ನು ವೈದ್ಯರನ್ನು ಸಂಪರ್ಕಿಸುವ ಮೂಲಕ ಗುರುತಿಸಬಹುದಾಗಿದೆ.19 ಮತ್ತು 40 ರ ನಡುವಿನ ವಯಸ್ಸಿನ ಗರ್ಭಿಣಿ ಮಹಿಳೆಯರು ಈ ಸ್ಥಿತಿಗೆ ಒಳಗಾಗುವ ಸಾಧ್ಯತೆಯಿದೆ.

ಇದರೊಂದಿಗೆ ಗರ್ಭವಸ್ಥೆಯ  ಮಧುಮೇಹಕ್ಕೆ   ಕೊಡುಗೆ ನೀಡುವ ಇತರ ಅಂಶಗಳು  ಈ ಕೆಳಗಿನಂತಿವೆ :  

೧.ಮಧುಮೇಹವಿರುವ  ಸಂಬಂಧಿಗಳು  /ಕೌಟುಂಬಿಕ ಹಿನ್ನೆಲೆ

೨.ಅಧಿಕ ತೂಕವನ್ನು ಹೊಂದಿರುವ / ಅಧಿಕ ದೇಹದ ದ್ರವ್ಯರಾಶಿ ಸೂಚಿ ಹೊಂದಿರುವ (30 ಅಥವಾ ಹೆಚ್ಚು )

೩.ವಯಸ್ಸಾದ ಮಹಿಳೆಯರಲ್ಲಿ ಮಧುಮೇಹದಿಂದ ಬಳಲುವ ಸಾಧ್ಯತೆ ಹೆಚ್ಚಿರುತ್ತದೆ   .

೪.ಗರ್ಭವಸ್ಥೆಯ ಮಧುಮೇಹದ ಹಿನ್ನೆಲೆ ಇರುವವರಿಗೆ.

೫.ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮಿನ ಮುಂಚಿನ ಪರಿಸ್ಥಿತಿಗಳು (ಪಿಸಿಓಎಸ್) .

ಗರ್ಭಾವಸ್ಥೆಯಲ್ಲಿ ನೈಸರ್ಗಿಕವಾಗಿ  ದೇಹವು ಹೆಚ್ಚು ಗ್ಲುಕೋಸ್ ಅನ್ನು ಭ್ರೂಣಕ್ಕೆ ಸರಬರಾಜು ಮಾಡುವುದರಿಂದ ಕಡಿಮೆ ಇನ್ಸುಲಿನ್ ಅನ್ನು ಉತ್ಪತ್ತಿ ಮಾಡುತ್ತದೆ .ಆದಾಗ್ಯೂ, ಇದು ಅನೇಕ ಪರಿಣಾಮಗಳನ್ನು ಹೊಂದಿದೆ.ಜಿಡಿಎಂ ನಿಮ್ಮನ್ನು ನಂತರದಲ್ಲಿ ಜೀವನದಲ್ಲಿ ಮಧುಮೇಹಕ್ಕೆ ಈಡಾಗುವಂತೆ ಮಾಡುತ್ತದೆ .ಇದು ಜನನದ ಸಂದರ್ಭದಲ್ಲಿ ವಿವಿಧ ತೊಡಕುಗಳಿಗೆ ಕಾರಣವಾಗಬಹುದು.ಉದಾಹರಣೆಗೆ ಮಗು ತುಂಬಾ ದೊಡ್ಡದಾಗಿ ಬೆಳೆಯುವಂಥ ಅನಾರೋಗ್ಯಕರ ಪರಿಸ್ಥಿತಿಗೆ ಕಾರಣವಾಗಬಹುದು ,ಇದಕ್ಕೆ ಮ್ಯಾಕ್ರೋಸೋಮಿಯಾ ಎಂದು ಕರೆಯುತ್ತಾರೆ .ಇದು ಸಹಜ ಪ್ರಸವಕ್ಕೆ ಅಡ್ಡಿಯಾಗಬಹುದು .ಹಾಗೂ ಮಗುವಿನಲ್ಲಿ  ಮಧುಮೇಹದ ಬೆಳವಣಿಗೆಗೆ ಕಾರಣವಾಗಿ ಜೊತೆಗೆ ಬೊಜ್ಜು ಬೆಳೆಯಲೂ ಕಾರಣವಾಗುತ್ತದೆ .ಇನ್ನೊಂದು ತೊಡಕೆಂದರೆ ಪ್ರಿಕ್ಲಾಂಪ್ಸಿಯ ಅಥವಾ ಗರ್ಭಧಾರಣೆಯ ಪ್ರೇರಿತ ಅಧಿಕ ರಕ್ತದೊತ್ತಡ ಉಂಟಾಗಬಹುದಾದ ಪರಿಸ್ಥಿತಿ .ಇದು ಸಹ ಮಗುವಿನಲ್ಲಿ ಬೊಜ್ಜು ಮತ್ತು ಮಧುಮೇಹವು ಉಂಟಾಗಲು ಕಾರಣವಾಗುತ್ತದೆ .ಹೆಚ್ಚುವರಿಯಾಗಿ, ಇದು ಉಸಿರಾಟದ ತೊಂದರೆಗಳು,ರಕ್ತದಲ್ಲಿ ಕಡಿಮೆ ಸಕ್ಕರೆಯ ಅಂಶ ಮತ್ತು ಕಾಮಾಲೆಗೆ ಕಾರಣವಾಗಬಹುದು.

ವೈದ್ಯರ ಬಳಿ ತಪಾಸಣೆಗೆ  ಹೋಗಿ  ಮೌಖಿಕ ಗ್ಲೂಕೋಸ್ ಪರೀಕ್ಷೆ  ಮಾಡಿಸಿಕೊಳ್ಳುವುದು  ಗರ್ಭಾವಸ್ಥೆಯ ಮಧುಮೇಹವನ್ನುಕಂಡುಹಿಡಿಯುವ ಉತ್ತ್ತಮ ಮಾರ್ಗವಾಗಿದೆ   .ಇದರ ಫಲಿತಾಂಶದ  ಆಧಾರದ  ಮೇಲೆ  ಮೇಲೆ ಅಧಿಕ ರಕ್ತದ ಸಕ್ಕರೆಯ ಮಟ್ಟವು ಜಿ ಡಿ ಎಂ  ಅನ್ನು ಸೂಚಿಸುತ್ತದೆ ಮತ್ತು ಮೌಖಿಕ ಗ್ಲೂಕೋಸ್ ಸಹಿಷ್ಣು ಪರೀಕ್ಷೆ ಎಂದು ಕರೆಯಲ್ಪಡುವ ತರುವಾಯದ ಪರೀಕ್ಷೆಯ ಅಗತ್ಯವಿರುತ್ತದೆ.ಒಮ್ಮೆ ರೋಗನಿರ್ಣಯ ಮಾಡಿದರೆ, ಅದನ್ನು ಗುಣಪಡಿಸಲು ಉತ್ತಮವಾದ ಮಾರ್ಗವೆಂದರೆ ಆರೋಗ್ಯಕರ, ಸಮತೋಲಿತ ಆಹಾರ ಮತ್ತು ವ್ಯಾಯಾಮದ ಕ್ರಮಬದ್ಧ ಪಾಲನೆಯಾಗಿದೆ .ರಕ್ತದಲ್ಲಿನ  ಸಕ್ಕರೆಯ ಮಟ್ಟವನ್ನು ಮೇಲ್ವಿಚಾರಣೆ ಮಾಡುವುದರೊಂದಿಗೆ ವೈದ್ಯರು ಸೂಚಿಸಿದಾಗ ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳುವ ಮೂಲಕ ಔಷಧಿ ಅಗತ್ಯವಾಗಿದೆ .

ನಿಮಗೆ ಪ್ರಸ್ತುತಪಡಿಸಿದ ಮಾಹಿತಿಯು ಗರ್ಭಾವಸ್ಥೆಯ ಮಧುಮೇಹವು ಸಾಮಾನ್ಯವೆಂದು  ಬಿಂಬಿಸುತ್ತದೆ  .ಆದರೆ ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಇದು ಬೀರದಂತೆ ಪರಿಶೀಲನೆ ನಡೆಸುವುದು  ಅವಶ್ಯವಾಗಿದೆ  ಗರ್ಭಾವಸ್ಥೆಯ ಪ್ರತಿ ಹಂತದಲ್ಲೂ  ನಿಮ್ಮ ರಕ್ತದಲ್ಲಿನ  ಸಕ್ಕರೆಯ ಪ್ರಮಾಣವನ್ನು ಮೇಲ್ವಿಚಾರಣೆ ಮಾಡಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಸಂತಸದ  ಗರ್ಭವಾಸ್ಥೆಯು  ನಿಮ್ಮದಾಗಲಿ!

Leave a Reply

%d bloggers like this: