6-12-tingala-makkalige-sarala-mojina-chatuvatikegalu

6-12 ತಿಂಗಳ ವಯಸ್ಸಿನಲ್ಲಿ, ನಿಮ್ಮ ಮಗುವಿನ ಮಿದುಳು ನಿಮ್ಮ ಊಹೆಗೂ ಮೀರಿ  ವೇಗವಾಗಿ ಬೆಳೆಯುತ್ತದೆ.ನಿಮ್ಮ ಮಗುವಿನ ಮೆದುಳಿನ ಪ್ರಗತಿಪರ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿ.ನಿಮ್ಮ ಮಗುವಿನ ಬೆಳವಣಿಗೆಗೆ ಪೂರಕವಾಗಿ ಇರುವಂತಹ ಆಟಗಳನ್ನು ಅನುಮೋದಿಸಿ. ನಿಮ್ಮ ಮಗುವಿನ ಈ ಬೆಳವಣಿಗೆಯನ್ನು ಹೆಚ್ಚಿಸಲು ನೀವು ಬಳಸಬಹುದಾದ ಕೆಲವು ಸರಳ ಚಟುವಟಿಕೆಗಳು ಇಲ್ಲಿವೆ.

೧.ಪಜಲ್ (ಒಗಟುಗಳು)

ನಿಮ್ಮ ಮಗುವಿಗೆ ತಿಳಿದಿರುವಂತಹ ಚಿತ್ರವಿರುವ  ಸರಳ ಮತ್ತು ಪುಟ್ಟ  ಪಜಲ್ (ಒಗಟುಗಳು) ಸ್ಪರ್ಧಿಸಲು ಪ್ರೇರೇಪಿಸುತ್ತವೆ.ಟೆಡ್ಡಿ ಕರಡಿಗಳು ಅಥವಾ ರೈಲುಗಳು ಮುಂತಾದ ಚಿತ್ರಗಳು ನಿಮ್ಮ ಮಗುವಿಗೆ ವಾಸ್ತವತೆ ಮತ್ತು ಆಟಿಕೆಗಳ ನಡುವಿನ ಹೋಲಿಕೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.

೨.ಪೀಕ್-ಎ-ಬೂ (ಮುಖ ಮರೆಮಾಚುವ ಆಟ)

ಈ ಹಳೆಯ ಆಟವು ಕೇವಲ ಸಮಯ ಕಳೆಯುವುದಕ್ಕೆ ಮಾತ್ರವಲ್ಲದೆ  ,ನಿಮ್ಮ ಮಗುವು  ಮುಖಗಳನ್ನು ಗುರುತಿಸಲು ಪ್ರೋತ್ಸಾಹಿಸುತ್ತದೆ.ನಿಮ್ಮ ಮುಖವನ್ನು ನಿಮ್ಮ ಕೈಯಲ್ಲಿ ಮರೆಮಾಚುವ ಕ್ಷಣದಲ್ಲಿ  ನಿಮ್ಮ ಮಗುವು ಕೈಯ ಹಿಂದಿನ ಪರಿಚಿತ  ಮುಖವನ್ನು ನೋಡಲು ಕಾತರಿಸುತ್ತದೆ .ನಿಮ್ಮ ಮಗುವು ಈ ಮೂಲಕ ಮುಖಗಳನ್ನು ಗುರುತಿಸಲು ಕಲಿಯುತ್ತದೆ .

೩.ಸ್ಟ್ಯಾಕಿಂಗ್ (ಅಚ್ಚುಕಟ್ಟಾಗಿ ಸಂಗ್ರಹ ಮಾಡುವುದು )

ಪ್ಲಾಸ್ಟಿಕ್ ಕಪ್ಪುಗಳನ್ನು (ಲೋಟಗಳನ್ನು ) ಅಥವಾ ಇನ್ನಿತರ ವಸ್ತುಗಳನ್ನು ಹೇಗೆ ಶೇಖರಿಸಬೇಕೆಂದು ನಿಮ್ಮ ಮಗುವಿಗೆ ಹೇಳಿಕೊಡುವುದರಿಂದ ನಿಮ್ಮ ಮಗುವಿನ ಕೈಯಲ್ಲಿ ಮತ್ತು ಬೆರಳುಗಳಲ್ಲಿ ಸ್ಥಿರತೆಯನ್ನು  ಹೆಚ್ಚಿಸುತ್ತದೆ.  ನಿಮ್ಮ ಮಗುವಿನೊಂದಿಗೆ ಆಡುವ ಮೂಲಕ ಅಥವಾ ಅವರೊಂದಿಗೆ ಸ್ಪರ್ಧಿಸುವ ಮೂಲಕ ನೀವು ಉತ್ಸಾಹವನ್ನು ಪ್ರೋತ್ಸಾಹಿಸಬಹುದು. ಚಟುವಟಿಕೆಯನ್ನು ಸಾಧ್ಯವಾದಷ್ಟು ಮೋಜಿನಿಂದ ಕೂಡಿರುವಂತೆ ಮಾಡಿ.

೪.ಚಿತ್ರ ಪುಸ್ತಕಗಳು

ನಿಮ್ಮ ಮಗುವಿಗೆ ಚಿತ್ರ ಪುಸ್ತಕಗಳನ್ನು ಓದಿ,ಇದರಿಂದಾಗಿ ಹೊಸ ಮಾಹಿತಿಯನ್ನು ವೇಗವಾಗಿ ಪ್ರಕ್ರಿಯೆಗೊಳಿಸುವುದು ಹೇಗೆ ಎಂಬುವುದು ಮಗುವಿಗೆ ಅರಿವಾಗುತ್ತದೆ .ಕಲಿಕೆಗೆ ಚಿತ್ರಗಳನ್ನು ಸೇರಿಸುವುದು ಅದರ  ಮೆದುಳಿನ ಎಲ್ಲಾ ಕಡೆಗಳಲ್ಲಿ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ.ನಿಮ್ಮ ಧ್ವನಿಯಲ್ಲಿ ಅಭಿವ್ಯಕ್ತಿಗಳು ಮತ್ತು ಬದಲಾವಣೆಗಳೊಂದಿಗೆ ಜೋರಾಗಿ ಓದುವುದು ನಿಮ್ಮ ಮಗುವಿನ ಕಲಿಕೆಯ ಸಾಮರ್ಥ್ಯಗಳಲ್ಲಿ ಉತ್ಸಾಹವನ್ನು ಪ್ರೋತ್ಸಾಹಿಸುತ್ತದೆ.

 ಮೇಲ್ಕಂಡ ಚಟುವಟಿಕೆಗಳು, ನಿಮ್ಮ ಮತ್ತು ನಿಮ್ಮ ಮಗುವಿನೊಂದಿಗಿನ ಬಾಂಧವ್ಯದ  ಸಮಯವನ್ನು  ಒಳಗೊಂಡಿದ್ದಲ್ಲದೆ  ಈ ವಿನೋದ  ಚಟುವಟಿಕೆಗಳು ನಂತರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಸುಧಾರಿಸಲು ಸಹಾಯ ಮಾಡಬಹುದು . ತಾಯಿಯಾಗಿ ನಿಮ್ಮ ಮಗುವಿನ ಕಲಿಕೆಯ ಚಟುವಟಿಕೆಯಲ್ಲಿ ಮೋಜು ಹುಟ್ಟಿಸಲು ನೀವು ಸಿದ್ಧರಿರಬೇಕು.

Leave a Reply

%d bloggers like this: