ವರಮಹಾಲಕ್ಷ್ಮಿ ಹಬ್ಬವು ಕನ್ನಡಿಗರಿಗೆ ಒಂದು ದೊಡ್ಡ ಹಬ್ಬ. ನಾಡಿನೆಲ್ಲೆಡೆ ಇವತ್ತು ಅಮ್ಮಂದಿರೆಲ್ಲ ಬೆಳ್ಳಂಬೆಳಗ್ಗೆ ಮನೆಕೆಲಸ ಮುಗಿಸಿ, ಮನೆ ಮುಂದೆ ಬಣ್ಣಬಣ್ಣದ ರಂಗೋಲಿಗಳನ್ನು ಹಾಕಿ, ಸಿಹಿತಿನಿಸುಗಳನ್ನು ಮಾಡಿ, ಲಕ್ಷ್ಮಿ ಪೂಜೆ ಮಾಡಿ ಸಂಭ್ರಮಿಸುವರು. ಈ ದಿನವು ಸೆಲೆಬ್ರಿಟಿಗಳ ಜೀವನದಲ್ಲೂ ಬೇರೆ ಅಲ್ಲ. ಅವರು ಕೂಡ ಅವರ ಕುಟುಂಬಗಳ ಜೊತೆಗೂಡಿ ಆಚರಿಸುವರು. ಅದರೊಂದಿಗೆ ಕೆಲವು ಸೆಲೆಬ್ರಿಟಿಗಳು ನಾಡಿನ ಜನತೆಗೆ ಹಬ್ಬದ ಸಿಹಿ ಹಾರೈಕೆಗಳು, ಶುಭ ಸಂದೇಶಗಳನ್ನು ನೀಡಿದ್ದಾರೆ. ಅಂತವುಗಳಲ್ಲಿ ಕೆಲವನ್ನು ನಾವು ಇಲ್ಲಿ ಕಲೆ ಹಾಕಿದ್ದೇವೆ ನೋಡಿ.
ಸುದೀಪ್ ಅವರ ತಮ್ಮ ಟ್ವಿಟ್ಟರ್ ಖಾತೆಯಿಂದ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಕೋರಿದ್ದಾರೆ
Varamahalakshmi habbadha shubhashya….
All u frnz out there ,,,,,,Have a great day..
Stay blessed.— Kichcha Sudeepa (@KicchaSudeep) August 4, 2017
ಕೇವಲ ನಟರಷ್ಟೇ ಅಲ್ಲದೆ ನಟರ ಕುಟುಂಬದವರು ಕೂಡ ಜನತೆಗೆ ವಿಶ್ ಮಾಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ತಮ್ಮ ಮನೆಯಲ್ಲಿ ಪೂಜೆಗೆಂದು ದೇವರಿಗೆ ಮಾಡಿದ ಅಲಂಕಾರವನ್ನ ತೋರಿದ ಹಾಗು ನಾಡಿನ ಜನತೆಗೆ ಶುಭ ಕೋರಿದ ಬಗೆ ಇದು
Happy varamahalakshmi festival 😊 it s believed tat worship of goddess Lakshmi will bring health,wealth and prosperity pic.twitter.com/YKMLfmbavu
— VijayalakshmiDarshan (@vijayaananth2) August 4, 2017
ಜನಪ್ರಿಯ RJ, ಹಾಸ್ಯಗಾರ ಹಾಗು ನಟನಾದ ಡ್ಯಾನಿಷ್ ಸೈಟ್ ಜನರಿಗೆ ತಮ್ಮ ಟ್ವಿಟ್ಟರ್ ಖಾತೆಯಿಂದ ಈ ರೀತಿ ಶುಭ ಕೋರಿದರು
Wishing you and your family an auspicious #varamahalakshmi 😊🙏🏻 Stay blessed!
— Danish Sait (@DanishSait) August 4, 2017
ಕನ್ನಡದ ಮೇರುನಟಿ ರಾಧಿಕ ಪಂಡಿತ್ ಬ್ಯಾಂಗಲೋರ್ ಟೈಮ್ಸ್ ಮೂಲಕ ನಾಡಿನ ಜನರಿಗೆ ಶುಭಾಶಯ ಕೋರಿದ್ದು ಹೀಗೆ
.@RadhikaPandit7 joins us in wishing you the best this Varamahalakshmi festival. @NimmaYash @NimmaRPFC @Radhika_Pandith @YashFC @Ycompany7 pic.twitter.com/JlgtXbudtk
ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ಅಭಿಮಾನಿಗಳಿಗೆ ಹಾಗು ನಾಡಿನ ಎಲ್ಲಾ ಜನರಿಗೆ ತಮ್ಮ ಫೇಸ್ಬುಕ್ ಖಾತೆ ಇಂದ ಶುಭ ಕೋರಿದ್ದು ಹೀಗೆ
— Bangalore Times (@BangaloreTimes1) August 4, 2017
ಈ ರೀತಿ ಅನೇಕಾನೇಕ ಸೆಲೆಬ್ರಿಟಿಗಳು ಜನತೆಗೆ ಅಂತರ್ಜಾಲದಲ್ಲಿ ಶುಭ ಕೋರಿದ್ದಾರೆ. ಈ ದಿನವು ನಾಡಿನ ಜನತೆಗೆ ವಿಶೇಷ ದಿನವಾಗಿದ್ದು, ಜನರೆಲ್ಲರೂ ಸಂಭ್ರಮದ ಆಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಎಲ್ಲೆಲ್ಲಿ ನೋಡಿದರು ಬಣ್ಣಬಣ್ಣದ ರಂಗೋಲಿಗಳು ಮತ್ತು ತೋರಣಗಳು. ಟೈನಿ ಸ್ಟೆಪ್ ಕೂಡ ನಿಮಗೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳನ್ನು ಕೋರುತ್ತದೆ. ನಿಮ್ಮ ಜೀವನ ಸಮೃಧಿ ಹೊಂದಲಿ. ಮತ್ತೊಮ್ಮೆ ಹಬ್ಬದ ಶುಭಾಶಯಗಳು ನಮ್ಮ ಎಲ್ಲಾ ಓದುಗಾರರಿಗೆ!