ವೀರ್ಯಗಳಲ್ಲಿ ಎರೆಡು ವಿಧ, ಒಂದು X ಕ್ರೋಮೋಸೋಮ್ ಅನ್ನು ಹೊತ್ತೊಯ್ಯುವುದು ಹಾಗು ಇನ್ನೊಂದು Y ಕ್ರೋಮೋಸೋಮ್ ಹೊತ್ತೊಯ್ಯುವುದು. ಯಾವ ವೀರ್ಯವು ಅಂಡಾಣು ಜೊತೆ ಫಲೀಕರಣ ಹೊಂದುವುದೊ, ಅದು ಮಗುವಿನ ಲಿಂಗವನ್ನ ನಿರ್ಧರಿಸುತ್ತದೆ. X ಅಂದರೆ ಹುಡುಗಿ, Y ಅಂದರೆ ಹುಡುಗ. ನೀವು ಗಂಡು ಮಗು ಪಡೆಯುವ ಸಾಧ್ಯತೆಗಳನ್ನ ಹೆಚ್ಚಿಸಿಕೊಳ್ಳಲು ಕೆಳಗಿನ ಅಂಶಗಳನ್ನ ಪರಿಗಣಿಸಬೇಕಾಗುತ್ತದೆ.
೧. ಗಂಡು ವೀರ್ಯ ಹಾಗು ಋತುಚಕ್ರ
ಗಂಡು ವೀರ್ಯವು ಹೆಣ್ಣು ವೀರ್ಯಕ್ಕಿಂತ ಹೆಚ್ಚು ವೇಗವಾಗಿ ಚಲಿಸುವುದರಿಂದ, ನಿಮ್ಮ ಅಂಡೋತ್ಪತ್ತಿಯ ದಿನಕ್ಕೆ ಸಾಧ್ಯವಾದಷ್ಟು ಹತ್ತಿರದಲ್ಲಿ ಸಂಭೋಗ ನಡೆಸಬೇಕು.
ನೀವು ಅಂಡೋತ್ಪತ್ತಿಯ ದಿನಕ್ಕಿಂತ ತುಂಬಾ ಮುಂಚೆಯೇ ಸಂಭೋಗ ನಡೆಸಿದರೆ, ಕಮ್ಮಿ ಜೀವಾವಧಿ ಇರುವ ಗಂಡು ವೀರ್ಯವು ಸಾವನಪ್ಪಿ, ಹೆಚ್ಚು ಹೆಣ್ಣು ವೀರ್ಯಗಳಿಗೆ ಫಲೀಕರಣಗೊಳ್ಳುವ ಅವಕಾಶ ನೀಡಿದಂತೆ ಆಗುತ್ತದೆ.
೨. ಗಂಡು ವೀರ್ಯ ಹಾಗು ಪತಿಯ ಒಳಉಡುಪು
ಒಬ್ಬ ಗಂಡಸು ಧರಿಸುವ ಒಳಉಡುಪು ಅವನ ವೀರ್ಯಗಳ ಉತ್ಪತ್ತಿ ಮೇಲೆ ಪ್ರಭಾವ ಬೀರುತ್ತದೆ ಎಂದು ನೀವು ಕೇಳಿರಬಹುದು. ನೀವು ಗರ್ಭಧರಿಸಲು ಪ್ರಯತ್ನಿಸುತ್ತಿದ್ದರೆ ಈ ವಿಷಯದ ಬಗ್ಗೆ ನಿರ್ಲಕ್ಷ್ಯ ಮಾಡುವಂತೆಯೇ ಇಲ್ಲ.
ನಂಬಿಕೆಯ ಪ್ರಕಾರ ಗಂಡಸು ಬಾಕ್ಸರ್ ಚಡ್ಡಿಗಳನ್ನ ಧರಿಸಿದರೆ ಗಂಡು ವೀರ್ಯಗಳಿಗೆ ಒಳ್ಳೆಯದು, ಏಕೆಂದರೆ ವ್ರುಷಣ ಕೋಶ(scrotum)ವು ಹೆಚ್ಚು ಬಿಸಿಯಾಗುವುದಿಲ್ಲ ಹಾಗು ವೀರ್ಯದ ಉತ್ಪನ್ನಕ್ಕೆ ಅಡ್ಡಿ ಮಾಡುವುದಿಲ್ಲ.
ಬಿಗಿಯಾದ ಒಳಉಡುಪುಗಳು ಹೆಣ್ಣು ವೀರ್ಯಕ್ಕೆ ಹೆಚ್ಚು ಸಹಾಯಕಾರಿ, ಆದರೆ ಇದು ವ್ರುಷಣ ಕೋಶವನ್ನ ಬಿಸಿ ಮಾಡುವುದರಿಂದ, ನಿಮ್ಮ ವೀರ್ಯ ಉಪ್ತತ್ತಿಯನ್ನ ಕಮ್ಮಿ ಮಾಡುತ್ತದೆ.
೩. ಹೆಣ್ಣಿನ ಲೈಂಗಿಕ ಪರಾಕಾಷ್ಟೆ ಹಾಗು ಗಂಡು ಶಿಶು
ಮೇಲೆ ತಿಳಿಸಿರುವ ನಂಬಿಕೆಗಳ ಜೊತೆಗೆ ಇರುವ ಮತ್ತೊಂದು ನಂಬಿಕೆ ಎಂದರೆ, ಗಂಡು ಶಿಶುವಿನ ಗರ್ಭತಾಳುವುದರಲ್ಲಿ ಹೆಣ್ಣಿನ ಸಂಭೋಗ ಪರಾಕಾಷ್ಟೆಯು(orgasm) ಮುಖ್ಯಪಾತ್ರ ವಹಿಸುತ್ತದೆ.
ಕೆಲವರ ಪ್ರಕಾರ, ಹೆಣ್ಣು ಸಂಭೋಗದ ಪರಾಕಾಷ್ಟೆ ಹೊಂದುವಾಗ, ಒಂದು ಕ್ಷಾರೀಯ ದ್ರವವನ್ನು ಯೋನಿಯು ಹೊರಸೂಸುತ್ತದೆ. ಇದು ಗಂಡು ವೀರ್ಯಕ್ಕೆ ಬದುಕಲು ಹೆಚ್ಚು ಅವಕಾಶ ನೀಡುತ್ತದೆ.
ಹಾಗಾಗಿ ನಿಮ್ಮ ಪತಿಯು ಲೈಂಗಿಕ ಕ್ರಿಯೆಯಲ್ಲಿ ಪರಾಕಾಷ್ಠೆ ಹೊಂದುವ ಮುನ್ನ ನೀವು ಹೊಂದಬೇಕು.
ಇವುಗಳೆಲ್ಲವೂ ವೈಜ್ಞಾನಿಕವಾಗಿ ದೃಢಪಟ್ಟಿಲ್ಲದಿದ್ದರು, ನಿಮ್ಮ ಪತಿಯೊಂದಿಗೆ ಮಾತಾಡಿ ಪ್ರಯತ್ನಿಸಬಹುದು.