makkalalli-jantuhulu-nivaranege-maneyalle-maddu-02

ಮಕ್ಕಳಲ್ಲಿ ಜಂತುಹುಳು ಸಮಸ್ಯೆ ತುಂಬಾ ಸಾಮಾನ್ಯ. ಮಗುವು ಸೇವಿಸುವ ಕಲುಷಿತ ನೀರು ಅಥವಾ ಆಹಾರದಿಂದ ಜಂತುಹುಳು ಮಗುವಿನಲ್ಲಿ ಕಾಣಿಸಿಕೊಳ್ಳಬಹುದು. ಮೈದಾನದಲ್ಲಿ ಆಡುವಾಗ ಮಗುವಿಗೆ ಸೋಂಕಿತ ಮಣ್ಣಿನ ಮೂಲಕ ಜಂತುಹುಳುಗಳು ದಾಳಿಮಾಡಬಹುದು.

ಲಕ್ಷಣಗಳು

೧.ಕಡಿಮೆ ಹಸಿವು

೨.ಗುದದಲ್ಲಿ ತುರಿಕೆ ಅಥವಾ ಕಿರಿಕಿರಿ

೩.ರಕ್ತಹೀನತೆ

ಮನೆ ಮದ್ದುಗಳು
೧.ಇಂಗು

ಚಿಟಕಿ ಇಂಗು ಪುಡಿಯನ್ನು ನೀರಿನಲ್ಲಿ ಬೆರಸಿ, ಮಗುವಿಗೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ನೀಡಿ. ಇದನ್ನು ನಿರಂತರ ಒಂದು ವಾರ ನೀಡಿ, ಇದು ಜಂತುಹುಳು ನಿವಾರಣೆ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

೨.ಓಂ ಕಾಳು

೧.ಅರ್ಧ ಚಮಚ ಓಂ ಕಾಳುಗಳನ್ನು, ಅದೇ ಪ್ರಮಾಣದ ಬೆಲ್ಲದ ಜೊತೆ ಮಿಶ್ರಣ ಮಾಡಿ, ದಿನಕ್ಕೆ ಎರಡು ಬಾರಿ ಮಗುವಿಗೆ ನೀಡಿ.

೨.ಸ್ವಲ್ಪ ಈ ಬೀಜಗಳನ್ನು ನೀರಿನಲ್ಲಿ ಹಾಕಿ, ಚೆನ್ನಾಗಿ ಬೇಯಿಸಿ. ಅದನ್ನು ಸೋಸಿ, ಒಂದು ಲೋಟ ಕುಡಿಸಿ. ದಿನಕ್ಕೆ ೫-೬ರಿಂದ ಬಾರಿ ಒಂದು ದಿನಕ್ಕೆ ಇದನ್ನು ನೀಡಬಹುದು.

೩.ಪರಂಗಿ ಕಾಯಿ

ಮೇಲಿನವು ತಿನ್ನಲು ಸ್ವಲ್ಪ ಕಹಿ ಮತ್ತು ಘಾಟು ಎನ್ನಿಸುತ್ತದೆ, ಆದ್ದರಿಂದ ಅದನ್ನು ಸೇವಿಸಲು ಮಕ್ಕಳು ಅಥವಾ ದೊಡ್ಡವರು ಇಷ್ಟ ಪಡುವುದಿಲ್ಲ. ಅದಕ್ಕೆ ಪರ್ಯಾಯವೆಂದರೆ ಪರಂಗಿ ಕಾಯಿ.

ಪರಂಗಿ ಕಾಯಿಯ ಸಿಪ್ಪೆಯನ್ನು ತೆಗೆದು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಜಂತುಹುಳುವನ್ನು ಹೋಗಲಾಡಿಸಬಹುದು. ಇದನ್ನು ಪ್ರತಿ ದಿನ ಸೇವಿಸಬಹುದು, ಇದರಿಂದ ಬಿಳಿ ರಕ್ತಕಣಗಳನ್ನು ಹೆಚ್ಚಿಸಿಕೊಳ್ಳಬಹುದು. ಇದು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

೪.ಬೆಳ್ಳುಳ್ಳಿ

ಮಗುವಿಗೆ ಜಂತುಹುಳು ಬರುವುದನ್ನು ತಪ್ಪಿಸಲು, ನಿಮ್ಮ ಪ್ರತಿದಿನ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸಿ.

೫.ಬೇವು

ಬೇವಿನ ಎಲೆಯನ್ನು ತಿನ್ನುವುದರಿಂದ ಜಂತುಹುಳುವನ್ನು ನಾಶಮಾಡಬಹುದು, ಇದರಿಂದ ಹಲ್ಲಿನ ಸಮಸ್ಯೆಗೂ ಪರಿಹಾರ ಸಿಗುತ್ತದೆ, ಇದನ್ನು ಸೇವಿಸುವುದರಿಂದ ತ್ವಚೆಯ ಕಾಂತಿಯು ಹೆಚ್ಚುತ್ತದೆ, ಮತ್ತು ಮೊಡವೆಯ ನಿವಾರಣೆಗೆ ಅಥವಾ ಮೊಡವೆ ಬರದಂತೆ ಕಾಪಾಡುತ್ತದೆ. ಬೇವು ಅನೇಕ ಔಷಧಿಯ ಗುಣಗಳನ್ನು ಹೊಂದಿದೆ. ಇದರ ಸೇವನೆಯಿಂದ ಅನೇಕ ರೋಗಗಳನ್ನು ಬರದಂತೆ ತಡೆಯಬಹುದು. ಇದನ್ನು ಯಾರು ಬೇಕಾದರೂ ಸೇವಿಸಬಹುದು.

ಈ ಮೇಲೆ ಹೇಳಿರುವ ಎಲ್ಲಾ ವಸ್ತುಗಳು ನೈಸರ್ಗಿಕವಾಗಿ ನಮಗೆ ದೊರಕುವಂತವು, ಇದರಿಂದ ಯಾವುದೇ ತರಹದ ಅಡ್ಡಪರಿಣಾಮಗಳಿಲ್ಲ, ಮತ್ತು ಇದನ್ನು ಯಾವ ವಯಸ್ಸಿನವರು ಬೇಕಾದರೂ ಸೇವಿಸಬಹುದು.

Leave a Reply

%d bloggers like this: