6-tingalugala-varegina-maguvina-manasika-belavanige-1

ಮೊದಲ ೬ ತಿಂಗಳುಗಳು ಮಗುವಿನ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಮಗುವಿನ ಸಂಪೂರ್ಣ ಬೆಳವಣಿಗೆಯೆಂದರೆ,  ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆ. ತಿಂಗಳುಗಳುರುಳುತ್ತಿರುವಂತೆ ಮಗುವಿನ ಶಾರೀರಿಕ ಹಾಗೂ ಮಾನಸಿಕ ವಿಕಾಸಕ್ಕೆ ನಾವು ಸಾಕ್ಷಿಗಳಾಗುತ್ತೇವೆ. ಮಗುವಿನ ಮೊದಲ ೬ ತಿಂಗಳುಗಳು ಅದರ ಬೆಳವಣಿಗೆಗೆ ಮೈಲಿಗಲ್ಲಾಗಿರುವುದು.

ಮೊದಲ ೬ ತಿಂಗಳುಗಳೆಡೆಯಲ್ಲಿ ಮಗುವು ತನ್ನ ಸುತ್ತಮುತ್ತಲಿನ ಪ್ರಪಂಚವನ್ನು ಕುತೂಹಲದಿಂದ ನಿರೀಕ್ಷಿಸುವುದು. ಮಗುವಿನ ಮೆದುಳು ತಾನು ಪ್ರಚೋದನೆಗೊಳಗಾದ ಎಲ್ಲಾ ಕಿೃಯೆಗಳಿಗೂ ಪ್ರತಿಕಿೃಯಿಸುವ ಕುಶಲತೆಯನ್ನು ಸಂಪಾದಿಸುವುದೂ ಈ ೬ ತಿಂಗಳುಗಳಲ್ಲೇ..!

ಒಂದೆರಡು ತಿಂಗಳು ಪ್ರಾಯವಾದ ಮಗುವು ತನ್ನ ಸುತ್ತಮುತ್ತಲಿನ ಜಗತ್ತನ್ನು ಅರಿಯಲು ಶ್ರಮಿಸುವುದು. ಮೊತ್ತಮೊದಲು ತನ್ನ ತಾಯಿಯ ಶಬ್ದ ಹಾಗೂ ಗಂಧವನ್ನು ಅರ್ಥಮಾಡಿಕೊಂಡ ಮಗುವು ಉಳಿದ ಜನರನ್ನು ಗುರುತಿಸುವ ಕ್ಷಮತೆಯನ್ನೂ ಗಿಟ್ಟಿಸಿ,ತನ್ನ ಮುಗ್ಧ ನಗುವಿನ ಮೂಲಕ ಇತರರೊಂದಿಗೆ ಸ್ಪಂದಿಸುವುದು. ತನ್ನ ಸುತ್ತಮುತ್ತಲಿನ ಎಲ್ಲಾ ವಸ್ತುಗಳನ್ನೂ ಕುತೂಹಲದಿಂದ ನಿರೀಕ್ಷಿಸುವುದು,ಶಬ್ದ ಬಂದೆಡೆ ಕತ್ತು ಹೊರಳಿಸುವುದು, ಗಾಢ ಬಣ್ಣಗಳತ್ತ ಆಕರ್ಷಿತವಾಗುವುದು-ಇವೇ ಮೊದಲಾದ ಪ್ರಕಿೃಯೆಗಳನ್ನು ಕಾಣಿಸುವುದು. ಆದರೆ, ಮಗುವು ತನ್ನ ದೃಷ್ಟಿಯಿಂದ ಮರೆಯಾದ ವಸ್ತುಗಳ ಬಗ್ಗೇ ಮರೆತೇ ಬಿಟ್ಟಿರುತ್ತದೆ.

೩ ತಿಂಗಳು ಪ್ರಾಯವಾದ ಮಗುವು ತನ್ನ ಕೆಲವು ಅಂಗಚೇಷ್ಟೆಗಳಿಂದ ಪ್ರತಿಕಿೃಯಿಸಲು ತೊಡಗುವುದು. ಮಗುವಿನ ಬಟ್ಟೆ ಬದಲಾಯಿಸುವ ಸಂದರ್ಭಗಳಲ್ಲಿ ಮಗುವು ತನ್ನ ಕಾಲನ್ನು ಎತ್ತಿ ಹಿಡಿದಿಟ್ಟುಕೊಳ್ಳುವುದೂ ಮಗುವು ನೀಡುವ ಪ್ರತಿಕಿೃಯೆಗಳಲ್ಲೊಂದು.   

೪ ತಿಂಗಳು ಪ್ರಾಯವಾದ ಮಗುವು ಮೆಲ್ಲನೇ ವಸ್ತುಗಳತ್ತ ತೆವಳುವರು. ಕೈಗೆ ಸಿಕ್ಕಿದ ವಸ್ತುಗಳನ್ನೆಲ್ಲಾ  ಮುಟ್ಟಿನೋಡಿ ಹಾಗೂ ಬಾಯಿಗೆ ಹಾಕಿ ಅಥವಾ ನೆಕ್ಕಿನೋಡಿ  ತಮ್ಮದೇ ಆದ ರೀತಿಯಲ್ಲಿ ಜ್ಞಾನವನ್ನು ಪಡೆಯುವರು. ಕೈಕಾಲುಗಳನ್ನು ಅಲುಗಾಡಿಸಿ, ಸ್ವಂತ ಬೆರಳುಗಳನ್ನು ಮುಟ್ಟಿನೋಡಿ ತನ್ನದೇ ಶರೀರವನ್ನು ಗುರುತಿಸಿಕೊಳ್ಳುವ ಕೌಶಲ್ಯವನ್ನೂ ಪಡೆಯುವರು. ಈ ಪ್ರಾಯದ ಮಕ್ಕಳ ದೃಷ್ಟಿಯೂ, ವಾಸನಾ ಗ್ರಹಣ ಶಕ್ತಿಯೂ  ಬಹಳ ತೀಕ್ಷ್ಣವಾಗಿರುವುದು. ಮಗುವು ತಾನು ಸ್ಪರ್ಶಿಸಿದ, ವೀಕ್ಷಿಸಿದ ವಸ್ತುಗಳನ್ನು ಅದರ ವಾಸನೆಯಿಂದಲೇ ಗ್ರಹಿಸುವ ಚಾಣಾಕ್ಷತೆಯನ್ನು ಪಡೆದುಕೊಂಡಿರುತ್ತದೆ.

೬ ತಿಂಗಳುಗಳಾಗುವ ಹೊತ್ತಿಗೆ ಮಗುವು ಶಬ್ದಾನುಕರಣೆಗೂ ತೊಡಗುತ್ತದೆ.ಮಗುವು ತೊದಲು ನುಡಿಯುವುದನ್ನೂ,ಶಬ್ದಗಳನ್ನು ಹೊರಡಿಸುವುದನ್ನೂ ನೀವು ಗಮನಿಸಿರಬಹುದು. ತಾನು ನೋಡಿದ ವಸ್ತುಗಳನ್ನೂ, ಕೇಳಿಸಿಕೊಂಡ ಶಬ್ದಗಳನ್ನೂ, ಅನುಭವಿಸಿದ ರುಚಿಗಳನ್ನೂ ಗುರುತಿಸುವ ಮಟ್ಟಕ್ಕೆ ಮಗುವು ಬೆಳೆದಿರುತ್ತದೆ. ಮಾತ್ರವಲ್ಲದೇ  ಓಬ್ಜೆಕ್ಟೀವ್  ಪೆರ್ಮಾನೆನ್ಸ್ ( ತಾನು ಕೇಳದ, ಅನುಭವಿಸದ,ಕಾಣದ, ಗ್ರಹಿಸದ ವಸ್ತುಗಳೂ ಇವೆ ಎಂಬ ಅರಿವು ಪಡೆಯುವ ಅವಸ್ಥೆ) ಪಡೆದುಕೊಂಡಿರುತ್ತದೆ. 

Leave a Reply

%d bloggers like this: