C-section-sampoorna-mahiti-1

C – ಸೆಕ್ಷನ್ ಮುಂಚೆ ಏನಾಗುತ್ತದೆ?

ಅನಸ್ಥೆಸಿಯಾ ತಜ್ಞರು ಬಂದು ನಿಮ್ಮ ಪರಿಸ್ತಿಥಿಯನ್ನು ಪರಿಶೀಲಿಸಿ ಏನು ಮಾಡಬೇಕೆಂಬ ನಿರ್ಧಾರ ತೆಗೆದುಕೊಳ್ಳುವರು. ಬಹಳ ಅಪರೂಪದ ಸಮಯಗಳಲ್ಲಿ ಮಾತ್ರ ಜನರಲ್ ಅನಸ್ಥೆಸಿಯಾ ನೀಡುತ್ತಾರೆ. ಬಹುತೇಕ ಬಾರಿ ನಿಮಗೆ ವೈದ್ಯರು ಎಪಿಡ್ಯುರಲ್ ಅಥವಾ ಬೆನ್ನು ಅರಿವಳಿಕೆ(ಸ್ಪೈನಲ್ ಬ್ಲಾಕ್) ನೀಡುತ್ತಾರೆ. ಇದು ನಿಮ್ಮ ದೇಹದ ಕೆಳಭಾಗವನ್ನ ಸಂಪೂರ್ಣವಾಗಿ ನಿಶ್ಚೇಷ್ಟಿತ(ಜಡ ಹಿಡಿಯುವಂತೆ) ಮಾಡುತ್ತದೆ. ಇದರಿಂದ ವೈದ್ಯರು ನಿಮ್ಮ ಹೆರಿಗೆ ಮಾಡುವಾಗ ನೀವು ನೋವು ಅನುಭವಿಸದೆ ಕಾರ್ಯವನ್ನ ವೀಕ್ಷಿಸಬಹುದು.

ಮೊದಲು ಕ್ಯಾತಿಟರ್(catheter) ಅನ್ನು ನಿಮ್ಮ ಮೂತ್ರನಾಳದ ಒಳಗೆ ಅಳವಡಿಸಲಾಗುತ್ತದೆ. ನಿಮ್ಮ ದೇಹದಲ್ಲಿ ಉಳಿದಿರುವ ಮೂತ್ರವನ್ನ ಹೊರತೆಗೆಯಲು ಇದನ್ನು ಬಳಸುವರು. ಇಷ್ಟೊತ್ತಿಗೆ ಆಗಲೇ ನಿಮಗೆ ಅಭಿಧಮನಿ(intravenous) ದ್ರವ್ಯಗಳು ಹಾಗು ಔಷಧಿಗಳನ್ನು ನೀಡದೆ ಇದ್ದಿದ್ದರೆ, ಇವಾಗ ಶುರು ಮಾಡುತ್ತಾರೆ. ನಂತರ ನಿಮ್ಮನ್ನು ನಿಮ್ಮ ವಾರ್ಡ್ ಇಂದ ಆಪರೇಷನ್ ಕೊಠಡಿಗೆ ಕರೆದೊಯ್ಯುತ್ತಾರೆ.

ಹೆರಿಗೆ ನಂತರ ಸೋಂಕು ಆಗದಿರಲು ಅಪಧಮನಿ ಮೂಲಕ ಪ್ರತಿಜೀವಕವನ್ನು ನಿಮಗೆ ನೀಡಬಹುದು.

ಅನಸ್ಥೆಸಿಯಾವನ್ನು ಇವಾಗ ನಿಖರ ಪ್ರಮಾಣದಲ್ಲಿ ನಿಭಾಯಿಸಲಾಗುತ್ತದೆ ಹಾಗು ನಿಮ್ಮ ದೇಹದ ಮೇಲೆ ಆಗುವ ಕತ್ತರಿಕೆ ನಿಮಗೆ ಕಾಣದೆ ಇರುವಂತೆ ಒಂದು ಪರದೆಯನ್ನ ಕಟ್ಟಲಾಗುತ್ತದೆ.

ಹೇಗೆ ಆಗುತ್ತದೆ?

ಒಮ್ಮೆ ಅನಸ್ಥೆಸಿಯಾ ಕೆಲಸ ಮಾಡಲು ಶುರು ಆದೊಡನೆ, ನಿಮ್ಮ ಹೊಟ್ಟೆಯ ಮೇಲೆ ಒಂದು ನಂಜುನಿರೋಧಕ(antiseptic) ದ್ರವ್ಯ ಸವರಿಸುತ್ತಾರೆ, ತದನಂತರ ವೈದ್ಯರು ನಿಮ್ಮ ಹೊಟ್ಟೆಯ ಕೆಳಭಾಗದಲ್ಲಿ ಅಡ್ಡಡ್ಡವಾಗಿ ಒಂದು ಗೆರೆ ಕತ್ತರಿಕೆ ಮಾಡುವರು.

ಆ ಕತ್ತರಿಕೆಯ ನಂತರ, ಆ ಭಾಗದ ಚರ್ಮದ ಅಡಿಯಲ್ಲಿ ಇದ್ದ ಅಂಗಾಂಶಗಳನ್ನ ಕತ್ತರಿಸುತ್ತಾ ನಿಮ್ಮ ಗರ್ಭಕೋಶಕ್ಕೆ ಕೈ ಹಾಕುತ್ತಾರೆ. ನಿಮ್ಮ ಉದರದ ಸ್ನಾಯುಗಳಿಗೆ ತಲುಪಿದ ನಂತರ ಅವುಗಳನ್ನ ಬೇರ್ಪಡಿಸಿ( ಕತ್ತರಿಸುವ ಬದಲು ಇದನ್ನು ಕೈಯಲ್ಲೇ ವೈದ್ಯರು ಮಾಡುವರು) ಹಾಗು ಹರಡಿ, ಕೆಳಗಿರುವುದು ಗೋಚರವಾಗುವಂತೆ ಮಾಡುತ್ತಾರೆ.

ವೈದ್ಯರು ನಿಮ್ಮ ಗರ್ಭಕೋಶವನ್ನು ತಲುಪಿದಾಗ, ವೈದ್ಯರು ಬಹುತೇಕ ಬಾರಿ ಗರ್ಭಕೋಶದ ಕೆಳಭಾಗದಲ್ಲಿ ಅಡ್ಡಡ್ಡವಾಗಿ ಒಂದು ಕತ್ತರಿಕೆ ಮಾಡುತ್ತಾರೆ. ಇದನ್ನ LTUI (ಲೋಯರ್ ಟ್ರಾನ್ಸ್ ವರ್ಸ್ ಯುಟೆರಿನ್ ಇನ್ಸಿಜನ್) ಎನ್ನುವರು.

ಕೆಲವು ಅಪರೂಪದ ಪ್ರಕರಣಗಳಲ್ಲಿ ವೈದ್ಯರು ಉದ್ದುದ್ದ ಕತ್ತರಿಕೆ ಮಾಡಬೇಕಾಗುತ್ತದೆ. ಇದು ನಿಮ್ಮ ಮಗು ಅಕಾಲಿಕವಾಗಿ ಜನನ ಹೊಂದುವಾಗ, ಅಂದರೆ ನಿಮಂ ಗರ್ಭಕೋಶದ ಕೆಳಗಿನ ಭಾಗ ಇನ್ನೂ ತೆಳುವಾಗದೆ ಇರುವಂತಹ ಸಮಯದಲ್ಲಿ ಇಂತಹ ಹೆಜ್ಜೆ ತೆಗೆದುಕೊಳ್ಳಬೇಕಾಗುತ್ತದೆ. (ನಿಮಗೆ ಉದ್ದುದ್ದ ಇನ್ಚಿಜನ್ ಆಗಿದ್ದರೆ, ನಿಮಗೆ ಮುಂದಿನ ಬಾರಿ ಸ್ವಾಭಾವಿಕ ಹೆರಿಗೆ ಆಗುವ ಸಾಧ್ಯತೆಗಳು ಬಹಳ ಕಡಿಮೆ).

ವೈದ್ಯರು ಒಳಗಡೆ ಕೈ ಹಾಕಿ ನಿಮ್ಮ ಮಗುವನ್ನು ಹೊರ ತೆಗೆಯುತ್ತಾರೆ. ನಂತರ ಕರುಳುಬಳ್ಳಿಯನ್ನ ಕತ್ತರಿಸುತ್ತಾರೆ. ಕತ್ತರಿಸಿ ಆದಮೇಲೆ ಅವರು ಮಗುವನ್ನು ಮಕ್ಕಳತಜ್ಞ ಅಥವಾ ನರ್ಸ್ ಗಳಿಗೆ ಕೊಡುವ ಮುನ್ನ, ನೀವು ಒಮ್ಮೆ ನಿಮ್ಮ ಮಗುವನ್ನು ನೋಡಬಹುದು. ಉಳಿದ ಸಿಬ್ಬಂದಿ ನಿಮ್ಮ ಮಗುವಿನ ಪರಿಶೀಲಿಸಬೇಕಾದರೆ ವೈದ್ಯರು ನಿಮ್ಮ ಗರ್ಭಕಂಠವನ್ನ ಹೊರಗಡೆ ತೆಗೆಯುತ್ತಾರೆ ಹಾಗು ನಿಮ್ಮ ಹೊಟ್ಟೆಯನ್ನು ಹೊಲಿಯುತ್ತಾರೆ.

ಒಮ್ಮೆ ನಿಮ್ಮ ಮಗುವಿನ ಪರಿಶೀಲನೆ ಆದಮೇಲೆ ನರ್ಸ್ ನಿಮ್ಮ ಮಗುವನ್ನು ನಿಮ್ಮ ಪತಿಗೆ ನೀಡುವರು. ಆಗ ನೀವು ನಿಮ್ಮ ಮಗುವನ್ನು ಸರಿಯಾಗಿ ನೋಡಿಕೊಂಡು ಕಣ್ಣು ತುಂಬಿಸಿಸಕೊಳ್ಳಬಹುದು.

ಅಪಾಯಗಳೇನು?

ಸಿಸೇರಿಯನ್ ಒಂದು ಗಂಭೀರ ಸರ್ಜರಿ ಆದ ಕಾರಣ, ಸ್ವಾಭಾವಿಕ ಹೆರಿಗೆಗಿಂತ ಹೆಚ್ಚು ಅಪಾಯಗಳನ್ನ ಹೊಂದಿರುತ್ತದೆ. C – ಸೆಕ್ಷನ್ ಮಾಡಿಸಿಕೊಂಡ ತಾಯಿಯರು ಸಹಜವಾಗಿ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಇದಲ್ಲದೇ ತೀವ್ರ ರಕ್ತಸ್ರಾವ, ಪ್ರಸವನಂತರದ ಅತಿಯಾದ ನೋವು, ಬಹಳ ದಿನಗಳು ಆಸ್ಪತ್ರೆಯಲ್ಲಿ ಕಳೆಯಬೇಕಾಗಿರುವುದು ಹಾಗು ಸುಧಾರಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗಿರುವುದು ಕೂಡ C – ಸೆಕ್ಷನ್ ಇಂದ ಉಂಟಾಗುವ ತೊಂದರೆಗಳು. ಮೂತ್ರಕೋಶಕ್ಕೆ ಗಾಯ ಆಗುವ ಸಾಧ್ಯತೆ ಕಮ್ಮಿ ಇದ್ದರೂ, ತಳ್ಳಿಹಾಕುವಂತಿಲ್ಲ.

ತಿಳಿದು ಬಂದಿರುವ ಪ್ರಕಾರ, ತುರ್ತು ಸಿಸೇರಿಯನ್ ಅಥವಾ ಸಿಸೇರಿಯನ್ ಹೆರಿಗೆಗಿಂತ ಮಗುವಿಗೆ 39 ವಾರಗಳು ಆಗುವ ಮುಂಚೆಯೇ ಕೇಳಿಕೊಂಡು C – ಸೆಕ್ಷನ್ ಮಾಡಿಸಿಕೊಂಡರೆ ಮಗುವಿಗೆ ಉಸಿರಾಟದ ತೊಂದರೆ ಎದುರಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಇದಲ್ಲದೇ ನೀವು ಮತ್ತೊಂದು ಮಗುವನ್ನು ಪಡೆದುಕೊಳ್ಳುವ ಆಸೆ ಇದ್ದರೆ, ಪ್ರತಿಯೊಂದು ಸಿಸೇರಿಯನ್ ಸರ್ಜರಿಯು ತೊಂದರೆಗಳನ್ನ ಹೆಚ್ಚು ಮಾಡುತ್ತಲೇ ಹೋಗುತ್ತದೆ.

ಅದಾಗಿಯೂ, ನಾವು ಪ್ರತಿ ಬಾರಿಯೂ ನಾವು C – ಸೆಕ್ಷನ್ ಅನ್ನು ನಿವಾರಿಸಬೇಕು ಎಂದಲ್ಲ. ಕೆಲವು ಪ್ರಕರಣಗಳಲ್ಲಿ ಮಗುವಿನ ಅಥವಾ ನಿಮ್ಮ ಅಥವಾ ನಿಮ್ಮಿಬ್ಬರ ಒಳ್ಳೆಯದಕ್ಕಾಗಿಯೇ C – ಸೆಕ್ಷನ್ ಮಾಡಿಸಲೇ ಬೇಕು. ನಿಮ್ಮ ವೈದ್ಯರು C- ಸೆಕ್ಷನ್ ಅನ್ನು ಸಲಹೆ ಮಾಡುತ್ತಿದ್ದಾರೆ ಎಂಬುದಕ್ಕೆ ನಿಖರ ಕಾರಣ ಕೇಳಿ ತಿಳಿದುಕೊಳ್ಳಿ. ಆ ಸಂದರ್ಭದಲ್ಲಿ ನಿಮ್ಮ ಹಾಗು ನಿಮ್ಮ ಮಗುವಿಗೆ ಆಗುವ ಅಪಾಯ ಮತ್ತು ಉಪಯೋಗಗಳ ಬಗ್ಗೆ ವಿವರವಾಗಿ ಕೇಳಿ ತಿಳಿದುಕೊಳ್ಳಿ.

Leave a Reply

%d bloggers like this: