garbhapaata-eke-aaguttade

ಗರ್ಭಪಾತವು ತುಂಬಾ ಕಷ್ಟಕರ ಹಾಗು ಗೊಂದಲಮಯ ಆಗಿರುತ್ತದೆ. ಗರ್ಭಧಾರಣೆಯೊಂದಿಗೆ ಬರುವ ಆ ಉತ್ಸಾಹ, ಕಾತುರ ಇವಾಗ ಮಗು ಇಲ್ಲದೇ ಕರಗಿ ಹೋಗುತ್ತದೆ.

ನಿಮಗೆ ಗರ್ಭಪಾತ ಆದ ನಂತರ ನೀವು ಏಕಾಂಗಿ ಎಂದು ಭಾವಿಸುವಿರಿ, ಆದರೆ ವಾಸ್ತವದಲ್ಲಿ ಶೇಕಡಾ 15ರಷ್ಟು ಗರ್ಭಧಾರಣೆಗಳು ಗರ್ಭಪಾತದಲ್ಲಿ ಕೊನೆಗಾಣುತ್ತವೆ. ನಿಮ್ಮ ಕೈಯಿಂದ ಮಗುವನ್ನು ಉಳಿಸಲು ಆಗಲಿಲ್ಲ ಎಂದು ಪಶ್ಚಾತ್ತಾಪ ಪಡುತ್ತೀರಿ. ಆದರೆ ನೀವು ತಿಳಿಯಬೇಕಾದದ್ದು ಏನು ಅಂದರೆ ಬಹುತೇಕ ಬಾರಿ ಗರ್ಭಪಾತಕ್ಕೆ ಕಾರಣ ಉಂಟು ಮಾಡುವ ಸಂಗತಿಗಳು ನಿಮ್ಮ ಕೈಯಲ್ಲಿ ಇರುವುದೇ ಇಲ್ಲ. ಉದಾಹರಣೆಗೆ ಅನುವಂಶಿಕ ವಿಕೃತಿ(genetical abnormality).

ಇಲ್ಲಿ ನಾವು ಗರ್ಭಪಾತ ಏಕೆ ಆಗುತ್ತದೆ ಎಂಬುದಕ್ಕೆ ಕೆಲವು ಕಾರಣಗಳು ಹಾಗು ಅದನ್ನ ತಡೆಗಟ್ಟಲು ನಿಮಗೆ ಕೆಲವೊಂದು ಸಲಹೆಗಳನ್ನ ನೀಡುತ್ತಿದ್ದೇವೆ ಓದಿ :

೧. ಕ್ರೋಮೋಸೋಮ್ ವಿಕೃತಿ

ಇದು ಗರ್ಭಪಾತಕ್ಕೆ ಸಾಮಾನ್ಯವಾದ ಕಾರಣ. ನಿಮಗೆ ತಿಳಿದಿರುವ ಹಾಗೆ ಮಾನವನಿಗೆ 23 ಜೋಡಿ ಕ್ರೋಮೋಸೋಮ್ ಗಳು ಇರುತ್ತವೆ. ಒಂದು ಗುಂಪು ಅಮ್ಮನಿಂದ ಬಂದದ್ದು ಮತ್ತು ಇನ್ನೊಂದು ಅಪ್ಪನಿಂದ. ಈ ಎರೆಡು ಗುಂಪುಗಳು ಸರಿಯಾಗಿ ಹೊಂದಲಿಲ್ಲ ಅಂದರೆ ಗರ್ಭಪಾತ ಆಗುತ್ತದೆ. ಇದನ್ನ ತಡೆಯಲು ಯಾವುದೇ ದಾರಿ ಇಲ್ಲ, ಆದರೆ ನೀವು ಪುನಃ ಪ್ರಯತ್ನ ಮಾಡುತ್ತಲೇ ಇರಬಹುದು.

ನೀವು ಏನು ಮಾಡಬೇಕು?

ನಿಮ್ಮ ಗರ್ಭಪಾತಕ್ಕೆ ಇದೇ ಕಾರಣ ಆಗಿದ್ದರೆ, ಹತಾಶರಾಗದಿರಿ. ಈ ಕಾರಣದಿಂದ ನಿಮಗೆ ಎರಡನೇ ಬಾರಿಯೂ ಗರ್ಭಪಾತ ಆಗುವ ಸಾಧ್ಯತೆ ತುಂಬಾನೇ ಕಡಿಮೆ. ಅಕಸ್ಮಾತ್, ನಿಮಗೆ ಎರಡನೇ ಬಾರಿಯೂ ಗರ್ಭಪಾತ ಆದರೆ, ಅದು ಯಾವುದೋ ಗುಣಪಡಿಸಬಹುದಾದ ಕಾರಣವೇ ಆಗಿರುತ್ತದೆ.

೨. ಗರ್ಭಕೋಶದ ಆಕಾರ

ಗರ್ಭಕೊಶವು ಸರಿಯಾದ ಆಕಾರದಲ್ಲಿ ಇರದಿದ್ದರೆ, ಭ್ರೂಣಕ್ಕೆ ಸರಿಯಾಗಿ ನಾಟುವುದಕ್ಕೆ ಆಗುವುದಿಲ್ಲ. ಅಕಸ್ಮಾತ್ ಭ್ರೂಣವು ಅದಕ್ಕೆ ನಾಟಿಕೊಂಡರು, ಅದಕ್ಕೆ ಸರಿಯಾದ ಪೋಷಣೆ ಸಿಗದೇ ಬದುಕುಳಿಯುವುದಿಲ್ಲ.

ನೀವು ಏನು ಮಾಡಬೇಕು?

ಇದನ್ನ ಸರ್ಜರಿ ಮೂಲಕ ಸರಿಪಡಿಸಿಕೊಳ್ಳಬಹುದು. ಆದರಿಂದ ನೀವು ನಿಮ್ಮ ವೈದ್ಯರನ್ನ ಭೇಟಿ ಮಾಡಿ ನಿಮ್ಮ ಗರ್ಭಕೊಶವು ಸರಿಯಾಗಿ ಇದೆಯೇ ಎಂಬುದನ್ನು ತಿಳಿದುಕೊಳ್ಳಿ.

೩. ದುರ್ಬಲಗೊಂಡ ಗರ್ಭಕಂಠ

ಮೊದಲ ತ್ರೈಮಾಸಿಕದ ಕೊನೆಯಲ್ಲಿ, ದುರ್ಬಲಗೊಂಡ ಗರ್ಭಕಂಠವು ಗರ್ಭಪಾತಕ್ಕೆ ಕಾರಣ ಆಗಬಹುದು. ಏಕೆಂದರೆ ಭ್ರೂಣವು ಇಷ್ಟೊತ್ತಿಗೆ ಗಾತ್ರದಲ್ಲಿ ಬೆಳೆದಿದ್ದು, ಗರ್ಭಕಂಠವನ್ನ ಹಿಗ್ಗುವಂತೆ ಮಾಡಬಲ್ಲದು. ಹಾಗಾಗಿ ಗರ್ಭಕಂಠವು ದುರ್ಬಲಗೊಂಡಿದ್ದರೆ, ಭ್ರೂಣವನ್ನು ಹಿಡಿದು ಇಟ್ಟುಕೊಳ್ಳಲು ಸಾಧ್ಯ ಆಗುವುದಿಲ್ಲ.

ನೀವು ಏನು ಮಾಡಬೇಕು?

ನಿಮಗೆ ಈ ಕಾರಣದಿಂದ ಗರ್ಭಪಾತ ಆಗಿದ್ದರೆ, ನಿಮ್ಮ ವೈದ್ಯರು ನಿಮ್ಮ ಗರ್ಭಕಂಠಕ್ಕೆ ಹೊಲಿಗೆ ಹಾಕಿ ಅದನ್ನ ಮುಚ್ಚುತ್ತಾರೆ.

೪. ಪಿ.ಸಿ.ಓ.ಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್)

ಪಿಸಿಓಎಸ್ ಇರುವ ಹೆಂಗಸರಲ್ಲಿ ಗಂಡಸರ ಹಾರ್ಮೋನ್ ಆದ ಟೆಸ್ಟೋಸ್ಟೆರಾನ್ ಹೆಚ್ಚು ಪ್ರಮಾಣದಲ್ಲಿ ಇರುತ್ತದೆ, ಇದರಿಂದ ನಿಮ್ಮ ಅಂಡೋತ್ಪತ್ತಿಯಲ್ಲಿ ಅಸ್ವಸ್ತತೆ ಉಂಟು ಮಾಡುತ್ತದೆ ಹಾಗು ನಿಮ್ಮ ಋತುಚಕ್ರ ನಿಯಮಿತವಾಗಿ ಆಗದಂತೆ ಮಾಡುತ್ತದೆ.

ನೀವು ಏನು ಮಾಡಬೇಕು?

ನಿಮ್ಮ ವದ್ಯರು ಈ ಸಿಂಡ್ರೋಮ್ ಗೆ ಔಷಧಿಗಳನ್ನ ಸೂಚಿಸುತ್ತಾರೆ. ಇವುಗಳನ್ನ ಸೇವಿಸಿದರೆ ಆರೋಗ್ಯಕರ ಹಾಗು ಸಹಜವಾದ ಗರ್ಭಧಾರಣೆ ನಿಮ್ಮದಾಗುತ್ತದೆ.

೫. ಥೈರಾಯಿಡ್

ಗರ್ಭಧಾರಣೆಗೆ ನೆರವಾಗಿ ಹೊಣೆ ಆಗುವ ಮತ್ತೆರೆಡು ಸ್ತಿಥಿಗಳು ಎಂದರೆ ಅವು ಥೈರಾಯಿಡ್ ಮತ್ತು ಮಧುಮೇಹ. ಇವೆರೆಡು ಭ್ರೂಣದ ಉಳಿವಿಗೆ ಬೇಕಾಗಿರುವ ವಾತಾವರಣ ಹಾಳು ಮಾಡುತ್ತವೆ.

ನೀವು ಏನು ಮಾಡಬೇಕು?

ನಿಮ್ಮ ಮಧುಮೇಹವನ್ನ ನಿಯಂತ್ರಿಸಲು ಏನೇನು ಔಷಧಿಗಳು ಹಾಗು ಚಿಕಿತ್ಸೆಗಳು ಪಾಲಿಸಬೇಕೋ ಅದನ್ನೆಲ್ಲ ಪಾಲಿಸಿ. ಥೈರಾಯಿಡ್ ಅನ್ನು ಸರಿಯಾದ ಚಿಕಿತ್ಸೆ ಮತ್ತು ಔಷಧಿಗಳನ್ನ ಬಳಸುವುದರಿಂದ ಸರಿಪಡಿಸಬಹುದು.

೬. ಜೀವನ ಶೈಲಿ

ಧೂಮ್ರಪಾನ, ಮದ್ಯಪಾನ ಹಾಗು ಮಾದಕ ವಸ್ತುಗಳ ಬಳಕೆ ಗರ್ಭಪಾತಗಳಿಗೆ ಮುಖ್ಯ ಕಾರಣ ಎಂಬುದು ವಿಷಾದನೀಯ. ಅಲ್ಲದೆ ಮತ್ತೊಂದು ಜೀವನ ಶೈಲಿಯ ಸಂಗತಿ ಎಂದರೆ ಅದು ಕಟು ವಾತವರಣಗಳಿಗೆ ನಮ್ಮನ್ನ ತೆರೆದಿಟ್ಟುಕೊಳ್ಳುವುದು.

ನೀವು ಏನು ಮಾಡಬೇಕು?

ನಿಮ್ಮ ಮಗುವಿಗಾದರೂ ನೀವು ಧೂಮ್ರಪಾನವನ್ನ ನೀವು ನಿಲ್ಲಿಸಬೇಕು. ಇದು ತಂದೆ ಹಾಗು ತಾಯಿ ಇಬ್ಬರಿಗೂ ಅನ್ವಯಿಸುತ್ತದೆ. ಗರ್ಭತಾಳಿದ ನಂತರವಂತೂ ನೀವು ಮದ್ಯಪಾನ ಸಂಪೂರ್ಣ ನಿಷೇಧಿಸಲೇ ಬೇಕು.

ಇವುಗಳೆಲ್ಲವೂ ಗರ್ಭಪಾತಗಳಿಗೆ ಸಾಮಾನ್ಯ ಕಾರಣಗಳು. ನಿಮಗೂ ಒಮ್ಮೆ ಇದು ಆಗಿದ್ದರೆ, ಭರವಸೆ ಕಳೆದುಕೊಳ್ಳಬೇಡಿ. ನೀವು ಪ್ರಯತ್ನಿಸುತ್ತಲೇ ಇರಬೇಕು – ಬೇಕಾಗಿರುವುದು ತಾಳ್ಮೆ ಮಾತ್ರ.

ನಿಮಗೆ ಗೊತ್ತಿರುವ ಪ್ರತಿಯೊಂದು ತಾಯಿಯೊಡನೆ ಈ ಲೇಖನವನ್ನ ಹಂಚಿಕೊಳ್ಳಿ!

Leave a Reply

%d bloggers like this: