malaguva-bhangi-mattu-sambandha-1

ಮಲಗುವುದಕ್ಕಿಂತ ಸುಖಕರ ವಿಷಯ ಬೇರೇ ಏನಿದೆ ಹೇಳಿ. ಅದರಲ್ಲೂ ನಿಮ್ಮ ಪ್ರೀತಿ ಪಾತ್ರರ ಜೊತೆಗೆ! ನಿಮಗೆ ಗೊತ್ತೇ ನೀವು ಮಲಗುವ ರೀತಿ ನೀವು ಯಾವ ರೀತಿಯ ವ್ಯಕ್ತಿ ಎಂದು ತಿಳಿಸುತ್ತದೆ ಎಂದು?! ಉದಾಹರಣೆಗೆ ನೀವು ನಿಮ್ಮ ಹೊಟ್ಟೆ ಕೆಳಗೆ ಮಾಡಿ ಮಲಗಿದರೆ ನೀವು ಯಾವಾಗಲು ತುಂಟತನದಿಂದ ಕೂಡಿರುವಿರಿ ಮತ್ತು ಜೀವನದಲ್ಲಿ ಹೊಸ ಹೊಸ ಅನುಭವಗಳ ಬಗ್ಗೆ ಉತ್ಸಾಹ ಹೊಂದಿರುವಿರಿ ಎಂದು.

ಮನಶ್ಶಾಸ್ತ್ರ ಹೇಳುವ ಪ್ರಕಾರ ನೀವು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯೂ ನಿಮ್ಮ ಮನಸ್ಸು ನಿಯಂತ್ರಿಸುತ್ತದೆ, ಅಂದರೆ ನೀವು ಮಲಗುವ ರೀತಿಯನ್ನು ಕೂಡ! ಶಾರೀರಿಕ ಭಾಷೆಯನ್ನ ನಿಮ್ಮ ಮೆದುಳು ನಿಯಂತ್ರಿಸುತ್ತದೆ. ನೀವು ನಿಮ್ಮ ಪತಿಯೊಂದಿಗಿನ ಸಂಬಂಧ ಎಂತದ್ದು ಹಾಗು ಹೇಗಿದೆ ಎಂಬುದನ್ನು ಬಾಯಿ ಬಿಟ್ಟು ಹೇಳದೆ ಇರಬಹುದು, ಆದರೆ ನಿಮ್ಮ ಅಜಾಗೃತ ಮನಸ್ಸು ಅದನ್ನು ಮುಚ್ಚಿಡಲು ಸಾಧ್ಯವಿಲ್ಲ.

ಆಶ್ಚರ್ಯ ಎಂದರೆ ಇದು ತುಂಬಾ ನಿಖರವಾಗಿ ಇದ್ದು, ಫಲಿತಾಂಶ ನೋಡಿದರೆ ನೀವೇ ಚಕಿತರಾಗಬಹುದು!

೧. ಸಣ್ಣ ಚಮಚ ನೀವಾಗಿದ್ದರೆ

ಈ ಭಂಗಿಯಲ್ಲಿ ಮಲಗಿದರೆ, ನಿಮ್ಮ ಸಂಗಾತಿಯು ನಿಮ್ಮನ್ನು ತುಂಬಾನೇ ನಂಬುತ್ತಾರೆ ಎಂದು. ಈ ಭಂಗಿಯಲ್ಲಿ ನಿಮ್ಮ ಸಂಗಾತಿಯು ನಿಮಗೆ ಸುರಕ್ಷಾ ಭಾವನೆ ಬರುವಂತೆ, ನೀವು ಇವಾಗ ಒಳ್ಳೆಯ ಕೈಗಳಲ್ಲಿ ಇದ್ದೀರಾ ಎಂದೆನಿಸುವಂತೆ ನಿಮ್ಮನ್ನು ಬೆಚ್ಚಗೆ ಮುಚ್ಚಿಡುವರು. ಈ ಭಂಗಿಯು ನಿಮ್ಮ ಪತಿಯು ನಿಮ್ಮ ಮೇಲೆ ಯಾವುದೇ ವಿಷಯವಾದರೂ ನಿಮ್ಮನ್ನ ನಂಬುವರು ಹಾಗು ಮುಖ್ಯ ನಿರ್ಧಾರಗಳಲ್ಲಿ ನಿಮ್ಮ ಅಭಿಪ್ರಾಯಗಳನ್ನ ಕೇಳುವರು ಎಂದು ಸೂಚಿಸುತ್ತದೆ.

೨. ಬೆನ್ನಟ್ಟು

ಇದು ಕೂಡ ಮೊದಲನೇ ಭಂಗಿಯಂತೆ, ಆದರೆ ಇದು ಒಬ್ಬರು ಇನ್ನೊಬ್ಬರನ್ನ ಬೆನ್ನಟ್ಟಿ ಹೋಗುವಂತ ಭಂಗಿ. ನೀವು ಒದ್ದಾಡುತ್ತಾ ವಿರುದ್ದ ದಿಕ್ಕಿನೆಡೆಗೆ ಜರುಗಿದಾಗ, ನಿಮ್ಮ ಸಂಗಾತಿಯು ನಿಮ್ಮ ಬೆನ್ನಟ್ಟಿ (ಒಂಥರಾ ನಿಜವಾಗಿಯೂ!) ಬಂದು ಮತ್ತೆ ತಬ್ಬಿಕೊಂಡು ಮಲಗುವುದು.

ಇದನ್ನ ನಾವು ಎರಡು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು :

1- ವಿರುದ್ದ ದಿಕ್ಕಿನೆಡೆಗೆ ಜರುಗಿಕೊಂಡು ಹೋಗುವ ವ್ಯಕ್ತಿಯು, ತನ್ನ ಬೆನ್ನ ಹಿಂದೆ ಯಾರಾದರು ಬರಬೇಕೆಂದು ಹಾಗು ಅವರನ್ನ ಹಿಡಿಯಬೇಕೆಂದು ಅಂದುಕೊಳ್ಳುವುದು…. ಅಂದರೆ ಅವರ ಹೃದಯ ಗೆಲ್ಲುವುದು ಎಂದು!  

2- ಅಥವಾ ಅವರನ್ನ ಪಡೆದುಕೊಳ್ಳುವುದಕ್ಕೆ ಕಷ್ಟ ಎಂದು ತೋರಿಸುವುದು.

ಮೂರನೇ ಕಾರಣ ಏನಿರಬಹುದು ಎಂದರೆ, ಅವರಿಗೆ ಜಾಗ ಸಾಲುತ್ತಿಲ್ಲ, ಅದಕ್ಕೆ ಜರುಗಿರಬಹುದೆಂದು!

೩. ಅವರ ಎದೆ ಮೇಲೆ ಮಲಗುವುದು

ಈ ಭಂಗಿಯು ನೀವು ನಿಮ್ಮ ಪತಿಯ ಮೇಲೆ ನಿಮ್ಮ ಸುಭದ್ರತೆಗೆ ಹಾಗು ಸುರಕ್ಷತೆಗೆ ಅವಲಂಬಿತರಾಗಿದ್ದೀರಿ ಎಂದು ತೋರಿಸುತ್ತದೆ. ನಿಮ್ಮ ಪತಿಯು ತಲೆ ಎತ್ತಿ, ಎದೆ ಉಬ್ಬಿಸಿಕೊಂಡು, ಬೆನ್ನಿನ ಮೇಲೆ ಮಲಗಿಕೊಂಡರೆ ಅವರು ಆತ್ಮವಿಶ್ವಾಸ ಉಳ್ಳ ಒಬ್ಬ ಗಟ್ಟಿ ವ್ಯಕ್ತಿ ಎಂದು. ಅವರು ತಮ್ಮ ಎಲ್ಲಾ ಶಕ್ತಿ ಉಪಯೋಗಿಸಿ ನಿಮಗಾಗಿ ಹೋರಾಡುತ್ತಾರೆ. ಅಯ್ಯೋ! ಕೇಳೋದಕ್ಕೆ ಎಷ್ಟು ಖುಷಿ ಅಲ್ಲವಾ?

೪. ಮುಖಾಮುಖಿ

ಮುಖಾಮುಖಿಯಾಗಿ ಮಲಗಿಕೊಳ್ಳುವುದು ತುಂಬಾ ಪ್ರಣಯಮಾಯವಾಗಿ ಕಾಣಬಹುದು. ಆದರೆ, ನಿಮಗೆ ಗೊತ್ತೇ ಈ ರೀತಿ ಮಲಗುವುದು ನಿಮ್ಮ ಪತಿಯು ನೀವು ಅವರಿಂದ ದೂರ ಆಗುತ್ತಿದ್ದೀರಿ ಎಂದು ಹೇಳಲು ಪ್ರಯತ್ನಿಸುತ್ತಿರುವುದು ಎಂದು?

೫. ನಾನೊಂದು ತೀರ, ನೀನೊಂದು ತೀರ

ಇಬ್ಬರು ಒಬ್ಬರಿಗೊಬ್ಬರು ಮುಖ ಬೆನ್ನು ಮಾಡಿಕೊಂಡು ಮಲಗುವುದು ನೀರಸ ಅನಿಸಬಹುದು. ನಿಮಗೆ ನಿಮ್ಮ ಪತಿಯು ನಿಮ್ಮಿಂದ ದೂರ ಆಗುತ್ತಿರುವರು ಎಂದು ಹಾಗು ಎಷ್ಟೊಂದು ರಮಣೀಯ ಕ್ಷಣಗಳು ಕಳೆದು ಹೋಗುತ್ತಿವೆ ಎಂದು ಅನಿಸಬಹುದು. ಆದರೆ ಇದು ನಿಮ್ಮ ಪತಿಯು ಅವರ ಅಜಾಗೃತ ಮನಸಿನಿಂದ ನಿಮಗೆ ಒಂದು ವಿಷಯ ಹೇಳುತ್ತಿರುವುದು. ಆ ವಿಷಯವೇ- ನಿಮ್ಮ ಪತಿಗೆ ಅವರದ್ದೇ ಆದ ಸ್ವಲ್ಪ ಸಮಯ ಬೇಕೆಂದು.

ಅಲ್ಲದೆ, ಇದು ನಿಮ್ಮ ಪತಿಯು ನಿಮ್ಮಿಂದ ಏನಾದರು ಮುಚ್ಚಿಡುತ್ತಿರಬಹುದು ಎಂದು ಅಥವಾ ಕೆಲಸದಲ್ಲಿ ತುಂಬಾ ಒತ್ತಡವಿದೆ ಎಂದು ಕೂಡ ಆಗಿರಬಹುದು.   

Leave a Reply

%d bloggers like this: