modala-edehaalunisuvaga-baruva-bhaavanegalu

ಎದೆಹಾಲು ಉಣಿಸುವುದು ಹೆಣ್ಣಿಗೆ ಒಂದು ತುಂಬಾ ಭಾವನಾತ್ಮಕ ಅನುಭವ ಆಗಿರುತ್ತದೆ. ನಿಮ್ಮ ಸ್ತನಗಳ ಅಸ್ತಿತ್ವಕ್ಕೆ ಒಂದು ಕಾರಣವಿತ್ತು, ಕೊನೆಗೂ ಈಗ ಅದು ನಿಮ್ಮ ಪುಟ್ಟ ಕಂದಮ್ಮನ ಪೋಷಣೆಯ ಮೂಲಕ ಈಡೇರಿತು.

ಎದೆಹಾಲು ಉಣಿಸುವುದು ಒಂದು ನೈಸರ್ಗಿಕ ವಿದ್ಯಮಾನ ಆಗಿದ್ದು, ಇದು ನಿಮ್ಮ ತಾಯ್ತನದ ಆರಂಭವನ್ನ ಸೂಚಿಸುತ್ತದೆ. ಒಂದು ಮಗುವು ತನ್ನ ತಾಯಿಯೊಂದಿಗೆ ಮೊದಲ ಬಾರಿ ಸಂಪರ್ಕ ಹೊಂದುವುದು ಸ್ತನಗಳಿಂದಲೇ. ಮಗುವು ತನಗೆ ಸಿಗಬೇಕಾದ ಪೋಷಕಾಂಶಗಳನ್ನು ಪಡೆಯಲು ಹಾಗು ತನ್ನ ಪ್ರತಿರಕ್ಷಣ ವ್ಯವಸ್ತೆ ವೃದ್ಧಿಸಿಕೊಳ್ಳಲು ನೀವು ಎದೆಹಾಲು ಮೊದಲಬಾರಿ ಉಣಿಸುವಾಗ ಬರುವ ಕಲಾಸ್ಟ್ರುಂ ಬೇಕು.

ಮಗುವಿಗೆ ಎದೆಹಾಲು ಉಣಿಸುವಾಗ ತಾಯಿಯಲ್ಲಿ ಹಲವು ಭಾವನೆಗಳ ಸಾಗರವೇ ತುಂಬಿರುತ್ತದೆ. ತಾಯಿಯು ಭಾವನೆಗಳ ಜೋಕಾಲಿ ಏರಿರುತ್ತಾಳೆ. ಏಕೆಂದರೆ ತಾಯಿಯು ಎದೆಹಾಲು ನೀಡುವಾಗ ಎರೆಡು ಹಾರ್ಮೋನ್ ಗಳು ಬಿಡುಗಡೆ ಹೊಂದುತ್ತವೆ, ಅವುಗಳೇ – ಆಕ್ಸಿಟೋಸಿನ್ ಹಾಗು ಪ್ರೋಲಾಕ್ಟಿನ್. ಆಕ್ಸಿಟೋಸಿನ್ ಅನ್ನು ಖುಷಿಯ ಹಾರ್ಮೋನ್ ಎಂದು ಕರೆಯಲ್ಪಡುವುದು ಹಾಗು ಬಿಡುಗಡೆ ಹೊಂದಿದಾಗ ತಾಯಿಯು ಸಂತಸ ಹಾಗು ಕೃತಜ್ಞತ ಭಾವ ಹೊಂದುತ್ತಾಳೆ. ಆಕ್ಸಿಟೋಸಿನ್ ಮತ್ತು ಪ್ರೋಲಾಕ್ಟಿನ್ ಎರೆಡು ಕೂಡಿದರೆ ಆಗುವುದೇ ಎದೆಹಾಲು !

ಹೀಗಾಗಿ, ಹೇಳುವುದಾದರೆ ತಾಯಿಯು ತನ್ನ ಮಗುವಿಗೆ ಈ ಜಗತ್ತಿನಲ್ಲಿ ಬದುಕಲು ಪ್ರತಿರಕ್ಷಣೆಯೊಂದಿಗೆ ಬಹಳಷ್ಟು ಹರ್ಷವನ್ನು ಕೂಡ ನೀಡುವಳು. ಇದು ತಾಯಿ ಹಾಗು ಮಗುವಿನ ನಡುವೆ ಬಾಹ್ಯವಾಗಿ ಆಗುವ ಮೊದಲ ಸಂಪರ್ಕ ಆಗಿರುವುದರಿಂದ, ಇದು ತಾಯಿಗೆ ಅತ್ಯಂತ ವಿಶೇಷ ಸಂದರ್ಭ ಆಗಿದ್ದು ತನ್ನ ಮಗುವಿನೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಲು ಸದಾವಾಕಾಶ ಆಗಿರುತ್ತದೆ.

ತನ್ನ ಮಡಿಲಿನಲ್ಲಿ ಮಗುವನ್ನ ಇಟ್ಟುಕೊಂಡು, ಅದನ್ನು ಸವರುತ್ತಾ ಹಾಲು ಕುಡಿಸುವುದಕ್ಕಿಂತ ಸಂತಸದ ವಿಷಯ ತಾಯಿಗೆ ಮತ್ತೊಂದಿಲ್ಲ. ನಾವು ಮಾನವರು ಪ್ರಕೃತಿಯ ಈ ಮುದ್ದಾದ ವಿದ್ಯಮಾನವನ್ನ ಅನುಭವಿಸುವ ಭಾಗ್ಯ ಇದ್ದು, ಇದರ ಬಗ್ಗೆ ಹೇಳಲು ಪದಗಳು ಸಿಗುವುದಿಲ್ಲ.

ಮಾನಸಿಕವಾಗಿ ತಾಯಿಯು ಒಂದು ಪರಂಪರೆಯನ್ನೇ ಹುಟ್ಟು ಹಾಕುತ್ತಿರುವೆ ಎಂಬ ಭಾವನೆಯಿಂದ, ಆಕೆಯಲ್ಲಿ ದೃಢವಾದ ವಿಶ್ವಾಸದ ಮತ್ತು ಶೌರ್ಯದ ಭಾವನೆ ಹುಟ್ಟುತದೆ. ಅವಳು ಎದೆಹಾಲು ಉಣಿಸುತ್ತಲೇ, ಅವಳ ಮಗು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಎತ್ತರವಾಗಿ, ಗಟ್ಟಿಯಾಗಿ, ಚುರುಕಾಗಿ ಬೆಳೆಯುತ್ತದೆ. ಅವಳ ಕುಟುಂಬವು ಬೆಳೆಯುವುದಕ್ಕೆ ಅವಳು ಸಾಕ್ಷಿಯಾಗಿದ್ದಾಳೆ!

ಆದರೆ ಎಲ್ಲಾದಕ್ಕೂ ಇನ್ನೊಂದು ಕೋನ ಇದ್ದೇ ಇರುತ್ತದೆ ನೋಡಿ, ಹಾಗಾಗಿ ಇದು ಕೇಳಲು ಎಷ್ಟು ಅಮೋಘ, ಎಷ್ಟು ಆರಾಧನೀಯ ಎನಿಸಬಹುದು. ಆದರೆ ಬಹಳಷ್ಟು ಹೆಂಗಸರು ಒಂದು ಮಾನಸಿಕ ದುಸ್ತಿತಿಯನ್ನ ಎದುರಿಸುತ್ತಾರೆ. ಅದುವೇ ಪ್ರಸವನಂತರದ ಅಸ್ವಸ್ತತೆ ಅಥವಾ ಪೋಸ್ಟ್-ಪಾರ್ಟಂ ಬ್ಲೂಸ್. ಇದು ಒಂದು ತಾತ್ಕಾಲಿಕ ಸಮಸ್ಯೆ ಆಗಿದ್ದು, ಇದಾದಾಗ ತಾಯಂದಿರು ನಕಾರಾತ್ಮಕ ಭಾವನೆಗಳಾದ ಆತಂಕ, ಒತ್ತಡ, ಹಾಗು ಖಿನ್ನತೆಯನ್ನ ಅನುಭವಿಸುತ್ತಾರೆ.

ಈ ಸ್ತಿತಿಯಲ್ಲಿ ತಾಯಂದಿರು ಮಾನಸಿಕ ಅಸಮತೋಲನ, ಅಳುವುದು, ಹಸಿವಿಲ್ಲದಂತೆ ಆಗುವುದು, ನಿದ್ರಾಹೀನತೆಗಳನ್ನ ಅನುಭವಿಸುವರು. ಇಷ್ಟೇ ಅಲ್ಲದೆ ಅವೆಲ್ಲವುಗಳಿಗಿಂತ ಇನ್ನೂ ದುರದೃಷ್ಟಕರ ವಿಷಯ ಅಂದರೆ ಅದು ತಾಯಿಗೆ ತನ್ನ ಮಗುವಿನ ಜೊತೆಯಲ್ಲೇ ಬಾಂಧವ್ಯ ಹೊಂದಲು ಆಗದೆ ಇರುವುದು. ಆದರೆ ಇವೆಲ್ಲವುಗಳಿಗೂ ಪರಿಹಾರ ಇದ್ದೇ ಇದೆ !

ಎದೆಹಾಲು ಉಣಿಸುವುದು ತಾಯಿಗೆ ಮಗುವಿನ ಜೊತೆಗೆ ಬಾಂಧವ್ಯ ಬೆಳೆಸಿಕೊಳ್ಳಲು ಸಹಾಯ ಮಾದುವದಷ್ಟೇ ಅಲ್ಲದೆ ತಾಯ್ತನದ ಅಗಾಧತೆಗೆ ಒಗ್ಗಿಕೊಳ್ಳಲು ಸಹಾಯ ಮಾಡುತ್ತದೆ.

ತಾಯಿಯ ಹೃದಯದಲ್ಲಿ ಹಾಗು ಮನಸಿನಲ್ಲಿ ಆಕೆಗೆ ತಿಳಿಯದೆಯೇ ತಾಯ್ತನದ ಸಹಜ ಪ್ರವೃತ್ತಿಗಳು ನೆಲೆಯೂರುತ್ತವೆ. ಒಂದು ಕ್ಷಣವೂ ಅತ್ತಿತ್ತ ನೋಡದೆ ಆಕೆಯ ಮಗುವಿಗೆ ಒಂದು ಭಾಷೆ ನೀದುವಳು. ಅದುವೇ “ನಾನು ನಿನ್ನನ್ನು ನನ್ನ ಕೋಣೆಯ ಉಸಿರು ಇರುವವರೆಗೂ ರಕ್ಷಿಸುತ್ತೇನೆ ಮತ್ತು ಪ್ರೀತಿಸುತ್ತೇನೆ” ಎಂದು ! ಒಂದು ಹೆಣ್ಣು ಅನುಭವಿಸುವ ತಾಯ್ತನದ ಈ ಅಗಾಧ ಭಾವನೆಯನ್ನ ಬೇರೇ ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ.  

Leave a Reply

%d bloggers like this: