ಗರ್ಭಪಾತದ-ನಂತರ-ಮತ್ತೆ-ಗರ್ಭಧರಿಸಲು-ಎಷ್ಟು-ಸಮಯ-ಬಿಡಬೇಕು

ಗರ್ಭಪಾತ ಉಂಟು ಮಾಡುವ ಬರಿದಾದ ಭಾವನೆಯನ್ನ ಬೇರೇ ಯಾವುದು ಕೂಡ ಉಂಟು ಮಾಡಲಿಕ್ಕೆ ಸಾಧ್ಯವಿಲ್ಲ. ಮಗುವು ಇನ್ನೂ ಕೇವಲ ಭ್ರೂಣ ಹಂತದಲ್ಲಿ ಇತ್ತು ಎನ್ನುವುದು ವಿಷಯವೇ ಆಗುವುದಿಲ್ಲ. ಗರ್ಭಪಾತವು ಒಂದು ತಾಯಿಗೆ ದೈಹಿಕವಾಗಿ ಹಾನಿ ಮಾಡುವುದಕ್ಕಿಂತ ಮಾನಸಿಕವಾಗಿ ಹೆಚ್ಚು ಹಾನಿ ಮಾಡುತ್ತದೆ. ಮಗುವನ್ನ ಕಳೆದುಕೊಂಡ ದಂಪತಿಗಳು ಮತ್ತೆ ಪ್ರಯತ್ನಿಸಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಗರ್ಭ ಧರಿಸಬೇಕೆಂದು ತುಂಬಾ ಇಚ್ಚಿಸುವರು.

ನಿಜ ಹೇಳಬೇಕೆಂದರೆ, ಗರ್ಭಪಾತ ಆದ ಕೆಲವೇ ದಿನಗಳಲ್ಲಿ ಮತ್ತೆ ಆರೋಗ್ಯಕರ ಮಗುವಿನ ಗರ್ಭ ಧರಿಸಿದರೆ, ಅದು ತುಂಬಾನೇ ಸಂತೋಷದ ವಿಷಯ. ದಂಪತಿಗಳಿಗೆ ಶೋಕಿಸಲು ಸಮಯವಿರುತ್ತದೆ ಆದರೆ ಹತಾಶೆಯಿಂದ ಖಿನ್ನತೆಗೆ ಒಳಗಾಗುವಷ್ಟು ಸಮಯವಿಲ್ಲ. ಹೊಸ ಗರ್ಭಧಾರಣೆಯು ಹೊಸಬೆಳಕನ್ನು ತರುತ್ತದೆ ಹಾಗು ಮಗುವಿನ ಜನನವು ಬರಿದಾದ ಭಾವನೆಯನ್ನ ಅಳಿಸಿ ಹಾಕುತ್ತದೆ.

ಬಹುತೇಕ ವೈದ್ಯರು ಗರ್ಭಪಾತ ನಂತರ ಮತ್ತೆ ಗರ್ಭಧರಿಸಲು ಕಾಯಲು ಬೇರೇ ಬೇರೇ ಕಾಲಾವಧಿಗಳನ್ನ ಸೂಚಿಸುತ್ತಾರೆ. ಆದರೆ ವೈದ್ಯರು ಸಹಜವಾಗಿ ಸೂಚಿಸುವುದು ಒಂದು ಋತುಚಕ್ರ ಆಗುವವರೆಗು ಕಾಯಬೇಕೆಂದು. ಅಂದರೆ ಕನಿಷ್ಠ ಒಂದು ತಿಂಗಳಾದರೂ ಎಂದು. ತಾಯಿಯು ಗುಣಮುಖಳಾಗಳು ಬೇಕಿರುವ ಸಮಯ ಹಾಗು ಗರ್ಭಪಾತ ನಂತರದ ಆಕೆಯ ಸ್ತಿತಿಯ ಆಧಾರದ ಮೇಲೆ ಈ ಕಾಲಾವಧಿಯು ಬೇರೇ ಬೇರೇ ಆಗಿರುತ್ತದೆ.

ಕೆಲವೊಂದು ವೈದ್ಯರು ದಂಪತಿಗಳಿಗೆ ಮೂರು ತಿಂಗಳುಗಳು ಕಾಯಲು ಹೇಳುತ್ತಾರೆ. ವೈದ್ಯರು ಹೇಳುವಂತಹ ಗರಿಷ್ಟ ಅಂದರೆ ಅತಿಹೆಚ್ಚು ಕಾಲವಧಿಯೇ ಮೂರು ತಿಂಗಳು. ಮೂರು ತಿಂಗಳುಗಳು ತಾಯಿಗೆ ಕೇವಲ ದೈಹಿಕವಾಗಿ ಚೇತರಿಸಿಕೊಳ್ಳಲು ಸಮಯ ನೀಡುವುದಷ್ಟೇ ಅಲ್ಲದೆ ಮಾನಸಿಕವಾಗಿಯೂ ಮತ್ತೊಂದು ಗರ್ಭಧಾರಣೆಗೆ ಸಿದ್ದಳಾಗಳು ಸಮಯ ನೀಡುತ್ತದೆ. ದಂಪತಿಗಳು ಈ ಮೂಲಕ ಮಾನಸಿಕವಾಗಿಯು ತಮ್ಮ ನಷ್ಟದಿಂದ ಹೊರಗೆ ಬರುವರು ಹಾಗು ಒಳ್ಳೆಯ ಮನಸ್ಸಿನಿಂದ ಹೊಸ ಗರ್ಭಧಾರಣೆಯನ್ನ ಮುಗಿಸಬಹುದು. ನಿಖರವಾದ ತಾಳಬೇಕಾದ ಸಮಯವೂ ಮತ್ತಷ್ಟು ಅಂಶಗಳ ಮೇಲೆ ಅವಲಂಬಿತ ಆಗಿರುತ್ತವೆ. ಅವುಗಳೆಂದರೆ – ದಂಪತಿಗಳ ವಯಸ್ಸು, ಧೂಮಪಾನದ ಇತಿಹಾಸ, ಮದ್ಯಪಾನ ಸೇವನೆ, ದೈಹಿಕ ಸ್ತಿಥಿ, ಫಲವತ್ತತೆ, ಹಿಂದಿನ ಗರ್ಭಧಾರಣೆಗಳು ಹಾಗು ಗರ್ಭಪಾತಗಳು, ಇತರೆ.

ಇಷ್ಟೆಲ್ಲಾ ಹೇಳಿದಮೇಲೆ, ದಂಪತಿಗಳಿಗೆ ಖುಷಿ ನೀಡುವ ವಿಷಯ ಎಂದರೆ ಅದು ಅವರು ಮತ್ತೊಮ್ಮೆ ಗರ್ಭ ಧರಿಸಲು ಕಡ್ಡಾಯವಾಗಿ ಮೂರು ತಿಂಗಳು ಕಾಯಲೇ ಬೇಕು ಎಂದೇನಿಲ್ಲ. ನೀವು ನೀಡುತ್ತಿರುವ ಬಿಡುವಿನ ಸಮಯ ಮತ್ತು ಗರ್ಭಧಾರಣೆಯು ಆರೋಗ್ಯಕರವಾಗಿ ಸಾಗುವ ಸಾಧ್ಯತೆಗಳಿಗೆ ಸಂಬಂಧವಿಲ್ಲ. ನೀವು ನೀಡುವ ಅಂತರವು ನಿಮ್ಮ ಗರ್ಭಧಾರಣೆಯ ಮೇಲೆ ಪ್ರಭಾವ ಬೀರುವುದಿಲ್ಲ.

ಕೆಲವೊಂದು ಪ್ರಕರಣಗಳು ಇದಕ್ಕೆ ಹೊರತಾಗಿ ಇರುತ್ತವೆ, ಅಂತಹ ಸಮಯದಲ್ಲಿ ವೈದ್ಯರು ನಿಮಗೆ ಮೂರು ತಿಂಗಳವರೆಗೆ ಕಾಯಲೇ ಬೇಕು ಎಂದು ಗಂಭೀರವಾಗಿ ಸೂಚಿಸುತ್ತಾರೆ. ಇಂತಹ ಸಮಯದಲ್ಲಿ ನೀವು ಮಾಡಬೇಕಾಗಿರುವುದು ಒಂದೇ : ನಿಮ್ಮ ವೈದ್ಯರ ಮಾತನ್ನ ಕೇಳುವುದು. ನೀವು ಅವರ ಮಾತು ಕೇಳದೆ ಗರ್ಭ ಧರಿಸಿ ಮುಂದೆ ತೊಂದರೆ ಅನುಭವಿಸುವುದಕ್ಕಿಂತ ಅವರ ಮಾತನ್ನ ಪಾಲಿಸಿ ತಡವಾದರೂ ಆರೋಗ್ಯಕರ ಗರ್ಭಧಾರಣೆ ಪಡೆದುಕೊಳ್ಳುವುದು ಸೂಕ್ತ.

ಅನೇಕ ಸಂಶೋಧನೆಗಳ ತಿಳಿದು ಬಂದಿರುವ ಪ್ರಕಾರ, ಹೆಂಗಸರು ಗರ್ಭಪಾತ ಆದ ಕೂಡಲೇ ಅತ್ಯಂತ ಫಲವತ್ತಾದ ಸ್ತಿತಿಯಲ್ಲಿ ಇರುತ್ತಾರೆ. ಆದರೆ ನಿಮ್ಮ ಗರ್ಭಕೋಶದ ಒಳ ಲೈನಿಂಗ್ ಪುನಃ ಬೆಳೆದು ನಿಮ್ಮ ಭ್ರೂಣವನ್ನ ಬಿಗಿಯಾಗಿ ಹಿಡಿದಿಟ್ಟುಕೊಳ್ಳುವಂತೆ ಆಗಲು ನೀವು ಒಂದು ರುತುಚಕ್ರದಷ್ಟು ಸಮಯ ಕೊಡುವುದು ಒಳ್ಳೆಯದು.

ಆದರೆ ಬಹಳಷ್ಟು ವೈದ್ಯರು ದಂಪತಿಗಳು ಮಾನಸಿಕವಾಗಿ ಚೇತರಿಸಿಕೊಳ್ಳುವವರೆಗೆ ಕಾಯಬೇಕೆಂದು ಹೇಳುತ್ತಾರೆ. ಏಕೆಂದರೆ ಮಾನಸಿಕ ಸ್ತಿಥಿಯು ಗರ್ಭತಾಳುವುದರ ಮೇಲೆ ಪರಿಣಾಮ ಬೀರುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ(WHO) ನಡೆಸಿದ 30000 ಹೆಂಗಸರನ್ನು ಒಳಗೊಂಡ ಸಂಶೋಧನೆಯು ಕೆಲವೊಂದು ಅತ್ಯಂತ ಕಠಿಣ ಪರಿಸ್ತಿಥಿಯಲ್ಲಿ ಮಾತ್ರ ಹೆಂಗಸರು ಗರ್ಭಪಾತದ ನಂತರ ಪುನಃ ಗರ್ಭ ಧರಿಸಲು 6 ತಿಂಗಳಿಂದ 18 ತಿಂಗಳುಗಳ ವರೆಗೆ ಕಾಯಬೇಕಾಯಿತು ಎಂದು ತಿಳಿಸಿದೆ.

ಇದರಿಂದ ನಾವು ತಿಲಿಯಬಹುದಾದದ್ದು ಏನೆಂದರೆ, ಎಲ್ಲರಿಗೂ ಒಂದೇ ಕಾಲವಧಿಯಷ್ಟು ಬಿಡುವು ನೀದಬೇಕೆಂದು ಹೇಳಲು ಸಾಧ್ಯವಿಲ್ಲ. ಅದಕ್ಕಾಗಿ ನೀವು ನಿಮ್ಮ ವೈದ್ಯರ ಮಾತನ್ನ ಕೇಳಿ ಅವರು ಹೇಳುವುದನ್ನ ಪಾಲಿಸುವುದು ತುಂಬಾನೇ ಸೂಕ್ತ.

Leave a Reply

%d bloggers like this: