ಪ್ರಸವಕ್ಕೆ-ಆಸ್ಪತ್ರೆಯನ್ನು-ಆಯ್ಕೆಮಾಡುವ-ಮುನ್ನ-ತಿಳಿದುಕೊಳ್ಳಲೇ-ಬೇಕಾದ-೫-ಅಂಶಗಳು-xyz

ನೀವು ತಾಯಿಯಾದ ಸಿಹಿಸುದ್ದಿಯನ್ನು ಕೇಳಿದ ಸಂಭ್ರಮದಲ್ಲಿದ್ದಾಗಲೂ ಅಥವಾ ಆಗಲೇ ೩ ತಿಂಗಳುಗಳು ಇದೇ ಸಂಭ್ರಮದಲ್ಲಿ ಕಳೆದಿದ್ದಾಗಲೂ ನಿಮ್ಮ ಮನದಾಳದಲ್ಲಿ ಹುದುಗಿರುವ ಆತಂಕವೇನೇಂದು ನಾವು ಅರಿತಿದ್ದೇವೆ..! ಮಾಸತುಂಬಿದ ನಂತರ ಪ್ರಸವವು ಯಾವುದೇ ಸಂದರ್ಭದಲ್ಲೂ ನಡೆಯಬಹುದು. ಆದರೆ, ಪ್ರಸವಕ್ಕೆ ಸರಿಯಾದ ಹೆರಿಗೆ ಆಸ್ಪತ್ರೆಯೊಂದನ್ನು ಕಂಡುಕೊಳ್ಳಬೇಕು.

ಸರಿಯಾದ ಆಸ್ಪತ್ರೆಯನ್ನು ಮೊದಲೇ ಹುಡುಕಿಟ್ಟುಕೊಂಡದ್ದೇ ಆದರೆ, ಕೊನೇ ಘಳಿಗೆಯಲ್ಲಿನ ಪರದಾಟವನ್ನು ತಪ್ಪಿಸಬಹುದು.

ಉಚಿತವಾದ ಆಸ್ಪತ್ರೆಗಳನ್ನು ಕಂಡುಕೊಳ್ಳಲಿರುವ ಮಾನದಂಡಗಳ ಬಗ್ಗೆ ಅವಲೋಕಿಸೋಣ.

೧. ಆಸ್ಪತ್ರೆಯು ಸುಸಜ್ಜಿತವಾಗಿದೆಯೇ ?

ದೇವರ ಅನುಗ್ರಹದಿಂದ ನಿಮಗೆ ಸುಖ ಪ್ರಸವವಾದರೆ ತುಂಬಾ ಸಂತೋಷ. ಆದರೆ, ಪ್ರಸವದ ಕೊನೇ ಘಳಿಗೆಯವರೆಗೆ ಮುಂದೆ ಏನಾಗುವುದೋ ಎಂದು ನುಡಿಯಲು ಸಾಧ್ಯವಿಲ್ಲ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿಂದ ಸುಸಜ್ಜಿತವಾದ ಆಸ್ಪತ್ರೆಯನ್ನು ಆಯ್ದುಕೊಳ್ಳುವುದು ಉತ್ತಮ. ಆಸ್ಪತ್ರೆಯು ೨೪ ಗಂಟೆಗಳ ಕಾಲವು  ಕಾರ್ಯಪ್ರವೃತ್ತವಾಗಿರುವ ಓಪರೇಶನ್ ಥಿಯೇಟರ್ ಹಾಗೂ ಅಗತ್ಯಬೀಳುವಷ್ಟು ರಕ್ತವನ್ನು ಪೂರೈಸುವ ಬ್ಲಡ್ ಬೇಂಕುಗಳು, ಮಕ್ಕಳಿಗಾಗಿ ಇನ್ಕ್ಯುಬೇಟರ್ ಹಾಗೂ ಐ ಸಿ ಯು ಗಳಂತಹ ಸೌಕರ್ಯಗಳನ್ನೆಲ್ಲಾ ಒಳಗೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳತಕ್ಕದ್ದು.

ಅಕಾಲಿಕ ಹೆರಿಗೆಯ ಸಮಯದಲ್ಲಿ ಅಗತ್ಯ ಸಲಕರಣೆಗಳೊಂದಿಗೆ ಸುಸಜ್ಜಿತವಾಗಿರುವ ಆಸ್ಪತ್ರೆಗಳು ಮೃತಸಂಜೀವಿನಿಗಳಾಗುತ್ತವೆ.

೨. ಸಿಸೇರಿಯನ್ ಮತ್ತು ವಿ ಬಿ ಎ ಸಿ ಗಳಿಗೆ ಪ್ರಾಧಾನ್ಯತೆ ನೀಡಲಾಗಿದೆಯೇ ?

ಮೊದಲ ಹೆರಿಗೆಯು ಸಿಸೇರಿಯನ್ ಆಗಿದ್ದರೂ, ಎರಡನೇ ಮಗುವಿನಿಂದ ಸುಖಪ್ರಸವನ್ನು ಅನುಭವಿಸಲು ಬಯಸುವ ತಾಯಂದಿರು ವಿ ಬಿ ಎ ಸಿ ಗಳನ್ನು ಪ್ರೋತ್ಸಾಹಿಸುವಂತಹ ಆಸ್ಪತ್ರೆಗಳಲ್ಲಿ ದಾಖಲಾಗುವುದೊಳ್ಳೆಯದು. ವಿ ಬಿ ಎ ಸಿ ಯು ಸ್ವಲ್ಪ ಕ್ಲಿಷ್ಟಕರವಾದ ಸಮಸ್ಯೆಯಾದ ಕಾರಣ ಎಲ್ಲಾ ಪ್ರಸೂತಿ ತಜ್ಞರೂ ಅದನ್ನು ಪ್ರೋತ್ಸಾಹಿಸುವುದಿಲ್ಲ.

ಮೊದಲ ಪ್ರಸವದ ಸಂದರ್ಭಗಳಲ್ಲಿ ನಿಮ್ಮ ಗರ್ಭಾಶಯವು ಬಿರಿಯುವಿಕೆಗೆ ಒಳಗಾಗಿದ್ದರೆ ಅಥವಾ ನೀವು ೩೦ ವರ್ಷಕ್ಕಿಂತಲೂ ಮೇಲ್ಪಟ್ಟವರಾಗಿದ್ದರೆ ವಿ ಬಿ ಎ ಸಿ ಯನ್ನು ವೈದ್ಯರು ಶಿಫಾರಸು ಮಾಡುವುದಿಲ್ಲ. ಆದರೂ ವಿ ಬಿ ಎ ಸಿ ಎನ್ನುವುದು ಕಷ್ಟಸಾಧ್ಯವಲ್ಲ ಎನ್ನುವುದನ್ನು ಹಲವು ಬಾರಿ ಸಾಬೀತುಗೊಳಿಸಲಾಗಿದೆ. ಆದಕಾರಣ ನೀವು ವಿ ಬಿ ಎ ಸಿ ಯನ್ನು ಬಯಸುತ್ತೀರೆಂದು ನಿಮ್ಮ ಡಾಕ್ಟರಲ್ಲಿ ತಿಳಿಯಪಡಿಸಬಹುದು.

೩. ಪ್ರಸವದ ಬಗೆಗಿನ ಪೂರ್ವಮಾಹಿತಿಯನ್ನು ನೀಡುವುದೇ ?

ನಿಮ್ಮನ್ನು ಪ್ರಸವಕ್ಕೆ ಅಣಿಗೊಳಿಸಲಿರುವ ಪ್ರಿಪರೇಟರಿ ಸೆಶನ್ಸ್ ಗಳನ್ನು ನೀಡಲಾಗುತ್ತಿದೆಯೇ ಎಂದು ವಿಚಾರಿಸಿ. ನಿಮ್ಮ ಯಾವುದೇ ಭಯಾತಂಕಗಳನ್ನೂ ನೀಗಿಸಲಿರುವ ಸನ್ನಿವೇಶಗಳು ಆ ಆಸ್ಪತ್ರೆಯಲ್ಲಿದೆಯೇ ಎಂದು ತಿಳಿದುಕೊಳ್ಳಿ. ಗರ್ಭಧಾರಣೆ ಹಾಗೂ ಪ್ರಸವದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೀಡಿ, ಅದರ ಬಗೆಗಿನ ಮಾಹಿತಿಯನ್ನೊಳಗೊಂಡ ಕಿರುಕಡತ ಅಥವಾ ಪಾಠಗಳನ್ನು ನೀಡಿ ನಿಮ್ಮ ಆತಂಕಗಳನ್ನು ಬೇರು ಸಹಿತ ಕಿತ್ತೊಗೆಯುವ ಸೌಲಭ್ಯವಿರುವ ಆಸ್ಪತ್ರೆಗಳನ್ನು ಪತ್ತೆಹಚ್ಚಿದರೆ, ನೀವು ನಿರಾತಂಕವಾಗಿ ನಿಮ್ಮ ಎಲ್ಲಾ ಸಮಸ್ಯೆಗಳನ್ನೂ ಮುಕ್ತವಾಗಿ ಚರ್ಚಿಸಬಹುದು.

೪. ಆಸ್ಪತ್ರೆಯು ನಿಮ್ಮ ಮನೆಯ ಹತ್ತಿರದಲ್ಲಿದೆಯೇ ?

ಯಾವ ಹೊತ್ತಲ್ಲಿ ಹೆರಿಗೆ ನೋವು ಕಾಣಿಸಿಕೊಳ್ಳಬಹುದೆಂದು ಪ್ರವಚಿಸುವುದು ಅಸಾಧ್ಯ. ಪಟ್ಟಣದ ತುಂಬಿದ ಟ್ರಾಫಿಕ್ಕನ್ನು ಬೇಧಿಸಿ, ಆಸ್ಪತ್ರೆಗೆ ತಲುಪುವುದು ಕೆಲವೊಮ್ಮೆ ಕಠಿಣವಾಗುವುದು. ಕೊನೆಗಳಿಗೆಯಲ್ಲಿ ಅನಗತ್ಯ ಗೋಜಲುಗಳನ್ನು ಸೃಷ್ಟಿಸಿದಂತಾಗುವುದು. ನಿಮ್ಮ ಆಸ್ಪತ್ರೆಯು ತುಂಬಾ ದೂರದಲ್ಲಿದ್ದರೆ, ಆಸ್ಪತ್ರೆಯ ಪಕ್ಕದಲ್ಲೇ ಬಾಡಿಗೆ ಮನೆಯೊಂದನ್ನು ಕೊಂಡುಕೊಳ್ಳುವುದು ಆಪತ್ಕಾಲೀನ ಅಥವಾ ತುರ್ತು ಸಂದರ್ಭಗಳಲ್ಲಿನ ಗಾಬರಿಗೆ ಪರಿಹಾರವಾಗಬಲ್ಲುದು.

೫. ಪೋಸ್ಟ್ ಪಾಸ್ಟ್ರಂ ಡಿಪ್ರೆಷನ್ನಿಂದ ಹೊರಬರಲಿರುವ ನೆರವು

ಪ್ರಸವಾನಂತರ, ಪೋಸ್ಟ್ ಪಾಷ್ಟ್ರಂ ಡಿಪ್ರೆಶನ್ ಎಂಬ ಖಿನ್ನತಾ ರೋಗಕ್ಕೊಳಗಾಗುವ ತಾಯಿಯನ್ನು ಯೋಗ ಹಾಗೂ ಇತರ ಥೆರಪಿಗಳಿಂದ ಅಗತ್ಯವಾದ ಮಾನಸಿಕ ಬೆಂಬಲವನ್ನು ಒದಗಿಸುವಂತಹ ಮನೋರೋಗ ತಜ್ಞರ ಸಹಾಯ ಈ ಆಸ್ಪತ್ರೆಗಳಿಂದ ಲಭ್ಯವಾಗಬೇಕು.

Leave a Reply

%d bloggers like this: