makkalu-nenapiduva-7-vishayagalu

೧. ನಿಮ್ಮ ಜೊತೆ ಹಂಚಿಕೊಂಡ ಅನುಭವಗಳು

ನಿಮ್ಮ ಮಕ್ಕಳು ನೀವು ತಂದುಕೊಟ್ಟ ಎಲ್ಲಾ ಆಟಿಕೆಗಳು, ಅಥವಾ ನೀವು ಅವರಿಗೆ ಎಷ್ಟು ಬಾರಿ ಐಸ್ ಕ್ರೀಂ ತಂದುಕೊಟ್ಟಿರಿ ಎಂದು ನೆನಪಲ್ಲಿ ಇಡುವುದಿಲ್ಲ. ಅದಕ್ಕೆ ಕಾರಣ ಏನೇ ಇರಲಿ, ಕೆಲವೊಂದು ವಿಷಯಗಳು ಬೇರೇ ಎಲ್ಲಾ ವಿಷಯಗಳಿಗಿಂತ ಹೆಚ್ಚು ನೆನಪಲ್ಲಿ ಉಳಿಯುತ್ತವೆ ಹಾಗು ಜೀವನ ಪರ್ಯಂತ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಆದರೆ ಕುಟುಂಬಗಳನ್ನ ಹತ್ತಿರ ಮಾಡುವುದು ವಿಷಯಗಳಲ್ಲ, ಆದರೆ ಅನುಭವಗಳು. ಹೀಗಾಗಿಯೇ, ಅವರು ನೀವಿಬ್ಬರೇ ಮಾರ್ಕೆಟ್ ಗೆ ಹೋದಾಗ ಕೊಡಿಸಿದ ಐಸ್ ಕ್ರೀಂ ಅನ್ನು ಹಾಗು ಇಬ್ಬರೇ ಒಬ್ಬರ ಸಾನಿಧ್ಯವನ್ನ ಇನ್ನೊಬ್ಬರು ಆನಂದಿಸುತ್ತಾ ಅದನ್ನು ತಿಂದದ್ದು ನೆನಪಿಡುತ್ತಾರೆ.

೨. ಅವರ ಮಾತು ಕೇಳಲು ನೀವು ಮೊಬೈಲ್ ಕೆಳಗಿಟ್ಟದ್ದು

ಈಗಿನ ಕಾಲದಲ್ಲಿ ನಾವು ಬಹಳಷ್ಟು ವಿಶೇಷ ಕ್ಷಣಗಳನ್ನ ಮೊಬೈಲ್ ಅಲ್ಲೇ ನೋಡಲು, ಸೆರೆ ಹಿಡಿಯಲು ಯೋಚಿಸುತ್ತೀವಿ. ಇದರ ಮಧ್ಯದಲ್ಲೇ ಮುಳುಗಿದ ನಾವು ನಮ್ಮ ಕಂದಮ್ಮಗಳು ಹೇಳಲು ಮುಂದಾಗುವ ಚಿಕ್ಕ ಚಿಕ್ಕ ವಿಷಯಗಳ ಕಡೆ ಗಮನ ಕೊಡುವುದಿಲ್ಲ. ನಿಮ್ಮ ಮಗುವು ಏನಾದರು ಹೇಳಲು ಬಂದಾಗ ನೀವು ನಿಮ್ಮ ಮೊಬೈಲ್ ಅನ್ನು ಕೆಳಗೆ ಇಟ್ಟು ಅವರ ಮಾತಿಗೆ ಕಿವಿ ಕೊಟ್ಟರೆ, ನಿಮ್ಮ ಎಲ್ಲಾ ಸರ್ವಸ್ವವೂ ಅವರಿಗೆ ನೀವು ಕೊಟ್ಟಂತೆ ಹಾಗು ನೀವು ಅವರ ಮೇಲೆ ಎಷ್ಟೊಂದು ಅಕ್ಕರೆ ಇಟ್ಟಿರುವಂತೆ ನಿಮ್ಮ ಮಕ್ಕಳಿಗೆ ಅನಿಸುತ್ತದೆ.

೩. ನಿಮ್ಮ ಆಶಾದಾಯಕ ಮಾತುಗಳು

ನೀವು ನಿಮ್ಮ ಮಗುವಿನ ಮೇಲೆ ಒಳ್ಳೆಯ ಪರಿಣಾಮ ಬೀರಲಿಕ್ಕೆ “ಐ ಲವ್ ಯು” ಎಂದೇ ಹೇಳಬೇಕಿಲ್ಲ. ನೀವು ನಿಮ್ಮ ಮಗುವಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿಕ್ಕೆ ಹಲವು ಮಾತುಗಳು ಇವೆ. ಉದಾಹರಣೆಗೆ “ಇದನ್ನು ನಿನ್ನ ಕೈಯಿಂದ ಖಂಡಿತ ಸಾಧ್ಯ”, “ನಿನ್ನ ಬಗ್ಗೆ ನನಗೆ ಹೆಮ್ಮೆ ಇದೆ”, “ನೀನು ನನಗೆ ಒಳ್ಳೆ ಫ್ರೆಂಡ್ ಥರ”. ನಿಮ್ಮ ಮಾತಿನಲ್ಲಿ ಅಮೃತವಿದ್ದು, ಈ ಮಾತುಗಳು ಅವರಿಗೆ ಚಿಕ್ಕ ವಯಸ್ಸಿನಿಂದಲೇ ತಮ್ಮ ಬಗ್ಗೆ ಆತ್ಮ ಗೌರವ ಹಾಗು ವಿಶ್ವಾಸ ಬೆಳೆಸುವಂತೆ ಮಾಡುತ್ತವೆ. ಇವುಗಳನ್ನ ನೀವು ಅವರಿಗೆ ನೀಡಿದ್ದಕ್ಕೆ ಮುಂದೆ ಅವರು ನಿಮಗೆ ಕ್ರುತಗ್ನರಾಗಿರುತ್ತಾರೆ.

೪. ಕಷ್ಟದ ಪರಿಸ್ತಿಥಿಗಳನ್ನ ನೀವು ಎದುರಿಸಿದ ರೀತಿ

ಮಕ್ಕಳು ತಮಗೆ ಗೊತ್ತಿಲ್ಲದ ಜಗತ್ತಿನಲ್ಲಿ ನಡೆಯಬೇಕಾಗಿರುವುದಕ್ಕೆ, ಅವರು ತಮಗೆ ದಾರಿ ತೋರಿಸುವ ಯಾರಾದರು ಮಾರ್ಗದರ್ಷಿಯನ್ನ ಎದುರು ನೋಡುತ್ತಿರುತ್ತಾರೆ. ಕಷ್ಟದ ಸಮಯಗಳಲ್ಲಿ, ಅದು ನಿಮಗೆ ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರು ಅನಾರೋಗ್ಯಕ್ಕೆ ತುತ್ತಾದಾಗ ಅಥವಾ ಯಾರನ್ನಾದರು ಕಳೆದುಕೊಂಡಾಗ ನೀವು ಧೃತಿಗೆಡದೆ ಮತ್ತೆ ಮುನ್ನುಗ್ಗುವುದೇ ಇರಲಿ ಅಥವಾ ಇನ್ನ್ಯಾವುದೋ ಸಂದರ್ಭ ಇರಲಿ. ನೀವು ಅವರೊಂದಿಗೆ ಮಾತನಾಡಿದ ರೀತಿ, ಅವರಲ್ಲಿ ಧೈರ್ಯ ತುಂಬಿದ ಬಗೆ, ಅವರನ್ನ ನೀವು ರಕ್ಷಿಸಿದ ಬಗೆ, ಇವೆಲ್ಲವನ್ನೂ ಅವರು ನೆನಪಿದುತ್ತಾರೆ ಹಾಗು ನಿಮ್ಮನ್ನ ಮಾದರಿಯಾಗಿ ಸ್ವೀಕರಿಸುತ್ತಾರೆ.

೫. ನೀವು ಅವರೊಂದಿಗೆ ಇಲ್ಲದಿದ್ದ ಸಮಯಗಳು

ಇದು ಕೇಳಲಿಕ್ಕೆ ನಕಾರಾತ್ಮಕ ಎನಿಸಿದರು, ನೀವು ಅವರೊಂದಿಗೆ ಎಲ್ಲಾ ಸಮಯದಲ್ಲೂ ಇರಲು ಸಾಧ್ಯವಿಲ್ಲ ಎಂಬುದು ಸತ್ಯ. ನಿಮ್ಮ ಅಗತ್ಯ ಅವರಿಗೆ ಇದ್ದಾಗ ನೀವು ಅವರೊಡನೆ ಇರದಿದ್ದನ್ನ ಅವರು ನೆನಪಲ್ಲಿ ಇಟ್ಟರೂ, ಅದು ಜೀವನದ ಒಂದು ಭಾಗ ಅಷ್ಟೇ. ಹಾಗೆ ಅವರು ಸ್ನೇಹಿತರ ಮನೆಯಿಂದ ಎಷ್ಟೇ ತಡವಾದರು ಬರಲೇ ಬೇಕು ಎಂದು ನೀವು ಕರೆ ಮಾಡಿ ಹೇಳದೆ ಮೊದಲ ಬಾರಿಗೆ ಅವರನ್ನ ಅಲ್ಲೇ ಮಲಗಲು ಬಿಟ್ಟಿದ್ದನ್ನು ಅವರು ನೆನಪಿಡುತ್ತಾರೆ.

೬. ನೀವು ಮತ್ತು ನಿಮ್ಮ ಪತಿ ಬೇರೆಯವರ ಮುಂದೆ ನಡೆದುಕೊಳ್ಳುತ್ತಿದ್ದ ರೀತಿ

ಮಕ್ಕಳು ಯಾವಾಗಲು ನಿಮ್ಮನ್ನ ಗಮನಿಸುತ್ತಲೇ ಇರುವರು ಹಾಗು ಅದನ್ನೇ ಅಣಕ ಮಾಡುವರು. ನೀವು ಒಬ್ಬರ ಮುಂದೆ ನಗುನಗುತ್ತಾ ಮಾತನಾಡಿ ನಂತರ ಅವರ ಬೆನ್ನ ಹಿಂದೆ ಅವರನ್ನ ಬೈಯ್ಯುವುದನ್ನು ನಿಮ್ಮ ಮಕ್ಕಳು ನೋಡಿದರೆ, ಮಕ್ಕಳು ಕೂಡ ಅದೇ ಗುಣವನ್ನ ಅಳವಡಿಸಿಕೊಳ್ಳುತ್ತಾರೆ. ಅಲ್ಲದೆ, ಅವರು ಇಂತಹ ನಡವಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಭಾವಿಸುತ್ತಾರೆ. ನೀವು ನಿಮ್ಮ ಮನೆಯಲ್ಲಿ ನಿಮ್ಮ ಮಕ್ಕಳ ಮುಂದೆ ಇದ್ದಾಗ, ಒಳ್ಳೆಯ, ಸಕಾರಾತ್ಮಕ ಹಾಗು ಅಕ್ಕರೆಯ ಮಾತುಗಳನ್ನ ಆಡಿ.

೭. ನೀವು ಒತ್ತಡದಲ್ಲಿ ಅಥವಾ ಭಯಗೊಂಡಾಗ ಹೇಗೆ ವರ್ತಿಸುತ್ತೀರಿ ಎಂದು

ಜೀವನವು ಯಾವಾಗಲೂ ಚಿಂತೆಗಳಿಲ್ಲದೆ, ಸುಖಮಯವಾಗಿ ಇರುವುದಿಲ್ಲ. ಬಾಕ್ಸ್ ಅಲ್ಲಿ ತಿಂಡಿ ಕಟ್ಟುವುದು ತಡವಾದಾಗ, ಮಗು ಹೋಂ ವರ್ಕ್ ಮಾಡದೆ ಇದ್ದಾಗ, ಅಡುಗೆ ಇನ್ನೂ ಏನು ಆಗಿರದೆ ಇದ್ದಾಗ, ಸುಸ್ತಾದಾಗ ಮನೆಗೆ ಯಾರಾದರು ಅತಿಥಿಗಳು ಬಂದಾಗ ನಿಮಗೆ ತಲೆ ಕೆಡುವಂತೆ ಆಗಬಹುದು. ನೀವು ಈ ಕ್ಷಣದಲ್ಲಿ ತಾಳ್ಮೆ ಕಳೆದುಕೊಂಡು ಕೆಟ್ಟದಾಗಿ ವರ್ತಿಸಿದರೆ ಮಕ್ಕಳು ಅದನ್ನೇ ನೆನಪಿದುವರು ಹಾಗು ಅಣಕ ಮಾಡುವರು. ನಿಮ್ಮ ಮಕ್ಕಳು ಒತ್ತಡವನ್ನ ಧೃತಿಗೆಡದೆ ಎದುರಿಸಬೇಕೆಂದರೆ, ಸ್ಥೈರ್ಯ ಯಾವಾಗಲು ಕಾಪಾಡಿಕೊಳ್ಳಬೇಕು ಎಂದರೆ, ನೀವು ಇಂತಹ ಸಂದರ್ಭಗಳಲ್ಲಿ ನಿಮ್ಮ ಸ್ಥೈರ್ಯ ಕಾಪಾಡಿಕೊಳ್ಳಬೇಕು ಹಾಗು ಸಂಭಾವಿತರಂತೆ ವರ್ತಿಸಬೇಕು.

Leave a Reply

%d bloggers like this: