patiyu-nimma-poshakarinda-antara-hondalu-kaarana

ನಿಮ್ಮ ಪತಿ ಮತ್ತು ಹೆತ್ತವರು ನಿಮ್ಮ ಮಾನಸಿಕ ಯೋಗಕ್ಷೇಮಕ್ಕೆ ಎಷ್ಟು ಪ್ರಮುಖರಾಗಿದ್ದಾರೆಂದು ಪರಿಗಣಿಸಿ,ಕಡಿಮೆ ಪಕ್ಷ ಹೇಳಿಕೊಳ್ಳುವಷ್ಟಾದರೂ ಉತ್ತಮ ರೀತಿಯಲ್ಲಿ ಈ ಇಬ್ಬರೂ ಇರುವುದು ಬಹಳ ಮುಖ್ಯವಾಗಿದೆ.ನಿಮ್ಮ ಜೀವಿತಾವಧಿಯನ್ನು ಕಳೆಯಬೇಕಾಗಿರುವುದು  ನಿಮ್ಮ ಪತಿಯ ಜೊತೆಯಾಗಿದ್ದರೆ,ನಿಮ್ಮ ಜೀವನವನ್ನು ಸಫಲಗೊಳಿಸುವಲ್ಲಿ ಶಕ್ತರಾಗಿರುವವರು ನಿಮ್ಮ ಪೋಷಕರು.ಯಾವತ್ತೂ ಒಬ್ಬರ ಮೇಲೆ ಇನ್ನೊಬ್ಬರು ಆದ್ಯತೆಯನ್ನು ಪಡೆದುಕೊಳ್ಲಬಾರದು ಏಕೆಂದರೆ ಇಬ್ಬರ ನಡುವಿನ ಆಯ್ಕೆಯು ಉತ್ತಮ ಫಲಿತಾಂಶಗಳನ್ನು ನೀಡದಿರಬಹುದು.ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಸಮಾನವಾಗಿ ಮುಖ್ಯವಾಗಿದ್ದಾರೆ.ಅದಕ್ಕಾಗಿಯೇ ನೀವು ಇಬ್ಬರ  ನಡುವಿನ ಯಾವುದೇ ಸಮಸ್ಯೆಗೆ ಮೂಲ ಕಾರಣವನ್ನು  ಹುಡುಕಲು ಪ್ರಯತ್ನಿಸಬಹುದು ಮತ್ತು ಅದನ್ನು ಸರಿಪಡಿಸಬಹುದು.

ನಿಮ್ಮ ಪತಿ ಮತ್ತು ನಿಮ್ಮ ಕುಟುಂಬದ ನಡುವಿನ ಭಿನ್ನಾಭಿಪ್ರಾಯದ ಸಾಮಾನ್ಯ ಕಾರಣಗಳು ಮತ್ತು ಅಂತಹ ಸಂದರ್ಭಗಳಲ್ಲಿ ನಿಭಾಯಿಸಲು ಉತ್ತಮ ವಿಧಾನಗಳು ಇಲ್ಲಿವೆ.

೧.ನೀವು ಅವರ ಒಪ್ಪಿಗೆಯಿಲ್ಲದೆ ವಿವಾಹ ಬಂಧನದಲ್ಲಿ ಸಿಲುಕಿದ್ದೀರಿ

ನಿಮ್ಮ ಕುಟುಂಬದ ಆಷಯಗಳನ್ನು ನೀವು ಕಡೆಗಣಿಸಿ  ನಿಮ್ಮ ಧರ್ಮ, ಜಾತಿ ಅಥವಾ ನಿಮ್ಮ ಕುಟುಂಬದ ಇತರ ಯಾವುದೇ ಸಾಮಾಜಿಕ ಅಗತ್ಯತೆಗಳ ಹೊರಗೆ ಮದುವೆಯಾಗಿದ್ದರಿಂದ  ಈ ಬಿರುಕು ಸಂಭವಿಸುವುದು  ಸಹಜವಾಗಿದೆ . ನಿಮ್ಮ ಮದುವೆಯನ್ನು ಬಹಿಷ್ಕರಿಸುವುದು ಸಾಧ್ಯವಾಗುವುದಿಲ್ಲ   ಆದ್ದರಿಂದ ಮುಂದಿನ ಅತ್ಯುತ್ತಮ ಅವಕಾಶವೆಂದರೆ  ಸಂಪೂರ್ಣ ಅಸಮಾಧಾನವನ್ನು ವ್ಯಕ್ತಪಡಿಸುವುದಾಗಿದೆ.ನಿಮ್ಮ ಹೆತ್ತವರು ನೀವು ಪ್ರೀತಿಸುವ ವ್ಯಕ್ತಿಯನ್ನು ಅನುಮೋದಿಸದಿರಲು ಅವರದೇ ಆದ ಕಾರಣಗಳನ್ನು ಹೊಂದಿರಬಹುದು, ಆದ್ದರಿಂದ ನಿಮ್ಮ ಪತಿ ವಿನಮ್ರ  ಪಾತ್ರವನ್ನು ನಿರ್ವಹಿಸುವಂತೆ ಕೇಳಿಕೊಂಡು ನಿಮ್ಮ ಹೆತ್ತವರನ್ನು ಈ ಸಂದರ್ಭದಲ್ಲಿ ಅನುಸರಿಸುವುದು ಉತ್ತಮ ಮಾರ್ಗವಾಗಿದೆ.ಸಂಭಾಷಣೆಯನ್ನು ಕಡಿಮೆ ಮಾಡಿ  ಅವರು ಮಾಡುವ ವಿಧಾನದ ಬಗ್ಗೆ ಅವರು ಏನು ಯೋಚಿಸುತ್ತಾರೆ ಎಂಬುದನ್ನು ಲೆಕ್ಕಾಚಾರ ಮಾಡಿ.  ಬಹುಶಃ ನಿಮ್ಮ ಪತಿಯ ನಡವಳಿಕೆಯಿಂದ, ವರ್ತನೆ ಮೊದಲಾದ ಕಾರಣಗಳಿಂದ ಅವರು ಆತನನ್ನು ಇಷ್ಟ ಪಡದೆ ಇರಬಹುದು . ಈ ಸಂದರ್ಭದಲ್ಲಿ, ನಿಮ್ಮ ಅಂತಃಪ್ರಜ್ಞೆಯನ್ನು ನಂಬುವುದು ಉತ್ತಮವಾಗಿದೆ. ಅಂಶಗಳು  ನಿಜವಾಗಿದ್ದರೆ, ನಿಮ್ಮ ಗಂಡನೊಂದಿಗೆ ಮಾತನಾಡಿ ಅವರು ಹೇಗೆ ಬದಲಾಯಿಸಬಹುದು ಮತ್ತು ನಿಮ್ಮ ಪೋಷಕರು ಅವರನ್ನು  ಇಷ್ಟಪಡದಿರುವ ಕಾರಣಗಳಿಂದ  ಹೊರಬರಲು ಹೇಗೆ ಸಹಾಯ ಮಾಡಬಹುದು ಎಂಬುದರ ಬಗ್ಗೆ ಮಾತಾಡಿ ಒಂದು ಸಮನ್ವಯವಾದ ನೆಲೆಗೆ ಬನ್ನಿ. ಆದಾಗ್ಯೂ , ಸಮಸ್ಯೆ ಆದಾಯ ಅಥವಾ ಜಾತಿಯಿಂದಾಗಿದ್ದಲ್ಲಿ ,  ನೀವು ಈ ವ್ಯಕ್ತಿಯನ್ನು  ಪ್ರೀತಿಸುತ್ತಿದ್ದೀರಿ  ಮತ್ತು ಅವರಿಂದ  ಸಂತೋಷವಾಗಿರುವಿರಿ ಎಂದು ನಿಮ್ಮ ಪೋಷಕರಿಗೆ ಅರ್ಥಮಾಡಿಸಿ ಅವರ  ಮನೋಭಾವವನ್ನು ಬದಲಿಸಲು ಪ್ರಯತ್ನಿಸಿ . ನಿಮ್ಮ ಸಂತೋಷಕ್ಕೆ   ಅವರು  ಮಹತ್ವ ನೀಡಬೇಕೆಂದು ಅವರಿಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡಿ.

೨. ನಿಮ್ಮ ಪೋಷಕರು ಬೆಳೆಯುತ್ತಿರುವ ಅನಂತರಕ್ಕಾಗಿ  ಅವರನ್ನು ದೂಷಿಸುತ್ತಾರೆ

ನಿಮ್ಮ ಪತಿಯೊಂದಿಗೆ ನೀವು ಸ್ಥಳಾಂತರಿಸಿದ್ದೀರಿ, ಮತ್ತು ಬಹುಶಃ ಅವರ ಪೋಷಕರು ಮತ್ತು ನಿಮ್ಮ ಕುಟುಂಬವು ನಿಮ್ಮನ್ನು ಆಗಾಗ್ಗೆ ನೋಡಲಾಗುತ್ತಿಲ್ಲ ಅದು ನಿಮ್ಮ ಪೋಷಕರಿಗೆ ಸಮಸ್ಯೆಯಾಗಿರಬಹುದು.ನಿಮ್ಮ ಬಿಡುವಿನ  ಸಮಯವನ್ನು ನಿಮ್ಮ ಪತಿಯ  ಮತ್ತು ಅವರ  ಕುಟುಂಬದೊಂದಿಗೆ ನೀವು ಕಳೆಯಲು ಶುರು ಮಾಡುತ್ತೀರಿ , ಮತ್ತು ಇದು ಬಹುಶಃ ನಿಮ್ಮ ಹೆತ್ತವರನ್ನು ದೂರವಿರಿಸುತ್ತದೆ. ನಿಮ್ಮ ಹೆತ್ತವರನ್ನು ಮೆಚ್ಚಿಸಲು  ಮತ್ತು ಅವರನ್ನು ನಿಮ್ಮ ಆವರ್ತದಲ್ಲಿ ಇರಿಸಿಕೊಳ್ಳಲು ಸಮಯ ಮಾಡಿ, ಆದ್ದರಿಂದ ಅವರಿಗೆ ತಾವು  ಹೊರಗುಳಿದಿದ್ದೇವೆ  ಎಂಬ ಭಾವನೆಯು ಬರುವುದಿಲ್ಲ .ಖಂಡಿತವಾಗಿಯೂ ಅವರು ಚಿಕ್ಕಂದಿನಿಂದ ಸಾಕಿ ಬೆಳೆಸಿದ ಪುಟ್ಟ ಮಗುವಿನ ಜೀವನದಲ್ಲಿ ಅವರ ಸ್ಥಾನವನ್ನು ಬೇರೆಯವು ಕಸಿಯುವುದನ್ನು ನೋಡಲು ನಿಸ್ಸಂಶಯವಾಗಿ ಇಷ್ಟ ಪಡುವುದಿಲ್ಲ ,ಆದ್ದರಿಂದ ಎರಡೂ ಕಡೆಯ ಪೋಷಕರು ಬೆರೆಯುವಂತಾಗಲು ಅನೇಕ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸಿ .

೩. ಮೊಮ್ಮಕ್ಕಳು

ಪ್ರತಿಯೊಬ್ಬ  ಪೋಷಕರು ಮತ್ತೆ ಪೋಷಕತ್ವದ  ಅನುಭವವನ್ನು ಅನುಭವಿಸಲು ಬಯಸುತ್ತಾರೆ, ಮತ್ತು ಅವರ  ಮಗುವು ತನ್ನ   ಮಗುವಿಗೆ ಜನ್ಮ ನೀಡಿದಾಗ  ಈ ಭಾವನೆಯು ಹೊರಬರುತ್ತದೆ . ಮಗಳು ಮದುವೆಯಾದ ನಂತರ ಎಲ್ಲಾ ಹೆತ್ತವರು ಈ ಸಂದರ್ಭಕ್ಕಾಗಿ ಎದುರುನೋಡುತ್ತಿದ್ದಾರೆ ಎನ್ನುವುದು ಸಹಜವಾಗಿದೆ .ಆದಾಗ್ಯೂ ನಿಮ್ಮ ಪತಿಯು  ಇದೀಗ ಮಕ್ಕಳನ್ನು ಬಯಸದಿದ್ದರೆ ಮತ್ತು ನಿಮ್ಮ ಪೋಷಕರಿಂದ ನಿರಂತರ ಒತ್ತಡದಲ್ಲಿದ್ದರೆ, ಅದು ಕಲಹಕ್ಕೆ ಕಾರಣವಾಗಬಹುದು.

ನೀವು ಮತ್ತು ನಿಮ್ಮ ಪತಿ ಯಾವುದೇ ಕಾರಣಕ್ಕಾಗಿ ಮಕ್ಕಳನ್ನು ಸ್ವಲ್ಪ ತಡವಾಗಿ ಹೊಂದುವುದನ್ನು ನಿರ್ಧರಿಸಿದ್ದರೆ, ಇದು ಪತಿ ಮತ್ತು ಪತ್ನಿಯ  ನಡುವಿನ ಅವಿರೋಧ ತೀರ್ಮಾನವೆಂದು ನಿಮ್ಮ ಪೋಷಕರಿಗೆ ಸುದ್ದಿಯನ್ನು ನಿಧಾನವಾಗಿ ತಿಳಿಯಪಡಿಸಿ ನಿಮ್ಮ ಭವಿಷ್ಯದ ಬಗ್ಗೆ  ನೀವು ಮತ್ತು ನಿಮ್ಮ ಪತಿಯು ಮಾತ್ರ ನಿರ್ಧಾರ ತೆಗೆದುಕೊಳ್ಳುವುದರಿಂದ , ಮತ್ತು ಮಕ್ಕಳು ಈ ನಿರ್ಧಾರದ ಪಟ್ಟಿಯಲ್ಲಿಲ್ಲದಿದ್ದರೆ, ಅದು ಅತ್ಯುತ್ತಮವಾಗಿರಬೇಕು.ನೀವು ಭವಿಷ್ಯದಲ್ಲಿ ಹೆಚ್ಚು ಆರ್ಥಿಕವಾಗಿ ಸ್ಥಿರವಾದಾಗ  ಅಥವಾ ಅಂತಿಮವಾಗಿ ಮೂರನೇ ಸದಸ್ಯನ ಅಗತ್ಯತೆ ಕುಟುಂಬಕ್ಕೆ ಇದೆ ಎಂದಾಗ ನೀವು ಮಗುವನ್ನು ಹೊಂದುತ್ತೀರಿ ಎಂದು ನಿಮ್ಮ ಪೋಷಕರಿಗೆ ಮನವರಿಕೆ ಮಾಡಿ  ಭರವಸೆ ನೀಡಿ

೪. ಸೈದ್ಧಾಂತಿಕ ವ್ಯತ್ಯಾಸ

ಕೆಲವೊಮ್ಮೆ ಎರಡು ಜನರ ಮೂಲಭೂತ ಸಮಸ್ಯೆ ಸೈದ್ಧಾಂತಿಕ ವ್ಯತ್ಯಾಸವಾಗಿದೆ ಆದರೆ   ಯಾರೂ ಅದನ್ನು ಕೇಳಲು ಇಷ್ಟ ಪಡುವುದಿಲ್ಲ.ನೀವು ನಿಮ್ಮ ತಂದೆಯ ಮಗಳು ಎಂಬ ಒಂದೇ   ಕಾರಣಕ್ಕೆ   ಅದೇ ರೀತಿಯ ಅಭಿಪ್ರಾಯಗಳನ್ನು ನೀವು ಹಂಚಿಕೊಳ್ಳುತ್ತೀರಿ ಎಂದರ್ಥವಲ್ಲ.ಅದಕ್ಕಾಗಿಯೇ ನೀವು ಮತ್ತು ನಿಮ್ಮ ಪತಿ ಪರಸ್ಪರ   ಹೊಂದಿಕೊಳ್ಳುತ್ತಿದ್ದೀರಿ   .ಆದಾಗ್ಯೂ  ಮದುವೆಯ ನಂತರ, ನಿಮ್ಮ ಪತಿ ಮತ್ತು ಪೋಷಕರ ವಿವಾದಾತ್ಮಕ ವೀಕ್ಷಣೆಗಳು ಒಂದು ದೊಡ್ಡ ಸಮಸ್ಯೆಯನ್ನು ಹೊರಹಾಕುವಂತೆ ಮಾಡಬಹುದು.

ಕೆಲವೊಮ್ಮೆ, ಎಲ್ಲ ಮಾತುಕತೆಗಳು ಮತ್ತು ಮೂಲಭೂತ ಸೌಜನ್ಯವು ವಿಫಲವಾದಲ್ಲಿ, ಇಬ್ಬರನ್ನು ಪರಸ್ಪರ   ಒಬ್ಬರಿಂದ ದೂರವಿರಿಸುವುದು   ಉತ್ತಮವಾಗಿದೆ.ಎರಡೂ ಪಕ್ಷಗಳು ಸ್ಪಷ್ಟವಾಗಿ ಪರಸ್ಪರರ ಬಾಂಧವ್ಯವನ್ನು  ಆನಂದಿಸದಿದ್ದಾಗ ನೀವು ಪರಸ್ಪರ ಸಮಯವನ್ನು ಕಳೆಯಲು ಒತ್ತಾಯಿಸಿದರೆ ಅದು ಅಸಹ್ಯ ಸಾಮಾಜಿಕ ಪರಿಸ್ಥಿತಿಗೆ ಕಾರಣವಾಗಬಹುದು.ನಿಮ್ಮ ಸಮಯವನ್ನು ಸಮನಾಗಿ ವಿಭಜಿಸಿ, ಆದ್ದರಿಂದ ಅವರಿಬ್ಬರೂ ಸಮಾನವಾಗಿ ಮುಖ್ಯವೆಂದು  ಭಾವಿಸುತ್ತಾರೆ,ಇಬ್ಬರಿಗೂ ಕಿವಿಕೊಡಿ ಆಗ ಇಬ್ಬರಿಗೂ ತಾವು ಕಡೆಗಣಿಸಲ್ಪಡುತ್ತಿದ್ದೇವೆ ಎಂಬ ಭಾವನೆಯು ಬರುವುದಿಲ್ಲ .ಆದಾಗ್ಯೂ ನಿಮ್ಮ ಎರಡು ಜೀವಗಳನ್ನು ಪ್ರತ್ಯೇಕವಾಗಿರಿಸಲು ಸಾಧ್ಯವಾದಷ್ಟು ಪ್ರಯತ್ನಿಸಿ.

Leave a Reply

%d bloggers like this: