ಗರ್ಭತಾಳುವ ಬಗ್ಗೆ ಹಾಗೆ ಗರ್ಭಧಾರಣೆಯ ಬಗ್ಗೆ ಅನೇಕ ನಂಬಿಕೆಗಳು ಇದ್ದರೂ, ಇದು ಆಗಲಿಕ್ಕೆ ಇಬ್ಬರು ಒಳಗೊಳ್ಳಬೇಕು. ಇದರ ಅರ್ಥ ನೀವು ಗರ್ಭತಾಳಲು ಪ್ರಯತ್ನಿಸುತ್ತಿದ್ದರೆ, ಹೆಣ್ಣು ಎಷ್ಟು ತಯಾರಾಗಬೇಕೋ ಅಷ್ಟೇ ತಯಾರಿ ಗಂಡಸು ಕೂಡ ಮಾಡಬೇಕು. ಓದುತ್ತಿರುವುದು ಗಂಡಸರಾಗಿದ್ದರೆ, ಇವುಗಳನ್ನ ನೀವು ಅರಿತು ಪಾಲಿಸಿ. ಓದುತ್ತಿರುವುದು ಹೆಂಗಸರಾದರೆ, ಇವುಗಳನ್ನ ತಿಳಿದು ನಿಮ್ಮ ಪತಿಗೆ ತಿಳಿಸಿ ಹಾಗು ಪಾಲಿಸುವಂತೆ ನೋಡಿಕೊಳ್ಳಿ.
ಗಂಡಸರಲ್ಲಿ ಫಲವತ್ತತೆ ಹೆಚ್ಚಿಸಲು ಇರುವ 10 ದಾರಿಗಳು ಇಲ್ಲಿವೆ :
೧. ತೂಕ ಇಳಿಸಿಕೊಳ್ಳಿ
ತೂಕ ಇಳಿಸಿಕೊಂಡು ನಿಮ್ಮ ಎತ್ತರಕ್ಕೆ ಸರಿ ಹೊಂದುವ ತೂಕಕ್ಕೆ ಬನ್ನಿ. ಸರಿಯಾದ BMI (ಬಾಡಿ ಟು ಮಾಸ್ ಇಂಡೆಕ್ಸ್/ ದೇಹ ಹಾಗು ತೂಕದ ಅನುಪಾತ) ಹೊಂದಿದರೆ ನಿಮ್ಮ ಟೆಸ್ಟೋಸ್ಟೆರಾನ್ ಹಾರ್ಮೋನ್ ಅಲ್ಲಿ ಏರಿಕೆ ಆಗಿ, ನಿಮ್ಮ ಲೈಂಗಿಕ ಆಸಕ್ತಿ ಹಾಗು ವೀರ್ಯಗಳ ಸಂಖ್ಯೆ ಹೆಚ್ಚುತ್ತದೆ.
೨. ಧೂಮಪಾನ ನಿಲ್ಲಿಸಿ
ಧೂಮಪಾನವು ನಿಮ್ಮ ಫಲವತ್ತತೆ ಹಾಗು ವೀರ್ಯಗಳ ಗುಣಮಟ್ಟವನ್ನ ಕಮ್ಮಿ ಮಾಡುತ್ತದೆ. ಆದರಿಂದ ನೀವು ಧೂಮಪಾನವನ್ನ ಸಂಪೂರ್ಣವಾಗಿ ನಿಲ್ಲಿಸುವುದು ಸೂಕ್ತ.
೩. ಕ್ರಿಯೆ ಮಾಡುವ ಮುಂಚೆ ಬಿಸಿನೀರಿನ ಸ್ನಾನ ಮಾಡದಿರಿ
ನಿಮ್ಮ ವೀರ್ಯಗಳು ಪರಿಣಾಮಕಾರಿ ಆಗಿ ಕೆಲಸ ಮಾಡಲು ತಣ್ಣಗಿದ್ದಷ್ಟು ಒಳ್ಳೆಯದು. ಆದರಿಂದ ನೀವು ಬಿಸಿನೀರಿನ ಸ್ನಾನವನ್ನ ಸ್ವಲ್ಪ ದಿನಗಳವರೆಗಾದರೂ ನಿಲ್ಲಿಸುವುದು ಸೂಕ್ತ ಎನಿಸುತ್ತದೆ.
೪. ಲ್ಯಾಪ್ಟಾಪ್ ಅನ್ನು ತೊಡೆಯ ಮೇಲೆ ಇಟ್ಟುಕೊಳ್ಳಬೇಡಿ
ಲ್ಯಾಪ್ಟಾಪ್ ಇಂದ ಬರುವ ಬಿಸಿ ಗಾಳಿಯು ವೀರ್ಯಗಳು ತಾಪಮಾನ ಹೆಚ್ಚಿಸುತ್ತದೆ ಹಾಗು ವೀರ್ಯಗಳ ಸಂಖೆಯನ್ನ ಕಮ್ಮಿ ಮಾಡುತ್ತದೆ.
೫. ಕೀಲಿಎಣ್ಣೆ (ಲುಬ್ರಿಕ್ಯಾಂಟ್) ಗಳನ್ನ ಉಪಯೋಗಿಸದಿರಿ
ವೀರ್ಯಕ್ಕೆ ಜೆಲ್ ಮೂಲಕ ಈಜಿ ಅಂಡಾಣು ಸೇರಲು ಕಷ್ಟವಾಗುತ್ತದೆ. ಈ ಕಾರಣಕ್ಕೆ ನೀವು ಯಾವುದೇ ಜೆಲ್ ಅಥವಾ ಇನ್ನಿತರೆ ಲುಬ್ರಿಕ್ಯಾಂಟ್ ಬಳಸುವುದನ್ನ ಸ್ವಲ್ಪ ಸಮಯದವರೆಗೆ ನಿಲ್ಲಿಸುವುದು ಸೂಕ್ತ.
೬. ಜೋಡಿ ಅಕ್ಯುಪಂಕ್ಚರ್
ದಂಪತಿಗಳು ಒಟ್ಟಿಗೆ ಅಕ್ಯುಪಂಕ್ಚರ್ ಮಾಡಿಸಿಕೊಳ್ಳುವುದು ಚೆತೊಪಹಾರಿ ಅಷ್ಟೇ ಅಲ್ಲದೆ ನಿಮ್ಮ ವೀರ್ಯಗಳ ಸಂಖ್ಯೆ ಮತ್ತು ಗುಣಮಟ್ಟದಲ್ಲಿ ಏರಿಕೆ ಆಗುತ್ತದೆ.
೭. “ಹಾಟ್” ಸಿನಿಮಾ ನೋಡಿ
ಇದು ನೋಡುವುದರಿಂದ ನಿಮ್ಮ ಟೆಸ್ಟೋಸ್ಟೆರಾನ್ ಅಲ್ಲಿ ಏರಿಕೆ ಆಗುವುದು ಹಾಗು ವೀರ್ಯಗಳ ಸಂಖ್ಯೆ, ಗುಣಮಟ್ಟ ಹೆಚ್ಚುತ್ತವೆ.
೮. ದಿನಕ್ಕೆ ಒಂದು ಬಾರಿ ಸಂಭೋಗ ನಡೆಸಿ
ಮುಖ್ಯವಾಗಿ ಅಂಡೋತ್ಪತ್ತಿಯ ಸಮಯದಲ್ಲಿ – ಒಂದು ದಿನ ನೀವು ಅಂತರ ಕಾಯ್ದುಕೊಂಡರು ನಿಮ್ಮ ವೀರ್ಯದ ಸರಾಗ ಚಲನೆಗೆ ತೊಡಕಾಗುತ್ತದೆ.
೯. ಮಿಷನರಿ ಭಂಗಿಯಲ್ಲಿ ಸಂಭೋಗ ನಡೆಸಿ
ಮಿಷನರಿ ಭಂಗಿ ಅಂದರೆ ಪತ್ನಿ ಮುಖ ಮೇಲೆ ಮಾಡಿ ಮಲಗುವುದು ಹಾಗು ಪತಿಯು ಆಕೆಯ ಮೇಲೆ ಬರುವುದು. ಸಂಭೋಗ ನಡೆಸುವಾಗ ನೀವು(ಹೆಂಗಸರು) ನಿಮ್ಮ ಸೊಂಟವನ್ನ ಮೇಲೆತ್ತಿ ಹಿಡಿದುಕೊಳ್ಳಿ, ಆಗ ಗುರುತ್ವಾಕರ್ಷಣೆ ಕೂಡ ನಿಮ್ಮ ಸಹಾಯಕ್ಕೆ ಬರುತ್ತದೆ!