banantiyara-aaraike

ತಾಯಿಯಾಗುವುದು ಪ್ರತಿಯೊಬ್ಬ ವಿವಾಹಿತ ಹೆಣ್ಣಿನ ಕನಸು. ಅವಳು ಗರ್ಭಧರಿಸಿರುವೆ ಎಂದು ತಿಳಿದ ದಿನ ಅವಳ ಖುಷಿಗೆ ಸರಿ ಸಾಟಿ ಇಲ್ಲ. ಅವಳ ಜೀವನದ ಅತ್ಯಂತ ಸಂಭ್ರಮದ ಬಣ್ಣಿಸಲಾಗದ ಸಮಯ ಅದು. ಅದರ ಖುಷಿಯ ಜೊತೆಗೆ ಉದರದಲ್ಲಿರುವ ಮಗುವಿನ ಆಟಗಳನ್ನು, ಚಲನೆಗಳನ್ನು, ಮಗುವು ಆಡುತ್ತಿರುವುದನ್ನು ಅನುಭವಿಸಿ ತನ್ನ ಹೆರಿಗೆಯ ದಿನವನ್ನು ತಲುಪುತ್ತಾಳೆ. ತಾಯಿಯಾಗುವೆ ಎಂಬ ಖುಷಿ ಎಷ್ಟೇ ಇದ್ದರೂ, ಹೆರಿಗೆಯ ಸಮಯದಲ್ಲಿ ಆಗುವ ಆತಂಕವನ್ನು ತಪ್ಪಿಸಲು ಸಾಧ್ಯವಿಲ್ಲ. ನೀವು ಎಷ್ಟೇ ಧೈರ್ಯ ಹೇಳಿದರು ತನ್ನಲ್ಲಿ ಭಯ ಇದ್ದೆ ಇರುತ್ತದೆ. ಮಗುವಿನ ಮುಖ ನೋಡಿದ ತಕ್ಷಣ ತಾನು ಅನುಭವಿಸಿದ ನರಕಯಾತನೆಗಳನ್ನೆಲ್ಲಾ ಮರೆತು ಹೋಗುತ್ತಾಳೆ. ಮಗುವಿಗೆ ಜನ್ಮ ನೀಡಿದ ನಂತರ ಆ ದಿನ, ಆ ಕ್ಷಣದಿಂದ ಅವಳ ಹೊಸ ಜೀವನ ಪ್ರಾರಂಭ.

ಮಗುವಿಗೆ ಜನ್ಮ ನೀಡಿದ ಸಂತೋಷದಲ್ಲಿ ಒಬ್ಬ ತಾಯಿಯಾಗಿ ಅವಳು ಎಂದು ತನ್ನ ಕರ್ತವ್ಯವನ್ನು ಮರೆಯುದಿಲ್ಲ. ಅಂತೆಯೇ ಕಷ್ಟ ನೋವುಗಳನ್ನು ಅನುಭವಿಸಿ ಮುದ್ದು ಕಂದಮ್ಮನಿಗೆ ಜನ್ಮ ನೀಡಿದ ಬಳಿಕ ಕೆಲವು ಕಾಲದವರೆಗೆ ಅವಳನ್ನು ಮಗುವನ್ನು ಆರೈಕೆ ಮಾಡುವುದು, ಜೋಪಾನಮಾಡುವುದು, ಅವರ ಅರೋಗ್ಯ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಕೆಲವರಿಗೆ ಬಾಣಂತಿಯನ್ನು ಹೇಗೆ ನೋಡಿಕೊಳ್ಳಬೇಕು, ಅವರ ದಿನಚರಿ ಹೇಗಿರುತ್ತದೆ ಎಂಬ ಕಲ್ಪನೆಯು ಇರುವುದಿಲ್ಲ ಅಂತವರಿಗಾಗಿ ಈ ಲೇಖನ.

ಈ ಸಮಯದಲ್ಲಿ ತಾಯಿಯು ಆರೋಗ್ಯ ತಪ್ಪಿದರೆ, ಅದು ಮಗುವಿನ ಆರೋಗ್ಯದ ಮೇಲು ಪರಿಣಾಮ ಬೀರುತ್ತದೆ. ಆದ್ದರಿಂದ ಬಾಣಂತಿ ತಾಯಿಯನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಒಳ್ಳೆಯದು.

೧.ಬಾಣಂತಿಯರು ನೀರಿನಿಂದ ಆದಷ್ಟು ದೂರವಿರಬೇಕು, ಕಾರಣ ಅವರಿಗೆ ಶೀತವಾಗಬಹುದು. ಮತ್ತು ಕುಡಿಯಲು ಮಾತ್ರವಲ್ಲದೆ, ತನ್ನ ಎಲ್ಲಾ ಕಾರ್ಯಗಳಿಗೆ ಬಿಸಿ ನೀರನ್ನು ಬಳಸುವುದು.

೨.ಅವರಿಗೆ ಶೀತವಾಗದಂತೆ ನೋಡಿಕೊಳ್ಳಿ.

೩.ಬಾಣಂತಿ ಮತ್ತು ಮಗು ಬೆಳಗಿನ ಸೂರ್ಯನ ಹೊಂಗಿರಣವನ್ನು ಸ್ಪರ್ಶಿಸಿದರೆ ವಿಟಮಿನ್ ಡಿ ಜೊತೆ ಆರೋಗ್ಯಕ್ಕೂ ಒಳ್ಳೆಯದು. ಬೆಳಗ್ಗೆ ೧೦ರ ನಂತರದ ಬಿಸಿಲು ಚರ್ಮ ಕಪ್ಪಾಗುವಂತೆ ಅಥವಾ ಚರ್ಮ ಅಲರ್ಜಿಗೂ ಕಾರಣವಾಗಬಹುದು.

೪.ಆದಷ್ಟು ಮನೆಯ ಒಳಗಡೆ ಇರುವುದು ಒಳ್ಳೆಯದು, ಏಕೆಂದರೆ ವಾತಾವರಣದಲ್ಲಿನ ಕಲ್ಮಶಗಳು ಅವರ ದೇಹ ಪ್ರವೇಶಿಸಿ ಅನಾರೋಗ್ಯವನ್ನುಂಟುಮಾಡಬಹುದು. ಬಾಣಂತಿ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಕಡಿಮೆ ಯಾಗಿರುತ್ತದೆ ಆದ್ದರಿಂದ ಅವರು ಬೇಗನೆ ರೋಗಕ್ಕೆ ಗುರಿಯಾಗುತ್ತಾರೆ.

೫.ಅವರು ಯಾವುದೇ ಕೆಲಸಗಳನ್ನು ಮಾಡಬಾರದು, ಏಕೆಂದರೆ ಅವರಿಗೆ ಈಗ ವಿಶ್ರಾಂತಿ ಬೇಕು, ಮಗುವಿಗೆ ಜನ್ಮ ನೀಡಿದ ನಂತರ ಅವರ ದೇಹದಲ್ಲಿ ಹಲವಾರು ಬದಲಾವಣೆಗಳು ಆಗಿರುತ್ತವೆ. ಮತ್ತು ಅವರ ದೇಹದ ಹಾರ್ಮೋನುಗಳಲ್ಲೂ ಕೂಡ ಏರುಪೇರಾಗಿರುತ್ತದೆ.

೬.ಮಗುವಾದ ೨-೩ವಾರಗಳವರೆಗೆ ಅವರು ಮಗುವಿಗೆ ಮಲಗಿಕೊಂಡೆ ಎದೆಹಾಲುಣಿಸುವುದು ಉತ್ತಮ, ಕಾರಣ ಕೂತುಕೊಂಡು ಎದೆಹಾಲುಣಿಸಿದರೆ ಅವರಿಗೆ ಬೆನ್ನು ನೋವು ಬರಬಹುದು ಅಥವಾ ಅವರಿಗೆ ಹೆರಿಗೆಯ ನೋವು ಇನ್ನೂ ಸಂಪೂರ್ಣವಾಗಿ ಗುಣವಾಗಿರುವುದಿಲ್ಲ, ತೊಡೆ ಮಡಚಿಕೊಂಡು ಕೂತುಕೊಂಡರೆ ಮತ್ತೆ ಆ ನೋವು ಹೆಚ್ಚಾಗಬಹುದೆಂದು ಮಲಗಿಕೊಂಡೆ ಎದೆಹಾಲುಣಿಸಲು ಸಲಹಿಸುತ್ತಾರೆ.

೭.ತಮ್ಮ ಹೊಟ್ಟೆಗೆ ಬಟ್ಟೆಯನ್ನು ಬಿಗಿಯಾಗಿ ಕಟ್ಟಿಕೊಳ್ಳುವರು, ಏಕೆಂದರೆ ಉಬ್ಬಿರುವ ಹೊಟ್ಟೆಯನ್ನು ಕಡಿಮೆ ಮಾಡಲು ಮತ್ತು ಹೊಟ್ಟೆಯಲ್ಲಿ ಶೇಖರಣೆಯಾಗಿರುವ ಕಲ್ಮಶ ರಕ್ತವನ್ನು ಶುಚಿಗೊಳಿಸಲು ಇದು ಸಹಾಯವಾಗುತ್ತದೆ.

೮.ಬೆಂಡೆಕಾಯಿಯನ್ನು ತಿನ್ನಬಾರದು-ಕಾರಣ ಅದು ಅವರಲ್ಲಿ ಶೀತವನ್ನು ಉಂಟುಮಾಡಬಬಹುದು.

೯.ಅವರಿಗೆ ಹೆಚ್ಚು ಪೌಷ್ಠಿಕಾಂಶವುಳ್ಳ ಆಹಾರವನ್ನು ಕೊಡಬೇಕು.

೧೦.ಬೆಚ್ಚಗಿನ ವಾತಾವರಣದಲ್ಲಿ ಅವರನ್ನು ಇರಿಸಿ.

೧೧.ಹೆಚ್ಚು ಹಸಿರು ಸೊಪ್ಪು ತರಕಾರಿಗಳನ್ನು ನೀಡಿ.

೧೨.ಅವರು ಹೆಚ್ಚು ನಡೆದಾಡಬಾರದು, ಕಾರಣ ಹೆರಿಗೆ ಸಮಯದಲ್ಲಿ ಖಾಸಗಿ ಜಗದಲ್ಲಿ ಆಗಿರುವ ನೋವು ನಡೆದಾಡುವುದರಿಂದ ಹೆಚ್ಚಾಗಬಹುದು. ಮತ್ತು ಕೆಲವರು ಸಿಸೇರಿಯನ್ ಮಾಡಿಸಿಕೊಂಡಿರುತ್ತಾರೆ, ಅವರು ನಡೆದಾಡುವುದರಿಂದ ಹೊಲಿಗೆ ಬಿಚ್ಚಿಹೋಗುವ ಅಥವಾ ಹೆಚ್ಚು ನೋವಾಗುವ ಸಾಧ್ಯತೆ ಇರುತ್ತದೆ.

Leave a Reply

%d bloggers like this: