nimma-makkalu-sadhakaraagalu-nivu-enu-madabahudu

ಮಕ್ಕಳು ಎಲ್ಲಾ ವಿಷಯದಲ್ಲೂ ಮುಂದಿರಬೇಕು, ಅವರು ಎಲ್ಲರಿಗಿಂತ ಮೊದಲು ಬರಬೇಕು, ಅವರು ಹೆಚ್ಚು ಕ್ರಿಯಾಶೀಲರಾಗಿರಬೇಕು, ಎಲ್ಲರ ಹತ್ತಿರಾನೂ ಸೈ ಅನ್ನಿಸಿಕೊಳ್ಳಬೇಕು ಎಂದು ಯಾವ ತಂದೆ ತಾಯಿಯರಿಗೆ ಆಸೆ ಇರುವುದಿಲ್ಲ. ತಮ್ಮ ಮಕ್ಕಳು ಬೇರೆ ಎಲ್ಲಾ ಮಕ್ಕಳಿಗಿಂತ ಬುದ್ದಿಶಾಲಿಯಾಗಿ, ಚುರುಕಾಗಿ, ಎಲ್ಲದರಲ್ಲೂ ಮೊದಲು ಬರಬೇಕೆಂಬುದು ಪ್ರತಿ ಪೋಷಕರ ಆಸೆ/ಬಯಕೆ. ಆ ಅಸೆಯನ್ನು ನಿಜವಾಗಿಸಲು ನೀವು ನಿಮ್ಮ ಮಗುವಿಗೆ ಬೇಕಾದ ಬೆಂಬಲ ನೀಡಲು ಸಿದ್ಧವಿರುವಿರಿ. ಆದರೆ ಸರಿಯಾದ ರೀತಿಯಲ್ಲಿ ಬೆಂಬಲ ನೀಡುವುದು ತುಂಬಾ ಮುಖ್ಯ, ಅದರ ಒಂದು ಚಿಕ್ಕ ವಿವರಣೆ ಇಲ್ಲಿದೆ.

ನಮ್ಮ ಮಕ್ಕಳು ಏನಾದರು ಸಾಧಿಸಬೇಕು, ದೊಡ್ಡ ಹೆಸರು ಮಾಡಬೇಕು ಎಂಬುದು ಪ್ರತಿ ಪೋಷಕರ ಕನಸು. ಈ ಕನಸನ್ನು ನನಸು ಮಾಡಲು ಮೊದಲು ನಿಮ್ಮ ಮಗುವಿನ ಆಸಕ್ತಿಯನ್ನು ತಿಳಿದುಕೊಳ್ಳಿ. ಪ್ರತಿಯೊಂದು ಮಗುವು ತನ್ನದೇ ಆದ ಒಂದು ವೈಯಕ್ತಿಕ ವಿಭಿನ್ನ ಸಾಮರ್ಥ್ಯವನ್ನು ಹೊಂದಿರುತ್ತದೆ. ಅದು ಕ್ರೀಡೆ, ಸಾಂಸ್ಕೃತಿಕ, ಮನೋರಂಜನಾ, ಸಾಮಾಜಿಕ ಚಟುವಟಿಕೆ, ವಿಜ್ಞಾನ ಇತ್ಯಾದಿ ಯಾವುದೇ ವಿಷಯವಾಗಿರಬಹುದು. ಮಗುವಿನ ಪ್ರತಿಭೆಯನ್ನು ಬೆಳಕಿಗೆ ತರುವುದು ಪೋಷಕರಾದ ನಿಮ್ಮ ಕರ್ತವ್ಯ.

ನೀವು ಪೋಷಕರಾಗಿ ಏನು ಮಾಡುವಿರಿ,!

ನಿಮ್ಮ ಮಗುವು ಬೆಳೆಯುತ್ತಿದ್ದಂತೆ ಮಗುವನ್ನು ಶಾಲೆಗೆ ಸೇರಿಸುತ್ತೀರಿ, ಶಾಲೆಯಲ್ಲಿ ತನ್ನ ಸಹಪಾಠಿಗಳಿಗಿಂತ ಮೊದಲು ಬರಬೇಕೆಂದು ಹೇಳುತ್ತೀರಿ, ಅದಕ್ಕೆ ಬೇಕಿರುವ ಪುಸ್ತಕ, ಮನೆಪಾಠ, ಇತ್ಯಾದಿಗಳನ್ನು ನೀವು ಸಂಪೂರ್ಣವಾಗಿ ಒದಗಿಸುತ್ತೀರಿ. ಆದರೆ ನೀವು ಮಗುವಿನ ಶಿಕ್ಷಣದ ಮೇಲೆ ಮಾತ್ರ ಗಮನ ಹರಿಸುವಿರಿವರೆತು, ಮಗುವಿನ ಆಸಕ್ತಿ, ಇಚ್ಛೆಯ ಮೇಲೆ ನೀವು ಹೆಚ್ಚು ಗಮನ ನೀಡುವುದಿಲ್ಲ. ಮಗುವನ್ನು ಮನೆಯ ಓರಗೆ ಆಟವಾಡಲು ಬಿಡದೆ ಇರುವುದು, ಅಥವಾ ಮನೆಯಿಂದ ಆಚೆ ಕಳುಹಿಸದೆ ಇರುವುದು, ಅವನಾಯಿತು ಶಾಲೆಯಾಯಿತು ಆದರೆ ಮಗುವು ಸಾಮಾಜಿಕ ಚಟುವಟಿಕೆಗಳಲ್ಲಿ ಅಥವಾ ಹೊರಗಿನ ಪ್ರಪಂಚದಲ್ಲಿ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಮಗುವು ಪುಸ್ತಕದ ಹುಳು ಆಗಬಹುದು.

ನೀವು ಏನು ಮಾಡಬಹುದು?

ಪೋಷಕರಾಗಿ ನೀವು ನಿಮ್ಮ ಮಗುವಿನ ಶಿಕ್ಷಣದ ಜೊತೆಗೆ ಬೇರೆ ಚಟುವಟಿಕೆಗಳಲ್ಲೂ ಭಾಗಿಯಾಗುವಂತೆ ಮಾಡುವುದು ಮಗುವಲ್ಲಿ ಕ್ರಿಯಾಶೀಲವಾಗಿ ಯೋಚಿಸಲು ಸಹಾಯವಾಗುತ್ತದೆ. ಶಿಕ್ಷಣದಲ್ಲಿ ಮೊದಲು ಬರಬೇಕು ಎಂದು ಒತ್ತಡ ಮಾಡದೆ, ಮಗುವಿನ ಆಸಕ್ತಿಯನ್ನು ಮೊದಲು ತಿಳಿದುಕೊಳ್ಳಿ. ಅವನ/ಳ ಆಸಕ್ತಿಯಲ್ಲಿ ಅವನು/ಳು ಏನಾದರು ಸಾಧಿಸಲು ಸಹಾಯಮಾಡಿ. ಜೊತೆಗೆ ಅವನ/ಳ ಆಸಕ್ತಿಯನ್ನು ಸಂಪೂರ್ಣವಾಗಿ ಸಾಧಿಸಲು ಶಿಕ್ಷಣದ ಅವಶ್ಯಕತೆಯೂ ಇದೆ ಎಂಬುದನ್ನು ಅರ್ಥ ಮಾಡಿಸಿ.

ಅವನ/ಳ ಸಾಮರ್ಥ್ಯವನ್ನು ಮೊದಲು ಗುರುತಿಸುವುದು ನಿಮ್ಮ ಕರ್ತವ್ಯ. ನಿಮ್ಮ ಮಗುವಿನ ಸಾಮರ್ಥ್ಯವನ್ನು ನೀವು ತಿಳಿದುಕೊಂಡ ಮೇಲೆ ಅದಕ್ಕೆ ಬೇಕಾದ ಅಗತ್ಯಗಳನ್ನು ಒದಗಿಸಿ, ಮತ್ತು ನಿಮಗೆ ತಿಳಿದಿರುವುದನ್ನು ಹೇಳಿಕೊಡಿ, ಮತ್ತು ನೀನು ಈ ವಿಷಯದಲ್ಲಿ ಸಾಧಿಸಬೇಕಾದರೆ, ಎಲ್ಲರು ಮಾಡಿದಂತೆ ಮಾಡಿದರೆ ಸಾಮಾನ್ಯ ಏನು ವಿಶೇಷತೆ ಇಲ್ಲ ಎಂದು ಭಾವಿಸುತ್ತಾರೆ. ಆದ್ದರಿಂದ ಮಗುವಿನ ಆಸಕ್ತಿಯನ್ನು ವಿಭಿನ್ನವಾಗಿ, ಹೊಸದಾಗಿ ಅವನ/ಳ ಶೈಲಿಯಲ್ಲಿ ಮಾಡುವಂತೆ ಪ್ರೇರೇಪಿಸಿ. ಮಗುವಿನಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿ.

ನೀವು ಏನು ಮಾಡಬಾರದು?

ಮಕ್ಕಳಲ್ಲಿ ಬರಿ ಓದುವುದರ ಕಡೆ ಮಾತ್ರ ಗಮನಕೊಡುವುದನ್ನು ನಿಲ್ಲಿಸಬೇಕು. ಅವರ ಓದಿನ ಜೊತೆಗೆ ಇತರ ಚಟುವಟಿಕೆಗಳಲ್ಲೂ ಭಾಗಿಯಾಗುವಂತೆ ನೋಡಿಕೊಳ್ಳಬೇಕು. ಅವರಿಗೆ ಆಸಕ್ತಿ ಇಲ್ಲದ ವಿಷಯದ ಮೇಲೆ ಒತ್ತಡ ಹೇರಬಾರದು. ಬರಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬಾರದು. ಅಥವಾ ನಿಮ್ಮ ಇಚ್ಚೆಯ ವಿಷಯದ ಬಗ್ಗೆ  ಹೆಚ್ಚು ಒತ್ತಡ ನೀಡಬಾರದು.

ಪೋಷಕರಾಗಿ ನೀವು ನಿಮ್ಮ ಮಕ್ಕಳ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆಗಳು, ಸಾಮಾಜಿಕ ಚಟುವಟಿಕೆಗಳು ಇತರೆ ವಿಷಯಗಳಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿ ಇದರಿಂದ ಅವರಿಗೆ ಎಲ್ಲಾ ವಿಷಯದ ಮೇಲು ಜ್ಞಾನ ಬೆಳೆಯುತ್ತದೆ. ಜೊತೆಗೆ ತಮ್ಮ ಮುಂದಿನ ಜೀವನಕ್ಕೆ ಅದು ಅನುಕೂಲವಾಗುತ್ತದೆ.

Leave a Reply

%d bloggers like this: