siserian-herige

 ಗರ್ಭಧರಿಸಿದ ತಾಯಿಯು ತನ್ನ ಹೆರಿಗೆಯ ದಿನದ ನಿರೀಕ್ಷೆಯಲ್ಲಿ ಹಲವು ತಯಾರಿಗಳನ್ನು, ಸಲಹೆಗಳನ್ನು ಮಾಡಿಕೊಳ್ಳುತ್ತಾರೆ. ಪ್ರತಿಯೊಬ್ಬರೂ ನಮಗೆ ಸಾಮಾನ್ಯ ಹೆರಿಗೆ ಆಗಬೇಕೆಂಬ ಆಸೆಯನ್ನು ಹೊಂದಿರುತ್ತಾರೆ. ಆದರೆ ಕೆಲವರಿಗೆ ಆಪರೇಷನ್ ಮಾಡಿ ಅಥವಾ ಸಿಸೇರಿಯನ್ ಮಾಡಿ ಮಗು ಹೊರತೆಗೆಯುವ ಪರಿಸ್ಥಿತಿ ಬರಬಹುದು. ಸಿಸೇರಿಯನ್ ಹೆರಿಗೆಯಾದರೆ ನಿಮ್ಮ ಸಂಗಾತಿಗೆ ನೀವು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಧೈರ್ಯ ಮತ್ತು ಶಕ್ತಿಯನ್ನು ತುಂಬಬೇಕು. ಮೊದಲ ಬಾರಿಗೆ ಗರ್ಭಧರಿಸಿದ ಮಹಿಳೆಯು ಹೆರಿಗೆಯಿಂದ ತುಂಬಾ ದಣಿಯಬಹುದು. ಅವರಿಗೆ ವಿಶ್ರಾಂತಿಯ ಅಗತ್ಯ ಹೆಚ್ಚಿರುತ್ತದೆ.

ನಿಮಗೆ ಸಿಸೇರಿಯನ್ ಹೆರಿಗೆಯಾದರೆ ನೀವು ಕೆಲವೊಂದು ಕ್ರಮಗಳನ್ನು ನಿಮ್ಮ ಮತ್ತು ಮಗುವಿನ ಅರೋಗ್ಯ ದೃಷ್ಟಿಯಿಂದ ಪಾಲಿಸಬೇಕು. ನೀವು ಆದಷ್ಟು ವೈದ್ಯರೊಡನೆ ಮುಕ್ತವಾಗಿ ಮಾತನಾಡುವುದು ಒಳ್ಳೆಯದು. ವೈದ್ಯರ ಸಲಹೆಯಂತೆ ನೀವು ಪಾಲಿಸಬೇಕಾದ ಕೆಲವು ಕ್ರಮಗಳ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

೧.ಸಿಸೇರಿಯನ್ ಹೆರಿಗೆ  ಆದ ಬಳಿಕ ಸ್ವಲ್ಪ ಸಮಯದ ನಂತರ ನಿಮ್ಮನ್ನು ನಿಧಾನವಾಗಿ ನಡೆದಾಡಲು ವೈದ್ಯರು ಸೂಚಿಸುತ್ತಾರೆ. ಇದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು, ಇದಕ್ಕೆ ನೀವು ಮಾನಸಿಕವಾಗಿ ತುಂಬಾ ದೈರ್ಯದಿಂದ ಇರಬೇಕು. ನಿಮಗೆ ನಡೆದಾಡಲು ಆಗುತ್ತಿದೆಯೇ ಇಲ್ಲವೇ ಎಂಬುದನ್ನು ಅಥವಾ ನಿಮಗೆ ಏನಾಗುತ್ತಿದೆ ಎಂಬುದನ್ನು ವೈದ್ಯರ ಬಳಿ ಮುಕ್ತವಾಗಿ ಹೇಳಿರಿ.

೨.ನಿಮ್ಮ ನೋವನ್ನು ಕಡಿಮೆ ಮಾಡಲು ವೈದ್ಯರನ್ನು ಬೇಟಿ ಮಾಡಿ.  ವೈದ್ಯರ ಸಲಹೆ ಇಲ್ಲದ ಯಾವುದೇ ಔಷದಿಗಳನ್ನು ತೆಗೆದುಕೊಳ್ಳಬೇಡಿ.

೩.ಕೆಲವು ದಿನಗಳ ವರೆಗೆ ರಕ್ತಸ್ರಾವ ಆಗಬಹುದು, ಇದರ ಬಗ್ಗೆ ವೈದ್ಯರ ಬಳಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ. ಪ್ಯಾಡ್ ಗಳನ್ನು ಬಳಸಿ, ಕೆಲವು ಆಸ್ಪತ್ರೆ ನಿಮಗೆ ಇದನ್ನು ಒದಗಿಸುವುದು.

೪.ಖುರ್ಚಿಯ ಮೇಲೆ ಆದಷ್ಟು ಕುಳಿತುಕೊಳ್ಳುವುದು, ಗಾಯ ಅಥವಾ ಆಪರೇಷನ್ ಮಾಡಿದ ಜಾಗ ಬೇಗ ಗುಣವಾಗಲು ಸಹಾಯವಾಗುತ್ತದೆ.

೫.ನೀವು ಆದಷ್ಟು ಕೆಲಸ ಮಾಡುವುದನ್ನು ಕಡಿಮೆ ಮಾಡಿ. ಈ ಸಮಯದಲ್ಲಿ ನಿಮಗೆ ಹೆಚ್ಚು ವಿಶ್ರಾಂತಿಯ ಅಗತ್ಯವಿದೆ. ಮತ್ತು ಭಾರವಾದ ಯಾವುದೇ ವಸ್ತುಗಳನ್ನು ಎತ್ತುಕೊಳ್ಳಬೇಡಿ. ಕನಿಷ್ಠ ೬ ವಾರಗಳ ಸಂಪೂರ್ಣ ವಿಶ್ರಾಂತಿಯ ಅಗತ್ಯವಿದೆ.

೬. ಬಿಗಿಯಾಗಿರುವ ಉಡುಪುಗಳನ್ನು ಧರಿಸದೆ, ಸಾಮಾನ್ಯವಾಗಿ ಮತ್ತು ಮಗುವಿಗೆ ಎದೆಹಾಲುಣಿಸುವ ಸಮಯದಲ್ಲಿ ಆರಾಮದಾಯಕವಾಗಿರುವ ಬಟ್ಟೆಗಳನ್ನು ಹಾಕಿಕೊಳ್ಳಿ.

೭.ಸ್ನಾನ ಮಾಡುವಾಗ ಸಿಸೇರಿಯನ್ ಮಾಡಿರುವ ಜಾಗಕ್ಕೆ ನೀರು ಬಿಳದಂತೆ ಅಥವಾ ಅದಕ್ಕೆ ಅಪಾಯವಾಗದಂತೆ ನೋಡಿಕೊಳ್ಳಿ. ನೀವು ಪ್ರತಿಯೊಂದು ಕೆಲಸಕ್ಕೆ ಬಳಸುವ ನೀರು ಬಿಸಿಯಾಗಿರಲಿ.

೮.ಸಿಸೇರಿಯನ್ ಹೆರಿಗೆ ನಂತರ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ವೈದ್ಯರ ಸಲಹೆ ಪಡೆಯಿರಿ.

Leave a Reply

%d bloggers like this: