ನಿಮ್ಮ-ಮಗುವಿನ-ಕಿವಿಯನ್ನು-ಶುಚಿಗೊಳಿಸುವ-ವಿಧಾನಗಳು

ನಿಮ್ಮ ಮಗುವಿನ ಕಿವಿಯು ಮೇಣದಿಂದ ತುಂಬಿಕೊಂಡಿರುವುದನ್ನು ಗಮನಿಸಿದ್ದೀರಾ ? ಮಗುವಿಗೆ ನೋವಾಗದಂತೆ ಈ ಮೇಣವನ್ನು ಹೊರತೆಗೆಯುವ ವಿಧಾನಗಳೇನು?

ಮಕ್ಕಳ ಕಿವಿಯಲ್ಲಿ ಮೇಣವು ತುಂಬಿಕೊಳ್ಳುವುದು ಸರ್ವೇ ಸಾಮಾನ್ಯ. ಮಗುವಿನ ಕಿವಿಯನ್ನು ಸ್ವಚ್ಛವಾಗಿ ಸ್ವಾಸ್ಥ್ಯವಾಗಿಸಿರಿಕೊಳ್ಳ ಬೇಕಾದದ್ದು ಮಗುವಿನ ಆರೋಗ್ಯದ ದೃಷ್ಟಿಯಿಂದ ಅತೀ ಅಗತ್ಯ. ಮಗುವಿನ ಕಿವಿಯೊಳಗೆ ಪ್ರವೇಶಿಸುವ ಧೂಳಿನ ಕಣಗಳನ್ನು ತಡೆಹಿಡಿದಿಡುವ ಪರಿಣಾಮವಾಗಿ, ಕಿವಿಯಲ್ಲಿ ಮೇಣವು ತುಂಬಿಕೊಳ್ಳುತ್ತದೆ ಈ ರೀತಿಯಾಗಿ ತುಂಬಿಕೊಳ್ಳುವ ಮೇಣವು ಕಿವಿ ನೋವಿಗೆ ಕಾರಣವಾಗುತ್ತದೆ.

ಏನನ್ನು ಮಾಡಬಹುದು?

ಮಗುವಿನ ಕಿವಿಯೊಳಗೆ ಮಯಣವು ತುಂಬಿಕೊಂಡಿದ್ದರೆ, ಶುಭ್ರವಾದ ಹತ್ತಿ ಬಟ್ಟೆಯಿಂದ ಮೇಣವನ್ನು ಹೊರತೆಗೆಯಿರಿ ಆದರೆ ಮಯಣವು ಕಿವಿಯೊಳಗೆ ನುಗ್ಗಿಕೊಳ್ಳದಂತೆ ಜಾಗ್ರತೆ ವಹಿಸಬೇಕು. 

ಮಗುವಿನ ಕಿವಿ ದ್ವಾರದೊಳಗೆ ತುಂಬಾ ಮೇಣವು ತುಂಬಿಕೊಂಡಿದೆ ಎಂದಾದರೆ, ದಯವಿಟ್ಟು ಮಕ್ಕಳ ತಜ್ಞರನ್ನು  ಭೇಟಿಯಾಗಿ. ವೈದ್ಯರು ಮಗುವಿನ ಕಿವಿಯೊಳಗೆ ಹೈಡ್ರೋಜನ್ ಪೆರೋಕ್ಸೈಡ್ ಗಳಂತಹ ದ್ರಾವಕಗಳನ್ನು ಸುರಿದು, ಗಟ್ಟಿಯಾದ ಮೇಣವನ್ನು ಸಡಿಲಗೊಳಿಸಿ ಬಹಳ ಚಾಣಾಕ್ಷತೆಯಿಂದ, ಕಿವಿಯ ಮೇಣವನ್ನು  ಹೊರತೆಗೆಯುವರು.

ಕೆಲವೊಮ್ಮೆ “ಕ್ಯೂರೆಟ್” ಎನ್ನುವ ಉಪಕರಣವನ್ನು ಉಪಯೋಗಿಸಿಯೂ ಕಿವಿಯೊಳಗೆ ತುಂಬಿದ ಮೇಣವನ್ನು ಬಹಳ ಜಾಗರೂಕತೆಯಿಂದ ಮಗುವಿಗೆ ನೋವಾಗದಂತೆ ಕೆರೆದು ತೆಗೆಯಬಲ್ಲರು.

ತಿಂಗಳಿಗೊಂದಾವರ್ತಿ ನೀವು ನಿಮ್ಮ ಮಗುವಿನ ಕಿವಿಯನ್ನು ಶುಚಿಪಡಿಸಿಕೊಳ್ಳಬಹುದು.

ಏನನ್ನು ಮಾಡಬಾರದು

ನೀವು ಇಯರ್ ಬಡ್ಸ್ಅನ್ನು ಉಪಯೋಗಿಸಿ ನಿಮ್ಮ ಕಿವಿಯನ್ನು ಶುಚಿಗೊಸುತ್ತಿರಬಹುದು. ಆದರೆ ಮಕ್ಕಳ ಕಿವಿಗೆ ಇಂತಹ ಪ್ರಯೋಗವನ್ನು ನಿಷೇಧಿಸಲಾಗಿದೆ. ಹತ್ತಿಯನ್ನು ಕಿವಿಗೆ ತುರುಕಿಸುವಾಗ, ಮೇಣವು ಇನ್ನೂ ಒಳಗೆ ಹೋಗಿ, ಇಯರ್ ಡ್ರಮ್ ಎಂಬ ತೆಳು ಪದರವನ್ನು ಹಾನಿಗೊಳಪಡಿಸುವ ಸಾಧ್ಯತೆಗಳಿವೆ.   

ಯಾವುದೇ ಸಂದರ್ಭಗಳಲ್ಲೂ ಮಗುವಿನ ಕಿವಿಯೊಳಗೆ ಇಂತಹ ಸಾಧನಗಳನ್ನು ತುರುಕಿಸುವುದು ಹಿತಕರವಲ್ಲ.   

ಕಿವಿಯ ಸೋಂಕಿಗೆ ಕಾರಣವಾಗಬಹುದು

ಕೆಲವೊಮ್ಮೆ ಮಗುವು ಕಿವಿಯನ್ನು ಹಿಡಿದು ಎಳೆಯುವುದನ್ನು ನಾವು ಕಾಣಬಹುದು. ಹಾಗಿದ್ದರೆ, ಮಗುವು ಕಿವಿಯ ಸೋಂಕಿನಿಂದ ಬಳಲುತ್ತಿರಬಹುದು. ಆದರೆ ಮಗುವು ಯಾವುದೇ ನಿದ್ರಾತೊಂದರೆ ಅಥವಾ ಜ್ವರದ ಲಕ್ಷಣಗಳನ್ನು ತೋರ್ಪಡಿಸದಿದ್ದರೆ ಸೋಂಕಿಗೊಳಗಾಗಿಲ್ಲವೆಂದು ಸಮಾಧಾನಪಡಬಹುದು.  

ಮಗುವಿನ ಕಿವಿಯನ್ನು ಪರೀಕ್ಷಿಸಿದಾಗ ಕಂದು ಬಣ್ಣದ ಸ್ರಾವ, ಹಾಲು ಬಣ್ಣದ ರಸಿಗೆ ಅಥವಾ ರಕ್ತವು   ಮಗುವಿನ ಕಿವಿಯು ಸೋಂಕಿಗೊಳಗಾಗಿದೆಯೆಂದು ಸೂಚಿಸುತ್ತದೆ.

Leave a Reply

%d bloggers like this: