navajaata-shishuvina-araike-aluva-maguvannu-samadhaanisuvudu

ಹೊಸದಾಗಿ ಜನ್ಮಿಸಿದ ಶಿಶುಗಳು ಅಳುವುದು ಸಾಮಾನ್ಯವಾಗಿದೆ .ಏಕೆಂದರೆ ಹೊರಗಿನ ವಾತಾವರಣ ಅವರಿಗೆ ಹೊಸದು ಮತ್ತು ಹಸಿವಿನ ಭಾವನೆಯು ಇನ್ನೂ ಹೊಸದಾಗಿರುತ್ತದೆ .ಆದ್ದರಿಂದ ಇದು ಸಂಭವಿಸುತ್ತದೆ . ಗರ್ಭಾಶಯದಲ್ಲಿ, ವಿಷಯಗಳು ಹೊರಗಿನ ಪ್ರಪಂಚದಿಂದ ಭಿನ್ನವಾಗಿರುತ್ತವೆ.ಹೊರಗಿನ ಪ್ರಪಂಚದಲ್ಲಿ, ಅವರನ್ನು ಅನೇಕ ಬಾಹ್ಯ ಪ್ರಚೋದಕಗಳಿಗೆ ಒಡ್ಡಲಾಗುತ್ತದೆ,  ಅದು ಅವರಿಗೆ ಅಹಿತಕರವೆನಿಸುತ್ತದೆ, ಆದ್ದರಿಂದ ಅವರು ಅಳುತ್ತಾರೆ .ಆದರೆ ಚಿಂತಿಸದಿರಿ  ಅಳುತ್ತಿರುವ ನಿಮ್ಮ  ಮಗುವನ್ನು ಶಮನಗೊಳಿಸಲು ಅನೇಕ ಮಾರ್ಗಗಳಿವೆ!

೧.ದಪ್ಪವಾಗಿ ಹೊದ್ದಿಸುವುದು (ಬೇಬಿ ಬುರ್ರಿಟೋ)

ಅವನನ್ನು  / ಅವಳನ್ನು ಬೆಚ್ಚಗಾಗಿ  ಇರಿಸಿಕೊಳ್ಳಲು ತೆಳ್ಳನೆಯ ಹಗುರವಾದ ಬಟ್ಟೆಯಿಂದ ನಿಮ್ಮ ಮಗುವನ್ನು ಸುತ್ತಿ ,ಇದು  ಅವನನ್ನು  / ಅವಳನ್ನು ಶಮನಗೊಳಿಸುವ ಉತ್ತಮ ಮಾರ್ಗವಾಗಿದೆ. ನೀವು ಮಗುವಿನ  ಎದೆಯ ಮೇಲೆ ಅವರ ತೋಳುಗಳನ್ನು ಕಟ್ಟುವುದು  ಸಹ ಅಗತ್ಯವಿರುತ್ತದೆ. ಇದು ನಿಮ್ಮ ಮಗುವಿಗೆ ಸ್ನೇಹಶೀಲ ಮತ್ತು ಆರಾಮದಾಯಕವಾಗುವಂತೆ ಮಾಡುತ್ತದೆ.

೨.ಶ್ ಶ್ ಶ್ಶ್ ಶ್ಶ್

ಇದನ್ನು ನೀವು ನಂಬದಿರಬಹುದು ,ಆದರೆ ವಾಸ್ತವವಾಗಿ ಶ್ ಎಂಬ ಶಬ್ದವು  ಮಗುವಿಗೆ ಗರ್ಭಾಶಯದೊಳಗಿರುವಾಗ ಧ್ವನಿಯನ್ನು ಹೋಲುತ್ತದೆ. ಇದು ಅವರಿಗೆ ಸೇರಿದ ಭಾವನೆಯನ್ನು ನೀಡುತ್ತದೆ ಮತ್ತು ಅವರು ಒಂದು ರೀತಿಯ ಶಾಂತಿಯುತತೆಯನ್ನು ಅನುಭವಿಸುತ್ತಾರೆ.

೩.ತೂಗುವುದು /ಮಗುವನ್ನು ಓಲಾಡಿಸು

ನಿಮ್ಮ ಮಗುವನ್ನು ತೂಗಾಡಿಸುವುದು  ಮತ್ತು ಲಯಬದ್ಧವಾಗಿ  ಓಲಾಡಿಸುವುದು ನಿಜವಾಗಿಯೂ ಅವನನ್ನು / ಅವಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.ಇದು ಅವನ್ನನು /ಅವಳನ್ನು ಆಹ್ಲಾದಕಾರಿಯಾಗಿರಿಸಲು ಸಹಾಯ ಮಾಡುತ್ತದೆ .ನೀವು ಅವನನ್ನ  / ಅವಳನ್ನು ಸಾಂತ್ವನಗೊಳಿಸಲು ಓಲಾಡುವ  ಕುರ್ಚಿ ಅಥವಾ ಮಗುವಿನ ಉಯ್ಯಾಲೆಯನ್ನು ಬಳಸಬಹುದು.

೪.ಶಾಮಕ ಅಥವಾ ಪ್ಯಾಸಿಫಿರ್ ಉಪಯೋಗಿಸಿ

ಪ್ಯಾಸೈಫೈಯರ್ಗಳು ಅಥವಾ ಶಾಮಕಗಳು  ಅನೇಕ ವರ್ಷಗಳಿಂದ ಅನೇಕ ಹೆತ್ತವರಿಗೆ ಸಹಾಯ ಮಾಡಿವೆ, ಇದು ತಕ್ಷಣ ಮಗುವನ್ನು ಸಮಾಧಾನಗೊಳಿಸುತ್ತದೆ.ಶಿಶುಗಳಿಗೆ ಪ್ರಬಲವಾದ ಹೀರಿಕೊಳ್ಳುವ ಅಗತ್ಯತೆಗಳಿವೆ,ಅವರು ತಮ್ಮ ಹೆಬ್ಬೆರಳನ್ನು ಸಹ ಚೀಪಬಹುದು .

೫.ನಿಮ್ಮ ಆಹಾರವನ್ನು ಪರೀಕ್ಷಿಸಿ

ನಿಮ್ಮ ಆಹಾರವು ನಿಮ್ಮ ಮಗುವಿಗೆ ಅನಿಲವನ್ನು ಉಂಟುಮಾಡಬಹುದು , ಅದು ಅವರಿಗೆ ಅಹಿತಕರವಾಗಿರುತ್ತದೆ. ನಿಮ್ಮ ಆಹಾರದಲ್ಲಿ  ಹಾಲಿನ ಉತ್ಪನ್ನ , ಕೆಫೀನ್, ಈರುಳ್ಳಿ ಮತ್ತು ಇತರ ಕಿರಿಕಿರಿಯುಂಟುಮಾಡುವ ಆಹಾರಗಳ ಬಳಕೆಯನ್ನು ವೀಕ್ಷಿಸಿ  ಮತ್ತು ತೆಗೆದುಹಾಕಿ. ಇವು ನೀವು ನಿಮ್ಮ ಮಗುವಿಗೆ ನೀಡುವ ಎದೆಹಾಲಿನ  ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು  ಉಂಟು ಮಾಡಬಹುದು .

೬.ಹೊರಗಡೆ ಕರೆದುಕೊಂಡು ಹೋಗಿ

ತಾಜಾ ಗಾಳಿಯ ಸೇವನೆಗಾಗಿ ನಿಮ್ಮ ಮಗುವನ್ನು ಹೊರಗಡೆ ಕರೆದುಕೊಂಡು ಹೋಗಿ .ಮರ್ಮರಗುಟ್ಟಿಸುವ ಎಲೆಗಳು ಅಥವಾ ಪ್ರಶಾಂತವಾದ ತಂಗಾಳಿಯು ಅವಳನ್ನು /ಅವನನ್ನು ಶಾಂತಗೊಳಿಸಬಹುದು ಇಲ್ಲವೇ ಅವರ ಗಮನವನ್ನು ಬೇರೆ ಕಡೆ ಹರಿಯುವಂತೆ ಮಾಡಿ ಅಳುವನ್ನು ನಿಲ್ಲಿಸಬಹುದು .ಪರಿಸರದ ಬದಲಾವಣೆಯು ಈ ಸಂದರ್ಭದಲ್ಲಿ  ಉತ್ತಮವಾಗಿದೆ ಕಾರಿನಲ್ಲಿ ಅಥವಾ ಬೈಕಿನಲ್ಲಿ ಅವರನ್ನು ಕರೆದುಕೊಂಡು ಹೋಗುವುದು  ನಿಜವಾಗಿಯೂ ಅವರಿಗೆ ಸಹಾಯ ಮಾಡಬಹುದು.

೭.ನಿಮ್ಮ ಮಗುವಿಗೆ ಮಾಲೀಶು ಮಾಡಿ

ನಿಮ್ಮ ಮಗುವಿಗೆ ಮಾಲೀಶು  ಮಾಡುವುದರಿಂದ ನಿಮ್ಮ ಮಗುವಿಗೆ ತೊಂದರೆಯುಂಟು ಮಾಡುವ  ಅನಿಲ ಅಥವಾ ಕಿರಿಕಿರಿಯನ್ನು ತೆಗೆಯಬಹುದು ಮತ್ತು ಅವನು  / ಅವಳು ಅಳುವನ್ನು  ನಿಲ್ಲಿಸಲು ಸಹಾಯ ಮಾಡುತ್ತದೆ.

೮.ಕೆಲವು ಶಬ್ದಗಳನ್ನು ಮಾಡಿ

ಮಗುವು  ಗರ್ಭದಲ್ಲಿ ೯ ತಿಂಗಳುಗಳ ಕಾಲ ಇದ್ದರೂ ಸಹ ಅವಳು /ಅವನು  ಚಲನೆ ಮತ್ತು ಶಬ್ದಗಳಿಗೆ ಹೊಂದಿಕೊಳ್ಳುತ್ತಿರುತ್ತಾರೆ . ಆದ್ದರಿಂದ ನಿಮ್ಮ ಮಗುವನ್ನು ಒಯ್ಯಲು ಅನುಕೂಲವಾದ ಮಕ್ಕಳ ತಳ್ಳುಗಾಡಿಯಲ್ಲಿರಿಸಿ ಸ್ವಲ್ಪ ಕುಲುಕಿಸಲು ಬಟ್ಟೆ ಒಗೆಯುವ ಯಂತ್ರದ ಮೇಲಿರಿಸಿ .ಖಂಡಿತವಾಗಿಯೂ ಇದು ಅವರನ್ನು ಖುಷಿಗೊಳಿಸುತ್ತದೆ .

೯.ಬಹುಶಹ ಹೊಟ್ಟೆನೋವು

ನಿಮ್ಮ ಮಗುವು ಹೊಟ್ಟೆನೋವಿನಿಂದ ಬಳಲುತ್ತಿರಬಹುದು  ಆದ್ದರಿಂದ  ಅವನು/ಅವಳು ಅಳುತ್ತಿರಬಹುದು .ನಿಮ್ಮ ಮಗುವು  ದಿನಕ್ಕೆ 3 ಗಂಟೆಗಳಿಗೂ ಮೀರಿ , ವಾರಕ್ಕೆ 3 ದಿನಗಳಿಗೂ ಮೀರಿ  ಏನಾದರೂ ಅತ್ತರೆ , 3 ವಾರಗಳಿಗೂ ಹೆಚ್ಚು ಕಾಲ ನೀವು ವೈದ್ಯರನ್ನು ಭೇಟಿ ಮಾಡಬೇಕಾಗಬಹುದು. ಯಾವುದೇ ಸಾಧ್ಯತೆಗಳು ಇದ್ದರೂ ವೈದ್ಯರನ್ನು ಭೇಟಿ ಮಾಡಿ .

೧೦.ಕತ್ತಲಿಗೆ ಹೋಗಿ

ದೂರದರ್ಶನವನ್ನು ನಂದಿಸುವುದುಅಥವಾ ಬೆಳಕನ್ನು ಪೂರೈಸುವ ದೀಪವನ್ನು ನಂದಿಸುವುದು ಕೂಡ ಕೆಲವೊಮ್ಮೆ ಕೆಲಸ ಮಾಡುತ್ತದೆ .ಮಗುವು  ತುಂಬಾ ಪ್ರಚೋದಕತೆಯಿಂದ ಅನಾನುಕೂಲವನ್ನು ಅನುಭವಿಸುತ್ತಿರಬಹುದು , ಹೀಗಾಗಿ ಅದು ದೀಪಗಳನ್ನು ನಂದಿಸುವುದರಿಂದ ಮಗುವಿಗೆ ಉತ್ತಮವಾಗಬಹುದು.

ಮೊದಲ ಕೆಲವು ತಿಂಗಳುಗಳಲ್ಲಿ ಅಳುವುದು ಸಾಮಾನ್ಯವಾಗಿದೆ. ಈ ಎಲ್ಲಾ ತಂತ್ರಗಳನ್ನು ಪ್ರಯತ್ನಿಸಿ.ಪ್ರತಿ ಮಗುವು ವಿಭಿನ್ನವಾಗಿದೆ  ಮತ್ತು ವಿಭಿನ್ನ ವಿಧಾನಗಳು ವಿಭಿನ್ನ ಶಿಶುಗಳ ಮೇಲೆ ಕಾರ್ಯನಿರ್ವಹಿಸುತ್ತವೆ, ನಿಮಗೆ ಸೂಕ್ತವಾದದ್ದನ್ನು ಕಂಡು ಹಿಡಿಯಿರಿ  ಮತ್ತು ಪ್ರಯತ್ನಿಸುತ್ತಿರಿ.ಕೆಲವು ತಿಂಗಳುಗಳಲ್ಲಿ ನಿಮ್ಮ ಮಗುವಿನ ಅಳುವುದು ನಿಲ್ಲುವುದಿಲ್ಲ ಎಂದಾದಲ್ಲಿ   ವೈದ್ಯಕೀಯ ಸಹಾಯ ಪಡೆಯಿರಿ.

Leave a Reply

%d bloggers like this: