makkalalli-allargy

ಇತ್ತೀಚೆಗೆ ಹದಿಹರೆಯದ ಬಾಲಕನೊಬ್ಬ ಸಾವಿಗೀಡಾದ, ಕಾರಣ: ಅವನಿಗೆ ಚೀಸ್ ನ ಅಲರ್ಜಿ ಇದ್ದಿದ್ದು. ಇದು ಕೇಳಲು ತಮಾಷೆ ಎನಿಸಿದರೂ ಸತ್ಯ. ಸಾಮಾನ್ಯವಾಗಿ ಕೆಲವು ಆಹಾರಗಳ ಅಲರ್ಜಿ ಮಾನವರಲ್ಲಿ ಸಹಜ. ಈ ಅಲರ್ಜಿಯಿಂದ ಚರ್ಮ ಕೆಂಪಗಾಗುವುದು ಬಿಟ್ಟರೆ ಬೇರೇನೋ ತೊಂದರೆ ಇಲ್ಲವೆಂದುಕೊಂಡು ಅಲಕ್ಷಿಸಿದರೆ ಇದು ಮುಂದೆ ಅತಿಸಂವೇದನಾಶೀಲತೆ ಎಂಬ ಅಲರ್ಜಿಯ ಆಘಾತಕ್ಕೆ ಕಾರಣವಾಗಬಹುದು. ಮಕ್ಕಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಕಡಿಮೆ ಇರುವ ಕಾರಣ ಅಥವಾ ದೇಹದಲ್ಲಿನ ದುರ್ಬಲ ಶಕ್ತಿಯಿಂದ ಇವು ಅವರಿಗೆ ಮಾರಕವಾಗಬಹುದು.

ಆಹಾರದ ಅಲರ್ಜಿ

ಸಾಮಾನ್ಯವಾಗಿ ಮೊದಲೇ ಹೇಳಿದಂತೆ ಅನೇಕರಲ್ಲಿ ಕೆಲವು ಆಹಾರದ ಅಲರ್ಜಿ ಇರುವುದು ತುಂಬಾ ಸಹಜ. ಇದು ಮೊದಲಿಗೆ ಚರ್ಮ ಕೆಂಪಾಗುವುದು, ತುರಿಕೆ, ಗುಳ್ಳೆ ಮೂಡುವುದು ಅಥವಾ ಕಿರಿಕಿರಿಯನ್ನು ಉಂಟುಮಾಡುತ್ತವೆ. ಆದರೆ ಇದನ್ನು ನಿರ್ಲಕ್ಷಿಸಿ ಅದರ ಸೇವನೆ ಮಾಡುವುದನ್ನು ಮುಂದುವರೆಸಿದರೆ ಅದು ಗಂಭೀರ ಸಮಸ್ಯೆಗೆ ನೀವೇ ದಾರಿ ಮಾಡಿಕೊಟ್ಟಂತೆ. ಕೆಲವೊಮ್ಮೆ ರೋಗ ನಿರೋಧಕಗಳು ಕಣಗಳನ್ನು ದೇಹಕ್ಕೆ ಹಾನಿ ಮಾಡುವ ಕಣಗಳೆಂದು ಭಾವಿಸಿ ಅದನ್ನು ನಾಶಮಾಡುವುದು ಅಲರ್ಜಿಯಿಂದ ಗಂಭೀರ ಸಮಸ್ಯೆಗೆ ಪ್ರಮುಖ ಕಾರಣ.

ನಿಮ್ಮ ಮಕ್ಕಳಲ್ಲಿ ಯಾವ ಆಹಾರ ಅಲರ್ಜಿಯನ್ನುಂಟುಮಾಡುತ್ತಿದೆ ಎಂಬುದನ್ನು ಮೊದಲು ಪತ್ತೆ ಹಚ್ಚಿ.

ಅಲರ್ಜಿಯನ್ನು ಹೇಗೆ ಕಂಡುಹಿಡಿಯುವುದು

ಸಾಮಾನ್ಯವಾಗಿ ಇದು ನಿಮಗೆ ತಿಳಿದೇ ಇರುತ್ತದೆ. ಅಂತೆಯೇ, ಚರ್ಮವು ಕೆಂಪಾಗುವುದು, ತುರಿಕೆ ಬರುವುದು, ಗುಳ್ಳೆ ಬರುವುದು, ಕಿರಿಕಿರಿ ಯಾಗುವುದು, ಸಾಮಾನ್ಯ ಕೆಲವರಿಗೆ ವಾಂತಿಯಾಗಬಹುದು. ಇದು ಹಾಗೆ ಮುಂದುವರೆದರೆ, ಉಸಿರಾಟದಂತಹ ಪ್ರಭಾವಶಾಲಿ ಅನಾರೋಗ್ಯಕ್ಕೆ ದಾರಿಯಾಗುವುದು. ಇದನ್ನು ಕೂಡಲೇ ವೈದ್ಯರ ಬಳಿ ತೋರಿಸಿ, ಅಥವಾ ಅಲರ್ಜಿಯಾಗುವ ಆಹಾರವನ್ನು ನಿಷೇಧಿಸಿ.

ಕೆಲವು ಮಕ್ಕಳಲ್ಲಿ ಮೇಲೆ ವಿವರಿಸಿದ ಸೂಚನೆಗಳ ಹೊರತಾಗಿ ತಲೆಸುತ್ತುವುದು, ಮೂರ್ಛೆ ಬೀಳುವುದು ಸಹಾ ಕಂಡುಬರುತ್ತದೆ.

ಏನು ಮಾಡಬಹುದು?

ಇದರ ಬಗ್ಗೆ ಸರಿಯಾದ ಸಂಪೂರ್ಣ ಮಾಹಿತಿಯನ್ನು ನಿಮ್ಮ ವೈದ್ಯರಿಂದ ಪಡೆದುಕೊಳ್ಳಿ. ಒಂದು ವೇಳೆ ಯಾವುದಾದರೂ ಮಕ್ಕಳಿಗೆ ಈಗಾಗಲೇ ಮಧುಮೇಹ ಅಥವಾ ಅಸ್ತಮಾ ರೋಗವಿದ್ದರೆ ಆಹಾರದ ಅಲರ್ಜಿ ಇನ್ನಷ್ಟು ಅಪಾಯಕಾರಿಯಾಗಬಹುದು. ಆದ್ದರಿಂದ ಅವರಿಗೆ ಅಲರ್ಜಿಯಾಗುವ ಯಾವುದೇ ಆಹಾರವನ್ನು ನೀಡಬೇಡಿ. ಮತ್ತು ಮಕ್ಕಳಿಗೆ ಅಂತಹ ಆಹಾರಗಳನ್ನು ಹೊರಗಡೆ ಎಲ್ಲೂ ತಿನ್ನದಂತೆ ಸ್ಪಷ್ಟವಾಗಿ ತಿಳಿಹೇಳಿ. ಮತ್ತು ವೈದ್ಯರ ಸಲಹೆಯನ್ನು ಪಾಲಿಸಿ.

ಮಕ್ಕಳು ಬೆಳೆಯುತ್ತಿದ್ದಂತೆ ಅವರಲ್ಲಿನ ರೋಗ ನಿರೋಧಕ ಶಕ್ತಿಯು ಹೆಚ್ಚಿ ಸಮೃದ್ಧವಾಗಿ, ಅಲರ್ಜಿಯು ತಾನಾಗಿಯೇ ದೂರವಾಗುತ್ತದೆ. ಕೆಲವರು ಪ್ರೌಢಾವಸ್ಥೆ ತಲುಲಿದ ನಂತರ ತಮ್ಮ ಅಲರ್ಜಿಯನ್ನು ಕಳೆದುಕೊಳ್ಳುತ್ತಾರೆ. ಆದರೆ ಅಪರೂಪದಲ್ಲಿ ಕೆಲವರು ಪ್ರೌಢಾವಸ್ಥೆ ತಲುಪಿದರು ತಮ್ಮ ಅಲರ್ಜಿಯಿಂದ ಇನ್ನೂ ಹೊರ ಬಂದಿರುವುದಿಲ್ಲ, ಇದಕ್ಕೆ ಅವರ ದುರ್ಬಲ ಮನಸ್ಥಿತಿ ಕಾರಣವಿರಬಹುದು. ಅಂತವರು ಅಲರ್ಜಿಯ ಆಹಾರವನ್ನು ಸೇವಿಸದೇ ಇರುವುದೇ ಒಳ್ಳೆಯದು. ಬೆಳೆಯುತ್ತಿದ್ದಂತೆ ಈ ತೊಂದರೆ ತಾನಾಗಿಯೇ ಸರಿಹೋಗುತ್ತದೆ, ಆದರೆ ಪ್ರತಿರಕ್ಷಣಾ ವ್ಯವಸ್ಥೆ ಕಡಿಮೆ ಇರುವ ಮಕ್ಕಳಲ್ಲಿ ಇದನ್ನು ನೀವು ಜಾಗೃತೆಯಿಂದ ನೋಡಿಕೊಳ್ಳುವುದು ಒಳ್ಳೆಯದು, ಮತ್ತು ವೈದ್ಯರ ಸಲಹೆ ಪಡೆಯುವುದು ಸೂಕ್ತ.

Leave a Reply

%d bloggers like this: