taytanada-i-katu-rahasyagala-bagge-nimage-yaru-heluvudilla

ತಾಯ್ತನ ಅನ್ನುವುದು ತಾಯಿ ಹಾಗು ಮಗುವಿನ ನಡುವಿನ ಒಂದು ಪವಿತ್ರ ಬಂಧನ. ಇದು ಪ್ರೀತಿಯ ಅತ್ಯಂತ ಶುದ್ಧ ರೂಪ. ಇದು ಒಂದು ಹೆಣ್ಣು ತಾನು ಹಿಂದೆಂದು ಅನುಭವಿಸದ, ಹಂಚಿಕೊಳ್ಳದ ಅನುಭವಗಳನ್ನ ಆಕೆಗೆ ಬಳುವಳಿ ಆಗಿ ನೀಡುತ್ತದೆ. ಈ ಬಂಧನವು ಅಪೇಕ್ಷೆಯ ಮೇಲೆ ನಿಂತಿರುವುದಿಲ್ಲ. ತಾಯ್ತನ ಎಂದರೆ ಏನನ್ನು ಅಪೇಕ್ಷಿಸದೆ ಸಕಲವನ್ನೂ ತನ್ನ ಮಗುವಿಗೆ ಧಾರೆ ಎರೆಯುವ ಯಾವುದಕ್ಕೂ ಸಮವಿರದ, ಎಂದಿಗೂ ಅಳಿಯದ ಬಾಂಧವ್ಯ.

ಆದರೆ, ತಾಯ್ತನ ಎಂದರೆ ಕೇವಲ ನಿಮ್ಮ ಮಗುವನ್ನು ಎತ್ತಿಕೊಂಡು, ಮುದ್ದಾಡುತ್ತಾ ದಿನ ಕಳೆಯುವುದಷ್ಟೇ ಎಂದಲ್ಲ. ಇದು ನೀವು ನಿಮ್ಮ ಟಿವಿ ಅಲ್ಲಿ ಬರುವ ಜಾಹಿರಾತುಗಳಲ್ಲಿ ತೋರಿಸುವಂತೆ ಇರುವುದೆಂದು ಭಾವಿಸಬೇಡಿ ತಾಯ್ತನ ಎನ್ನುವುದು ಎಷ್ಟು ಒಂದು ಬಂಧವಾಗಿರುತ್ತದೋ, ಅಷ್ಟೇ ಒಂದು ವೃತ್ತಿ ಕೂಡ ಆಗಿರುತ್ತದೆ. ಇದು ಯಾವುದೇ ಬಡ್ತಿ ಅಥವಾ ಸಂಬಳ ಇಲ್ಲದ ಒಂದು ವೃತ್ತಿ. ತಾಯ್ತನವು ನಿಜವಾಗಿಯೂ ಹೇಗೆ ಇರುತ್ತದೆ ಎಂಬುದನ್ನ ತಿಳಿದುಕೊಳ್ಳಿ :

೧. ನಿದ್ದೆ ಇಲ್ಲದ ರಾತ್ರಿಗಳು

ಎಲ್ಲಾ ಸುಖನಿದ್ರೆಯನ್ನ ಮತ್ತು ನಿಮ್ಮ 10 ಘಂಟೆಗಳ ಸುಗಮ ನಿದ್ದೆಯನ್ನ ಮರೆತುಬಿಡಿ. ನೀವು ನಿಮ್ಮ ಮಗುವನ್ನ ಮಲಗಿಸಿದ ಮೇಲೆ ಮಾತ್ರವೇ ನೀವು ನಿದ್ರೆಗೆ ಜಾರಲು ಸಾಧ್ಯ. ಹಾಗೆ ಮಾಡಿದ ಮೇಲೆಯೂ ನೀವು ಎಲ್ಲವೂ ಸರಿಯಾಗಿದೆಯೇ ಎಂದು ಆಗಾಗ್ಗೆ ಎದ್ದು ನೋಡುತ್ತಿರಬೇಕು. ಅಲ್ಲದೆ, ಮಗುವು ನಡುರಾತ್ರಿಯಲ್ಲಿ ಪದೇ ಪದೇ ಎಚ್ಚರಗೊಂಡು ಅಳಲು ಶುರು ಮಾಡಿದರೆ, ನಿಮ್ಮನ್ನ ದೇವರೇ ಕಾಪಾಡಬೇಕು. ಹಾಗಾಗಿ ನಿಮ್ಮ ಸುಖನಿದ್ರೆಗೆ ವಿದಾಯ ಹೇಳಿ, ನಿದ್ರಾಹೀನತೆಗೆ ಒಗ್ಗಿಕೊಳ್ಳಿ.

೨. ಯಾವಾಗಲೂ ಸುಸ್ತು

ನಿಮಗೆ ಬೇಕೇ ಬೇಕಾದ ನಿದ್ರೆಯ ಕೊರತೆ ಉಂಟಾದಾಗ ನೀವು ಆಯಾಸದಿಂದಲೇ ಎದ್ದೇಳುವಿರಿ. ಆದರೆ, ನಿಮಗೆ ಬೇಕಾಗಿರುವ ವಿಶ್ರಾಂತಿ ಸಿಗುತ್ತದೆ ಎಂದು ಮಾತ್ರ ಅಂದುಕೊಳ್ಳಬೇಡಿ! ಬದಲಿಗೆ ನೀವು ದಿನವೆಲ್ಲಾ ನಿಮ್ಮ ಮಗುವಿಗೆ ಬೇಕಾದ ಆಹಾರ ತಯಾರಿಸುವುದರಲ್ಲಿ, ಉಣಿಸುವುದರಲ್ಲಿ, ಸ್ನಾನ ಮಾಡಿಸುವಲ್ಲಿ, ಡಯಾಪರ್ ಬದಲಿಸುವುದರಲ್ಲಿ, ಮಗುವಿನೊಂದಿಗೆ ಆಟ ಆಡುವುದರಲ್ಲಿ ಮತ್ತು ಇನ್ನಿತರೆ ಕಾರ್ಯಗಳಲ್ಲಿ ಕಳೆಯುತ್ತೀರಿ. ಒಹ್! ಇನ್ನೊಂದು ವಿಷಯ ಮರೆತೆ, ಇದರೊಂದಿಗೆ ನೀವು ನಿಮ್ಮ ಮನೆಯ ಹಾಗು ನಿಮ್ಮ ಬೇಕು ಬೇಡಗಳನ್ನ ಕೂಡ ನೋಡಿಕೊಳ್ಳಬೇಕು!

೩. ಪಾತ್ರೆ, ಬಟ್ಟೆ ಶುಚಿಗೊಳಿಸುವುದು

ನಿಮ್ಮ ಮಗುವು ಶೌಚಾಲಯ ಬಳಸುವುದನ್ನ ಕಲಿಯುವವರೆಗೂ, ಒಗೆದು ಶುಚಿಗೊಳಿಸಲು ನಿಮಗೆ ಭಯ ಪಡಿಸುವಷ್ಟು ಬಟ್ಟೆಗಳ ರಾಶಿಯೇ ಇರುತ್ತದೆ. ಪಾತ್ರೆಗಳ ವಿಷಯದಲ್ಲೂ ಇದು ನಿಜ. ನಿಮ್ಮ ಮಗುವಿಗೆ ಪದೇ ಪದೇ ನಿಯಮಿತವಾಗಿ ಉಣಿಸಲು ಬಳಸುವ ಪಾತ್ರೆಗಳಿಂದ ನಿಮ್ಮ ಅಡುಗೆ ಮನೆಯಲ್ಲಿ ತೊಳೆಯಬೇಕಾದ ಪಾತ್ರೆಗಳ ರಾಶಿಯೇ ಬಿದ್ದಿರುತ್ತದೆ.

೪. ದೈಹಿಕ ನೋಟದಲ್ಲಿ ಬದಲಾವಣೆ

ಪ್ರಸವದ ಬಳಿಕದ ತೂಕದಲ್ಲಿನ ಹೆಚ್ಚಳ ನಿಮ್ಮ ಮನಸಿನಲ್ಲಿ ಅಭದ್ರತೆಯ ಭಾವನೆ ಮೂಡಿಸುತ್ತದೆ. ಬದಲಾವಣೆಗಳು ಶರವೇಗದಲ್ಲಿ ಆಗುವುದು ಹಾಗು ಅವುಗಳು ನಿಮ್ಮ ಹಾಗು ನಿಮ್ಮ ಮಗುವಿಗೆ ಅನಾವಶ್ಯಕ ಎಂದು ನಿಮಗೆ ಅನಿಸಬಹುದು. ಅಲ್ಲದೆ, ನಿಮ್ಮ ಮುಖದ ಮೇಲೆ ಅಲ್ಲಲ್ಲಿ ಕಲೆಗಳು, ಒಂದೆರೆಡು ಸುಕ್ಕುಗಳು ನಿಮ್ಮನ್ನ ವಯಸ್ಸಾದಂತೆ ಕಾಣಿಸುವಂತೆ ಮಾಡಬಹುದು. ಆದರೆ ನಿಮ್ಮ ತಾಯ್ತನದ ಲಕ್ಷಣವು ನಿಮ್ಮ ಮುಖವನ್ನ ಬೆಳಗುವ ಕಾರಣ, ಅವೆಲ್ಲವೂ ಮುಚ್ಚಿ ಹೋಗುತ್ತವೆ.

೫. ಭಾವನಾತ್ಮಕ ಏರಿಳಿತಗಳು

ಯಾವಾಗಲೂ ಆಯಾಸಗೊಂಡಿರುವುದು ಮತ್ತು ನಿದ್ರಾಹೀನತೆಯು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ನೀವು ಬಹಳಷ್ಟು ಸಮಯ ಗೊಂದಲದಲ್ಲೇ ಕಳೆಯುತ್ತೀರ. ನೀವು ಸದಾಕಾಲ ಇರಿಸುಮುರಿಸುಗೊಳ್ಳಬಹುದು ಮತ್ತು ಕೋಪಗೊಳ್ಳಬಹುದು ಹಾಗು ನಿಮಗೆ ಇದಕ್ಕೆ ಕಾರಣ ಕೂಡ ತಿಳಿಯದೆ ಇರಬಹುದು. ಆದರೆ ನೀವು ಆಗಾಗ್ಗೆ ಮಾನಸಿಕ ಕುಸಿತಕ್ಕೆ ಒಳಗಾಗುವುದು ಹಾಗು ಅಳುವುದನ್ನ ಕಾಣಬಹುದು.

೬. ಅನಂತರದ ವಿಷಯ

ತಾಯ್ತನ ಅನ್ನುವುದು ಜೀವನ ಪರ್ಯಂತದ ವೃತ್ತಿ. ನಿಮ್ಮ ಮಗುವು ತನ್ನನ್ನ ತಾನು ನೋಡಿಕೊಳ್ಳುವಷ್ಟು ಬೆಳೆದ ನಂತರ ನೀವು ನೀವು ನಿವೃತ್ತಿ ಹೊಂದಬಹುದು ಎಂದಲ್ಲ. ಮೊದಲು, ನೀವು ನಿಮ್ಮ ಮಗವಿನ ಹೋಂವರ್ಕ್ ಮಾಡಲು ಸಹಾಯ ಮಾಡುವುದರಿಂದ ಹಿಡಿದು ನಿಮ್ಮ ಮಗುವಿನ ಶಾಲೆಯಲ್ಲಿ ಶಿಕ್ಷಕರು-ಪೋಷಕರ ಮೀಟಿಂಗ್ ಅಲ್ಲೂ ಭಾಗವಹಿಸಬೇಕು. ಅವರು ದೊಡ್ಡವರಾಗಿ. ಶಾಲೆಯನ್ನ ಮುಗಿಸಿದ ನಂತರವೂ, ಅವರ ಸಣ್ಣ ಪುಟ್ಟ ಕಷ್ಟಗಳಲ್ಲೂ ನೀವು ಅವರಿಗೆ ಬೇಕಾಗಿರುತ್ತಿರಿ. ಹೀಗಾಗಿ ನೀವು ಅವರ ಬೆನ್ನಿಗೆ ಸದಾಕಾಲ ಬೆಂಬಲವಾಗಿ ನಿಂತಿರಲೇ ಬೇಕು.

ಮೇಲೆ ಹೇಳಿರುವ ಅಂಶಗಳು ತಾಯಿ ಆಗಬೇಕು ಎಂದಿರುವವರನ್ನ ಭಯ ಪಡಿಸಲು ಅಲ್ಲ. ಆದರೆ ಒಂದು ತಾಯಿಯು ತನ್ನ ಮಗುವನ್ನ ಸಮರ್ಥವಾಗಿ ಹಾಗು ಚೆನ್ನಾಗಿ ಬೆಳೆಸಲು ಸಕಲ ತಾಯರಿಗಳನ್ನ ಮಾಡಿಕೊಳ್ಳಲು ಸಹಾಯ ಆಗಲು ಇವುಗಳನ್ನ ತಿಳಿಸಿದ್ದೇವೆ. ತಾಯ್ತನ ಅನ್ನುವುದು ಒಂದು ಹೆಣ್ಣಿನ ಜೀವನದ ಅತ್ಯಂತ ಸಂತಸದ ಹಾಗು ಶ್ರೇಷ್ಠವಾದ ಸಂಗತಿ. ನಿಮಗೆ ಎಷ್ಟೇ ವಯಸ್ಸಾದರೂ,  ಮಕ್ಕಳು ಎಷ್ಟೇ ದೊಡ್ಡವರಾದರೂ, ಜನನದ ಸಮಯದಲ್ಲಿ ನಿಮ್ಮ ಮಗುವಿನೊಂದಿಗೆ ನೀವು ಬೆಳೆಸಿಕೊಂಡ ಬಾಂಧವ್ಯವು ಮುರಿಯಲಾಗದಂತದು. ಮಗುವು, ಯಾವಾಗ ತೊಂದರೆಯಲ್ಲಿ ಇದ್ದರೂ, ಪರಿಹಾರಕ್ಕೆ ಎದೆರು ನೋಡುವುದು ತನ್ನ ತಾಯಿಯನ್ನೇ! ಹಾಗು ತಾಯಿಯು ಎಂದೆಂದಿಗೂ ತನ್ನ ಮಗುವಿಗೆ ಮಾರ್ಗಸೂಚಿ ಆಗಿರುತ್ತಾಳೆ!

Leave a Reply

%d bloggers like this: