ಪ್ರಪಂಚವು ನಮ್ಮನ್ನು ಗುರುತಿಸುವುದು ನಮ್ಮ ಹೆಸರಿನಿಂದ. ಜಗತ್ತು ನಮ್ಮನ್ನು ವ್ಯಾಖ್ಯಾನಿಸುತ್ತದೆ, ನಮಗೆ ವ್ಯಕ್ತಿತ್ವವನ್ನು ನೀಡುತ್ತದೆ ಮತ್ತು ನಾವು ಯಾರು ಎಂದು ಇಡೀ ವಿಶ್ವಕ್ಕೆ ಪರಿಚಯಿಸುವುದು ನಮ್ಮ ಹೆಸರಿನಿಂದ. ಆದರೆ ಕೆಲವೊಮ್ಮೆ, ವಿಶಿಷ್ಟವಾದ ಮತ್ತು ವಿಭಿನ್ನವಾದ ಹೆಸರನ್ನು ಹೊಂದಿರುವುದರಿಂದ ಅದರ ವಿಭಿನ್ನವಾದ ಪರಿಣಾಮವು ಸಂಪೂರ್ಣ ವಿಭಿನ್ನ ರೀತಿಯಲ್ಲಿ ನಮಗೆ ಕಾಣಸಿಗಬಹುದು. ಆದ್ದರಿಂದ ನಿಮ್ಮ ಮುದ್ದು ಕಂದಮ್ಮನಿಗೆ ಕೆಲವು ಅನನ್ಯವಾದ ಹೆಸರಗಳನ್ನು ನಾವು ಅದರ ಅರ್ಥದೊಂದಿಗೆ ಹೇಳಿದ್ದೇವೆ.
ಹೆಸರು – ಅರ್ಥ
೧.ಅಧೀಪ್ – ಅಧೀಪ್ ಎಂದರೆ ರಾಜ ಎಂದರ್ಥ.
೨.ಅಧ್ವೈತ್ – ಎಲ್ಲರಿಗಿಂತ ವಿಭಿನ್ನ.
೩.ಆತ್ಮಿಕ್ – ಆತ್ಮ, ಆನಂದ, ಶುದ್ಧ ಆತ್ಮ ಎಂಬ ಅರ್ಥ ನೀಡುವ ಹೆಸರು ಇದು.
೪.ಇತೀಶ್ – ಆಡಳಿತಗಾರ, ನಾಯಕ.
೫.ವರುಣ್ – ನೀರಿನ ದೇವರು.
೬.ವಾಮನ್ – ವಿಷ್ಣುವಿನ ಮತ್ತೊಂದು ಹೆಸರು.
೭.ಸಾತ್ವಿಕ್ – ಪರಿಶುದ್ಧ, ನಿಷ್ಕಳಂಕ, ತಿಳಿ ಮನಸ್ಸುಳ್ಳವ.
೮.ಶಶಿನ್ – ಚಂದ್ರ.
೯.ಮನೀತ್ – ಎಲ್ಲರ ಹೃದಯ ಗೆಲ್ಲುವವ.
೧೦.ಪ್ರಜೀತ್ – ವಿಜಯಶಾಲಿ, ಸೋಲಿಲ್ಲದ, ಗೆಲ್ಲುವವ, ಯಶಸ್ಸುಳ್ಳವ.
ನಿಮ್ಮ ಮಗುವನ್ನು ಗುರುತಿಸುವುದು ಅಥವಾ ಪ್ರಪಂಚದಲ್ಲಿ ಮನುಷ್ಯರನ್ನು ಗುರುತಿಸುವುದು ಅವರ ಹೆಸರಿನಿಂದ. ನಿಮ್ಮ ಮಗುವಿಗೆ ಅರ್ಥವಿರುವ ಹೆಸರನ್ನು ಇಡಲು ಕೆಲವು ಸಲಹೆಗಳು ಅಷ್ಟೇ.