40-vayassinalli-garbhadharane-apayagalu

೪೦ರ ವಯಸ್ಸು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಗರ್ಭಧರಿಸಲು ಇಚ್ಛಿಸಿದರೆ, ಮಹಿಳೆಯರು ವರ್ಣತಂತುವಿನ(ಕ್ರೋಮೋಜೋಮ್) ಕೊರತೆಯ ಶಿಶುಗಳಿಗೆ ಜನ್ಮ ನೀಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದರೂ, ೬೦ವರ್ಷದ ವಯಸ್ಸಿನ ಮಹಿಳೆಯರು ಮಗುವಿಗೆ ಯಾವುದೇ ಕೊರತೆ ಇಲ್ಲದೆ ಜನ್ಮ ನೀಡಿರುವ ಪ್ರಕರಣಗಳು ಸಾಕಷ್ಟಿವೆ. ಮತ್ತು ಅವರು ಮಾಮೂಲಿನಂತೆ ಸಾಮಾನ್ಯ ಹೆರಿಗೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಸಮರ್ಥ ವೈದ್ಯರು ಬಳಸುವ ವೈದ್ಯಕೀಯ ತಂತ್ರಜ್ಞಾನದಲ್ಲಿನ ಪ್ರಗತಿಯಂತೆ 40 ನೇ ವಯಸ್ಸಿನ ನಂತರ ಗರ್ಭಧಾರಣೆಯನ್ನು ಯಶಸ್ವಿಯಾಗಿ ಮಾಡಬಹುದು, ಆದರೆ ಅದಕ್ಕೆ ಸಂಬಂಧಪಟ್ಟ ಅಪಾಯಗಳನ್ನು ನಿರ್ಲಕ್ಷಿಸುವುದು ಗಂಭೀರ ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಂತೆ.

40 ವರ್ಷ ವಯಸ್ಸಿನವರಿಗೆ ಗರ್ಭಧಾರಣೆಯ ಅಪಾಯಗಳು

೧.ಮಗುವಿನಲ್ಲಿ ಡೌನ್ ಸಿಂಡ್ರೋಮ್ ನ(ವರ್ಣತಂತುವಿನ ಕೊರತೆ, ದೈಹಿಕ ಅಸ್ವಸ್ಥತೆ) ಕಾಯಿಲೆ ಅಪಾಯಗಳು ೭೫೯ರಲ್ಲಿ (೧)ಒಬ್ಬರಲ್ಲಿ ಸಾಮಾನ್ಯ ವಯಸ್ಸಿನ ಮಹಿಳೆಯರಲ್ಲಿ ಕಾಣಬಹುದು. ಇದು 35 ರ ವಯಸ್ಸಿನಲ್ಲಿ 302 ರಲ್ಲಿ ಒಬ್ಬರಿಗೆ ಆಗುತ್ತದೆ, ಆದರೆ 40 ವರ್ಷ ವಯಸ್ಸಿನ ಮಹಿಳೆಯರಿಗೆ 82 ರಲ್ಲಿ ಒಬ್ಬ ಮಹಿಳೆಗೆ ಇದು ತಲುಪುತ್ತದೆ.

೨.೪೦ರ ನಂತರ ಮಹಿಳೆಯರಲ್ಲಿ ಗರ್ಭಧಾರಣೆ, ಜನ್ಮ ದೋಷಗಳ ಸಾಧ್ಯತೆಗಳು ಹೆಚ್ಚಿರುತ್ತದೆ. 40 ಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರಿಗೆ ಹುಟ್ಟಿದ 6 ರಿಂದ 8 ಪ್ರತಿಶತದಷ್ಟು ಮಕ್ಕಳು ಕೆಲವು ರೀತಿಯ ಜನನ/ಜನ್ಮ ದೋಷವನ್ನು ಹೊಂದಿರುತ್ತಾರೆ.

೩.೪೦ ವರ್ಷದ ನಂತರ ಮಗುವಿಗೆ ಜನ್ಮ ನೀಡಿದ ಮಹಿಳೆಯರಲ್ಲಿ ೧೫ವರ್ಷದ ಬಳಿಕ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಮಗುವನ್ನು ಹೊಂದದವರಿಗಿಂತ ಹೆಚ್ಚಾಗಿರುತ್ತದೆ.

೪.ಗರ್ಭಿಣಿಯ ಸ್ಥಿತಿಯಲ್ಲಿ ಅವಳ ಸ್ತನ ಕ್ಯಾನ್ಸರ್ ಅನ್ನು ಪರೀಕ್ಷಿಸಲಾಗುವುದಿಲ್ಲ ಎಂಬ ಕಾರಣದಿಂದಾಗಿ ಈ ಸಮಸ್ಯೆಯು ಮತ್ತಷ್ಟು ಹದಗೆಡುತ್ತದೆ. ಅವಳು ಮಗುವಿಗೆ ಎದೆಹಾಲುಣಿಸುತ್ತಿರುವ ಕಾರಣ ಅವಳಿಗೆ ಮ್ಯಾಮೋಗ್ರಾಮ್ ಎಂಬ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಅಷ್ಟರಲ್ಲಿ ೨ ವರ್ಷ ಕಳೆದಿರುತ್ತದೆ.

೫.೪೦ರ ನಂತರ ಗರ್ಭಧಾರಣೆ ಮಹಿಳೆಯರು ಹೆಚ್ಚು ಪ್ರಿಕ್ಲಾಂಪ್ಸಿಯವನ್ನು ಎದುರಿಸಬೇಕಾಗುತ್ತದೆ. ಪ್ರಿಕ್ಲಾಂಪ್ಸಿಯ ಎಂದರೆ ಅಧಿಕ ರಕ್ತದೊತ್ತಡ ಅಥವಾ ಕೆಲವೊಮ್ಮೆ ಧಾರಣವಾಗಿ ರಕ್ತ ಹರಿಯುವುದು.

೬.ಗರ್ಭಾವಸ್ಥೆಯಲ್ಲಿ ತೂಕ ಹೊಂದುವುದು ಹೃದಯದ ಮೇಲೆ ಭಾರ ಬೀಳುತ್ತದೆ. ೪೦ರ ನಂತರ ಗರ್ಭಧರಿಸುವುದು ಹೃದಯ ಸಂಬಂಧಿ ಕಾಯಿಲೆಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸುತ್ತದೆ.

೭.೪೦ ವರ್ಷದ ಬಳಿಕ ಗರ್ಭಧಾರಣೆಯಾದ ಮಹಿಳೆಯರಲ್ಲಿ ೫೦% ನಷ್ಟು ಗರ್ಭಿಣಿಯರು ಸಿಸೇರಿಯನ್ ಅಥವಾ ಸಿ-ಸೆಕ್ಷನ್ ನಲ್ಲಿ ಮಗುವಿಗೆ ಜನ್ಮ ನೀಡುತ್ತಾರೆ.

೪೦ರಲ್ಲಿ ಗರ್ಭಧಾರಣೆ ಕಠಿಣ ನಿರ್ಧಾರವಾದರೂ ವೈದ್ಯಕೀಯ ಸಹಾಯದಿಂದ ಅದನ್ನು ಆರೋಗ್ಯವಾಗಿ ನಿಭಾಯಿಸಬಹುದು.

Leave a Reply

%d bloggers like this: