maguvina-tuka-hechhisalu-7-aharagalu

ನಮ್ಮೆಲ್ಲರಿಗೂ ಬೇಕಾಗಿರುವುದು ಒಂದೇ, ಅದು ಮಗುವು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿ ಬೆಳೆಯುವುದು. ಆದರೆ, ಮಗವು ನೀವು ಅಂದುಕೊಂಡಂತೆ ಸರಿಯಾದ ಕ್ರಮದಲ್ಲಿ ಬೆಳವಣಿಗೆ ಆಗುತ್ತಿಲ್ಲ ಎಂದು ನಿಮಗೆ ತಿಳಿದರೆ, ಅದು ನಿಮ್ಮನ್ನು ಚಿಂತಿಸುವಂತೆ ಮಾಡುವುದು ಸಹಜ.

ಮಕ್ಕಳು ಹುಟ್ಟಿದ ೧೪ ದಿನದೊಳಗೆ ತಮ್ಮ ಜನ್ಮದ ತೂಕವನ್ನು ಮರಳಿ ಪಡೆಯುತ್ತಾರೆ. ಮತ್ತು ಅವರ ತೂಕವನ್ನು ೩-೪ ತಿಂಗಳಲ್ಲಿ ಎರಡರಷ್ಟು ಹೆಚ್ಚಿಸಿಕೊಳ್ಳುತ್ತಾರೆ. ಮತ್ತು ಅದರ ಮೂರರಷ್ಟು ತೂಕವನ್ನು ತಮ್ಮ ಮೊದಲ ವರ್ಷದಲ್ಲಿ ಪಡೆಯುತ್ತಾರೆ. ಆದರೆ, ನಿಮ್ಮ ಮಗು ಸರಿಯಾದ ತೂಕ ಪಡೆಯುತ್ತಿಲ್ಲ, ಅಥವಾ ಕಡಿಮೆ ತೂಕ ಇರುವರು ಎಂದು ಚಿಂತಿಸುತ್ತಿದ್ದೀರಾ? ಚಿಂತಿಸ ಬೇಡಿ, ನಿಮ್ಮ ಮಗು ಆರೋಗ್ಯಕರ ತೂಕ ಪಡೆಯಲು ಕೆಲವು ಸಲಹೆಗಳು ಇಲ್ಲಿವೆ.

೧.ಬಾಳೆ ಹಣ್ಣು

ಪ್ರಕೃತಿಯ ಒಂದು ಅದ್ಭುತ ಆವಿಷ್ಕಾರವೆಂದರೆ, ಬಾಳೆ ಹಣ್ಣು, ಶಕ್ತಿಯ ಮತ್ತು ಪ್ರತಿರೋಧಕಗಳ ಅತಿ ದೊಡ್ಡ ಸಮೃದ್ಧ ಮೂಲಗಳು ಇವು. ಒಂದು ಬಾಳೆಹಣ್ಣು 100ಕ್ಕೂ ಹೆಚ್ಚು ಕ್ಯಾಲೋರಿಗಳ ಮೂಲವಾಗಿದೆ ಮತ್ತು ಕಾರ್ಬೋಹೈಡ್ರೇಟ್ಗಳು, ಪೊಟ್ಯಾಸಿಯಮ್, ಆಹಾರದ ಫೈಬರ್ ಮತ್ತು ವಿಟಮಿನ್ ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇವುಗಳು ತುಂಬಾ ಸಾಮಾನ್ಯ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾಗಿವೆ. ಇದನ್ನು ಕಿವುಚಿ ಮಗುವಿಗೆ ತಿನಿಸುವುದು ಅಷ್ಟೇ ನೀವು ಮಾಡಬೇಕಿರುವ ಕೆಲಸ. ಇದು ರುಚಿಯನ್ನು ಕೂಡ ಹೊಂದಿದೆ.

೨.ಹಾಲು

ನಿಮ್ಮ ಮಗುವಿನ ತೂಕವನ್ನು ನೈಸರ್ಗಿಕವಾಗಿ ಹೆಚ್ಚಿಸಲು ಇದೊಂದು ಉತ್ತಮ ಮಾರ್ಗ. ನಿಮ್ಮ ಮಗು ಎಷ್ಟು ವರ್ಷ ಪೂರೈಸಿದೆ ಎಂದು ನೋಡಿಕೊಂಡು ಎದೆಹಾಲು ಅಥವಾ ಹಸುವಿನ ಹಾಲನ್ನು ನೀಡಿ. ದಿನಕ್ಕೆ ಎರಡು ಲೋಟ ಹಾಲು ಕುಡಿಯುವುದು ಸಮೃದ್ಧ ಪೌಷ್ಟಿಕಾಂಶಗಳನ್ನು ಪಡೆಯುವಂತೆ ಮಾಡುತ್ತದೆ.

೩.ಮೊಟ್ಟೆ

ಮೊಟ್ಟೆಗಳು A ಮತ್ತು B12 ನಂತಹ ಜೀವಸತ್ವಗಳ ಒಂದು ಆರೋಗ್ಯಕರ ಮೂಲವಾಗಿದೆ. ಮೆದುಳು ಮತ್ತು ನರಮಂಡಲ ಬೆಳವಣಿಗೆಗೆ ಕೂಡ ಮೊಟ್ಟೆ ತುಂಬಾ ಸಹಾಯಕಾರಿ ಆಗಿದೆ. ಮೊಟ್ಟೆಯ ಹಳದಿ ಭಾಗವನ್ನು ಕೊಡುವುದನ್ನು ನಿಧಾನವಾಗಿ ಪ್ರಾರಂಭಿಸಿ ಕ್ರಮೇಣ ಸಂಪೂರ್ಣ ಮೊಟ್ಟೆಯನ್ನು ನೀವು ಮಗುವಿಗೆ ನೀಡಬಹುದು. ಒಂದು ವೇಳೆ ಮಗುವಿನಲ್ಲಿ ಅಲರ್ಜಿಯ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರ ಬಳಿ ಕರೆದುಕೊಂಡು ಹೋಗಿ.

೪.ಆಲೂಗಡ್ಡೆ

ಆಲೂಗಡ್ಡೆ ಕಾರ್ಬೋಹೈಡ್ರೇಟ್ ಗಳಿಂದ ಸಮೃದ್ಧವಾಗಿದ್ದು, ಮತ್ತು ಅವು ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿವೆ. ಇವುಗಳನ್ನು ಆರೋಗ್ಯಕರವಾಗಿ ಮತ್ತು ರುಚಿಕರವಾಗಿ ಮಾಡಿ ಮಗುವಿಗೆ ತಿನಿಸುವುದರಿಂದ ಮಗುವು ಆರೋಗ್ಯಕರ ತೂಕವನ್ನು ಪಡೆಯಲು ಸಹಾಯವಾಗುತ್ತದೆ.

೫.ಮಾಂಸ

ನೀವು ಮಾಂಸಾಹಾರಿ ಆಗಿದ್ದರೆ, ನಿಮ್ಮ ಮಗುವಿನ ತೂಕ ಹೆಚ್ಚಿಸಲು ಮಾಂಸವು ಉತ್ತಮ ಆಯ್ಕೆ. ಇವು ಅಮೈನೊ ಆಮ್ಲ, ಕೊಬ್ಬು, ಪ್ರೊಟೀನ್, ಕಬ್ಬಿಣ, ಸತು ಮತ್ತು ಸೆಲೆನಿಯಮ್ ಗಳನ್ನು ಒಳಗೊಂಡಿವೆ. ಮಟನ್ ಮಾಂಸದಲ್ಲಿ ಮಗುವಿನ ದೇಹವು ಸುಲಭವಾಗಿ ಹೀರಿಕೊಳ್ಳಬಲ್ಲ ಕಬ್ಬಿಣಾಂಶವಿರುತ್ತದೆ. ಇದು ಮಗುವಿನ ಸ್ನಾಯುಗಳಿಗೆ ಬಲವನ್ನು ನೀಡುತ್ತದೆ. ಮಗುವಿಗೆ ಮೊದಲು ಮನೆಯಲ್ಲೇ ಮಾಡಿದ ಮಾಂಸವನ್ನು ನೀಡಿ.

೬.ರಾಗಿ

ಹೆಚ್ಚು ಪೌಷ್ಟಿಕಾಂಶವುಳ್ಳ, ಆರೋಗ್ಯವಾದ ಮತ್ತು ಸುಲಭವಾಗಿ ಸಿಗುವ ಪದಾರ್ಥ ರಾಗಿ. ಕನ್ನಡದಲ್ಲಿ ಒಂದು ಗಾಧೆ ಇದೆ “ಹಿಟ್ಟಂ ತಿಂದಮ್ ಬೆಟ್ಟಮ್ ಕಿತ್ತಿಟ್ಟಮ್” ಎಂದರೆ ರಾಗಿ ಮುದ್ದೆ ತಿಂದವರು ಬೆಟ್ಟವನ್ನು ಕೀಳುವಷ್ಟು ಶಕ್ತಿಯನ್ನು ಪಡೆಯಬಲ್ಲರು ಎಂದರ್ಥ. ಅಂದರೆ ರಾಗಿಯಲ್ಲಿ ಅಷ್ಟು ಹೆಚ್ಚಿನ ಪೌಷ್ಟಿಕಾಂಶಗಳು ಇವೆ ಎಂದರ್ಥ. ಮಕ್ಕಳಿಗೆ ನೀವು ರಾಗಿ ಗಂಜಿ, ರಾಗಿ ಇಡ್ಲಿ, ರಾಗಿ ದೋಸೆ, ರಾಗಿ ಬಿಸ್ಕತ್ ಅಥವಾ ರಾಗಿ ರೊಟ್ಟಿಯಂತಹ ತಿನಿಸುಗಳನ್ನು ಮಾಡಿ ನೀಡಬಹುದು.

೭.ಹಣ್ಣುಗಳು

ಇವುಗಳು ವರ್ಣರಂಜಿತವಾಗಿದ್ದು, ರುಚಿಯಾಗಿದ್ದು, ಆರೋಗ್ಯಕರವಾಗಿದ್ದು, ಮತ್ತು ಪೌಷ್ಠಿಕಾಂಶಗಳನ್ನು ಹೊಂದಿದ್ದು ಸುಲಭವಾಗಿ ಸಿಗುವ ಪದಾರ್ಥಗಳಾಗಿವೆ. ನಿಮ್ಮ ಮಗು ಕೆಲವು ಹಣ್ಣುಗಳನ್ನು ಸೇವಿಸಲು ಇಚ್ಛಿಸದಿದ್ದಲ್ಲಿ ಅವುಗಳ ರಸವನ್ನು ಮಾಡಿ ನೀಡಬಹುದು. ಇವುಗಳು ಕೂಡ ಕ್ಯಾಲೋರಿಸ್ ಮತ್ತು ಶಕ್ತಿಗಳನ್ನು ಹೆಚ್ಚಾಗಿ ಹೊಂದಿವೆ. ಒಣ ಹಣ್ಣುಗಳು ಆರೋಗ್ಯಕರ ಕೊಬ್ಬನ್ನು ಒಳಗೊಂಡಿವೆ, ಇವು ಮಗುವಿನ ದೇಹ ಬಲಶಾಲಿಯಾಗಲು ಮತ್ತು ಆರೋಗ್ಯಕರ ತೂಕವನ್ನು ಪಡೆಯಲು ಸಹಾಯ ಮಾಡುತ್ತವೆ.

Leave a Reply

%d bloggers like this: