garbhadharane-mulegala-poshane-hege-eke

ಮಾನವನ ದೇಹದಲ್ಲಿ ಮೂಳೆಗಳ ಪಾತ್ರ ಬಹಳ ಮುಖ್ಯವಾದದ್ದು. ಮಾನವನು ನಿಂತುಕೊಳ್ಳಲು, ನಡೆದಾಡಲು ಅವನ/ಅವಳ ದೇಹದಲ್ಲಿರುವ ಮೂಳೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಿಮಗೆ ಮಾನವನ ದೇಹದಲ್ಲಿ ಮೂಳೆಗಳ ಮಹತ್ವ ಏನು ಎಂಬುದು ತಿಳಿದೇ ಇದೆ. ಅದರಂತೆ ಗರ್ಭಾವಸ್ಥೆಯಲ್ಲಿ ನೀವು ನಿಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳುವಿರಿ ಆ ಸಮಯದಲ್ಲಿ ನಿಮ್ಮ ಮಗುವಿನ ದೇಹದಲ್ಲೂ ಕೂಡ ಮೂಳೆಗಳ ಬೆಳವಣಿಗೆಯಾಗುತ್ತದೆ. ನಿಮ್ಮ ದೇಹದಲ್ಲಿ ಕೆಲವು ಅಂಶಗಳು ಕಡಿಮೆಯಾದರೆ ನಿಮ್ಮ ಮೂಳೆಗಳು ಸವಿಯುತ್ತವೆ ಎಂಬುದನ್ನು ನೀವು ಕೇಳಿರಬಹುದು. ಅದಕ್ಕಾಗಿ ನಿಮ್ಮ ಗರ್ಭಾವಸ್ಥೆಯಲ್ಲಿ ಮಗುವಿನಲ್ಲಿ ಸರಿಯಾದ ಮೂಳೆ ಬೆಳವಣಿಗೆ ಮತ್ತು ನಿಮ್ಮ ಮೂಳೆ ದುರ್ಬಲವಾಗದಂತೆ ನೋಡಿಕೊಳ್ಳಲು ಕೆಲವು ಸಲಹೆಗಳು.

ಗರ್ಭಾವಸ್ಥೆಯಲ್ಲಿ ಮತ್ತು ನಂತರ ಮೂಳೆಗಳಲ್ಲಿ ಬಲವನ್ನು ಹೆಚ್ಚಿಸಿಕೊಳ್ಳಲು ಅಥವಾ ಶಕ್ತಿಯನ್ನು ಕಾಪಾಡಿಕೊಳ್ಳಲು ಕೆಲವು ಮಾರ್ಗಗಳಿವೆ ಇವು ನಿಮ್ಮ ಗರ್ಭದಲ್ಲಿ ಬೆಳೆಯುತ್ತಿರುವ ಮಗುವು ಕೂಡ ಬಲವಾದ ಮೂಳೆಗಳನ್ನು ನಿರ್ಮಿಸಿಕೊಳ್ಳಲು ಸಹಾಯವಾಗುತ್ತದೆ.

ಗರ್ಭಾವಸ್ಥೆಯಲ್ಲಿ ಮತ್ತು ಎದೆಹಾಲುಣಿಸುವ ಸಮಯದಲ್ಲಿ ಮೂಳೆಗಳ ಬಲ ಹೆಚ್ಚಿಸುವ ಆಹಾರ ಸೇವನೆ ಬಹಳ ಮುಖ್ಯ. ಈ ಸಮಯದಲ್ಲಿ ನಿಮ್ಮ ಆಹಾರ ಕ್ರಮದಲ್ಲಿ ಇರಬೇಕಾದ ಪದಾರ್ಥಗಳೆಂದರೆ, ಕ್ಯಾಲ್ಸಿಯಮ್, ವಿಟಮಿನ್ ಡಿ, ಕ್ಯಾಲೋರಿಸ್, ಪ್ರೊಟೀನ್, ವರ್ಣರಂಜಿತ ಹಣ್ಣುಗಳು ಮತ್ತು ತರಕಾರಿಗಳು.

ಕ್ಯಾಲ್ಸಿಯಮ್

ಗರ್ಭಾವಸ್ಥೆಯಲ್ಲಿ ಸಾಕಷ್ಟು ಕ್ಯಾಲ್ಸಿಯಂ ಪಡೆಯುವುದು, ನಿಮ್ಮ ಮಗುವಿನ ಎಲುಬುಗಳು ಸಾಂದ್ರತೆ(ದಪ್ಪ)ಯನ್ನು ಹೆಚ್ಚಿಸಲು ಮತ್ತು ನಿಮ್ಮ ಮೂಳೆಗಳನ್ನು ಬಲವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ!.

ಕ್ಯಾಲ್ಸಿಯಮ್ ಅನ್ನು ಹೆಚ್ಚಾಗಿ ಹೊಂದಿರುವ ಆಹಾರಗಳು

ಡೈರಿ ಉತ್ಪನ್ನಗಳು : ಹಾಲು ಮತ್ತು ಚೀಸ್

ಕ್ಯಾಲ್ಸಿಯಮ್ ಬಲವರ್ದಿತ ರಸಗಳು, ಕ್ಯಾಲ್ಸಿಯಂ-ಬಲವರ್ಧಿತ ಸೋಯಾ ಪಾನೀಯಗಳು

ಹಸಿರು ಎಲೆಯುಳ್ಳ ತರಕಾರಿಗಳು : ಬೊಕ್ ಚೊಯ್(ಚೀನಿ ಕ್ಯಾಬೇಜ್), ಬ್ರಕೋಲಿ, ಕಾಡು ಸೇವಂತಿಗೆ ಎಲೆ, ಪುದೀನಾ ಎಲೆ, ಬಿಳಿ ಗಡ್ಡೆ ಕೋಸು, ಸೋಯಾ ಬೀನ್, ಪಾಲಕ್ ಸೊಪ್ಪು, ಬೀಟ್ರೂಟ್ ಎಲೆಗಳು, ಬೆಂಡೆಕಾಯಿ, ಈರುಳ್ಳಿ ಎಲೆ, ಗೆಣಸು, ಎಲೆಕೋಸು.

ಏಕದಳ ಧಾನ್ಯಗಳು

ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಬಾರಿ ಕ್ಯಾಲ್ಸಿಯಮ್ ಯುಳ್ಳ ಆಹಾರವನ್ನು ಸೇವಿಸಿ.

ನಿಮ್ಮ ಪ್ರತಿ ಆಹಾರ ಸೇವನೆಯಲ್ಲೂ ಕ್ಯಾಲ್ಸಿಯಮ್ ಇರಲಿ.

ನಿಮ್ಮ ಆರೋಗ್ಯ ಸಲಹೆಗಾರರನ್ನು ಅಥವಾ ವೈದ್ಯರನ್ನು ನಿಮ್ಮ ಆಹಾರದಲ್ಲಿ ಕ್ಯಾಲ್ಸಿಯಮ್ ಅನ್ನು ಸೇರಿಸುವುದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ.

 

ವಿಟಮಿನ್ ಡಿ

ಗರ್ಭಾವಸ್ಥೆಯಲ್ಲಿ ಮತ್ತು ನಿಮ್ಮ ಮಗುವಿನ ಜನನದ ನಂತರ, ನಿಮ್ಮ ಎಲುಬುಗಳನ್ನು ಬಲವಾಗಿರಿಸಲು ಸಾಕಷ್ಟು ವಿಟಮಿನ್ ಡಿ ನ ಅಗತ್ಯವಿದೆ, ಮತ್ತು ನಿಮ್ಮ ಮಗುವಿನ ಮೂಳೆಗಳು ಬಲವಾಗಿ ಅಭಿವೃದ್ಧಿ ಹೊಂದುತ್ತಿವೆ ಎಂದು ಖಚಿತ ಪಡಿಸಿಕೊಳ್ಳಿ

ಗರ್ಭಾವಸ್ಥೆಯಲ್ಲಿ ಮತ್ತು ನೀವು ಹಾಲುಣಿಸುವ ಸಮಯದಲ್ಲಿ ನಿಮಗೆ ಪ್ರತಿ ದಿನವೂ 600 IU (ಅಂತರರಾಷ್ಟ್ರೀಯ ಘಟಕಗಳು)ನಷ್ಟು ವಿಟಮಿನ್ D ನ ಅಗತ್ಯವಿದೆ.

ಹಾಲು, ಹಣ್ಣಿನ ರಸಗಳು, ಸೋಯಾ ಬೀನ್ ಗಳನ್ನು ಪ್ರತಿದಿನ ಸೇವಿಸುವುದರಿಂದ ವಿಟಮಿನ್ Dಯನ್ನು ದೇಹದಲ್ಲಿ ಹೆಚ್ಚಿಸಿಕೊಳ್ಳಬಹುದು.

ನಿಮ್ಮ ಮಗುವಿಗೆ ದಿನಕ್ಕೆ ೪೦೦ UI ನಷ್ಟು ವಿಟಮಿನ್ D  ತನ್ನ ಎಲುಬುಗಳನ್ನು ಬಲಪಡಿಸಿಕೊಳ್ಳಲು ಬೇಕು. ಇದರ ಜೊತೆಗೆ ಹಲವು ಪೌಷ್ಟಿಕಾಂಶಗಳ ಅಗತ್ಯ ನಿಮಗೆ ಮತ್ತು ನಿಮ್ಮ ಮಗುವಿಗೆ ಇದೆ.

ನಿಮ್ಮ ಮಗುವಿಗೆ ಎದೆಹಾಲುಣಿಸುವುದರಿಂದ ಮಗುವಿಗೆ ಬೇಕಿರುವ ಹೆಚ್ಚಿನ ಪೌಷ್ಟಿಕಾಂಶಗಳು ಮತ್ತು ವಿಟಮಿನ್ ಗಳು ದೊರೆಯುತ್ತವೆ.

ನಿಮ್ಮ ಮಗುವಿಗೆ ಒಂದು ವರ್ಷ ತುಂಬುತ್ತಿದ್ದಂತೆ ಅವನಿಗೆ/ಅವಳಿಗೆ ಪೌಷ್ಟಕಾಂಶಗಳ ಅಗತ್ಯ ಹೆಚ್ಚಾಗುತ್ತದೆ.

Leave a Reply

%d bloggers like this: