hareyakke-munna-kalisabekaada-vishayagalu-1

ಹರೆಯಕ್ಕೆ ಕಾಲಿಡುವ ಮುನ್ನದಲ್ಲಿ ಹೆಣ್ಣು ಮಗಳು ತನ್ನ ಜೀವನದ ಒಂದು ವಿಭಿನ್ನ ಹಂತದಲ್ಲಿ ಇರುತ್ತಾಳೆ. ಅವಳ ಒಳಗೆ ಅಡಗಿರುವ ಶಕ್ತಿಯು ಇನ್ನಷ್ಟು ತೀವ್ರವಾಗಿ ಬೆಳೆಯುತ್ತಾ ಹೋಗುತ್ತದೆ, ಇಷ್ಟಾದರೂ ಲಿಂಗಬೇಧ ಮಾಡುವ ಈ ಸಮಾಜದಲ್ಲಿ ಅವಳು ಒಳ್ಳೆಯ ಜೀವನ ಬಾಳಲು ಬಹಳಷ್ಟು ಕಷ್ಟಪಡಬೇಕು.

ಮಗಳು ಭವಿಷ್ಯದಲ್ಲಿ ಎದುರಾಗುವ ಕಷ್ಟಗಳನ್ನ ಸಮರ್ಥವಾಗಿ ಎದುರಿಸಲು ಪೋಷಕರಾಗಿ ನೀವು ಅವಳಿಗೆ ಚಿಕ್ಕಂದಿನಿಂದಲೇ ಕೆಲವೊಂದು ಕೌಶಲ್ಯತೆಗಳನ್ನ ಕರಗತ ಮಾಡಿಸಬೇಕು. ನಿಮ್ಮ ಮಗಳು ಹರೆಯಕ್ಕೆ ಕಾಲಿಡುವ ಒಳಗೆ ನೀವು ಅವಳಿಗೆ ಕಳಿಸಬೇಕಾದ ವಿಷಯಗಳು ಯಾವು ಅಂದರೆ :

೧. ತನ್ನ ಭಾವನೆಗಳ ಗೌರವಿಸುವುದು ಮತ್ತು ವ್ಯಕ್ತಪಡಿಸುವುದು

ಹಿಂದಿನಿಂದ ನಾವು ತಿಳಿದುಕೊಂಡಿರುವುದು ಏನು ಎಂದರೆ, ಹುಡುಗಿಯರು ತಮ್ಮ ಭಾವಾನೆಗಳೊಂದಿಗೆ ಯಾವಾಗಲು ಹೆಚ್ಚು ಸಂಪರ್ಕ ಹೊಂದಿರುತ್ತಾರೆ ಮತ್ತು ಅವರು ಅವುಗಳನ್ನ ಸ್ವಾಭಾವಿಕವಾಗಿ ಹೊರ ಹಾಕುವುದರಲ್ಲೂ ಮುಂದಿರುತ್ತಾರೆ ಎಂದು. ಆದರೆ ಇದು ಯಾವಾಗಲೂ ಸರಿಯಲ್ಲ. ಬಹಳಷ್ಟು ಬಾರಿ ಭಾವುಕತೆಗೆ ಒಳಗಾಗುವುದು, ಅವರು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ನಿಮ್ಮ ಮಗಳು ನಿಮ್ಮ ಬಳಿ ಅವಳ ಭಾವನೆಯನ್ನ ವ್ಯಕ್ತಪಡಿಸಿದರೆ, ನೀವು ಅದನ್ನ ಗುರುತಿಸಿ ಪ್ರೋತ್ಸಾಹಿಸಿ. ಆಕೆಯ ಮಾತುಗಳು ಎಷ್ಟೇ ಎಳೆಸು ಅನಿಸಿದರೂ, ಅವುಗಳಿಗೆ ನಗುವುದಾಗಲಿ ಅಥವಾ ವಿರೋಧ ವ್ಯಕ್ತಪಡಿಸುವುದಾಗಲಿ ಮಾಡಬೇಡಿ.

೨. ತನ್ನ ಬಗ್ಗೆಯೇ ಸಹಾನುಭೂತಿ ಬೆಳೆಸಿಕೊಳ್ಳುವುದು

ಯಾರಿಗೆ ಆದರೂ ತಾವು ಮಾಡಿದ್ದೆಲ್ಲಾ ಸರಿ ಅಂದುಕೊಳ್ಳುವುದು ತುಂಬಾ ಸುಲಭ. ಆದರೆ, ಹುಡುಗಿಯರಿಗೆ ಬಹಳಷ್ಟು ಬೇರೆಯವರು ಇಷ್ಟಪಡುವಂತೆಯೇ ಇರಲು ಎಲ್ಲರೂ ಸೂಚಿಸುತ್ತಾರೆ. ಹಾಗಾಗಿ ಹುಡುಗಿಯರು ಏನಾದರು ಅಡಚಣೆಗಳು, ವೈಫಲ್ಯತೆಗಳ ಎದುರಿಸಿದರೆ, ಅವರು ತಮ್ಮ ಇಡೀ ಕುಟುಂಬಕ್ಕೆ ತಾವು ಅವಮಾನ ಮಾಡಿದೆವೆಂದು ಭಾವಿಸುವರು. ಹೀಗಾಗಿ ನೀವು ನಿಮ್ಮ ಮಗಳಿಗೆ ವೈಫಲ್ಯತೆಗಳ, ಸೋಲುಗಳು ಎದುರಿಸುವುದನ್ನ ಕಲಿಸಬೇಕು. ಕಷ್ಟದ ಸಮಯದಲ್ಲಿ ಅವಳು ಇನ್ನೊಬ್ಬರ ದೃಷ್ಟಿ ಇಂದ ತನ್ನನ್ನ ನೋಡಿಕೊಳ್ಳಬೇಕು ಮತ್ತು ತನ್ನ ಬಗ್ಗೆ ಸಹಾನುಭೂತಿ ಹೊಂದಬೇಕು. ಎಲ್ಲಾ ತಪ್ಪುಗಳಿಗೆ ತನ್ನನ್ನೇ ತಾನು ದೂಷಿಸಿಕೊಳ್ಳುವ ಬದಲು ಆಕೆಯು ತನ್ನ ಬಗ್ಗೆ ಕನಿಕರ ಪಟ್ಟುಕೊಂಡು, ಪರಿಹಾರ ಹುಡುಕಲು ಸಜ್ಜಾಗಬೇಕು.

೩. ತನ್ನ ದೇಹದ ಬಗ್ಗೆ ಒಳ್ಳೆ ಅಭಿಪ್ರಾಯ ಬೆಳೆಸಿಕೊಳ್ಳುವುದು

ಈ ರಿಯಾಲಿಟಿ ಷೋ ಮತ್ತು ಸೆಲ್ಫಿ ಕಾಲದಲ್ಲಿ, ಒಂದು ಹುಡುಗಿಗೆ ಸ್ವಯಂ-ಸಬಲೀಕರಣ ಮತ್ತು ಸ್ವಯಂ-ವಿಷಯೀಕರಣದ ನಡುವಿನ ಅಂತರ ಒಮ್ಮೊಮ್ಮೆ ತಿಳಿಯುವುದೇ ಇಲ್ಲ. ಹೀಗಾಗಿ ಹುಡುಗಿಯರು ತಮ್ಮನ್ನ ತಾವು ಒಂದು ವಸ್ತುವಿನ ಹೊರತಾಗಿ ಬೇರೇ ಏನಾಗಿ ನೋಡಲು ಹೇಗೆ ಎಂಬುದು ತಿಳಿಯುವುದಿಲ್ಲ. ಅವರ ದೇಹದ ಬಗ್ಗೆ ಅವರಿಗೆ ಒಳ್ಳೆ ಅಭಿಪ್ರಾಯ ಮೂಡುವಂತೆ, ಅವರ ದೇಹದ ಮೇಲೆ ಅವರಿಗೆ ಅಭಿಮಾನ, ಪ್ರೀತಿ ಬರುವಂತೆ ಮಾಡಲು ಇರುವ ಒಂದು ದಾರಿ ಅಂದರೆ, ಅದು ಅವರನ್ನ ಕ್ರೀಡೆಗಳಿಗೆ ಪರಿಚಯಿಸುವುದು. ದೈಹಿಕ ಚಟುವಟಿಕೆಗಳು ಅವರು ತಮ್ಮ ದೇಹಕ್ಕೂ ಶಕ್ತಿ ಹಾಗು ತ್ರಾಣ ಇದೆ ಎಂದು ಅರಿತುಕೊಳ್ಳುವ ಅವಕಾಶ ನೀಡುತ್ತವೆ. ಅಲ್ಲದೆ, ದೇಹವನ್ನ ಕೇವಲ ಅಂಡ ಚೆಂದದಿಂದ ಅಳೆಯಲು ಸಾಧ್ಯವಿಲ್ಲ ಎಂಬುದು ತಿಳಿಯುತ್ತದೆ. ಸಂಶೋಧನೆಗಳ ಪ್ರಕಾರ ಕ್ರೀಡೆಗಳು ನೇರವಾಗಿ ಹುಡುಗಿಯ ಆತ್ಮವಿಶ್ವಾಸ ಮತ್ತು ಆತ್ಮಗ್ರಹಿಕೆಯನ್ನ ವೃದ್ದಿಸುತ್ತದೆ ಎಂಬುದು ತಿಳಿದು ಬಂದಿದೆ.

೪. ಸ್ನೇಹದಿಂದ ಕಲಿಯುವುದು ಹೇಗೆ

ಪೋಷಕರಿಗೆ ಸ್ನೇಹ ಮತ್ತು ಸ್ನೇಹಿತರು ಎಂಬುದು ತಮ್ಮ ಮಗಳಿಗೆ ಒಂದು ಆರೋಗ್ಯಕರ ಸಂಬಂಧ ಎಂದರೆ ಹೇಗಿರುತ್ತದೆ ಎಂಬುದನ್ನ ತಿಳಿಸಲು ಒಳ್ಳೆಯ ಅವಕಾಶ ಎಂದು ತಿಳಿಯಬೇಕು. ಇದರಿಂದ ಅವರು ಸಂಬಂಧದಲ್ಲಿ ವ್ಯವಹರಿಸುವುದು ಮತ್ತು ಕಾಪಾಡಿಕೊಳ್ಳುವುದು ಕಲಿಯುತ್ತಾರೆ. ಉದಾಹರಣೆಗೆ, ನಿಮ್ಮ ಮಗಳು ಹೋಗುವ ಸ್ಕೂಲ್ ಬಸ್ಸಿನಲ್ಲಿ ಆಕೆಯ ಸ್ನೇಹಿತೆ ಅವಳಿಗಾಗಿ ಒಂದು ಸೀಟ್ ಹಿಡಿದಿರಲಿಲ್ಲ ಎಂದರೆ, ನಿಮ್ಮ ಮಗಳಿಗೆ ಅವಳ ಸ್ನೇಹಿತೆಗೆ ಮೊದಲು ಅವಳಿಗೆ ಇದ್ದ ಆಯ್ಕೆಗಳೇನು ಏನು ಎಂದು ಮತ್ತು ಆಕೆಗೆ ಸೀಟ್ ಹಿಡಿಯಲು ಸಾಧ್ಯವಗದಿರಲು ಕಾರಣ ಏನು ಎಂಬುದನ್ನ ಕೇಳಲು ಹೇಳಿ. ನಾಜೂಕಾಗಿ ಹೇಗೆ ವ್ಯವಹರಿಸಬೇಕು ಎಂಬುದನ್ನ ತಿಳಿಸಿಕೊಡಿ.

೫. ಪುಂಡಾಟಿಕೆ ಇಂದ ಬಚಾವ್ ಆಗುವುದು ಹೇಗೆ

ಯಾವ ತಂದೆ ತಾಯಿಯು ತಮ್ಮ ಮಕ್ಕಳು ಪುಂಡಾಟಿಕೆಗೆ ಗುರಿ ಆಗುತ್ತಿದ್ದಾರೆ ಎಂದೋ ಅಥವಾ ಮಕ್ಕಳೇ ಪುಂಡಾಟಿಕೆ ಅಲ್ಲಿ ತೊಡಗಿಕೊಂಡಿದ್ದಾರೆ ಎಂಬುದನ್ನ ಕೇಳಲು ಬಯಸುವುದಿಲ್ಲ. ಹುಡುಗಿಯರು ಇನ್ನೊಬ್ಬರ ಮೇಲೆ ದಾಳಿ ಅಥವಾ ಪುಂಡಾಟಿಕೆ ಏಕೆ ಮಾಡುವರು ಅಂದರೆ ಅವರಿಗೆ ತಮ್ಮ ಭಾವನೆಗಳನ್ನ ಬೇರೇ ರೀತಿ ಹೊರ ಹಾಕುವುದು ಗೊತ್ತಿರುವುದಿಲ್ಲ. ಹುಡುಗಿಯರು ಪುಂಡಾಟಿಕೆಗೆ ಗುರಿ ಆಗುತ್ತಿದ್ದರೆ ಅದಕ್ಕೆ ಕಾರಣ ಅವರ ತಮಗಾಗಿ ಎದುರು ನಿಂತು ಹೋರಾಡಲು ಶಕ್ತಿ ಇಲ್ಲವೆಂದು ಅಂದುಕೊಳ್ಳುವುದೇ ಕಾರಣ. ಈ ಎರೆಡು ಪರಿಸ್ತಿಥಿಗಳು ಸಮನಾಗಿ ಕ್ಲಿಷ್ಟಕರವಾಗಿರುತ್ತದೆ.

೬. ಅವಳ ಲಿಂಗದ ಬಗ್ಗೆ ಹೆಮ್ಮೆ ಇಟ್ಟುಕೊಳ್ಳುವುದು

ಈ ಸಮಾಜದಲ್ಲಿ ಲಿಂಗಬೇಧ ಅನ್ನುವುದು ಎಲ್ಲೆಡೆ ಹಬ್ಬಿರುವ ಒಂದು ಸಾಂಕ್ರಾಮಿಕ ರೋಗ. ಇಂತಹ ಸಮಾಜದಲ್ಲಿ ಅವಳಿಗೆ ಹೆಜ್ಜೆಹೆಜ್ಜೆಗೂ ಅವಮಾನ ಮಾಡುವವರು, ಅಲ್ಲಗಳೆಯುವರು, ಹೀಯಾಳಿಸುವರು ಎದುರಾಗೇ ಆಗುತ್ತಾರೆ. ಹೀಗಾಗಿ ನೀವು ಅವಳಿಗೆ ಅವಳು ಒಂದು ಹುಡುಗನಷ್ಟೇ ಇಲ್ಲ ಹುಡುಗನಿಗಿಂತ ಹೆಚ್ಚು ಸಾಮರ್ಥ್ಯ ಉಳ್ಳವಳು ಎಂದು ತಿಳಿಸಬೇಕು. ನೀವು ಅವಳಿಗೆ ಬಾಯಿ ಬಿಟ್ಟು ಏನು ಹೇಳದೆ ಇದ್ದರೂ, ಅದು ಹುಡುಗರು ಮಾಡುವ ಕೆಲಸ ಅಥವಾ ಇದು ಹುಡುಗಿಯರು ಮಾಡುವ ಕೆಲಸ ಎಂಬುದನ್ನ ಮಾತ್ರ ತಲೆಗೆ ತುಂಬಬೇಡಿ. ಆಕೆಗೆ ಎಲ್ಲಾ ರೀತಿಯ ಕೆಲಸಗಳನ್ನ ಮಾಡಲು ಕೊಡಿ. ಅವಳ ಕೈಯ್ಯಲ್ಲಿ ಅದು ಆಗದೆ ಇದ್ದರೆ, ಅನುಕಂಪ ತೋರದೆ, ಅವಳು ಮತ್ತಷ್ಟು ಸಿದ್ದತೆ ಮಾಡಿಕೊಂಡು ಅದನ್ನ ಪೂರ್ಣಗೊಳಿಸುವಂತೆ ನೋಡಿಕೊಳ್ಳಿ.

೭. ನಾಯಕತ್ವ ತಿಳಿಸಿಕೊಡಿ

ನಿಮ್ಮ ಮಗಳಿಗೆ ನೀವು ನಾಯಕತ್ವದ ಗುಣಗಳನ್ನ ಬೆಳೆಸಿಕೊಲ್ಳುವಂತೆ ಮಾಡಲು ಕೆಲವು ನಿಶ್ಚಿತ ದಾರಿಗಳಿವೆ. ಮನೆಗೆಲಸಗಳಲ್ಲಿ ಸಮಾನ ಜವಾಬ್ದಾರಿ ಹೊರುವ ತಂದೆಯ ಹೆಣ್ಣು ಮಕ್ಕಳು ತಮ್ಮ ಸಾಮರ್ಥ್ಯ ವ್ಯಾಪ್ತಿಯಲ್ಲಿ ಬಹಳಷ್ಟು ಉದ್ಯೋಗವಕಾಶಗಳು ಇವೆ ಎಂಬುದನ್ನ ಅರಿಯುವರೆಂದು ಸಮೀಕ್ಷೆಯೊಂದು ತಿಳಿಸಿದೆ. ಇಷ್ಟೇ ಅಲ್ಲ, ತಾಯಂದಿರು ಕೂಡ ಕುಟುಂಬದ ಒಳಗಡೆಯೇ ಕೆಲವು ಕೆಲಸಗಳ ಸಂಪೂರ್ಣ ಮುಂದಾಳತ್ವ ವಹಿಸುವುದು, ಸಂಸಾರಕ್ಕೆ ಸಂಬಂಧ ಪಟ್ಟ ನಿರ್ಧಾರಗಳ ಬಗ್ಗೆ ಯೋಚಿಸಿ ಅಭಿಪ್ರಾಯ ವ್ಯಕ್ತಪಡಿಸುವುದು ಕೂಡ ಮಗಳಿಗೆ ಪ್ರೋತ್ಸಾಹ ನೀಡುತ್ತದೆ.

ಇವೆಲ್ಲಾ ಗುಣಗಳನ್ನೂ ಬೆಳಸಿಕೊಳ್ಳುವುದು ಕಷ್ಟದ ಕೆಲಸವೇ, ಆದರೆ ಇವುಗಳನ್ನೆಲ್ಲಾ ಒಂದು ಹುಡುಗಿಯು ತನ್ನು ನಂಬಿಕೆ ಇಡಬಹುದಾದಂತಹ ಹಿರಿಯರೋಬ್ಬರಿಂದಲೇ ಕಲಿಯಬೇಕಾಗುತ್ತದೆ. ಇವುಗಳನ್ನ ಕಲಿಯುತ್ತಾ ಹೋದ ಹಾಗೆ, ಆಕೆಯ ಆತ್ಮವಿಶ್ವಾಸ ಮತ್ತು ಭದ್ರತೆಯ ಭಾವ ಹೆಚ್ಚಿಸುತ್ತದೆ.   

Leave a Reply

%d bloggers like this: