muddaaduvudu-garbhataalalu-sahaya-maduttadeye-1

ನಿಮಗೆ ಸಾಮಾನ್ಯವಾಗಿ ತಿಳಿದಿರುವುದು ವೀರ್ಯ ಮತ್ತು ಮೊಟ್ಟೆ ಸೇರಿದಾಗ ಗರ್ಭ ನಿಲ್ಲುವುದು ಎಂದು. ಆದರೆ ಅನೇಕ ಸಂಗತಿಗಳು ಬೇಗನೆ ಮತ್ತು ಸುಲಭವಾಗಿ ಗರ್ಭತಾಳಲು ಸಹಾಯ ಮಾಡುತ್ತವೆ. ಮುದ್ದಾಡುವುದಕ್ಕೂ ಗರ್ಭಾವಸ್ಥೆಗೂ ಸಂಪರ್ಕ ಇದೆಯೇ? ಗರ್ಭಧರಿಸಲು ಖಡ್ಡಾಯವಾಗಿ ಅಪ್ಪಿಕೊಳ್ಳಬೇಕೇ? ಇದನ್ನು ತಿಳಿದುಕೊಳ್ಳಲು ಮುಂದೆ ಓದಿ.

ಆಕ್ಸಿಟೋಸಿನ್(oxytocin) – ಗರ್ಭತಾಳಲು ಪ್ರಚೋಧಿಸುವ ಹಾರ್ಮೋನು.

ಆಕ್ಸಿಟೋಸಿನ್ ಎಂಬ ಹಾರ್ಮೋನು ಮುದ್ದಾಡುವ ಸಮಯದಲ್ಲಿ ಬಿಡುಗಡೆಯಾಗುತ್ತದೆ. ನಿಮ್ಮ ಚಿತ್ತ ಸ್ಥಿತಿಯನ್ನು ಶಾಂತಗೊಳಿಸಲು, ರಕ್ತದೊತ್ತಡವನ್ನು ಕಡಿಮೆಮಾಡಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಇದು ನಿಸ್ವಾರ್ಥ ಮತ್ತು ಪ್ರೀತಿಯನ್ನು ಹೆಚ್ಚಿಸುವಂತೆ ಮಾಡುತ್ತದೆ.

ಇದು ಒಬ್ಬ ಮಹಿಳೆಯನ್ನು ಉತ್ತಮ ತಾಯಿಯಾಗಿ ಮಾಡುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ.

ಏಕೆ ಮುದ್ದಾಡಬೇಕು?

ಮೊದಲಿಗೆ, ಹುಡುಗಿಯರು ಪ್ರೀತಿಯಲ್ಲಿ ಮುಳುಗಿದ ಮೇಲೆ ಮುದ್ದಾಡಲು ಏಕೆ ಬಯಸುತ್ತಾರೆ? ಇದು ಏಕೆಂದರೆ, ಮುದ್ದಾಡುವ ಹಾರ್ಮೋನು ಇದಕ್ಕೆ ಕಾರಣ. ಇದರ ನಿಜವಾದ ಹೆಸರು ಆಕ್ಸಿಟೋಸಿನ್.

ಆಕ್ಸಿಟೋಸಿನ್ ನ ಪಾತ್ರ

ಇದು ಸಂತಾನೋತ್ಪತ್ತಿ ಚಕ್ರಗಳನ್ನು ಸಹಜ ಸ್ಥಿತಿಯಲ್ಲಿ ಇಡಲು ಸಹಾಯ ಮಾಡುತ್ತವೆ. ಇದು ನಿಮ್ಮ ಸಂಗಾತಿಯ ಜೊತೆ ಬಾಂಧವ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದೆಲ್ಲದರ ಜೊತೆ, ಆಕ್ಸಿಟೋಸಿನ್ ಮಗುವಿಗೆ ತಾಯಿಯ ಆರೈಕೆ ಸಿಗುವಂತೆ ಮಾಡುತ್ತದೆ.

ಹೆರಿಗೆಯ/ಜನನದ ನೋವಿನ ಪ್ರಕ್ರಿಯೆಯಲ್ಲಿ ಆಕ್ಸಿಟೋಸಿನ್ ಸಹಾಯ ಮಾಡುತ್ತದೆ. ಮಗುವಿನ ಜನ್ಮದ ಸಮಯದಲ್ಲಿ ಯೋನಿ ಹಿಗ್ಗಿದಾಗ ಕೆಳಭಾಗದ ಪ್ರದೇಶಗಳು ಬಿಡುಗಡೆಯಾಗಲು ಸಹಾಯ ಮಾಡುತ್ತದೆ. ಮತ್ತು ಇದು ಎದೆಹಾಲುಣಿಸುವ ಸಂದರ್ಭದಲ್ಲೂ ಸಹಾಯ ಮಾಡುತ್ತದೆ.

ಮುದ್ದಾಡುವುದು ಮತ್ತು ಗರ್ಭಾವಸ್ಥೆ

ಪುರುಷರು ತಮ್ಮ ಸಂಗಾತಿಯ ಜೊತೆ ಹೆಚ್ಚು ಮುದ್ದಾಡುವ ಸಮಯವನ್ನು ಕಳೆಯುವುದರಿಂದ, ಮಹಿಳೆಯರಲ್ಲಿ ಆಕ್ಸಿಟೋಸಿನ್ ಬಿಡುಗಡೆಯಾಗಲು ಸಹಾಯವಾಗುತ್ತದೆ, ಮತ್ತು ಆಕೆ ಸುಲಭವಾಗಿ/ಸಲೀಸಾಗಿ ಗರ್ಭತಾಳಲು ಇದು ಸಹಾಯವಾಗುತ್ತದೆ.

ಚರ್ಮ ಸಂಪರ್ಕ

ಹತ್ತಿರ ಚರ್ಮ ಸಂಪರ್ಕ ಕೂಡ ಆಕ್ಸಿಟೋಸಿನ್ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಯಾವಾಗ ಜೋಡಿಗಳು ಮುದ್ದಾಡುತ್ತಾರೆ, ಆಗ ಚರ್ಮ ಸಂಪರ್ಕ ಹೊಂದಿ ಆಕ್ಸಿಟೋಸಿನ್ ಬಿಡುಗಡೆ ಆಗಿ ಅವರಲ್ಲಿ ಉತ್ತಮ ಭಾವನೆಯನ್ನು ಬರುವಂತೆ ಮಾಡುತ್ತದೆ. ತಾಯಿಯು ತನ್ನ ಮಗುವನ್ನು ಅಪ್ಪಿಕೊಂಡಾಗಲೂ/ಮುದ್ದಾಡಿದಾಗಲೂ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ.

ಆಕ್ಸಿಟೋಸಿನ್ ಅನ್ನು ಯಾವುದು ಕಡಿಮೆ ಮಾಡುತ್ತದೆ?

ನಿಮ್ಮ ಒತ್ತಡ ಆಕ್ಸಿಟೋಸಿನ್ ಮಟ್ಟವನ್ನು ಕೊಲ್ಲುತ್ತದೆ. ಆತಂಕ ಮತ್ತು ಸಂಬಂಧಗಳಲ್ಲಿನ ತೊಂದರೆ ಅಥವಾ ಸಮಸ್ಯೆ ಆಕ್ಸಿಟೋಸಿನ್ ಅನ್ನು ಕಡಿಮೆ ಮಾಡುತ್ತದೆ.

ಶಾಂತಿ, ಸುರಕ್ಷಿತ ವಾತಾವರಣ ಮತ್ತು ಬೆಂಬಲಿಸುವ ಸಂಗಾತಿ ಆಕ್ಸಿಟೋಸಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಇದು ಬೇಗನೆ ಗರ್ಭತಾಳಲು ಸಹಾಯ ಮಾಡುತ್ತದೆ.

ಮುದ್ದಾಡುವುದು ಗರ್ಭತಾಳಲು ಪರೋಕ್ಷವಾಗಿ ಸಹಾಯ ಮಾಡುತ್ತದೆ. ನಿಮ್ಮ ದೇಹದಲ್ಲಿ ಆಕ್ಸಿಟೋಸಿನ್ ಪ್ರಮಾಣ ವ್ಯತ್ಯಾಸವಾದರೂ ಅಪ್ಪಿಕೊಳ್ಳುವುದು ಅದನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ, ಜೊತೆಗೆ ಇದು ನಿಮ್ಮನ್ನು ಗರ್ಭತಾಳಲು ಸಹಾಯ ಮಾಡುವುದರ ಜೊತೆಗೆ ನೀವು ಮಗುವಿಗೆ ಎದೆಹಾಲುಣಿಸುವ ಸಮಯದಲ್ಲೂ ನಿಮಗೆ ಸಹಾಯ ಮಾಡುತ್ತದೆ.

Leave a Reply

%d bloggers like this: