makkalalli-kopa

ಸಿಟ್ಟಾಗಿ ಭಾವೋದ್ವೇಗಕ್ಕೆ ಒಳಗಾಗುವುದು ಮನುಷ್ಯನ ಲಕ್ಷಣ. ಎಲ್ಲರು ಸಿಟ್ಟಾಗುತ್ತಾರೆ ಮತ್ತು ಆ ಕೋಪವನ್ನ ಕೆಲವೊಂದರ ಮೇಲೆ ತೋರಿಸುವುದು ತಪ್ಪು ಕೂಡ ಅಲ್ಲ, ಅದು ನಿಮ್ಮ ಮಕ್ಕಳೂ ಇರಬಹುದು. ಕೋಪ ಎನ್ನುವುದು ತಡೆಯಲಾಗದ ರೋಷದಂತಹ ಭಾವನೆಗಳಿಗೆ ಸಂಬಂಧಪಟ್ಟಿದ್ದು ಮತ್ತು ಇದು ನಕಾರಾತ್ಮಕವಾದ ಪರಿಣಾಮಗಳನ್ನ ಬೀರುತ್ತದೆ.

ಕೋಪವನ್ನು ನಾವು ಜೋರಾಗಿ ಅಳುವ ಮೂಲಕ, ಕಿರುಚುವದು ಮತ್ತು ಕೂಗಾಡುವುದರ ಮೂಲಕ, ಅಥವಾ ಪರಿಸ್ತಿಥಿ ಇನ್ನೂ ಮಿತಿ ಮೀರಿದರೆ ದೈಹಿಕ ಹಿಂಸೆಯ ಮೂಲಕ ಹೊರಹಾಕುತ್ತೇವೆ. ವಯಸ್ಕರರಾಗಿ ನಾವು ನಮ್ಮ ೫ ವರ್ಷದ ಮಗು ನಮ್ಮ ಮಾತುಗಳನ್ನ ಕೇಳದೆ ಇದ್ದಾಗ ನಿಮಗೆ ಕೋಪ ಬರುವುದು ಬಹಳ ಸುಲಭ. ಅವರ ಮೇಲೆ ಹರಿಹಾಯುವಂತೆ ಅನಿಸುವುದು ಅಲ್ಲವ?

ಮಕ್ಕಳಲ್ಲೂ ಇದೇ ಥರ ಆಗುತ್ತದೆ. ನಿಮ್ಮ ಮಗುವಿನ ಕೋಪ, ರೋಷದ ವಿಷಯಕ್ಕೆ ಸಂಬಂಧಪಟ್ಟ ಸಂದರ್ಭಗಳಲ್ಲಿ ನೀವು ಹೇಗೆ ವ್ಯವಹರಿಸಬೇಕು ಎಂಬುದಕ್ಕೆ ಕೆಲವು ಸೂತ್ರಗಳಿವೆ ಓದಿ :

೧. ಕೋಪಗೊಂಡಿರುವ ಮಕ್ಕಳ ಮೇಲೆ ನೀವು ಕೂಗಾಡಬಾರದು

ನಿಮ್ಮ ಮಗು ಸಿಟ್ಟಾದಾಗ ನೀವು ಅವನ/ಅವಳ ಮೇಲೆ ಕೂಗಾಡಿದರೆ, ಪರಿಸ್ತಿಥಿ ಇನ್ನಷ್ಟು ಹದಗೆಡುತ್ತದೆ. ಮಗುವು ಮತ್ತಷ್ಟು ಕುಪಿತಗೊಳ್ಳುವುದು. ಹೀಗಾಗಿ ನಾವು ಮಾಡಬಹುದಾದ ಒಂದೊಳ್ಳೆ ಕೆಲಸ ಎಂದರೆ ಅದು “ಗೋಲಿ ಹೊಡಿಯೋದು”, ಅಂದರೆ ನಿಮ್ಮ ಮಗುವು ಸಿಟ್ಟಿಗೆದ್ದು ಕೂಗಾಡುತ್ತಿದ್ದರು, ನೀವು ಮಾತ್ರ ತಾಳ್ಮೆ ಕಳೆದುಕೊಳ್ಳದೆ, ಆರಾಮಾಗಿ ಇರುವುದು.

೨. ತರ್ಕಕ್ಕೆ ಇಲ್ಲಿ ಜಾಗವಿಲ್ಲ

ಬಹಳಷ್ಟು ಪೋಷಕರು ತಮ್ಮ ಮಕ್ಕಳೊಂದಿಗೆ ಮಾತಾಡುವಾಗ, ವಾದ ಮಾಡುವಾಗ “ತರ್ಕ” ಎಂಬ ಬ್ರಹ್ಮಾಸ್ತ್ರ ಬಳಸುತ್ತಾರೆ. ಇದು ತಪ್ಪು ನಡೆ ಅಲ್ಲ, ಆದರೆ ಇದು ವಯಸ್ಕರೊಂದಿಗೆ ಮಾತಾಡುವಾಗ ಬಳಸಿದರೆ ಒಳ್ಳೆಯದು, ಆದರೆ ಮಕ್ಕಳ ಬಳಿ ಅವರ ತಪ್ಪು ಏನೆಂದು ಅಥವಾ ಅವರು ಏನು ಮಾಡಿದರೆಂದು ವಿವರಿಸಲು ಹೋಗಬೇಡಿ. ಏಕೆಂದರೆ ಮಕ್ಕಳು ಸ್ವಭಾವದಲ್ಲಿ ಹಠಾತ್ ಪ್ರವೃತ್ತಿ ಅವರಾಗಿದ್ದು, ವಯಸ್ಕರರಂತೆ ಅರ್ಥ ಮಾಡಿಕೊಳ್ಳುವ ಶಕ್ತಿ ಹೊಂದಿರುವುದಿಲ್ಲ.

೩. ನಿಮ್ಮ ನಡೆಗಳ ಬಗ್ಗೆ ಗಮನವಿರಲಿ

ಇಂತಹ ಸಂದರ್ಭಗಳಲ್ಲಿ, ನಿಮಗೆ ಗೊತ್ತಿಲ್ಲದೇ ನೀವು ನಿಮ್ಮ ದೈಹಿಕ ಭಾಷೆಯು ಮೂಲಕ ಸೂಚಿಸುವ ಕೆಲವೊಂದು ನಕಾರಾತ್ಮಕ ಅಂಶಗಳು, ನಿಮ್ಮ ಮಗುವಿಗೆ ನೀವು ಒಳಗೆ ಅಡಗಿಸಿಟ್ಟಿರುವ ಕೋಪವನ್ನು ತಿಳಿಯುವಂತೆ ಮಾಡುತ್ತವೆ. ಹೀಗೆ ತಿಳಿದ ಮೇಲೆ ಮಗುವು ನಿಮ್ಮನ್ನು ಇನ್ನಷ್ಟು ಕುಪಿತರಾಗುವಂತೆ ಮಾಡುತ್ತದೆ.

೪. ಅವರಿಗೆ ಅವರು ಸಹಾಯ ಮಾಡಿಕೊಳ್ಳಲು ಸಹಾಯ ಮಾಡಿ

ನಿಮ್ಮ ಮಗುವಿಗೆ ಅದರ ಸಹೋದರ/ಸಹೋದರಿಗೆ ಇರುವಷ್ಟು ಮನೋಧರ್ಮ ಇರುವುದಿಲ್ಲ. ನಿಮ್ಮ ಮಗುವು ಯಾವುದಾದರು ವಿಷಯಕ್ಕೆ ಸಿಟ್ಟಾಗಿದೆ ಎಂದರೆ, ಮಗುವನ್ನ ಸಂಪೂರ್ಣವಾಗಿ ಏಕಾಂತದಲ್ಲಿ ಇರಿಸಬೇಡಿ. ಬದಲಿಗೆ, ನಿಮ್ಮ ಮಗುವಿಗೆ ತನ್ನ ಭಾವನೆಗಳ ಮೇಲೆ ಹಾಗು ಯೋಚನೆಗಳ ಮೇಲೆ ಹೇಗೆ ಹಿಡಿತವನ್ನ ಬೆಳೆಸಿಕೊಳ್ಳಬೇಕು ಎಂದು ಹೇಳಿಕೊಡಿ. ನಿಮ್ಮ ಮಗುವಿಗೆ ಬೇಗ ಸಿಟ್ಟಾಗದಂತೆ ಪ್ರೇರೇಪಣೆ ಸಿಗುವಂತೆ ಮಾಡಲು ಸಹಾಯ ಮಾಡಿ. ಅವರಿಗೆ ನಿಮ್ಮ ವಯಕ್ತಿಕ ಸಲಹೆಗಳನ್ನೇ ನೀಡಿ ಮತ್ತು ಸಿಟ್ಟನ್ನ ಹದದಲ್ಲಿಡುವುದು ಹೇಗೆ ಎಂಬುದನ್ನ ತಿಳಿಸಿಕೊಡಿ.

೫. ಅವರ ಮೇಲೆ ಕಠಿಣವಾಗಬೇಡಿ

ನಿಮ್ಮ ಮಗುವು ಸಿಟ್ಟಿನಲ್ಲಿ ಇದ್ದಾಗ ನೀವು ಅವರೊಂದಿಗೆ ಒರಟಾಗಿ ನಡೆದುಕೊಂಡರೆ ಅದು ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು “ಆ ಕ್ಷಣಕ್ಕೆ” ಮಾತ್ರ ಎಂದು ಅವರಿಗೆ ನೀಡುವ ಶಿಕ್ಷೆ ಮತ್ತಷ್ಟು ತೊಂದರೆಗಳನ್ನ ಹುಟ್ಟು ಹಾಕಬಹುದು. ನೀವು ಹೆಚ್ಚು ಕಠಿಣವಾದರೆ ಅಥವಾ ನಿಷ್ಕೃಷ್ಟ ಆದರೆ, ನಿಮ್ಮ ಮಗುವು ನಿಮ್ಮಿಂದ ದೂರವಾಗುತ್ತಾ ಹೋಗುತ್ತದೆ. ಇದು ಖಂಡಿತವಾಗಿಯೂ ಯಾರಿಗೂ ಬೇಡ. ಅವರು ಇಷ್ಟ ಪಡುವ ವಸ್ತುಗಳನ್ನ ಕಸಿದಿಟ್ಟುಕೊಳ್ಳುವಂತ ಶಿಕ್ಷೆಯು ಅವರು ನಿಮ್ಮ ಕೋಪವನ್ನ ಮತ್ತಷ್ಟು ಕೆರಳುವಂತೆ ಮಾಡಲು ಪ್ರಚೋದಿಸುತ್ತದೆ.

Leave a Reply

%d bloggers like this: