25-litre-rakta-kaledukondavalu

ಒಂದು ತುಂಬಾ ವಿರಳವಾದ, ಅತ್ಯಂತ ಅಪಾಯಕಾರಿ ಹೆರಿಗೆಯಲ್ಲಿ, 38 ವರ್ಷದ ಒಂದು ಹೆಂಗಸು ತನ್ನ ಒಂಬತ್ತನೇ ಮಗುವಿಗೆ ಜನ್ಮ ನೀಡಿದಳು. ಇದು ಆಕೆಯ 5ನೇ c-ಸೆಕ್ಷನ್, ಲತಿಫಾ ಅಂಡ್ ರಶೀದ ಆಸ್ಪತ್ರೆಯ ವೈದ್ಯರು ಸತತ ಒಂಬತ್ತು ಘಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ ಮಗು ಹಾಗು ತಾಯಿಯನ್ನ ಬದುಕುಳಿಸಿದರು. ಈ ಹೆಂಗಸು 25 ಲೀಟರ್ ಅಷ್ಟು ರಕ್ತವನ್ನ ಕಳೆದುಕೊಂಡಿದ್ದು, ಇದು ಒಂದು ವಯಸ್ಕರ ವ್ಯಕ್ತಿಯ ದೇಹದಲ್ಲಿ ಇರುವ ರಕ್ತದ 5 ಪಟ್ಟು! ಸರ್ಜರಿ ಮುಗಿಯುವಷ್ಟರಲ್ಲಿ ಆಕೆಗೆ ಸುಮಾರು 100 ಯೂನಿಟ್ ಗಳಷ್ಟು ರಕ್ತ ಮತ್ತು ರಕ್ತದ ಉತ್ಪನ್ನಗಳನ್ನ ವರ್ಗಾಯಿಸಿಕೊಳ್ಳ ಬೇಕಾಯಿತು.

ತಾಯಿ ಹಾಗು ಮಗು, ಸಕಿನಾ ಮತ್ತು ಮಗು ಫಾತಿಮಾ ಇಬ್ಬರು ಸರ್ಜರಿ ಆದ ಒಂದು ವಾರದ ಮೇಲೆ ಇವಾಗ ಯಾವುದೇ ತೊಂದರೆ ಇಲ್ಲದೆ ಆರಾಮಾಗಿ ಇದ್ದಾರೆ. ಇದು ಮೊದಲೇ ಹೇಳಿದ ಹಾಗೆ ಸಕಿನಾಳ ಐದನೇ c-ಸೆಕ್ಷನ್ ಹೆರಿಗೆ.

ಮೂರಕ್ಕಿಂತ ಹೆಚ್ಚು ಬಾರಿ c-ಸೆಕ್ಷನ್ ಗೆ ಒಳಗಾಗುವುದು ಯಾವುದೇ ಹೆಂಗಸಿಗೂ ಒಂದು ಜೀವಕ್ಕೆ ಅಪಾಯ ತಂದುಕೊಳ್ಳುವಂತ ಪ್ರಯತ್ನ. ಏಕೆಂದರೆ ಗರ್ಭಕೋಶದ ಗೋಡೆಗಳು ಬಹಳ ದುರ್ಬಲಗೊಂಡಿರುತ್ತವೆ. ಈ ತಾಯಿ ಮತ್ತು ಆಕೆಯ ಪತಿಗೆ ಮುಂಚೆ ಒಂದು ಬಾರಿ ವೈದ್ಯರು ಮುಂದಿನ ಗರ್ಭದಾರಣೆ ವೇಳೆ ತೊಂದರೆ ಉಂಟಾಗುವುದೆಂದು ಮತ್ತು ಸಂತಾನಹರಣ ಮಾಡಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಈ ದಂಪತಿಗಳು ಅದಕ್ಕೆ ಒಪ್ಪಲಿಲ್ಲ.

ಆಸ್ಪತ್ರೆಯ ವೈದ್ಯರು ಈಕೆಯ ಹಳೆಯ c-ಸೆಕ್ಷನ್ ನ ಉದ್ದಾವಾದ ಕೊರೆತವನ್ನ ಬಿಚ್ಚಿದ ಮೇಲೆ, ಅವರಿಗೆ ಒಂದು ಅಚ್ಚರಿ ಕಾದಿತ್ತು. ವಿಷಯ ಏನೆಂದರೆ, ಈಕೆಗೆ ಪ್ಲಾಸೆಂಟಲ್ ಅಕ್ರಿಟ್ ಆಗಿತ್ತು. ಹೀಗೆಂದರೆ ಈಕೆಯ ಹಿಂದಿನ ಕೊರೆತವು, ಈಕೆಯ ಗರ್ಭಕೋಶದವರೆಗೂ ಇಳಿದಿತ್ತು. ಕೇವಲ ಗರ್ಭಕೋಶಕ್ಕೆ ಅಷ್ಟೇ ಅಲ್ಲದೆ, ಈ ಕೊರೆತವು ಮೂತ್ರನಾಳದವರೆಗೂ ಮುಟ್ಟಿತ್ತು. ಹಾಗಾಗಿ ಇವಳಿಗೆ ತೀವ್ರವಾಗಿ ರಕ್ತಸ್ರಾವ ಆಗುತ್ತಿತ್ತು. ಹೀಗಾಗಿ ನಾವು ತುರ್ತಾಗಿ ಯಾವುದೇ ಲಿಖಿತ ವಿಧಿವಿಧಾನಗಳು ಇಲ್ಲದೆಯೇ ಈಕೆಗೆ ಹೆಚ್ಚುವರಿ ರಕ್ತವನ್ನ ಒದಗಿಸಲು ಮುಂದಾದರು ವೈದ್ಯರು.

“ಒಂದು ಕ್ಷಣ ನಾವು ಈಕೆಯನ್ನ ಕಳೆದುಕೊಳ್ಳುತ್ತೀವಿ ಎಂದಿನಿಸಿತು, ಏಕೆಂದರೆ ಈಕೆಯ ರಕ್ತದೊತ್ತಡ ತುಂಬಾ ಅಪಾಯಕಾರಿ ಗತಿಗೆ ಕ್ಷೀಣಿಸಿತ್ತು. ಆದರೆ ನಾವು ಬಿಟ್ಟು ಕೊಡಲಿಲ್ಲ. ನಮ್ಮ ವೈದ್ಯರ ತಂಡವು ಆರು ಘಂಟೆಗಳ ಕಾಲ ಸತತ ಪ್ರಯತ್ನ ಮಾಡಿ ಆಕೆಯ ಗರ್ಭಕೋಶವನ್ನ ಆಕೆಯ ಮೂತ್ರನಾಳದಿಂದ ಬೇರ್ಪಡಿಸಿದರು” ಎಂದು ತಿಳಿಸಿದರು ವೈದ್ಯ ಅಲ್ ಕದೀರಾ.

ಹಿಸ್ಟೆರೆಕ್ಟೋಮಿ, ಅಂದರೆ ಗರ್ಭಕೋಶವನ್ನ ಬೇರ್ಪಡಿಸುವುದನ್ನ ಮಾಡಲಾಯಿತು. ಅಲ್ಲದೆ ತಾಯಿಯ ಗರ್ಭಕೋಶಕ್ಕೆ ಕೂಡ ಹಾನಿ ಉಂಟಾಗಿದ್ದರೂ, ವೈದ್ಯರು ತಾಯಿ ಮತ್ತು ಮಗು ಇಬ್ಬರನ್ನೂ ಉಳಿಸಿಕೊಳ್ಳಲು ಯಶಸ್ವೀ ಆದರು.  

Leave a Reply

%d bloggers like this: