maguvina-bhandatana-1

ನೀವು ಯಾವಾಗಲಾದರು “ಇವ್ನು ಯಾಕೆ ಹೇಳಿದ್ದು ಮಾತು ಕೇಳೋದೇ ಇಲ್ಲ!” ಎಂದು ತಲೆ ಬಿಸಿ ಮಾಡಿಕೊಂಡಿದ್ದರೆ, ಅದು ಕೂಡ ದಿನಕ್ಕೆ ನಾಲ್ಕೈದು ಬಾರಿ ಅಥವಾ ಘಂಟೆಗೆ ಒಮ್ಮೆ, ಹಾಗಿದ್ರೆ ನಿಮ್ಮ ಮಗುವು ಬಲವಾದ ಸಂಕಲ್ಪ ಹೊಂದಿರುವ ಸಾಧ್ಯತೆಗಳು ಇರುತ್ತವೆ. ಬಹಳಷ್ಟು ಪೋಷಕರು ತಮ್ಮ ಮಕ್ಕಳೊಂದಿಗೆ ವಾದ ವಿವಾದಗಳಿಗೆ ಒಳಗಾಗಿರಬಹುದು, ಆದರೆ ಪ್ರತಿ ದಿನವು ಛಲಬಿಡದ ಮಗುವಿನೊಂದಿಗೆ ಸೆಣೆಸುವುದರಲ್ಲಿ ವ್ಯತ್ಯಾಸವಿದೆ. ನೀವು ಹೊರಗಡೆ ತಿನ್ನಲೆಂದು ಹೋದಾಗ, ಅಲ್ಲಿ ಮಾತು ಕೇಳುವ ಹಾಗು ನಿಶಬ್ದವಾಗಿ ಇರುವ ಮಗುವನ್ನ ನೋಡಿ ನೀವು ನಿಮ್ಮ ಮಗುವು ಯಾಕೆ ಹಾಗಿಲ್ಲ ಎಂದುಕೊಳ್ಳಬಹುದು. ಆದರೆ, ನಿಮ್ಮ ಮಗುವಿನ ಈ ಭಂಡತನವು ಒಂದು ವರವೂ ಆಗಿರಬಹುದು. ಹೇಗೆ ಅಂತೀರಾ? ಇಲ್ಲಿರುವುದನ್ನ ಓದಿ :

೧. ತಾವಾಗಿಯೇ ಕೆಲಸಗಳನ್ನ ಕಲಿಯುವುದು ಇಷ್ಟ

ನೀವು ನಿಮ್ಮ ಮಗುವಿಗೆ ಯಾವುದಾದರು ಕೆಲಸವನ್ನ ಮಾಡಲು ಹೇಳಿದರೆ, ನಿಮ್ಮ ಮಾತು ದೇವರಿಗೆ ಕೇಳಬೇಕು ಅಷ್ಟೇ. ಆದರೆ ಅವರಿಗೆ ಕೆಲಸವನ್ನ ಆಯ್ದುಕೊಳ್ಳಲು ಹೇಳಿದರೆ, ಅವರು ಸಹಕರಿಸಲು ಇಚ್ಚಿಸುತ್ತಾರೆ ಹಾಗು ನೀವು ಸಂಪೂರ್ಣ ಅಧಿಕಾರ ಕೊಡದೆ ಇದ್ದಾಗ ಇರುವುದಕ್ಕಿಂತ ಹೆಚ್ಚು ಸಲೀಸಾಗಿ ಕೆಲಸ ಆಗುತ್ತದೆ. ಇದು ಎಷ್ಟೇ ಆಯಾಸದಾಯಕ ಎನಿಸಿದರೂ, ಇದು ನಿಮ್ಮ ಹಾಗು ನಿಮ್ಮ ಮಗುವಿನ ನಡುವೆ ವಿಶ್ವಾಸ ಬೆಳೆಸುತ್ತದೆ. ಹೀಗೆ ಆದಮೇಲೆ ನೀವು ಅವರಿಗೆ ಏನೇ ಹೇಳಿದರು, ಅವರು ನಿಮ್ಮನ್ನ ನಂಬುವರು ಹಾಗು ಅವರಿಗೆ ಕೆಲಸದಲ್ಲಿ ಏನಾದರು ಸಹಾಯ ಬೇಕಿದ್ದರೆ ನೀವು ಸದಾ ಇರುವಿರಿ ಎಂದು ತಿಳಿಯುವರು.

೨. ಚಿಕ್ಕ ಚಿಕ್ಕ ವಿಷಯಗಳಿಗೂ ಅವರದ್ದೇ ಅಭಿಪ್ರಾಯ ಇರುತ್ತದೆ

ಅವರ ಶರ್ಟ್ ಯಾವ ಮೆಟೀರಿಯಲ್ ನದ್ದು ಎನ್ನುವುದರಿಂದ ಹಿಡಿದು ಅವರಿಗೆ ತಿನ್ನಲು ಕೊಡುವ ತರಕಾರಿಯ ವಿನ್ಯಾಸದ ವರೆಗೂ ಅವರಿಗೆ ಆದ ಅಭಿಪ್ರಾಯಗಳನ್ನ ಅವರು ಹೊಂದಿರುತ್ತಾರೆ. ನಿಮ್ಮ ಮಗನೊಂದಿಗೆ ಹೇರ್ ಕಟ್ ಹೇಗಿರಬೇಕೆಂದು ನೀವು ಜಗಳವಾಡುವುದು ನಿಮಗೆ ತಲೆ ನೋವು ಅನಿಸಬಹುದು. ಆದರೆ, ಅಧ್ಯಯನಗಳ ಪ್ರಕಾರ ತಿಳಿದು ಬಂದಿರುವುದು ಏನೆಂದರೆ ಈ ರೀತಿಯ ಮಕ್ಕಳು ಭವಿಷ್ಯದಲ್ಲಿ ಹೆಚ್ಚು ಹಣ ಗಳಿಸುವರು ಎಂದು ಮತ್ತು ಇವರೇ ಬೇರೇ ಜನರಿಗೆ ಉದ್ಯೋಗ ನೀಡುವರು ಎಂದು.

೩. ಅವರದ್ದೇ ರುಚಿಗಳು ಇರುತ್ತವೆ

ಯಾರು ಏನು ಮಾಡಿದರು ಅನ್ನುವುದು ಅವರಿಗೆ ಬೇಡ, ಅವರಿಗೆ ಏನು ಬೇಕೆಂದು, ಯಾವಾಗ ಬೇಕೆಂದು, ಹೇಗೆ ಬೇಕೆಂದು ಅವರಿಗೆ ತಿಳಿದಿರುತ್ತದೆ. ಅವರ ತಾಳಕ್ಕೆ ಅವರೇ ಕುಣಿಯುವುದು ಈ ಮಕ್ಕಳನ್ನ ಹಟಮಾರಿ ಮಾಡುವುದಿಲ್ಲ, ಬದಲಿಗೆ ಅವರಲ್ಲಿ ಧೈರ್ಯ ಬೆಳೆಸುತ್ತದೆ. ಅವರು ಬೇರೆಯವರ ಮಾತು ಕೇಳುವುದಿಲ್ಲ ಮತ್ತು ಅವರಿಗೆ ಇಷ್ಟವಾದದ್ದನ್ನು ಅವರಿಗೆ ಸಿಗುವವರೆಗೆ ಬಿಡುವುದಿಲ್ಲ.

೪. ವಾದದಲ್ಲಿ ನಿಮ್ಮನ್ನ ಸುಸ್ತು ಮಾಡಿಸುವರು

ಕೆಲವೊಂದು ಸಲ ನಿಮಗೂ ಅವರಷ್ಟೇ ಮಾತಾಡುವ ಶಕ್ತಿ ಇರಬೇಕಿತ್ತು ಎಂದೆನಿಸಬಹುದು, ಆದರೆ ಕೆಲವೊಂದು ಬಾರಿ ನೀವು ಸುಮ್ಮನೆ ಬಿಟ್ಟು ಕೊಟ್ಟುಬಿಡುವಿರಿ. “ನಾನ್ ಹೇಳ್ದೆ ತಾನೇ, ಅದಕ್ಕೆ ಮಾಡು” ಎನ್ನುವ ಕಾರಣವು ನಿಮ್ಮ ಮಕ್ಕಳಿಗೆ ತೃಪ್ತಿ ನೀಡುವುದಿಲ್ಲ ಮತ್ತು ಅವರು ಪದೇ ಪದೇ “ಯಾಕೆ ಮಾಡಬೇಕು ನಾನು?” ಎಂದು ಕೇಳುವುದನ್ನ ನಿಲ್ಲಿಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಅವರು ನಿಮ್ಮ ಮುಂದೆ ಗರ್ವ ತೋರಿಸುತ್ತಿದ್ದಾರೆ ಎಂದಲ್ಲ, ಬದಲಿಗೆ ಅವರು ನಿಮ್ಮ ಮುಂದೆ ವಾಸ್ತವ ಸಂಗತಿಗಳನ್ನ (ಕನಿಷ್ಠಪಕ್ಷ ಅವರು ಅಂದುಕೊಂಡಿರುವಂತೆ) ಇಡುತ್ತಿದ್ದಾರೆ. ಅವರ ಸ್ಥೈರ್ಯವನ್ನ ಮತ್ತು ದೃಢತೆಯನ್ನ ಮೆಚ್ಚಿ ಖುಷಿಪಡಿ ಅಷ್ಟೇ.

೫. ಜವಾಬ್ದಾರಿಯನ್ನೆಲ್ಲಾ ಅವರೇ ಹೋರಬೇಕೆಂದು ಇಚ್ಚಿಸುವರು

ನಿಮ್ಮ ಮಗುವಿನ ಈ ಸದೃಢ ವ್ಯಕ್ತಿತ್ವವು ಪ್ರಜ್ವಲಿಸಲು ಬಿಡಿ. ದೃಢ, ವಿಶ್ವಾಸವುಳ್ಳ ಹಾಗು ಸದಾ ಸಾಹಸಮಯ ಕೆಲಸಗಳನ್ನ ಮಾಡುವ ಮಕ್ಕಳು ಗಟ್ಟಿಯಾದ ನಾಯಕತ್ವದ ಗುಣಗಳನ್ನ ಬೆಳೆಸಿಕೊಳ್ಳುತ್ತಾರೆ.  ಇದರೊಂದಿಗೆ ನಿಮ್ಮ ಮಕ್ಕಳು ಇತರರಿಗೆ ಮಾರ್ಗದರ್ಶನ ಕೂಡ ಮಾಡಬಹುದು. ಅವರ ನೆಚ್ಚಿನ ನಾಯಕನು ಆಗಬಹುದು.

Leave a Reply

%d bloggers like this: