henu-mukta

ತಲೆ ಕಡಿಯುತ್ತಿದೆಯೇ? ನಿಮ್ಮ ಮಗುವು ಸ್ಕೂಲ್ ಕ್ಯಾಂಪ್ ಎಂದು ಹೋಗಿ ಅಲ್ಲಿ ತಲೆದಿಂಬು, ಟೋಪಿ ಮತ್ತು ಬಾಚಣಿಕೆ ಎಲ್ಲವನ್ನೂ ಒಬ್ಬರೊಂದಿಗೆ ಒಬ್ಬರು ಹಂಚಿಕೊಂಡು, ತಲೆಯಲ್ಲಿ ಹೇನು ಆಗುತ್ತದೆ. ಆಡುವಾಗ ಬಿದ್ದು ಆಗುವ ತೆರೆಚಿದ ಗಾಯಕ್ಕಿಂತ ಹೆಚ್ಚು ಸಾಮಾನ್ಯ ಈ ಹೇನು ತೊಂದರೆ. ನಾವು ಒಂದು ಮಗುವಿಗೆ ತಲೆಯಲ್ಲಿ ಹೇನು ಆದರೆ, ಅವುಗಳು ಸಂಪೂರ್ಣವಾಗಿ ತೊಲಗುವವರೆಗೂ, ಆ ಮಗುವಿನ ಜೊತೆ ಬೇರೇ ಮಗುವನ್ನ ಮಲಗಿಸುವುದಿಲ್ಲ ಅಥವಾ ಆಟ ಆಡಲು ಬಿಡುವುದಿಲ್ಲ . ಆದರೆ, ಅಮೇರಿಕಾ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಹೇಳುವುದೇ ಬೇರೇ, ಮಗುವಿಗೆ ತಲೆಯಲ್ಲಿ ಹೇನು ಆಗಿದ್ದರೂ ಅವರು ಕ್ಯಾಂಪ್ ಅಥವಾ ಶಾಲೆಗೆ ಹೋಗಬಹುದು ಎಂದು. ನಿಮ್ಮ ಮಗುವಿನ ತಲೆಯನ್ನ ಹೇನುಗಳಿಂದ ದೂರವಿಡಲು ನಾವು ನಿಮಗಾಗಿ ೮ ಸಲಹೆಗಳನ್ನ ನೀಡುತ್ತಿದ್ದೇವೆ, ಇವುಗಳನ್ನ ಓದಿ ಹಾಗು ಪಾಲಿಸಿ.

೧. ಸಂಗತಿಗಳನ್ನ ಅರಿಯಿರಿ

ಕೇವಲ ಈ ಹೇನುಗಳು ಹೇಗೆ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ವರ್ಗ ಆಗುವುದು (ಸುಳಿವು : ಅವುಗಳು ತಲೆ ಇಂದ ತಲೆಗೆ ಎಗರುವುದಿಲ್ಲ) ಎಂಬುದನ್ನ ಮನೆಯವರು ತಿಳಿದರೂ ಸಾಕು, ಅವರ ಮಕ್ಕಳು ಕೂಡ ಹೇನಿನ ತೊಂದರೆಗೆ ಒಳಗಾಗುವುದು ತಪ್ಪುತ್ತದೆ ಮತ್ತು ಶಾಲೆ ಅಥವ ಕ್ಯಾಂಪ್ ಅಲ್ಲಿ ಇದು ಹಬ್ಬುತ್ತಿದ್ದರು, ನಿಮ್ಮ ಮಗುವು ಸುರಕ್ಷಿತವಾಗಿ ಇರುವಂತೆ ಮಾಡಬಹುದು.

೨. ಮಕ್ಕಳ ವಸ್ತುಗಳನ್ನ ಬೇರ್ಪಡಿಸಿ

ಹೇನು ತಲೆಯಿಂದ ಟೋಪಿಗೆ ವರ್ಗವಾಗಬಹುದು, ಅಥವಾ ಸಮೀಪದಲ್ಲೇ ಇದ್ದರೆ ಒಬ್ಬರ ಶರ್ಟ್ ಇಂದ ಇನ್ನೊಬ್ಬರ ಶರ್ಟಿಗೆ ವರ್ಗವಾಗಬಹುದು. ಬೀರುವಿನಲ್ಲಿ ಅಥವಾ ರೂಮಿನ ಯಾವುದೇ ಭಾಗದಲ್ಲಿ ನಿಮ್ಮ ಬಟ್ಟೆ ಮತ್ತು ವಸ್ತುಗಳು ಇದ್ದರೆ, ಅದನ್ನ ಹೊರತುಪಡಿಸಿ ಮನೆಯ ಬೇರೇ ಭಾಗದಲ್ಲಿ ನಿಮ್ಮ ಮಗುವಿನ ಬಟ್ಟೆ ಮತ್ತು ವಸ್ತುಗಳನ್ನ ಇಡಿ. ಹೀಗೆ ಮಾಡಿದರೆ, ಮಗುವಿನ ಬಟ್ಟೆ ಅಥವಾ ವಸ್ತುಗಳಲ್ಲಿ ಇರುವ ಹೇನುಗಳು, ಮನೆಯ ಇತರೆ ಜನರಿಗೆ ಹರಡುವುದಿಲ್ಲ.

೩. ಮುಂಜಾಗ್ರತ ಕ್ರಮಗಳು

ಕೆಲವೊಂದು ಶಾಂಪೂಗಳು ಮತ್ತು ಸೋಪುಗಳು ನೈಸರ್ಗಿಕವಾಗಿ ಹೇನುಗಳನ್ನ ದೂರವಿಡುವ ವಸ್ತುಗಳನ್ನ ಹೊಂದಿರುತ್ತವೆ. ಆ ವಸ್ತುಗಳು ಯಾವುದೆಂದರೆ ಚಹಾ ಮರ, ರೋಸ್ಮರಿ, ಮತ್ತು ಲ್ಯಾವೆಂಡರ್ ಎಣ್ಣೆ. ಇವುಗಳು ನಿಮ್ಮ ಮಗುವಿನ ತಲೆಯನ್ನು ಕಡಿತದಿಂದ ಮತ್ತು ಸುಲಿತದಿಂದ ಕಾಪಾಡುತ್ತವೆ.

೪. ಯಾವ ಉತ್ಪನ್ನಗಳು ಉತ್ತಮ

ನಮ್ಮ ಓದುಗರಲ್ಲಿ 70% ಅಷ್ಟು ಜನ ಔಷಧಿ ಅಂಗಡಿಯಲ್ಲಿ ಸಿಗುವ ಹೇನು ನಾಶಕಗಳನ್ನ ಬಳಸುತ್ತಾರೆ. ಇನ್ನೂ ಕೆಲವರು ನೈಸರ್ಗಿಕ ಆಯ್ಕೆಗಳಾದ ಆಲಿವ್ ಎಣ್ಣೆ, ಟೀ ಟ್ರೀ ಎಣ್ಣೆ, ಮಯೋನ್ನೈಸ್ ಹಾಗು ಇನ್ನಿತರೆ ವಸ್ತುಗಳನ್ನ ಬಳಸುತ್ತಾರೆ.

೫. ಸಣ್ಣ ಹಲ್ಲಿನ ಬಾಚಣಿಕೆ

ನಿಮ್ಮ ಮಗುವಿನ ತಲೆಯಿಂದ ಹೇನು ತೆಗೆಯಲು ರಾಸಾಯನಿಕಗಳನ್ನು ಬಳಸುವುದು ಬೇಡ ಎನಿಸಿದರೆ, ನೀವು ಸಣ್ಣ ಹಲ್ಲಿನ ಬಾಚನಿಕೆಯನ್ನ ಉಪಯೋಗಿಸಬಹುದು. ನಿಮ್ಮ ಮಗುವಿನ ತಲೆಯನ್ನ ಸ್ವಲ್ಪವೇ ಒತ್ತಡ ಹಾಕಿ ಸಣ್ಣ ಹಲ್ಲಿನ ಬಾಚಣಿಕೆಯಲ್ಲಿ ಬಾಚಿದರೆ, ಅದರ ಹಲ್ಲುಗಳಿಗೆ ಹೇನುಗಳು ಸಿಲುಕಿಕೊಳ್ಳುವವು.

೬. ನೈಸರ್ಗಿಕ ಪರಿಹಾರದ ಮೊರೆ ಹೋಗುವುದು

ನಿಮ್ಮ ಮಗುವಿನ ತಲೆಯನ್ನ ಹೇನಿನಿಂದ ಪಾರುಮಾಡಲು 100% ಗ್ಯಾರಂಟಿ ನೀಡುವ ಒಂದೇ ದಾರಿ ಇರದೇ ಇದ್ದರೂ, ನಿಮ್ಮ ಮಗುವಿನ ತಲೆಯನ್ನು ವಿಷಕಾರಿ ರಾಸಾಯನಿಕಗಳ ನೆರವಿನಿಂದ ಹೇನು ಮುಕ್ತವಾಗಿ ಇಡುವುದು ಬೇಡ ಎನಿಸಿದರೆ, ಬದಲಿಗೆ ನೀವು ಬೇರೇ ಆಯ್ಕೆಗಳನ್ನ ಕೂಡ ಉಪಯೋಗಿಸಬಹುದು.  ಔಷಧಿ ಅಂಗಡಿಯಲ್ಲೇ ನಿಮಗೆ ರೋಸ್ಮರಿ, ಸಿಟ್ರೋನೆಲ್ಲ, ಟೀ ಟ್ರೀ ಆಯಿಲ್ ಅಂತ ವಸ್ತುಗಳನ್ನ ಒಳಗೊಂಡಂತಹ ಅನೇಕ ಶಾಂಪೂಗಳು, ಕಂಡೀಶನರುಗಳು, ಸ್ಪ್ರೇ ಗಳು ಲಭ್ಯವಿದೆ.

Leave a Reply

%d bloggers like this: