ಗರ್ಭಾವಸ್ಥೆಯ ಕೆಲವು ಸತ್ಯವಾದ ವಿಚಿತ್ರ ಸಂಗತಿಗಳು!

ನಿಮಗೆ ಅನೇಕ ತಾಯಿಯಂದಿರು ಹೇಳಿರುವಂತೆ, ಮಗುವಿಗೆ ಜನ್ಮ ನೀಡುವುದು ಅಷ್ಟು ಸುಲಭವಲ್ಲ. ೯ ತಿಂಗಳು ಒಂದು ಜೀವವನ್ನು ಉದರದೊಳಗೆ ಇರಿಸಿಕೊಂಡಿರುವುದು ತಮಾಷೆಯ ಮಾತಲ್ಲ. ಈ ದೀರ್ಘ ಪ್ರಯಾಣದಲ್ಲಿ ನಿಮಗೆ ಸುಸ್ತು, ಅಸ್ವಸ್ಥತೆ, ಬಯಕೆ ಮುಂತಾದ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುವುದು ಸಹಜ ಮತ್ತು ಅದು ನಿಮಗೆ ತಿಳಿದಿರುತ್ತದೆ. ಆದರೆ ನಾವು ಇಲ್ಲಿ ಹೇಳುತ್ತಿರುವ ವಿಷಯ ಸತ್ಯವಾದರೂ ನಿಮಗೆ ಅದರ ಬಗ್ಗೆ ಕಲ್ಪನೆಯು ಇರುವುದಿಲ್ಲ. ಆದರೆ ಅದನ್ನು ನೀವು ನಿಜವಾಗಿಯೂ ಅನುಭವಿಸುತ್ತಿರಾ. ಅಂತಹ ಕೆಲವು ನಿಮಗೆ ವಿಚಿತ್ರ ಎನಿಸುವ ಸತ್ಯ ಸಂಗತಿಗಳು ಇಲ್ಲಿವೆ.

೧.ಅಧ್ಯಯನಗಳ ಪ್ರಕಾರ ಗರ್ಭಿಣಿಯರಲ್ಲಿ, ಪ್ರತಿ ಮೂರರಲ್ಲಿ ಒಬ್ಬರು ಸಿಸೇರಿಯನ್ ಹೆರಿಗೆಗೆ ಒಳಗಾಗುತ್ತಾರೆ(ಈ ಅಧ್ಯಯನವನ್ನು ಮೂರು ವರ್ಷಗಳ ಹಿಂದೆ ಮಾಡಿದ್ದು).

೨.ನಿಮ್ಮ ಗರ್ಭಾವಸ್ಥೆಯ ಎರಡನೇ ಭಾಗದಲ್ಲಿ, ಅಂದರೆ ೫ನೇ ತಿಂಗಳ ನಂತರ, ನಿಮ್ಮ ಮಗುವು ದಿನಕ್ಕೆ ಒಂದು ಲೀಟರ್ ನಷ್ಟು ಮೂತ್ರ ವಿಸರ್ಜನೆಯನ್ನು ಮಾಡುತ್ತದೆ, ಮತ್ತು ಅದನ್ನೇ ಪುನಃ ಕುಡಿಯುತ್ತದೆ.

೩.ಗರ್ಭಾವಸ್ಥೆಯ ಅವಧಿಯಲ್ಲಿ, ನಿಮ್ಮ ಗರ್ಭಾಶಯ, ಸಣ್ಣ ಹಣ್ಣಿನಿಂದ ಮಧ್ಯಮ ಕಲ್ಲಂಗಡಿ ಹಣ್ಣಿನಷ್ಟು ಗಾತ್ರವನ್ನು ಹಿಗ್ಗಿಸಿಕೊಳ್ಳುತ್ತದೆ. ಇದು ಅದು ಇರುವುದಕ್ಕಿಂತ ೫೦೦ಪಟ್ಟು ಹೆಚ್ಚಾಯಿತು.

೪.ಗರ್ಭಾವಸ್ಥೆಯ ಕೊನೆಯ ಭಾಗದಲ್ಲಿ, ಮಹಿಳೆಯ ಜರಾಯು(ಪ್ಲಾಸೆಂಟಾ), ತನ್ನ ಸಾಮಾನ್ಯ ದಿನಗಳಲ್ಲಿ ತೆಗೆದುಕೊಳ್ಳುವ ೩ವರ್ಷದ ಸಮಯದಲ್ಲಿ ಬಿಡುಗಡೆ ಮಾಡುವ ಈಸ್ಟ್ರೋಜೆನ್ ಅನ್ನು ಒಂದೇ ದಿನದಲ್ಲಿ ಬಿಡುಗಡೆ ಮಾಡುತ್ತದೆ.

೫.ಒಂದು ವರ್ಷದ ವರೆಗೆ ಗರ್ಭಿಣಿಯಾಗಿರಲು ಸಾಧ್ಯತೆಗಳಿವೆ. ಅತಿ ಹೆಚ್ಚು ಅವಧಿ ಗರ್ಭಿಣಿಯಾಗಿರುವ ದಾಖಲೆ ಇರುವುದು ೩೭೫ ದಿನಗಳು.

೬.ಮಗುವಿನ ಬೆರಳಚ್ಚು(ಫಿಂಗರ್ ಪ್ರಿಂಟ್ಸ್), ನಿಮ್ಮ ಮೊದಲ ಮೂರು ತಿಂಗಳ ಗರ್ಭಾವಸ್ಥೆಯಲ್ಲಿ ರೂಪುಗೊಳ್ಳುತ್ತದೆ.

೭.ಗರ್ಭಾವಸ್ಥೆಯಲ್ಲಿ ರಕ್ತಸಂಚಲನ ಏರಿಕೆಯಾಗುವುದರಿಂದ(ಹೆಚ್ಚಾಗುವುದರಿಂದ), ಮೂಗಿನಲ್ಲಿ ಮತ್ತು ವಸಡುಗಳಲ್ಲಿ ರಕ್ತ ಬರುವುದು(ರಕ್ತಸ್ರಾವವಾಗುವುದು) ಸಾಮಾನ್ಯ.

೮.ನಮ್ಮ ಪೂರ್ವಜರು ಹೇಳಿರುವ, ಗರ್ಭಾವಸ್ಥೆಯಲ್ಲಿ ಎದೆಯುರಿ ಬರುವುದು ಮಕ್ಕಳ ತಲೆಕೂದಲು ಚೆನ್ನಾಗಿ ಬೆಳೆದಿರುತ್ತದೆ? ಅದು ಸಂಪೂರ್ಣ ಸತ್ಯ.

Leave a Reply

%d bloggers like this: